ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿಗರ ಮನ ಗೆಲ್ಲಲು ಬಿಜೆಪಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ (ಮೇ 7) ಮೆಗಾ ರೋಡ್ ಶೋ ಮುಕ್ತಾಯಗೊಂಡಿದೆ. ಬೆಳಗ್ಗೆ ಒಂದಿಷ್ಟು ಮಳೆ ಮೋಡವಿದ್ದರೂ ರೋಡ್ ಶೋ ಆರಂಭವಾಗುವ ಹೊತ್ತಿಗೆ ಬಿಸಿಲು ಬಂತು. ನ್ಯೂ ತಿಪ್ಪೇಸಂದ್ರದಿಂದ ಟ್ರಿನಿಟಿ ಸರ್ಕಲ್‌ವರೆಗೆ 6.5 ಕಿ.ಮೀ. ಕ್ರಮಿಸಿದ ರೋಡ್ ಶೋ ಭಾರಿ ಜನಾಕರ್ಷಣೆ ಪಡೆಯಿತು. ಮೋದಿ ಅವರು ರೋಡ್ ಶೋ ಮುಗಿಸಿ ಶಿವಮೊಗ್ಗದತ್ತ ಪಯಣ ಬೆಳೆಸಿದರು.
ಕೊಪ್ಪದಲ್ಲಿ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ
ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಚುನಾವಣೆ 15 ಕೋಟಿ ವಶ
ಆದಾಯ ತೆರಿಗೆ ಇಲಾಖೆಯು ಶುಕ್ರವಾರ ನಗರದ ವಿವಿಧ ಭಾಗದಲ್ಲಿ ದಾಳಿ ನಡೆಸಿ ಸುಮಾರು 15 ಕೋಟಿ ಅಕ್ರಮ ನಗದನ್ನು ವಶಕ್ಕೆ ಪಡೆದಿದೆ. ಇದರ ಜತೆಯಲ್ಲಿ ಐದು ಕೋಟಿ ರೂ. ಮೌಲ್ಯದ ಆಭರಣಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತೆರಿಗೆ ಇಲಾಖೆಯು ಪ್ರಕಟಣೆಯು ತಿಳಿಸಿದೆ.
ಕೇಂದ್ರ ಸಚಿವರಿಗಿಲ್ಲ ತಡೆ
ಮೋದಿ ರೋಡ್ ಶೋ ನಡೆಯುವ ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ತೆಗೆದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.
ಇದನ್ನು ಸ್ಥಳೀಯರು ʻಸಾರ್ವಜನಿಕರಿಗೆ ಒಂದು ರೂಲ್ಸ್, ಕೆಂದ್ರ ಸಚಿವರಿಗೆ ಒಂದು ರೂಲ್ಸಾʼ ಎಂದು ಪ್ರಶ್ನಿಸಿದ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ.
ಆಂಬ್ಯುಲೆನ್ಸ್ ಗೆ ಅವಕಾಶ
ಪ್ರಧಾನಿ ಮೋದಿ ರೋಡ್ ಶೋನಲ್ಲಿ ಸಂಚರಿಸುವ ರಸ್ತೆಯಲ್ಲೆ ಆಂಬ್ಯುಲೆನ್ಸ್ ಸಾಗಲು ಅವಕಾಶ ಮಾಡಿಕೊಡಲಾಗಿದೆ.
ಮಾಗಡಿ ರಸ್ತೆಯ ಟೋಲ್‌ಗೇಟ್ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.
ಬ್ಯಾರಿಕೇಡ್ ತೆಗೆದು ಆಂಬುಲೆನ್ಸ್ ಸಂಚಾರಕ್ಕೆ ಅವಕಾಶ ಪೋಲಿಸರು ಅವಕಾಶ ಮಾಡಿಕೊಟ್ಟಿದ್ದಾರೆ.
ಪುಸ್ತಕ ಕೊಟ್ಟ ಸ್ವಾಮೀಜಿ
ಪ್ರಧಾನಿ ಮೋದಿ ಅವರ ರೋಡ್ ಶೋ ಬಸವನಗುಡಿಯ ಆಶ್ರಮಕ್ಕೆ ಬಂದು ಶ್ರೀ ರಾಮಕೃಷ್ಣ ಮಠದ ಮುಂದೆ ಚಲಿಸುವಾಗ ಮಠದ ಮುಂಭಾಗದಲ್ಲಿ ನಿಂತಿದ್ದ ಮಠದ ಸ್ವಾಮೀಜಿಗಳು ಮೋದಿಯವರಿಗೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.