ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿಗರ ಮನ ಗೆಲ್ಲಲು ಬಿಜೆಪಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ (ಮೇ 7) ಮೆಗಾ ರೋಡ್ ಶೋ ಮುಕ್ತಾಯಗೊಂಡಿದೆ. ಬೆಳಗ್ಗೆ ಒಂದಿಷ್ಟು ಮಳೆ ಮೋಡವಿದ್ದರೂ ರೋಡ್ ಶೋ ಆರಂಭವಾಗುವ ಹೊತ್ತಿಗೆ ಬಿಸಿಲು ಬಂತು. ನ್ಯೂ ತಿಪ್ಪೇಸಂದ್ರದಿಂದ ಟ್ರಿನಿಟಿ ಸರ್ಕಲ್‌ವರೆಗೆ 6.5 ಕಿ.ಮೀ. ಕ್ರಮಿಸಿದ ರೋಡ್ ಶೋ ಭಾರಿ ಜನಾಕರ್ಷಣೆ ಪಡೆಯಿತು. ಮೋದಿ ಅವರು ರೋಡ್ ಶೋ ಮುಗಿಸಿ ಶಿವಮೊಗ್ಗದತ್ತ ಪಯಣ ಬೆಳೆಸಿದರು.
ಮೋದಿ ರೋಡ್ ಶೋ ಸೌತ್ ಎಂಡ್ ಸರ್ಕಲ್ ಗೆ
ಪ್ರಧಾನಿ ಮೋದಿ ಅವರ ರೋಡ್ ಶೋ ಸೌಂತ್ ಎಂಡ್ ಸರ್ಕಲ್‌ಗೆ ಆಗಮಿಸಿದೆ.
ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ.
ರೋಡ್ ಶೋನಲ್ಲಿ ತೂರಿ ಬಂದ ಮೊಬೈಲ್
ಪ್ರಧಾನಿ ಮೋದಿ ರೋಡ್ ಶೋನ ವೇಳೆ ಬೆಂಗಳೂರಿನಲ್ಲಿಯೂ ಕೂಡ ಮೊಬೈಲ್ ತೂರಿ ಬಂದು ರಸ್ತೆಗೆ ಬಿದ್ದಿತ್ತು.
ಆಕಸ್ಮಿಕವಾಗಿ ಈ ಮೊಬೈಲ್ ರಸ್ತೆಗೆ ಬಿದ್ದಿದ್ದು, ಭದ್ರತಾ ಸಿಬ್ಬಂದಿಗಳು ಅದನ್ನು ಹಿಂದಿರುಗಿಸಿದ್ದಾರೆ.
ರಸ್ತೆಯಲ್ಲಿ ಸಿಲುಕಿದ ಆಂಬ್ಯುಲೆನ್ಸ್
ಜಯನಗರ ಮೆಟ್ರೋ ನಿಲ್ದಾಣದ ಬಳಿ ಎರಡು ಆಂಬ್ಯುಲೆನ್ಸ್ ಸಿಲುಕಿಕೊಂಡಿವೆ.
ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹಾಕಿರುವುದರಿಂದ ಅವು ರಸ್ತೆಯಲ್ಲಿಯೇ ಸೈರನ್ ಮಾಡುತ್ತಾ ನಿಂತಿವೆ.
10ನಿಮಿಷದಿಂದ ರಸ್ತೆಯಲ್ಲೆ ಸೈರನ್ ಮಾಡುತ್ತಿದ್ದರೂ ಸ್ಥಳದಲ್ಲಿರುವ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಮೋದಿ ನೋಡಲು ಬಂದ ಐದು ತಿಂಗಳ ಮಗು!
ಜಯನಗರದಲ್ಲಿ ಪ್ರಧಾನಿ ಮೋದಿ ನೋಡಲು 5 ತಿಂಗಳ ಮಗುವಿನ ಜೊತೆಗೆ ಪೋಷಕರು ಬಂದಿದ್ದರು.
ಮೋದಿಗೆ ಮಗು ತೋರಿಸಬೇಕೆಂಬ ಉದ್ದೇಶದಿಂದ ಮಗುವನ್ನು ಕರೆತಂದಿರುವುದಾಗಿ ಪೋಷಕರು ಹೇಳಿದ್ದಾರೆ.
ದೇವಸ್ಥಾನಕ್ಕೆ ಹೋಗಲಿರುವ ಮೋದಿ
ಬೆಂಗಳೂರಿನಲ್ಲಿ ರೋಡ್ ಶೋ ನಡೆಸುತ್ತಿರುವ ಪ್ರಧಾನಿ ಮೋದಿ ರೋಡ್ ಶೋ ಮುಗಿದ ನಂತರ ಐತಿಹಾಸಿಕ ಕಾಡು ಮಲ್ಲೇಶ್ವರಂ ದೇವಸ್ಥಾನಕ್ಕೆ ಭೆಟಿ ನೀಡಲಿದ್ದಾರೆ.
ಹೀಗಾಗಿ ದೇವಸ್ಥಾನ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.