Site icon Vistara News

Karnataka Election Live Updates : ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ, ಪದ್ಮನಾಭನಗರದಿಂದ ಡಿಕೆಸು ಸ್ಪರ್ಧೆ ಇಲ್ಲ ; ವಿಧಾನಸಭೆ ಚುನಾವಣೆಯ ಕ್ಷಣಕ್ಷಣದ ಸುದ್ದಿಗಳು ಇಲ್ಲಿವೆ

Karnataka Election 2023 live

ರ್ನಾಟಕ ವಿಧಾನಸಭೆ ಚುನಾವಣೆ (karnataka election 2023) ಗರಿಗೆದರಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಕ್ಷಣ ಕ್ಷಣ ಸುದ್ದಿಗೆ (Karnataka Election Live Updates) ವಿಸ್ತಾರ ನ್ಯೂಸ್ ಲೈವ್ ಅಪ್‌ಡೇಟ್ ನೋಡ್ತಾ ಇರಿ.

Ramaswamy Hulakodu

ಜಗದೀಶ್‌ ಶೆಟ್ಟರ್‌ರನ್ನು ತರಾಟೆಗೆ ತೆಗೆದುಕೊಂಡ ಶೋಭಾ ಕರಂದ್ಲಾಜೆ

ತಮ್ಮ ಟಿಕೆಟ್‌ ತಪ್ಪಲು ಬಿ ಎಲ್‌ ಸಂತೋಷ್‌ ಕಾರಣ ಎಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿ.ಎಲ್‌. ಸಂತೋಷ್‌ ಎಂದೂ ಚುನಾವಣೆಗೆ ನಿಂತಿಲ್ಲ, ಅವರು ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಅವರ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಪಕ್ಷದ ವಿಚಾರಧಾರೆಯನ್ನು ಬಿಟ್ಟು ಕಾಂಗ್ರೆಸ್‌ ಸೇರಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಶೋಭಾ ಕರಂದ್ಲಾಜೆ,

ಕೇವಲ ರಾಜಕೀಯಕ್ಕಾಗಿ ವಿಚಾರವನ್ನೇ ಬಿಟ್ಟು ರಾಜಕಾರಣ ಮಾಡ್ತಿದ್ದೀರಾ ಎಂದು ಕೇಳಿದ್ದಾರೆ. ಲಿಂಗಾಯಿತರ ವಿರೋಧಿ ಪಕ್ಷದಲ್ಲಿ ಈಗ ನೀವಿದ್ದೀರಿ ಎಂದು ತಿವಿದಿದ್ದಾರೆ.

Ramaswamy Hulakodu

ಹುಬ್ಬಳ್ಳಿಗೆ ಆಗಮಿಸಿದ ನಡ್ಡಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ. ವಿಶೇಷ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಡ್ಡಾ ಆಗಮಿಸಿದರು.

ನಡ್ಡಾರನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಬರಮಾಡಿಕೊಂಡರು.

ಸಂಜೆ ಹುಬ್ಬಳ್ಳಿಯ ಬಿ.ವಿ.ಬಿ.ಕಾಲೇಜಿನಲ್ಲಿ‌ ಪ್ರಬುದ್ಧರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ನಡ್ಡಾ ಭಾಗವಹಿಸಲಿದ್ದಾರೆ. ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಸರಣಿ ಸಭೆ ನಡೆಸಲಿದ್ದಾರೆ.

Ramaswamy Hulakodu

ಬೊಮ್ಮಾಯಿ ಏಕೆ ಮುಂದಿನ ಮುಖ್ಯಮಂತ್ರಿಯಲ್ಲ?

ಲಿಂಗಾಯತ ನಾಯಕರನ್ನು ತುಳಿಯುತ್ತಿರುವ ಬಿಜೆಪಿ ವಿರುದ್ಧ ತಿರುಗಿಬಿದ್ದ ಲಿಂಗಾಯತರ ಕಿವಿ ಮೇಲೆ ಹೂವಿಡಲು ಲಿಂಗಾಯತರನ್ನೇ ಸಿಎಂ ಮಾಡುತ್ತೇವೆ ಎನ್ನುತ್ತಿದ್ದಾರೆ ಬಿಜೆಪಿಗರು ಎಂದಿರುವ ಕರ್ನಾಟಕ ಕಾಂಗ್ರೆಸ್‌, ಆದರೆ ಮುಂದೆಯೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಅಭ್ಯರ್ಥಿ ಎಂದು ಹೇಳುತ್ತಿಲ್ಲವೇಕೆ? ಇದರರ್ಥ ಬೊಮ್ಮಾಯಿಯವರನ್ನೂ ಮೂಲೆಗೆ ತಳ್ಳುವುದು ನಿಶ್ಚಿತ ಎಂದು ಟ್ವಿಟ್ಟರ್‌ನಲ್ಲಿ ಟೀಕಿಸಿದೆ.

ಈ ಸಂಬಂಧ ಕೆಪಿಸಿಸಿ ಸರಣಿ ಟ್ವೀಟ್‌ ಮಾಡಿದೆ.

Ramaswamy Hulakodu

ಬೀಳಗಿಯಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ

ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡುತ್ತಿದ್ದಾರೆ.

ಬಸ್ ನಿಲ್ದಾಣದಿಂದ ರೋಡ್ ಶೋ ನಡೆಸಲಾಗುತ್ತಿದ್ದು,ಬಿಜೆಪಿ ಬೆಂಬಲಿಸುವಂತೆ ಸಿಎಂ ಮನವಿ ಮಾಡಿದರು. ಮುರುಗೇಶ್ ನಿರಾಣಿ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಕೋರಿದರು.

ಮುಖ್ಯಮಂತ್ರಿಗಳೊಂದಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬಿಜೆಪಿ ಅಭ್ಯರ್ಥಿ ಮುರುಗೇಶ್ ನಿರಾಣಿ ಇದ್ದರು.

Ramaswamy Hulakodu

ಮಂಡ್ಯದಲ್ಲಿ ಬ್ಯಾಂಕ್‌ ಅಕೌಂಟ್‌ ತೆರೆದ ಕುಮಾರಸ್ವಾಮಿ, ಸುಮಲತಾ

ಸಕ್ಕರೆನಾಡು ಮಂಡ್ಯದಲ್ಲಿ ರಾಜಕೀಯ ಕಾವು ಏರಿದೆ. ಮಂಡ್ಯದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ವರದಿಗಳ ನಡುವೆಯೇ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಬ್ಯಾಂಕ್ ಅಕೌಂಟ್ ಮಾಡಿಸಿದ್ದಾರೆ.

ಇವರಿಬ್ಬರೂ ಮಂಡ್ಯದಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಿರುವುದರಿಂದ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.

ಕುಮಾರಸ್ವಾಮಿ ಬ್ಯಾಂಕ್ ಅಕೌಂಟ್ ಓಪನ್ ಮಾಡಿದ ಬೆನ್ನಲ್ಲೆ ಸಂಸದೆ ಸುಮಲತಾ ಕೂಡ ಮಂಡ್ಯದಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಿದ್ದಾರೆ.

Exit mobile version