Site icon Vistara News

Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್

Karnataka Election 2023 LIVE

ನವದೆಹಲಿ: ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಬುಧವಾರ ದಿಲ್ಲಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೀಡಿ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಸದ್ಯ ಬಿಜೆಪಿ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದೆ. ಜೆಡಿಎಸ್ ಕೂಡ ತನ್ನ ಸದಸ್ಯರನ್ನು ಹೊಂದಿದೆ. ರಾಜ್ಯದಲ್ಲಿ ಈಗಾಗಲೇ ಚುನಾವಣಾ ಕಾವು ಜೋರಾಗಿದೆ. ಚುನಾವಣೆಗಳನ್ನು ದಿನಾಂಕ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಿದೆ(Karnataka Election 2023 LIVE).

Mallikarjun Tippar

Karnataka Election 2023 LIVE: ಅಭ್ಯರ್ಥಿಗಳು ಬಗ್ಗೆ ಹೇಳುವುದಾದರೆ, ನೋ ಯುವರ್ ಕ್ಯಾಂಡಿಡೇಟ್, ಅಫಿಡವಿಟ್ ಸೇರಿದಂತೆ ಎಲ್ಲ ಮಾಹಿತಿಯನ್ನು ಆಯೋಗ ಒದಗಿಸುತ್ತದೆ. ಆನ್ ಲೈನ್ ಮೂಲಕ ನಾಮಿನೇಷನ್ ಮಾಡಲು ಅವಕಾಶವಿದೆ. ಮೊದಲು ಬಂದವರಿಗೆ ಮೊದಲು ಆದ್ಯತೆ ನೀಡಲಾಗುವುದು. ಸಿ ವಿಜಿಲ್ ಆ್ಯಪ್ ಬಗ್ಗೆ ಸಾಕಷ್ಟು ಪ್ರಚಾರವಾಗಿದೆ. ಕರ್ನಾಟಕದಲ್ಲಿ ಸಾಕಷ್ಟು ಈ ಬಗ್ಗೆ ಬಳಕೆಯಾಗಿದೆ. ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮಾಹಿತಿಯನ್ನುಪಡೆಯುತ್ತಿದ್ದೇವೆ.

– ಆಯೋಗ

Mallikarjun Tippar

Karnataka Election 2023 LIVE: ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಆಯೋಗ ಕ್ರಮೇಣವಾಗಿದೆ. ಬೆಂಗಳೂರಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗುತ್ತಿದೆ. ಇದನ್ನು ತಡೆಯಲು ಪರಿಹಾರ ಕಂಡುಕೊಳ್ಳಲು ಎಲೆಕ್ಟ್‌ಥಾನ್ ಕೈಗೊಳ್ಳಲು ಮುಂದಾಗಿದ್ದೇವೆ. ಐಐಎಸ್ಸಿ ಇದರಲ್ಲಿ ಕೈಜೋಡಿಸಿದೆ.

Mallikarjun Tippar

Karnataka Election 2023 LIVE: ಕರ್ನಾಟಕದಲ್ಲಿ ನಗರ ಪರಿಸ್ಥಿತಿಗಳು ಬೇರೆಯದ್ದಾಗಿದೆ. ಈ ಪ್ರದೇಶದಲ್ಲಿ ಕಳೆದ ಚುನಾವಣೆಯಲ್ಲಿ 72 ಪ್ರತಿಶತ ಮತದಾನವಾಗಿತ್ತು.

Mallikarjun Tippar

Karnataka Election 2023 LIVE: 100 ಮತದಾನಕೇಂದ್ರಗಳನ್ನು ಸಂಪೂರ್ಣವಾಗಿ ಅಂಗವಿಕಲರು ನಿರ್ವಹಿಸಲಿದ್ದಾರೆ. ಎಎಂಎಫ್ ಶಾಸ್ವತವಾಗಿ ದೊರೆಯಲಿದೆ. ಕರ್ನಾಟಕದಲ್ಲಿ ತೃಪ್ತಿದಾಯಕ ವಾತಾವರಣವಿದೆ. ಎಲ್ಲ ರೀತಿಯ ಸೌಲಭ್ಯಗಳು ಇರಲಿವೆ. ಈ ವಿಷಯದಲ್ಲಿ ಕರ್ನಾಟಕದ ಸ್ಥಿತಿ ಚೆನ್ನಾಗಿದೆ.

– ಆಯೋಗ

Mallikarjun Tippar

Karnataka Election 2023 LIVE: 13023 ಮಹಿಳೆಯರಿಗೆ ಮೀಸಲಾದ ಮತದಾನ ಬೂತ್‌ಗಳಿವೆ. 240 ಮಾಡೆಲ್ ಕೇಂದ್ರಗಳಿವೆ.

Exit mobile version