ನವದೆಹಲಿ: ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಬುಧವಾರ ದಿಲ್ಲಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೀಡಿ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಸದ್ಯ ಬಿಜೆಪಿ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದೆ. ಜೆಡಿಎಸ್ ಕೂಡ ತನ್ನ ಸದಸ್ಯರನ್ನು ಹೊಂದಿದೆ. ರಾಜ್ಯದಲ್ಲಿ ಈಗಾಗಲೇ ಚುನಾವಣಾ ಕಾವು ಜೋರಾಗಿದೆ. ಚುನಾವಣೆಗಳನ್ನು ದಿನಾಂಕ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಿದೆ(Karnataka Election 2023 LIVE).
Karnataka Election 2023 LIVE: ಪ್ರತಿಬೂತನಲ್ಲಿ 883 ಮತದಾರು ಮತ ಚಲಾಯಿಸಲಿದ್ದಾರೆ. ಸೂಕ್ಷ್ಮ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಲ್ಲಿ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತದೆ.
– ಆಯೋಗ
Karnataka Election 2023 LIVE: 40 ಎಥೇನಿಕ್ ಬೂತ್ ಮಾಡಲಿದ್ದು, ಟ್ರೈಬಲ್ ಮತದಾರರು ಮತ ಚಲಾಯಿಸಲಿದ್ದಾರೆ. ರಾಜ್ಯದಲ್ಲಿ ಟ್ರೈಬಲ್ ಮತದಾರರು ಇದ್ದಾರೆ. ಇದೇ ರೀತಿಯಲ್ಲಿ ತೃತೀಯ ಲಿಂಗಿ ಮತದಾರರು ಇದ್ದಾರೆ. ಕೆಲವರು ತೃತೀಯ ಲಿಂಗ ಲಿಸ್ಟ್ನಲ್ಲಿ ಸೇರಲು ಇಷ್ಟಪಡುತ್ತಿಲ್ಲ. ಕೆಲವರು ತೃತೀಯ ಲಿಂಗ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲು ಇಚ್ಚಿಸುತ್ತಿಲ್ಲ.
Karnataka Election 2023 LIVE: ಕರ್ನಾಟಕದಲ್ಲಿ ಫಸ್ಟ್ ಟೈಮ್ ವೋಟರ್ಸ್ ಹೆಚ್ಚಾಗಿದ್ದಾರೆ. 9.7 ಲಕ್ಷ ಹೊಸ ಮತದಾರರು ಇದ್ದಾರೆ. ಹೊಸ ಮತದಾರರಲ್ಲಿ ಹೆಚ್ಚಳವಾಗಿದ್ದಾರೆ. ಮೊದಲ ವೋಟರ್ಸ್ ಲಿಸ್ಟ್ನಲ್ಲಿ ಹುಡುಗಿಯರೂ ಹೆಚ್ಚಿನವರಿದ್ದಾರೆ. 1 ಏಪ್ರಿಲ್ಗೆ 18 ತುಂಬುವ ಎಲ್ಲ ಮೊದಲ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಸುಮಾರು 41 ಸಾವಿರ ಮತದಾರರಿದ್ದಾರೆ.
– ಆಯೋಗ
Karnataka Election 2023 LIVE: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಅಂಗವಿಕಲ ಮತ್ತು ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇತ್ತೀಚೆಗೆ ನಡೆದ 5 ವಿಧಾನಸಭೆ ಚುನಾವಣೆಯಲ್ಲಿ ಹಿರಿಯರ ನಾಗರಿಕರು ಮತ್ತು ಅಂಗವಿಕಲ ಮತದಾರರ ಮನೆಗೆ ಹೋಗಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು
– ಆಯೋಗ
Karnataka Election 2023 LIVE: 12.5 ಲಕ್ಷ ಮತದಾರರು 80 ವರ್ಷಕ್ಕೂ ಮೇಲ್ಪಟ್ಟವರಿದ್ದಾರೆ.