Site icon Vistara News

Murder Case : ರಾಗಿ ಹೊಲದಲ್ಲಿ ಹೆಣವಾದ ವೃದ್ಧೆ!

Murder Case in bengaluru rural

ದೊಡ್ಡಬಳ್ಳಾಪುರ: ರಾಗಿ ಹೊಲಕ್ಕೆ ತೆರಳಿದ್ದ ವೃದ್ಧೆಯೊಬ್ಬರು ಬರ್ಬರವಾಗಿ ಕೊಲೆ (Murder case) ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಚೌಡಮ್ಮ (75) ಕೊಲೆಯಾದ ವೃದ್ಧೆ.

ವೃದ್ಧೆ ಚೌಡಮ್ಮ ತಲೆಗೆ ಬಲವಾಗಿ ಹೊಡೆದಿದ್ದು, ಬಳಿಕ ಅವಳದ್ದೇ ಸೀರೆಯಲ್ಲಿ ಕತ್ತು ಹಿಸುಕಿ ಸಾಯಿಸಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಒಂದಿಷ್ಟು ಭೂಮಿ ಹೊಂದಿದ್ದ ಚೌಡಮ್ಮ, ರಾಗಿ ಬೆಳೆಯುತ್ತಿದ್ದರು. ಆದರೆ ಕೆಲವರು ಹೊಲಕ್ಕೆ ದನಕರುಗಳನ್ನು ಬಿಟ್ಟು ಬೆಳೆ ಹಾಳು ಮಾಡುತ್ತಿದ್ದರು. ಹೀಗಾಗಿ ವೃದ್ಧೆ ಚೌಡಮ್ಮ ನಿತ್ಯ ಕಾವಲು ಕಾಯಲು ಹೊಲಕ್ಕೆ ಹೋಗುತ್ತಿದ್ದರು.

ಇತ್ತೀಚೆಗೆ ಚೌಡಮ್ಮ ಹಾಗೂ ಜಾನುವಾರಗಳನ್ನು ಮೇಯಿಸುವವರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಹೀಗಾಗಿಯೇ ತಲೆಗೆ ಹೊಡೆದು ಸೀರೆಯಿಂದ ಕುತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಂಜೆ ಕಳೆದರೂ ಚೌಡಮ್ಮ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಹೊಲಕ್ಕೆ ತೆರಳಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.

ಕೂಡಲೇ ಕುಟುಂಬಸ್ಥರು ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Bengaluru News : ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಚಾಲಕ

ಕತ್ತಲಲ್ಲಿ ಬಂದು ಕಲ್ಲಿನಿಂದ ಜಜ್ಜಿ ವ್ಯಕ್ತಿ ಬರ್ಬರ ಹತ್ಯೆ!

ಬೀದರ್: ಸ್ಕೂಟರ್‌ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ (Murder Case) ಹತ್ಯೆ ಮಾಡಲಾಗಿದೆ. ಬೀದರ್ ತಾಲೂಕಿನ ಅಲಿಯಂಬರ ಗ್ರಾಮದ ಹೊರವಲಯದಲ್ಲಿ ಈ ಕೃತ್ಯ ನಡೆದಿದೆ. ಅಮೀತ್ ಮಾನಾಜೀ (35) ಹತ್ಯೆಯಾದವರು.

ವಿಳಾಸಪೂರ ನಿವಾಸಿಯಾದ ಅಮೀತ್ ಶನಿವಾರ ರಾತ್ರಿ 9 ಗಂಟೆಗೆ ಸುಮಾರಿಗೆ ಸ್ಕೂಟರ್‌ನಲ್ಲಿ ಮನೆಗೆ ತೆರಳುವಾಗ ಕಿಡಿಗೇಡಿಗಳು ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ. ಅಮಿತ್‌ ಲಾಕ್‌ಡೌನ್ ಬಳಿಕ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ. ಈತನ ಕುಟುಂಬವೆಲ್ಲ ಮೈಸೂರಿನಲ್ಲಿ ವಾಸವಿದೆ ಎಂದು ತಿಳಿದು ಬಂದಿದೆ.

ಹತ್ಯೆಯಾದ ಅಮೀತ್‌

ವಿಷಯ ತಿಳಿಯುತ್ತಿದ್ದಂತೆ ಅಮೀತ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಜನವಾಡ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಅಮೀತ್‌ನನ್ನು ಹತ್ಯೆ ಮಾಡಿದವರು ಯಾರು? ಯಾಕಾಗಿ ಹತ್ಯೆ ಮಾಡಿದ್ದಾರೆ. ಪರಿಚಯಸ್ಥರಿಂದಲೇ ಈ ಕೃತ್ಯ ನಡೆದಿದ್ದಯಾ ಅಥವಾ ಹಣದಾಸೆಗೆ ಯಾರಾದರೂ ದರೋಡೆಕೋರರು ಹೀಗೆ ಮಾಡಿದ್ದರಾ ಎಂಬ ಹಲವು ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವಾಹನ ಪಲ್ಟಿ; ಯುವಕ ಸಾವು,10 ಮಂದಿಗೆ ಗಾಯ

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!

ಉಡುಪಿ: ಒಂದೇ ಕುಟುಂಬದ ನಾಲ್ವರ ಕಗ್ಗೊಲೆಯಾಗಿದೆ. ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಸಮೀಪದ ತೃಪ್ತಿ ನಗರದಲ್ಲಿ ಈ ಕೃತ್ಯ (Murder case) ನಡೆದಿದೆ. ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆಯಾಗಿದೆ.

ಹಸೀನಾ (46), ಅಫ್ನಾನ್ (23), ಅಯ್ನಾಝ್ (21), ಆಸಿಂ (12) ಮೃತ ದುರ್ದೈವಿ. ಚೂರಿಯಿಂದ ಚುಚ್ಚಿ ಕೊಲೆಗೈದು ಹಂತಕರು ಪರಾರಿ ಆಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕಾಗಮಿಸಿದ ಶ್ವಾನ ದಳ

ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ಮೊದಲು ಮನೆ ಯಜಮಾನಿಗೆ ಚೂರಿ ಇರಿಯಲಾಗಿದೆ. ಬಳಿಕ ಮಕ್ಕಳಾದ ಅಫ್ನಾನ್,ಅಯ್ನಾಝ್‌ಗೆ ಚಾಕುವಿನಿಂದ ಇರಿದಿದ್ದಾರೆ. ಸದ್ದು ಕೇಳಿ ಆಟವಾಡುತ್ತಿದ್ದ ಆಸಿಂ ಒಳ ಬರುತ್ತಿದ್ದಂತೆ ಆತನನ್ನು ಕೊಂದಿದ್ದಾರೆ. ಇವರ ಬೊಬ್ಬೆ ಕೇಳಿ ಹೊರಗಡೆ ಬಂದ ಪಕ್ಕದ ಮನೆ ಯುವತಿಯನ್ನು ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಮನೆಯೊಳಗಿದ್ದ ಮತ್ತೊಬ್ಬ ಮಹಿಳೆಗೂ ತೀವ್ರ ಗಾಯಗಳಾಗಿದೆ. ಮನೆಯೊಡತಿಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿ ಇದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸ್‌ಪಿ ಅರುಣ್ ಕುಮಾರ್ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version