Site icon Vistara News

Road Accident : ಹೊಸಪೇಟೆಯಲ್ಲಿ ಭೀಕರ ಅಪಘಾತ; 7 ಮಂದಿ ದುರ್ಮರಣ

Hosapete Road Accident

ವಿಜಯನಗರ : ಇಲ್ಲಿನ ಹೊಸಪೇಟೆ ಹಾಗೂ ಮರಿಯಮ್ಮನಹಳ್ಳಿ ಮಧ್ಯೆ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಲಾರಿ ಮತ್ತು ಕ್ರೂಸರ್ ನಡುವೆ ಅಪಘಾತ ಸಂಭವಿಸಿದ್ದು, 7ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಉಮ್ಮವ್ವ (45), ಕೆಂಚವ್ವ (80), ಭಾಗ್ಯ (32), ಅನಿಲ (30), ಗೋಣಿ ಬಸಪ್ಪ (65), ಭೀಮಲಿಂಗಪ್ಪ (40) ಸೇರಿ ಐದು ವರ್ಷದ ಬಾಲಕ ಯುವರಾಜ ಮೃತಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೊಸಪೇಟೆಯಿಂದ ಮರಿಯಮ್ಮನಹಳ್ಳಿಯತ್ತ ಲಾರಿ ಹೊರಟಿತ್ತು.
ಈ ವೇಳೆ ಮರಿಯಮ್ಮನಹಳ್ಳಿ ಕಡೆಯಿಂದ ಹೊಸಪೇಟೆಯತ್ತ ಮತ್ತೊಂದು ಲಾರಿ ಹಾಗೂ ಕ್ರೂಸರ್‌ ಬರುತ್ತಿತ್ತು.
ಹೊಸಪೇಟೆಯಿಂದ ಬರುತ್ತಿದ್ದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಲ ಬದಿ ಬರುತ್ತಿದ್ದ ಕ್ರೂಸರ್‌ಗೆ ಡಿಕ್ಕಿ ಆಗಿದೆ. ಪರಿಣಾಮ ಎರಡು ಲಾರಿ ಮಧ್ಯೆ ಸಿಕ್ಕಿಹಾಕಿಕೊಂಡ ಕ್ರೂಸರ್‌ ವಾಹನ ಅಪ್ಪಚ್ಚಿ ಆಗಿದೆ.

ಅಪಘಾತ ಭೀಕರತೆಗೆ ಸ್ಥಳದಲ್ಲೇ 7 ಮಂದಿ ದುರ್ಮರಣ ಹೊಂದಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಸ್ಥಳದಲ್ಲಿ ವಿಜಯನಗರ ಎಸ್‌ಪಿ ಶ್ರೀಹರಿಬಾಬು, ಡಿವೈಎಸ್.ಪಿ ಮಂಜುನಾಥ ತಳವಾರ ಮೊಕ್ಕಾಂ ಹೂಡಿದ್ದಾರೆ. ಕ್ರೂಸರ್‌ ವಾಹನವು ಪೂರ್ತಿ ಛಿದ್ರ ಛಿದ್ರಗೊಂಡಿದೆ. ಲಾರಿ ಮುಂಭಾಗ ಪೂರ್ತಿ ಜಖಂಗೊಂಡಿದ್ದು, ಕಳಚಿ ಬಿದ್ದಿದೆ.

Road Accident in Hosapete

ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದ್ದು, ಪೊಲೀಸರು ಮೃತದೇಹವನ್ನು ಹೊರತೆಗೆಯುತ್ತಿದ್ದಾರೆ. ಈ ಭೀಕರ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ಛಿದ್ರವಾಯ್ತು ಬಾಲಕನ ತಲೆ; ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ!

ಬೆಂಗಳೂರು: ಕಿಲ್ಲರ್‌ ಎಂಬ ಅಪಖ್ಯಾತಿಗೆ ಒಳಗಾಗಿರುವ ಬಿಎಂಟಿಸಿ ಬಸ್‌ ಬಾಲಕನ ಬಲಿ (Bus Accident) ಪಡೆದಿದೆ. ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್‌ನಲ್ಲಿ ಭಾನುವಾರ (ಅ.8) ಸಂಜೆ ಕಿಲ್ಲರ್ ಬಿಎಂಟಿಸಿಗೆ ಮೂರು ವರ್ಷದ ಬಾಲಕ (Killer Bmtc) ಮೃತಪಟ್ಟಿದ್ದಾನೆ. ಆಯಾನ್ ಪಾಷಾ ಮೃತ ದುರ್ದೈವಿ.

3 ವರ್ಷದ ಆಯಾನ್‌ ಪಾಷಾ ದೊಡ್ಡಮ್ಮನ ಜತೆ ವಾಸವಾಗಿದ್ದ. ನಿನ್ನೆ ಭಾನುವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಗಾಡಿ ಹಿಂಬದಿಯಲ್ಲಿ ಕುಳಿತಿದ್ದ ಆಯಾನ್‌ ಪಾಷ್‌ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಸ್ ಚಕ್ರ ಮಗುವಿನ ಮೇಲೆ ಹತ್ತಿದ್ದು, ತಲೆಯು ಛಿದ್ರಗೊಂಡಿದೆ.

ಸ್ಥಳದಲ್ಲೇ ಬಾಲಕ ಜೀವ ಬಿಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಿಎಂಟಿಸಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಸಿದ್ದಾರೆ. ಬಸ್ ಜತೆಗೆ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version