Site icon Vistara News

Murder case : ಶಿವಮೊಗ್ಗದಲ್ಲಿ ಭೀಕರ ಹತ್ಯೆ; ವ್ಯಕ್ತಿಗೆ ಮದ್ಯ ಕುಡಿಸಿ ಬಳಿಕ ದೇಹವನ್ನು ತುಂಡಾಗಿ ಕತ್ತರಿಸಿ ನದಿಗೆ ಎಸೆದ ದುರುಳರು

Murder case

ಶಿವಮೊಗ್ಗ: ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಛಿದ್ರ, ಛಿದ್ರವಾಗಿ ಕೊಲೆ ಮಾಡಿ (Murder Case) ನದಿಗೆ ಎಸೆದಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲ್ಲೂಕು ನಾಗೀಹಳ್ಳಿ ಗ್ರಾಮದಲ್ಲಿ ಹತ್ಯೆ ನಡೆದಿದೆ. ಕೃಷ್ಣಪ್ಪ (33) ಕೊಲೆಯಾದ ದುರ್ದೈವಿ. ಕಳೆದ ಮೂರು ದಿನಗಳ ಹಿಂದೆ ಕೃಷ್ಣಪ್ಪ ಅವರ ಪತ್ನಿ ಕಾಣೆಯಾಗಿದ್ದಾರೆ ಎಂದು ಶಿರಾಳಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದರು. ಸಂಶಯದ ಮೇರೆಗೆ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಆದರೆ ಕಿರಣ್ ಬಂಧನದ ಬಳಿಕ ಕೊಲೆ ರಹಸ್ಯ ಬಯಲಾಗಿದೆ. ಕೃಷ್ಣಪ್ಪನ ಪತ್ನಿ ಜತೆ ಕಿರಣ್‌ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಕಿರಣನನ್ನು ಕರೆದು ಕೃಷ್ಣಪ್ಪ ಬೈದು ಎಚ್ಚರಿಕೆ ನೀಡಿ ಕಳಿಸಿದ್ದ. ಇದರಿಂದ ಸಿಟ್ಟಾದ ಕಿರಣ್‌ ತನ್ನಿಬ್ಬರು ಸ್ನೇಹಿತರಾದ ಪ್ರತಾಪ್‌ ಹಾಗೂ ಗಣೇಶನ ಸಹಾಯ ಪಡೆದು ಕಂದ್ಲಿ, ಕುಡುಗೋಲು ಮತ್ತು ಪ್ಲಾಸ್ಟಿಕ್‌ ಕೊಪ್ಪೆಗಳನ್ನು ಬಳಸಿ ಕೊಲೆ ಮಾಡಿದ್ದಾರೆ.

ಕೃಷ್ಣಪ್ಪನನ್ನು ಕರೆಸಿಕೊಂಡ ಕಿರಣ್‌ ಮಧ್ಯರಾತ್ರಿವರೆಗೂ ಮದ್ಯ ಕುಡಿಸಿದ್ದ. ಬಳಿಕ ಕೊಲೆ ಮಾಡಿದ ಕಿರಣ್ ಹಾಗೂ ಸ್ನೇಹಿತರು ಕೃಷ್ಣಪ್ಪನ ಅಂಗಾಂಗಗಳನ್ನ ಕತ್ತರಿಸಿ ಎರಡು ಪ್ಲಾಸ್ಟಿಕ್‌ ಚೀಲಗಳಿಗೆ ತುಂಬಿಕೊಂಡಿದ್ದರು. ಬಳಿಕ ಗಣೇಶ ಹಾಗೂ ಕಿರಣ ಒಂದು, ಪ್ರತಾಪ ಇನ್ನೊಂದು ಶವದ ಚೀಲವನ್ನು ಹಿಡಿದು ಕೊರಟೆಗೆರೆ , ಚಿಕ್ಕರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್‌ ಬಳಿ ಶವ ಎಸೆದು ಬಳಿಕ ಕಾಲ್ಕಿತ್ತಿದ್ದರು.

ನದಿಗೆ ಎರಡು ಚೀಲದಲ್ಲಿದ್ದ ಕೃ‍ಷ್ಣಪ್ಪನ ಅಂಗಾಂಗಗಳನ್ನು ಎಸೆದು ಕಿರಣ್‌ ಏನು ಆಗದಂತೆ ವಾಪಸ್‌ ಆಗಿದ್ದ. ಆದರೆ ಕಿರಣ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಸದ್ಯ ಎಫ್.ಐ.ಆರ್. ದಾಖಲಿಸಿ ಆರೋಪಿಗಳನ್ನು ಬಂಧಿಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಸಾವಿರ ರೂ. ಗಾಗಿ ಯುವಕನಿಗೆ ಚಾಕು ಇರಿದ ದುರುಳರು

ದಾವಣಗೆರೆಯ ಚನ್ನಗಿರಿ ತಾಲೂಕಿನ ಗಾಣದಗಟ್ಟೆ ಗ್ರಾಮದಲ್ಲಿ ಗುಂಪು ಕಟ್ಟಿಕೊಂಡು ಬಂದ ಯುವಕನೊರ್ವ ವ್ಯಕ್ತಿಯೊಬ್ಬರಿಗೆ ಹೊಡೆದು ಚಾಕು ಇರಿದಿದ್ದಾನೆ. ಅಣ್ಣಪ್ಪ (45) ಚಾಕು ಇರಿತಕ್ಕೆ ಒಳಗಾದವರು. ಒಂದು ಸಾವಿರ ರೂಪಾಯಿ ಕೊಡದೆ ಇರುವುದಕ್ಕೆ ಗಾಣದಗಟ್ಟೆ ಗ್ರಾಮದ ರಾಕೇಶ್ ಎಂಬಾತ ಚಾಕು ಇರಿದಿದ್ದಾನೆ. ಗಲಾಟೆ ಹಾಗೂ ಚಾಕು ಇರಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ.

ಅಣ್ಣಪ್ಪ ಹಾಗೂ ಸುನೀಲ್ ಎನ್ನುವರು ಇಬ್ಬರು ಸ್ನೇಹಿತರು, ರಾಕಿ ಹತ್ತಿರ ಒಂದು ಸಾವಿರ ಸಾಲ ಪಡೆದಿದ್ದರು. ಎರಡು ತಿಂಗಳಾದರೂ ನೀಡಿಲ್ಲ ಎಂದು ಗಾಣದಗಟ್ಟೆಯಲ್ಲಿ ರಾಕಿ ಜಗಳ ತೆಗೆದಿದ್ದ. ಜಗಳ ಮಾಡುತ್ತಿದ್ದಾಗ ಸ್ನೇಹಿತನ ಪರ ಹೋದ ಅಣ್ಣಪ್ಪ, ಇನ್ನೆರಡು ದಿನಗಳಲ್ಲಿ ನಾನೇ ಸಾವಿರ ರೂಪಾಯಿ ನೀಡುತ್ತೇನೆ ಎಂದು ಒಪ್ಪಿಕೊಂಡಿದ್ದ.

ಆದರೂ ಒಪ್ಪದೆ, ಹಣನಾ ಸುನೀಲ್ ಕೊಡಬೇಕಿರುವುದು ನೀನು ಅಲ್ಲ ಎಂದು ಜಗಳ ತೆಗೆದಿದ್ದ. ಎರಡು ಗುಂಪುಗಳ‌ ನಡುವೆ ಜಗಳವಾಗಿ ರಾಕೇಶ್ ಅಣ್ಣಪ್ಪನಿಗೆ ಚಾಕು ಇರಿದಿದ್ದಾನೆ. ಸದ್ಯ ಕುಟುಂಬಸ್ಥರು ಅಣ್ಣಪ್ಪನನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಗೆ ದೂರು‌ ನೀಡಿದರೂ ಆರೋಪಿಯನ್ನು ಬಂಧಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡದ್ದಕ್ಕೆ ಚಾಕು ಹಾಕಿದ ಸ್ನೇಹಿತ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಬಳಿ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು. ಕಾರ್ಯಕ್ರಮದ ವೇಳೆ ನೀನು ನನಗೆ ಅವಕಾಶ ನೀಡಲಿಲ್ಲ ಎಂದು ಮೂವರು ತಕರಾರು ತೆಗೆದಿದ್ದರು. ಅಷ್ಟೇ ಅಲ್ಲದೇ ಗಲಾಟೆ ಕೂಡಾ ಮಾಡಿಕೊಂಡಿದ್ದಾರೆ.

ಗಲಾಟೆ ವಿಕೋಪಕ್ಕೆ ತಿರುಗಿದ್ದು ಆದಿತ್ಯ (26), ಪ್ರಕಾಶ್ (24) ಇವರಿಬ್ಬರಿಗೆ ಆತನ ಸ್ನೇಹಿತ ತಿರುಮಲ (25) ಎಂಬಾತ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ. ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ಯುವಕರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version