Site icon Vistara News

Ankola News : ಕಿಂಡಿ ಆಣೆಕಟ್ಟು ಹೋರಾಟ ಬೆಂಬಲಿಸಲು ಆದಿಚುಂಚನಗಿರಿ‌ ಶಾಖಾಮಠದ ಶ್ರೀಗಳಿಗೆ ಮನವಿ‌

#image_title

ಅಂಕೋಲಾ : ಗಂಗಾವಳಿ ನದಿ ಕಿಂಡಿ ಆಣೆಕಟ್ಟು ವಿರೋಧ ಹೋರಾಟ ಸಮಿತಿಯ ಪ್ರಮುಖರು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರನ್ನು ಮಿರ್ಜಾನ ಶಾಖಾ ಮಠದಲ್ಲಿ ಭೇಟಿ ಮಾಡಿ, ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸುವಂತೆ ಮನವಿ (Ankola News) ಮಾಡಿದ್ದಾರೆ.

ಇದನ್ನೂ ಓದಿ: Torke Fish | ಅಂಕೋಲಾದಲ್ಲಿ 8 ಸಾವಿರ ರೂಪಾಯಿಗೆ 120 ಕೆಜಿ ತೂಕದ ತೊರ್ಕೆ ಮೀನು ಖರೀದಿ
ಈ ಸಂದರ್ಭದಲ್ಲಿ ಸ್ವಾಮಿಜಿಗಳೊಂದಿಗೆ ಹೊರಾಟ ಸಮಿತಿ ಪ್ರಮುಖರಾದ ಜಿ.ಎಂ.ಶೆಟ್ಟಿ, ಶಿವರಾಮ ಗಾಂವಕರ್ ಮತ್ತು ಶಾಂತಾರಾಮ ನಾಯಕ ಚರ್ಚೆಯನ್ನು ನಡೆಸಿದ್ದಾರೆ. ಕಿಂಡಿ ಆಣೆಕಟ್ಟು ನಿರ್ಮಾಣವಾದರೆ ಈ ಭಾಗದಲ್ಲಿ ಆಗುವ ದುಷ್ಪರಿಣಾಮ ಮತ್ತು ಎಲ್ಲಾ ಸಾಧಕ ಬಾಧಕಗಳ ಕುರಿತು ಮಾಹಿತಿಯನ್ನು ಸ್ವಾಮೀಜಿಗೆ ನೀಡಲಾಯಿತು. ಅಲ್ಲದೆ “ಈಗಾಗಲೇ ನೆರೆ ಬಂದಾಗ ಗಂಗಾವಳಿ ತಟದ ಜನರು ಸಂಕಷ್ಟ ಪಡುತ್ತಿದ್ದಾರೆ. ಒಂದು ವೇಳೆ ಕಿಂಡಿ ಆಣೆಕಟ್ಟು ಆಗಿದ್ದೆ ಆದಲ್ಲಿ ಈ ಜನರ ಬದುಕು ದುಸ್ತರವಾಗಬಹುದು” ಎಂದು ಹೋರಾಟಗಾರರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಸನ್ನನಾಥ ಸ್ವಾಮೀಜಿ, “ಚುನಾವಣೆ ಮುಗಿದ ಬಳಿಕ ಸರ್ಕಾರದ ಜೊತೆ ಚರ್ಚಿಸಿ ಇಲ್ಲಿಯ ಜನರಿಗೆ ಬೇಡವಾದ ಯೋಜನೆಯನ್ನು ನಿಲ್ಲಿಸಲು ಪ್ರಯತ್ನಿಸಲಾಗುವುದು. ಜನರ ಜೊತೆ ನಾವು ಸದಾ ಇರುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: Karwar News | ಅಂಕೋಲಾದ ನೌಕಾಸೇನಾ ಸಿಬ್ಬಂದಿ ಅಂಡಮಾನ್-ನಿಕೋಬಾರ್‌ನಲ್ಲಿ ಅಕಾಲಿಕ ಸಾವು
ಅಗಸೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗೊಪಾಲ ನಾಯಕ, ಅಡ್ಲುರ ಗ್ರಾಮ ಪಂಚಾಯಿತಿ ಸದಸ್ಯರಾದ ಯಶವಂತ ಗೌಡ, ಆನಂದ ಗೌಡ, ಶ್ವೇತಾ ಗೌಡ, ಹಿಲೂರ ಪಂಚಾಯಿತಿಯ ತ್ರಿಯಂಬ ಬಾಂದೆಕರ್, ಗೋಪಾಲಕೃಷ್ಣ ನಾಯಕ, ಅಚವೆ ಪಂಚಾಯಿತಿ ಉಪಾಧ್ಯಕ್ಷರಾದ ಬಾಲಚಂದ್ರ ಶೆಟ್ಟಿ, ಕಿಂಡಿ ಆಣೆಕಟ್ಟು ಹೋರಾಟ ಸಮಿತಿಯ ಅಧ್ಯಕ್ಷ ಆನಂದ ಗೌಡ, ಕಾರ್ಯದರ್ಶಿ ಸಂತೋಷ ಗೌಡ ಮತ್ತು ಕೇಶವ ಗೌಡ, ಬೀರ ಗೌಡ, ನಾರಾಯಣ ಗೌಡ ಹೋರಾಟ ಸಮಿತಿಯ ಸದಸ್ಯರು ಮತ್ತು ಐದು ಪಂಚಾಯಿತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version