Site icon Vistara News

Vistara Top 10 News : ಕೊರೊನಾ ಬಂದ್ರೆ ಹೋಮ್‌ ಐಸೊಲೇಷನ್‌, ಯುವನಿಧಿ ಹಣ ಇನ್ನು ಗ್ಯಾರಂಟಿ!

vistara top ten

1. Coronavirus : ಎಲ್ಲರೂ ಮಾಸ್ಕ್‌ ಧರಿಸಿ, ಶೀತ ಜ್ವರ ಇದ್ರೆ ಮಕ್ಕಳನ್ನು ಶಾಲೆಗೆ ಕಳಿಸ್ಬೇಡಿ; ಸರ್ಕಾರ ಸೂಚನೆ
ರಾಜ್ಯದಲ್ಲಿ ಕೊರೊನಾ ವೈರಸ್‌ ಉಪತಳಿ ಜೆಎನ್‌.1 (Coronavirus JN.1) ಎಂಟ್ರಿ ಆಗಿದೆ. ಹಾಗಂತ ಭಯಪಡಬೇಕಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಮಾಸ್ಕ್‌ ಧರಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ. ಕೊರೊನಾ ಸಂಬಂಧಿತ ಸಂಪುಟ ಉಪಸಮಿತಿ ಸಭೆಯ ಬಳಿಕ ಮಾತನಾಡಿದ ಅವರು ಜ್ವರ ಶೀತ ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂದರು. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ : ಹೊಸ ವರ್ಷಾಚರಣೆಗೆ ಕೋವಿಡ್‌ ಮಾರ್ಗಸೂಚಿ ಇಲ್ಲ, ಬಿಗಿ ಭದ್ರತೆ ಮಾತ್ರ
ಈ ಸುದ್ದಿಯನ್ನೂ ಓದಿ: Corona Virus News: ಮಂಗಳವಾರ 74 ಮಂದಿಗೆ ಕೊರೊನಾ, ಇಬ್ಬರ ಸಾವು

2. Yuva Nidhi Scheme : ಯುವನಿಧಿ ನೋಂದಣಿಗೆ ಸಿಎಂ ಚಾಲನೆ; ಜ. 12ರಂದು ಖಾತೆಗೆ ಬೀಳುತ್ತೆ ಹಣ
ಕಾಂಗ್ರೆಸ್‌ ಸರ್ಕಾರದ ಬಹು ನಿರೀಕ್ಷೆಯ ಐದನೇ ಗ್ಯಾರಂಟಿ (Congress Guarantee) ಯೋಜನೆಯಾದ ಯುವ ನಿಧಿಗೆ (Yuva Nidhi Scheme) ಸಿಎಂ ಸಿದ್ದರಾಮಯ್ಯ (CM Siddaramaiah) ಚಾಲನೆ ನೀಡಿದರು. ನೋಂದಣಿ ಮಾಡಿಸಿಕೊಂಡವರಿಗೆ ಜನವರಿ 12ರ ವಿವೇಕಾನಂದ ಜಯಂತಿಯಂದು (Vivekananda Jayanti) ಹಣ ಜಮಾವಣೆ ಮಾಡಲಾಗುತ್ತದೆ. ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಶಿವಮೊಗ್ಗದಲ್ಲಿ ಜನವರಿ 12ರಂದು ನಡೆಯಲಿದೆ ಎಂದು ಹೇಳಿದರು. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

3.ಕನ್ನಡ ನಾಮಫಲಕ ಹೋರಾಟ ತಾರಕಕ್ಕೆ; ನಾಳೆ ಕರವೇ ಮೆರವಣಿಗೆ; ಕನ್ನಡ ಫಲಕ ಹಾಕದಿದ್ದರೆ ಹುಷಾರ್!
ಡಿಸೆಂಬರ್‌ 27ರ ಒಳಗೆ ಬೆಂಗಳೂರಿನ ಎಲ್ಲ ವ್ಯಾಪಾರ, ಉದ್ಯಮಗಳ ನಾಮಫಲಕಗಳಲ್ಲಿ (Name plates of Shops) ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಗಡುವನ್ನು ವಿಧಿಸಿತ್ತು. ಆದರೆ, ಕೆಲವು ಮಾಲೀಕರು ಕರವೇಯ ಈ ಅಂತಿಮ ಗಡುವಿಗೆ ಸವಾಲು ಹಾಕಿದ್ದರಿಂದ ಆಕ್ರೋಶ ಭುಗಿಲೆದ್ದಿದೆ. ಕರ್ನಾಟಕ ರಕ್ಷಣಾ ವೇದಿಕೆಯು ತಾನು ನೀಡಿದ ಅಂತಿಮ ಗಡುವಿನ ದಿನವಾದ ಡಿಸೆಂಬರ್‌ 27ರಂದು ಬೆಂಗಳೂರಿನಲ್ಲಿ ಬೃಹತ್‌ ಮೆರವಣಿಗೆಯನ್ನು ಆಯೋಜಿಸಿದೆ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

4.ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ನಿರಾಕರಿಸಿದ ಸಿಪಿಎಂ
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ (Ram Mandir) ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರೂ ಪಾಲ್ಗೊಳ್ಳುವುದಿಲ್ಲ ಎಂದು ಸಿಪಿಎಂ ಘೋಷಿಸಿದೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ರಾಮನ ಕರೆ ಇದ್ದವರು ಮಾತ್ರ ಪಾಲ್ಗೊಳ್ಳುತ್ತಾರೆ ಎಂದಿದೆ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ : Swami Prasad Maurya: ‘ಹಿಂದು ಧರ್ಮ ಅಲ್ಲ, ಮೋಸ’ ಎಂದ ಸಮಾಜವಾದಿ ಪಕ್ಷದ ನಾಯಕ!

5.Murder Case: ಪತಿ ಜತೆ ಸಂಸಾರ ಮಾಡಲೊಪ್ಪದ ಮಗಳನ್ನೇ ಸುಟ್ಟುಹಾಕಿದ ಪಾಪಿ ತಂದೆ!
ಮದುವೆಯಾದ ಮೇಲೆ ಗಂಡನೊಂದಿಗೆ ಸಂಸಾರ ಮಾಡಲೊಪ್ಪದ ಮಗಳನ್ನು ತಂದೆಯೇ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಮುಳಬಾಗಿಲು ತಾಲೂಕು ಮುಸ್ಟೂರು ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ನಂತರ ಮಗಳು ಕಾಣೆಯಾಗಿದ್ದಾಳೆಂದು ಆತನೇ ಪೊಲೀಸರಿಗೆ ದೂರು ನೀಡಿದ್ದ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

6. PM Narendra Modi: 2 ಕೋಟಿ ಚಂದಾದಾರರನ್ನು ದಾಟಿದ ಮೋದಿ ಯುಟ್ಯೂಬ್ ಚಾನೆಲ್!
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಯುಟ್ಯೂಬ್‌ ಚಾನೆಲ್‌ನ (YouTube Channel) ಚಂದಾದಾರ ಸಂಖ್ಯೆ ಮಂಗಳವಾರ 2 ಕೋಟಿ ದಾಟಿದೆ ಜಾಗತಿಕ ನಾಯಕರ ಪೈಕಿ ಅತಿ ಹೆಚ್ಚು ಚಂದಾದಾರನ್ನು ಹೊಂದಿದ ಯುಟ್ಯೂಬ್‌ ಚಾನೆಲ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

7. 2024 holidays : 2024ರ ಹಬ್ಬಗಳು ಮತ್ತು ರಜಾದಿನಗಳ ಪಟ್ಟಿ ಇಲ್ಲಿದೆ
ಹೊಸ ವರ್ಷ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಮುಂದಿನ ನಿರೀಕ್ಷೆಗಳು ಸಾಕಷ್ಟಿವೆ. 2024 ಸಾಕಷ್ಟು ರೋಮಾಂಚಕಾರಿಯಾಗಿರಲಿದೆ ಎಂಬ ಭರವಸೆಯೂ ಸೃಷ್ಟಿಯಾಗಿದೆ. ನಮ್ಮ ಸಂಭ್ರಮವನ್ನು ನಿಜಾರ್ಥದಲ್ಲಿ ಹೆಚ್ಚಿಸುವುದು ಹಬ್ಬಗಳು ಮತ್ತು ಅದಕ್ಕೆ ಸಿಗುವ ರಜಾದಿನಗಳು. ಅದನ್ನು ನಾವು ಈಗಿಂದಲೇ ಲೆಕ್ಕ ಹಾಕಲು ಆರಂಭಿಸುತ್ತೇವೆ. ಈ ಕೆಳಗೆ ನಾವು 202ರ ಪ್ರಮುಖ ಹಬ್ಬಗಳು ಹಾಗೂ ರಜಾದಿನಗಳ (2024 holidays) ಪಟ್ಟಿಯನ್ನು ನೀಡಲಾಗಿದೆ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಫ್ರಾನ್ಸ್‌ ವಶದಲ್ಲಿದ್ದ ವಿಮಾನ ಭಾರತಕ್ಕೆ ವಾಪಸ್; ನಿಟ್ಟುಸಿರು ಬಿಟ್ಟ 276 ಭಾರತೀಯರು
ಮಾನವ ಕಳ್ಳಸಾಗಣೆ ಆರೋಪದಲ್ಲಿ (Human Trafficking) ಫ್ರಾನ್ಸ್‌ ವಶದಲ್ಲಿದ್ದ 276 ಭಾರತೀಯರಿದ್ದ ವಿಮಾನವು ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿದೆ. ಫ್ರಾನ್ಸ್‌ನಿಂದ ಹೊರಟಿದ್ದ ವಿಮಾನವು ಮಂಗಳವಾರ (ಡಿಸೆಂಬರ್‌ 26) ಬೆಳಗ್ಗೆ 4 ಗಂಟೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

9. A Beginner’s Guide to Working Out: ವ್ಯಾಯಾಮಕ್ಕೆ ಹೊಸಬರೇ? ನಿಮಗೆಂಥದ್ದು ಬೇಕು?
ಹೊಸಾ ವರ್ಷ ಬರುತ್ತಿದೆಯಲ್ಲ… ಕಳೆದು ವರ್ಷವೂ ಬಂದಿತ್ತು ಎಂದಿರಾ? ವಿಷಯ ಅದಲ್ಲ, ಇದು ಹೊಸ ಪ್ರತಿಜ್ಞೆಗಳ (A Beginner’s Guide to Working Out)ಕಾಲವೂ ಹೌದು. ನೀವು ವ್ಯಾಯಾಮ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರೆ ನೀವು ಮೊದಲ ಬಾರಿ ವ್ಯಾಯಾಮ ಮಾಡುತ್ತಿದ್ದರೆ ಏನು ಮಾಡಬೇಕು, ಇಲ್ಲಿದೆ ಮಾಹಿತಿ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಅಜ್ಜಿಯ ನೋಡಲು ಹೊರಟ 6 ವರ್ಷದ ಬಾಲಕ ಬೇರೊಂದು ವಿಮಾನ ಹತ್ತಿದ; ಮುಂದೇನಾಯ್ತು?
ಸಾಮಾನ್ಯವಾಗಿ ವಿಮಾನ ಪ್ರಯಾಣದ (Air Travel) ವೇಳೆ ಒಂದು ವಿಮಾನದ ಬದಲು, ಬೇರೊಂದು ವಿಮಾನ ಹತ್ತುವುದು ವಿರಳದಲ್ಲಿ ಅತಿ ವಿರಳ. ಆಯಾ ಟರ್ಮಿನಲ್‌, ಗೇಟ್‌ಗಳ ವಿಂಗಡಣೆ, ಪ್ರತಿಯೊಬ್ಬ ಪ್ರಯಾಣಿಕರ ತಪಾಸಣೆ ಮಾಡುವುದರಿಂದ ಬೇರೆ ವಿಮಾನ ಹತ್ತುವ ಸಾಧ್ಯತೆ ತುಂಬ ಕಡಿಮೆ. ಆದರೆ, ಅಮೆರಿಕದಲ್ಲಿ ವಿಮಾನಯಾನ ಸಂಸ್ಥೆಯ (Airlines) ಸಿಬ್ಬಂದಿಯೇ ಆರು ವರ್ಷದ ಬಾಲಕನನ್ನು ಬೇರೊಂದು ವಿಮಾನವನ್ನು ಹತ್ತಿಸಿದ ಅಚಾತುರ್ಯ ನಡೆದಿದೆ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version