ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಕರ್ನಾಟಕದ ಮೊದಲ ಹಂತದ ಮತದಾನ 14 ಕ್ಷೇತ್ರಗಳಲ್ಲಿ ಇಂದು ಮುಂಜಾನೆಯಿಂದ ಚುರುಕಾಗಿ ನಡೆದಿದ್ದು. ಸಂಜೆ 6 ಗಂಟೆಯವರೆಗೆ ಸರಾಸರಿ ಶೇ.69.23 ಮತದಾನ ನಡೆದಿದೆ.
ಬೆಂಗಳೂರಿನ ಪದ್ಮನಾಭನಗರದ ಕಾರ್ಮೆಲ್ ಶಾಲೆಯಲ್ಲಿ ಶತಾಯುಷಿ ನಾರಾಯಣ ರಾವ್ (101 ವರ್ಷ) ಹಾಗೂ ಲಕ್ಷ್ಮಿ ( 97 ವರ್ಷ) ದಂಪತಿ ಮತದಾನ ಮಾಡಿದರು.
ತಮ್ಮ ಹುಟ್ಟೂರಾದ ಚಾಮರಾಜನಗರದ ಸಿದ್ದರಾಮನ ಹುಂಡಿಯಲ್ಲಿ ಪುತ್ರ ಯತೀಂದ್ರ ಅವರ ಜೊತೆಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಅವರು ಮತದಾನ ಮಾಡಿದರು.
ನಟ ರವಿಚಂದ್ರನ್ ಅವರಿಂದ ಮತದಾನ.
ಚಾಮರಾಜನಗರದಲ್ಲಿ ಮತದಾನ ಹೆಚ್ಚಿಸಲು ವಿಶೇಷ ಮತಗಟ್ಟೆಗಳ ಸ್ಥಾಪನೆಯಾಗಿದ್ದು, ಇದರಲ್ಲಿ ʼಅನ್ನದಾತ ಮತಗಟ್ಟೆʼ ಗಮನ ಸೆಳೆಯಿತು. ಉಳುಮೆ ಮತ್ತು ಬಿತ್ತನೆಯ ಗೋಡೆ ಚಿತ್ರ, ರೈತರ ಫಸಲು, ಬಾಳೆಗೊನೆ, ರೈತರ ಜಮೀನಿನಲ್ಲಿ ಬೆಳೆದಿರುವ ಹೂವಿನಿಂದ ಅಲಂಕಾರ, ರೈತೋಪಕರಣ, ಧಾನ್ಯಗಳ ರಾಶಿ ಮೂಲಕ ಕಂಗೊಳಿಸಿತು.
ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್, ಪದ್ಮನಾಭ ನಗರದ ತಮ್ಮ ಮನೆ ಬಳಿಯ ಸಹಕಾರಿ ವಿದ್ಯಾ ಕೇಂದ್ರ ಶಾಲೆಯಲ್ಲಿ ಪತ್ನಿ ,ಮಕ್ಕಳ ಜೊತೆ ಆಗಮಿಸಿ ಮತದಾನ ಮಾಡಿದರು.