ಮನಿ ಗೈಡ್
ITR Filing : ಐಟಿಆರ್ ಫೈಲಿಂಗ್ ಮಾಡಲು ಜುಲೈ 31ರ ಗಡುವು ತಪ್ಪಿದರೆ ದಂಡ ಎಷ್ಟು, ಏನು ಮಾಡಬಹುದು?
ITR Filing ಆದಾಯ ತೆರಿಗೆ ವಿವರ ಸಲ್ಲಿಕೆಗೆ 2023 ಜುಲೈ 31 ಕೊನೆಯ ದಿನವಾಗಿದೆ. ಈ ಗಡುವು ತಪ್ಪಿದರೆ ದಂಡ ಎಷ್ಟು? ಏನು ಮಾಡಬಹುದು? ಇಲ್ಲಿದೆ ವಿವರ.
ಕಳೆದ 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ (ITR Filing) 2023ರ ಜುಲೈ 31 ಕೊನೆಯ ದಿನಾಂಕವಾಗಿದೆ. ಒಂದು ವೇಳೆ ಜುಲೈ 31ರ ಗಡುವು ತಪ್ಪಿದರೆ ಅದರ ಪರಿಣಾಮವೇನು? ಮುಂದೇನು ಮಾಡಬಹುದು? ಈ ಕುರಿತ ಎಲ್ಲ ವಿವರಗಳು ಇಲ್ಲಿವೆ. ಐಟಿಆರ್ ಫೈಲಿಂಗ್ ಮಾಡಲು ತಪ್ಪಿದರೆ 5,000 ರೂ. ಅಥವಾ 1,000 ರೂ. ವಿಳಂಬ ಶುಲ್ಕ ಅನ್ವಯವಾಗುತ್ತದೆ. ವಿಳಂಬಿಸಿದರೆ ತೆರಿಗೆ ಮೊತ್ತಕ್ಕೆ ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ.
ಆದಾಯ ತೆರಿಗೆ ವಿವರ ಸಲ್ಲಿಕೆಯ ಆನ್‌ಲೈನ್ ಪ್ರಕ್ರಿಯೆ (Online process) ಈಗ ಸುಲಭ ಪ್ರಕ್ರಿಯೆಯಾಗಿದೆ. ಮನೆಯಲ್ಲೇ ಕುಳಿತುಕೊಂಡು ಕಂಫರ್ಟ್ ಆಗಿ ಐಟಿಆರ್ ಫೈಲಿಂಗ್ ಅನ್ನು ಈಗ ಮಾಡಬಹುದು. ಸಮಯವನ್ನು ಉಳಿತಾಯ ಮಾಡಬಹುದು. ಮಾನ್ಯುವಲ್ ಫೈಲಿಂಗ್‌ನಲ್ಲಿರುವ ಸಮಸ್ಯೆಗಳನ್ನು ದೂರ ಮಾಡಬಹುದು.
ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಪ್ರಿ-ಫಿಲ್ಡ್ ಐಟಿಆರ್ ಫಾರ್ಮ್ ಅನ್ನು (pre-filled ITR form) ಸಿದ್ಧಪಡಿಸಿದೆ. ಹೀಗಿದ್ದರೂ, 2022-23 ಆರ್ಥಿಕ ವರ್ಷದ ಐಟಿಆರ್ ಫೈಲಿಂಗ್ ಮಾಡಲು 2023ರ ಜುಲೈ 31 ಕೊನೆಯ ದಿನಾಂಕ ಎಂಬುದು ನಿರ್ಣಾಯಕ. ಯಾವುದೇ ಶುಲ್ಕ ರಹಿತವಾಗಿ ಈ ಗಡುವಿನೊಳಗೆ ಐಟಿಆರ್ ಫೈಲಿಂಗ್ ಮಾಡಬಹುದು.
ಗಡುವು ತಪ್ಪಿದರೆ ಏನಾಗುತ್ತದೆ?
ಐಟಿಆರ್ ಸಲ್ಲಿಕೆಯ ಗಡುವನ್ನು ತಪ್ಪಿದರೆ ನಾನಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪೆನಾಲ್ಟಿಗಳನ್ನು ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234 ಎಫ್ ಅಡಿಯಲ್ಲಿ 5,000 ರೂ. ತನಕ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ವಾರ್ಷಿಕ ಆದಾಯವು 5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ವಿಳಂಬ ಶುಲ್ಕವು 1,000 ರೂ. ಆಗುತ್ತದೆ.
ಇದನ್ನೂ ಓದಿ: Mutual fund : ಮ್ಯೂಚುವಲ್ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ಜುಲೈ 31ರ ಗಡುವು ತಪ್ಪಿದರೂ ನೀವು ವಿಳಂಬಿತ ರಿಟರ್ನ್ (belated return) ಫೈಲಿಂಗ್ ಮಾಡಬಹುದು. ವಿಳಂಬಿತ ಐಟಿಆರ್ ಅನ್ನು 2023ರ ಡಿಸೆಂಬರ್ 31 ರ ತನಕ ಫೈಲಿಂಗ್ ಮಾಡಬಹುದು. ಆದಾಯ ತೆರಿಗೆ ಪಾವತಿಸದಿದ್ದರೆ ( non-payment of taxes) ಕಠಿಣ ದಂಡ ಮತ್ತು ಮೂರು ತಿಂಗಳಿನಿಂದ ಎರಡು ವರ್ಷದ ತನಕ ಸೆರೆ ವಾಸಕ್ಕೂ ಕಾರಣವಾಗಬಹುದು. 25,00,000 ರೂ.ಗೂ ಹೆಚ್ಚು ತೆರಿಗೆ ಮೊತ್ತ ತಪ್ಪಿಸಿದ್ದರೆ ಏಳು ವರ್ಷದ ತನಕ ಜೈಲು ಶಿಕ್ಷೆ ಎದುರಿಸಬೇಕಾಗಿ ಬರಬಹುದು.
ಮನಿ ಗೈಡ್
Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!
ಆಧಾರ್ ಕಾರ್ಡ್ (Aadhar card) ವಿವರ ಬದಲಾವಣೆ, ಮ್ಯೂಚುವಲ್ ಫಂಡ್ (Mutual fund), ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳಿಗೆ ನಾಮಿನಿಗಳ ನೇಮಕ ಅಥವಾ ಬದಲಾವಣೆ, ಟಿಸಿಎಸ್ ನಿಯಮಗಳು, ರೂ. 2000 ನೋಟುಗಳ ಬದಲಾವಣೆ, ಮತ್ತು ಜನನ ಪ್ರಮಾಣಪತ್ರ ಕಡ್ಡಾಯ- ಈ 6 ದೊಡ್ಡ ಬದಲಾವಣೆಗಳು ಅಕ್ಟೋಬರ್ 1ರಿಂದ ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರಲಿವೆ.
ಬೆಂಗಳೂರು: ಅಕ್ಟೋಬರ್ 1ರಿಂದ ನಿಮ್ಮ ಹಣಕಾಸು ಸ್ಥಿತಿಗತಿಯ (Money Guide) ಮೇಲೆ ಪರಿಣಾಮ ಬೀರಬಲ್ಲ ಹಲವು ಸಂಗತಿಗಳು ವೈಯಕ್ತಿಕ ಹಣಕಾಸು (Personal Finance) ವಲಯದಲ್ಲಿ ನಡೆಯಲಿವೆ. ಹೀಗಾಗಿ ಅಕ್ಟೋಬರ್ 1ರ ಮೊದಲೇ ಇವುಗಳನ್ನು ನೀವು ಅಪ್‌ಡೇಟ್ ಮಾಡಿಕೊಳ್ಳಬೇಕಾದೀತು.
ಆಧಾರ್ ಕಾರ್ಡ್ (Aadhar card) ವಿವರ ಬದಲಾವಣೆ, ಮ್ಯೂಚುವಲ್ ಫಂಡ್ (Mutual fund), ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳಿಗೆ ನಾಮಿನಿಗಳ ನೇಮಕ ಅಥವಾ ಬದಲಾವಣೆ, ಟಿಸಿಎಸ್ ನಿಯಮಗಳು, ರೂ. 2000 ನೋಟುಗಳ ಬದಲಾವಣೆ, ಮತ್ತು ಜನನ ಪ್ರಮಾಣಪತ್ರ ಕಡ್ಡಾಯ- ಈ 6 ದೊಡ್ಡ ಬದಲಾವಣೆಗಳು ಅಕ್ಟೋಬರ್ 1ರಿಂದ ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರಲಿವೆ. ಇವುಗಳ ವಿವರ ಕೆಳಗಿದೆ.
1) ಮ್ಯೂಚುಯಲ್ ಫಂಡ್‌ಗಳಿಗೆ ನಾಮಿನಿ
ಅಸ್ತಿತ್ವದಲ್ಲಿರುವ ಎಲ್ಲಾ ಮ್ಯೂಚುಯಲ್ ಫಂಡ್ ಫೋಲಿಯೊಗಳಿಗೆ (ಜಂಟಿ ಹೆಸರು ಹೊಂದಿರುವುದನ್ನೂ ಸೇರಿಸಿ) ನಾಮನಿರ್ದೇಶಿತರನ್ನು (ನಾಮಿನಿ) ಸೇರಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2023 ಎಂದು ನಿಗದಿಪಡಿಸಲಾಗಿದೆ. ವಿಫಲವಾದರೆ ಫೋಲಿಯೊಗಳನ್ನು ಡೆಬಿಟ್‌ಗಳಿಗಾಗಿ ಫ್ರೀಜ್ ಮಾಡಲಾಗುತ್ತದೆ.
2) ಇತ್ತೀಚಿನ TCS ನಿಯಮಗಳು
ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಿಮ್ಮ ಸಾಗರೋತ್ತರ ವೆಚ್ಚಗಳು ರೂ. 7 ಲಕ್ಷವನ್ನು ಮೀರಿದರೆ, ನೀವು ಅಕ್ಟೋಬರ್ 1ರಿಂದ 20 ಪ್ರತಿಶತ TCSಗೆ ಒಳಪಡುತ್ತೀರಿ. ಆದರೆ ವೈದ್ಯಕೀಯ ಅಥವಾ ಶೈಕ್ಷಣಿಕ ಉದ್ದೇಶಗಳಿಗಾಗಿ ಅಂತಹ ವೆಚ್ಚಗಳನ್ನು ಮಾಡಿದರೆ TCS ಅನ್ನು 5 ಶೇಕಡ ವಿಧಿಸಲಾಗುತ್ತದೆ. ಸಾಗರೋತ್ತರ ಶಿಕ್ಷಣಕ್ಕಾಗಿ ಸಾಲ ಪಡೆಯುವವರಿಗೆ 7 ಲಕ್ಷದ ನಂತರದ ಮೊತ್ತಕ್ಕೆ ಕೇವಲ 0.5 ಶೇಕಡಾ ಹೆಚ್ಚುವರಿ TCS ದರ ವಿಧಿಸಲಾಗುತ್ತದೆ. ಕೇಂದ್ರವು 2023-24ರ ಬಜೆಟ್‌ನಲ್ಲಿ ಸಾಗರೋತ್ತರ ಪ್ರವಾಸ ಪ್ಯಾಕೇಜ್ ಮತ್ತು LRS ಅಡಿಯಲ್ಲಿ ರವಾನೆಯಾಗುವ ಹಣಕ್ಕೆ (ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶ ಹೊರತುಪಡಿಸಿ) TCS ದರಗಳನ್ನು ಪ್ರಸ್ತುತದ ಶೇಕಡಾ 5ರಿಂದ ಶೇಕಡಾ 20ಕ್ಕೆ ಹೆಚ್ಚಿಸಿದೆ.
3) ಡಿಮ್ಯಾಟ್, ಟ್ರೇಡಿಂಗ್ ಖಾತೆಗಳಿಗೆ ನಾಮನಿರ್ದೇಶನ
ಅಸ್ತಿತ್ವದಲ್ಲಿರುವ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ಫಲಾನುಭವಿಗಳನ್ನು ನಾಮನಿರ್ದೇಶನ ಮಾಡುವ ಗಡುವು ಸೆಪ್ಟೆಂಬರ್ 30ರಂದು ಕೊನೆಗೊಳ್ಳುತ್ತದೆ.
4) ಉಳಿತಾಯ ಖಾತೆಗೆ ಆಧಾರ್
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಅಂಚೆ ಕಚೇರಿ ಠೇವಣಿ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು ಈ ತಿಂಗಳ ಅಂತ್ಯದೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕು. ಸೆಪ್ಟೆಂಬರ್ 30ರಂದು ಗಡುವು ನೀಡಲಾಗಿದೆ. ಇಲ್ಲದಿದ್ದಲ್ಲಿ ಈ ಹೂಡಿಕೆಗಳನ್ನು ಫ್ರೀಜ್ ಮಾಡಬಹುದು.
5) ರೂ. 2000 ಕರೆನ್ಸಿ ನೋಟುಗಳ ವಿನಿಮಯ
ನಿಮ್ಮಲ್ಲಿ ಕೆಲವರು ಇನ್ನೂ ರೂ. 2000 ನೋಟುಗಳನ್ನು ಹೊಂದಿದ್ದರೆ, 30 ಸೆಪ್ಟೆಂಬರ್ 2023ರೊಳಗೆ ಖಂಡಿತವಾಗಿಯೂ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿ. ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 30 ಅನ್ನು ಈ ನೋಟುಗಳನ್ನು ಬದಲಾಯಿಸಲು ಗಡುವು ಎಂದು ನಿಗದಿಪಡಿಸಿದೆ.
6) ಸರ್ಕಾರಿ ಉದ್ಯೋಗಗಳಿಗೆ ಜನನ ಪ್ರಮಾಣ ಪತ್ರ ಕಡ್ಡಾಯ
ಹಣದ ವಿಷಯಗಳ ಹೊರತಾಗಿ, ಜನನ ಪ್ರಮಾಣಪತ್ರಗಳು ಮುಂದಿನ ತಿಂಗಳಿನಿಂದ ಆಧಾರ್ ಮತ್ತು ಸರ್ಕಾರಿ ಉದ್ಯೋಗಗಳಿಗೆ ಒಂದೇ ದಾಖಲೆಯಾಗಿ ಮಾರ್ಪಟ್ಟಿವೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಅಕ್ಟೋಬರ್ 1, 2023 ರಿಂದ ದೇಶದಲ್ಲಿ ಜಾರಿಗೆ ಬರಲಿದೆ.
ಇದನ್ನೂ ಓದಿ: Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!
ಪ್ರಮುಖ ಸುದ್ದಿ
Money Guide : ಗೃಹ ಸಾಲದ ಬಡ್ಡಿ ಲೆಕ್ಕಾಚಾರ ಮಾಡೋದು ಹೇಗೆ? ಇಲ್ಲಿದೆ ಸರಳ ವಿವರಣೆ
ಗೃಹ ಸಾಲಗಳ ಮೇಲಿನ ಬಡ್ಡಿಯನ್ನು ಬ್ಯಾಂಕ್ಗಳು ಮಾಸಿಕ ಕಡಿತ ಅಥವಾ ವಾರ್ಷಿಕ ಕಡಿಮೆ ಮಾಡುವ ಅಥವಾ ದೈನಂದಿನ ಕಡಿಮೆ ಮಾಡಲಾಗುವ ಬ್ಯಾಲೆನ್ಸ್ (Money Guide) ಮೇಲೆ ಲೆಕ್ಕಹಾಕಲಾಗುತ್ತವೆ.
ಸ್ವಂತ ಮನೆ ಹೊಂದುವುದು ಅನೇಕ ಭಾರತೀಯರಿಗೆ ಮಹತ್ವಾಕಾಂಕ್ಷೆಯ ಸಂಗತಿ. ಇದು ಜೀವನ ಭದ್ರತೆ, ಸ್ಥಿರತೆ ಮತ್ತು ಹೆಮ್ಮೆಯ ಪ್ರಜ್ಞೆಯನ್ನು ಕಲ್ಪಿಸುತ್ತದೆ. ಈ ಗುರಿಯನ್ನು ಸಾಧಿಸಲು ಅನೇಕರು ಬ್ಯಾಂಕ್ಗಳ ಮೂಲಕ ಗೃಹ ಸಾಲಗಳನ್ನು ಪಡೆಯುತ್ತಾರೆ ಗೃಹ ಸಾಲಗಳು (home loan) ಸಾಮಾನ್ಯವಾಗಿ ದೀರ್ಘಾವಧಿಯನ್ನು ಹೊಂದಿರುತ್ತವೆ. ಇದು ಬಹುತೇಕ ಭಾರತೀಯರ ದೀರ್ಘಾವಧಿಯ ಹಣಕಾಸು ಯೋಜನೆಗೆ ಸೂಕ್ತವಾಗಿರುತ್ತದೆ. ಸಾಲಗಾರರು ಸಾಲ ಮರುಪಾವತಿಯನ್ನು ಅವಧಿಯನ್ನು ಹಲವಾರು ವರ್ಷಗಳ ವಿಸ್ತರಿಸಿ ತಮ್ಮ ಹಣಕಾಸು ನಿರ್ವಹಣೆಯನ್ನು ಸುಲಭವಾಗಿ ಮಾಡುತ್ತಾರೆ. ಮಾಸಿಕ ಕಂತುಗಳ ಮೂಲಕ ತಮ್ಮ ಆದಾಯ ಹಾಗೂ ವೆಚ್ಚವನ್ನು ಸರಿದೂಗಿಸುತ್ತಾರೆ. ಸಾಲದ ಅವಧಿ ಮುಗಿದ ಬಳಿಕ ಮನೆಯು ಸ್ವಂತದ್ದಾಗುವ ಖುಷಿಯೇ ಅವರನ್ನು ಲೋನ್ ಪಾವತಿಯನ್ನು ಸಮರ್ಪಕವಾಗಿ ಮಾಡಲು ಪ್ರೇರೇಪಿಸುತ್ತದೆ. ಆದಾಗ್ಯೂ ಒಟ್ಟು ಲೆಕ್ಕಾಚಾರದ ಪ್ರಕಾರ ನೋಡುವುದಾದರೆ ಗೃಹ ಸಾಲಕ್ಕೆ ದೀರ್ಘ ಅವಧಿಯಲ್ಲಿ ದೊಡ್ಡ ಮೊತ್ತದ ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ವಾಸ್ತವದಲ್ಲಿ ಇದು ಅಸಲಿನ ದುಪ್ಪಟ್ಟು ಪ್ರಮಾಣ ಹೊಂದಿರುತ್ತದೆ. ಹಾಗಾದರೆ ಈ ಬಡ್ಡಿಯನ್ನು ಬ್ಯಾಂಕ್ಗಳು ಯಾವ ರೀತಿ ಲೆಕ್ಕಾಚಾರ (home loan emi calculator) ಹಾಕುತ್ತವೆ (Money Guide) ಮತ್ತು ಹೇಗೆ ನಿರ್ವಹಣೆ ಮಾಡುತ್ತವೆ ಎಂಬುದನ್ನು ನೋಡೋಣ.
ಹೋಮ್ ಲೋನ್ ಬಡ್ಡಿದರಗಳನ್ನು ಸಾಮಾನ್ಯವಾಗಿ ಇಳಿಕೆ ಬ್ಯಾಲೆನ್ಸ್ ವಿಧಾನವನ್ನು (reducing balance method) ಬಳಸಿಕೊಂಡು ಲೆಕ್ಕಹಾಕಲಾಗುತ್ತದೆ. ಇದನ್ನು ಇಳಿಕೆ ಬ್ಯಾಲೆನ್ಸ್ ಬಡ್ಡಿ ಲೆಕ್ಕಾಚಾರ ವಿಧಾನ (reducing balance interest calculation method.) ಎಂದೂ ಕರೆಯಲಾಗುತ್ತದೆ. ಗೃಹ ಸಾಲದ ಮೇಲೆ ಸಾಲಗಾರನು ಪ್ರತಿ ತಿಂಗಳು ಪಾವತಿಸಬೇಕಾದ ಬಡ್ಡಿಯನ್ನು ನಿರ್ಧರಿಸಲು ಈ ವಿಧಾನವನ್ನು ಸಾಮಾನ್ಯವಾಗಿ ಭಾರತದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಬಳಸುತ್ತವೆ. ಅಂದರೆ ಒಂದು ಇಎಂಐ ಕಟ್ಟುತ್ತಲೇ ಹೋಗುತ್ತಿದ್ದಂತೆ ಇಳಿಕೆಯಾಗುವ ಪ್ರಿನ್ನಿಪಲ್ ಮೊತ್ತಕ್ಕೆ ಬಡ್ಡಿಯನ್ನು ಹಾಕಲಾಗುತ್ತದೆ. ಪ್ರತಿ ತಿಂಗಳೂ ಬಡ್ಡಿಯ ಮೊತ್ತ ಹಾಗೂ ಪ್ರಿನ್ಸಿಪಲ್ ಮೊತ್ತವನ್ನು ನಿರ್ದಿಷ್ಟ ಅನುಪಾತದ ಮೂಲಕ ಪಡೆಯಲಾಗುತ್ತದೆ.
ಇಳಿಕೆ ಕಡಿಮೆ ಬ್ಯಾಲೆನ್ಸ್ ವಿಧಾನದಲ್ಲಿ, ಬಡ್ಡಿಯನ್ನು ಸಾಲದ ಒಟ್ಟು ಬಾಕಿ ಮೊತ್ತಕ್ಕೆ ಪೂರಕವಾಗಿ ಲೆಕ್ಕಹಾಕಲಾಗುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಹೀಗಾಗಿ ಸಾಲಗಾರ ಮರು ಪಾವತಿಗಳನ್ನು ಮಾಡುವುದನ್ನು ಮುಂದುವರಿಸಿದಂತೆ ಬಡ್ಡಿಯ ಭಾಗವು ಕಡಿಮೆಯಾಗುತ್ತದೆ. ವರ್ಷಗಳ ಕಳೆದಂದೆರ ಇಎಂಐನಲ್ಲಿ ಅಸಲಿನ ಭಾಗಕ್ಕೆ ಹೆಚ್ಚು ಮೊತ್ತ ಜಮೆಯಾಗುತ್ತದೆ. ಇದರಿಂದ ಅವಧಿ ಮುಂದುವರಿದಂತೆ ಸಾಲ ವೇಗವಾಗಿ ಮುಕ್ತಾಯಗೊಳ್ಳುವುದಕ್ಕೆ ಆರಂಭವಾಗುತ್ತದೆ.
ಪ್ರಿನ್ಸಿಪಲ್ ಕಾಂಪೋನೆಂಟ್ : ಇದು ಸಾಲಗಾರ ಪಾವತಿ ಮಾಡುವ ಇಎಂಐನ ಒಂದು ಭಾಗವಾಗಿದೆ. ಈ ಭಾಗವು ಸಾಲದ ಅಸಲು ಮೊತ್ತಕ್ಕೆ ಜಮೆಯಾಗುತ್ತದೆ. ಹೀಗಾಗಿ ಇಎಂಐ ಪಾವತಿ ಮಾಡುತ್ತಲೇ ಹೋಗುವಾಗ ಬಾಕಿ ಇರುವ ಅಸಲಿನ ಪ್ರಮಾಣ ಇಳಿಕೆಯಾಗುತ್ತದೆ.
ಇಂಟ್ರೆಸ್ಟ್ ಕಾಂಪೊನೆಂಟ್ : ಇದು ಕೂಡ ಮಾಸಿಕ ಇಎಂಐನ ಒಂದು ಭಾಗವಾಗಿದೆ. ಈ ಮೊತ್ತವು ಅಸಲಿನ ಮೇಲಿನ ಬಡ್ಡಿಗೆ ಪಾವತಿಯಾಗುತ್ತದೆ. ಸಾಲಗಾರ ಇಎಂಐ ಪಾವತಿಗಳನ್ನು ಕಡಿಮೆ ಮಾಡುವುದನ್ನು ಮುಂದುವರಿಸಿದಂತೆ ಅಸಲು ಕಡಿಮೆಯಾಗಿ ಬಡ್ಡಿಗಾಗಿ ಹೋಗುವ ಪ್ರಮಾಣವು ಕಾಲಾನಂತರದಲ್ಲಿ ಇಳಿಕೆಯಾಗುತ್ತದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಗೃಹ ಸಾಲಗಳ ಮೇಲಿನ ಬಡ್ಡಿಯನ್ನು ಸಾಮಾನ್ಯವಾಗಿ ಮಾಸಿಕ ಕಡಿತ ಅಥವಾ ವಾರ್ಷಿಕ ಕಡಿಮೆ ಮಾಡುವ ಅಥವಾ ದೈನಂದಿನ ಕಡಿಮೆಯಾಗುವ ಬ್ಯಾಲೆನ್ಸ್ ಮೇಲೆ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೈನಂದಿನ ಕಡಿಮೆಯಾಗುವ ಬ್ಯಾಲೆನ್ಸ್ ಮೇಲೆ ಬಡ್ಡಿ ವಿಧಿಸುತ್ತದೆ.
ದೈನಂದಿನ ಕಡಿತ ವಿಧಾನ: ಈ ವ್ಯವಸ್ಥೆಯಲ್ಲಿ ನೀವು ಇಎಂಐ ಅಥವಾ ಇನ್ಯಾವುದೇ ಮೊತ್ತವನ್ನು ನಿರ್ದಿಷ್ಟ ದಿನದಂದು ಪಾವತಿ ಮಾಡಿದರೆ ಆ ದಿನದಂದೇ ಅಸಲು ಮೊತ್ತ ಕಡಿಮೆಯಾಗುತ್ತದೆ ಹಾಗೂ ಉಳಿದಿರುವ ಅಸಲು ಮೊತ್ತಕ್ಕೆ ಬಡ್ಡಿಯನ್ನು ಹಾಕಲಾಗುತ್ತದೆ. ಉದಾಹರಣೆಗೆ ಸಾಲಗಾರನೊಬ್ಬನಿಗೆ ಪ್ರತಿ ತಿಂಗಳ ಹತ್ತನೇ ತಾರಿಕಿಗೆ ಇಎಂಎ ಪಾವತಿ ದಿನಾಂಕ ನಿಗದಿ ಮಾಡಿರಲಾಗುತ್ತದೆ. ಇದರ ಪ್ರಕಾರ ಸೆಪ್ಟೆಂಬರ್ ತಿಂಗಳ ಇಎಂಐ ಪಾವತಿ ಮಾಡಿದ ಬಳಿಕ ಆತನ ಸಾಲ 20 ಲಕ್ಷ ರೂಪಾಯಿ ಉಳಿದಿರುತ್ತದೆ ಹಾಗೂ ಅಕ್ಟೋಬರ್ಗೆ ಆ ಮೊತ್ತಕ್ಕೆ ಬಡ್ಡಿ ಪಡೆಯಲಾಗುತ್ತದೆ. ಆದರೆ ಅದೇ ತಿಂಗಳು ಆತನಿಗೆ ಬೇರೆ ಮೂಲದಿಂದ 5 ಲಕ್ಷ ರೂಪಾಯಿ ಬಂದು ಅದನ್ನು 15ನೇ ತಾರಿಕಿನಂದು ಹೋಮ್ ಲೋನ್ಗೆ ಜಮಾ ಮಾಡಿದರೆ ಅಂದೇ ಆ ಮೊತ್ತ ಅಸಲಿಗೆ ಜಮೆಯಾಗುತ್ತದೆ. ಅಂದರೆ ಮುಂದಿನ ಅಕ್ಟೋಬರ್ 10ರಂದು ಕಟ್ಟಬೇಕಾಗಿರುವ ಇಎಂಐನಲ್ಲಿ ಉಳಿದ 15 ಲಕ್ಷ ರೂಪಾಯಿಗೆ ಆಗುವ ಬಡ್ಡಿಯನ್ನು ಮಾತ್ರ ಪಡೆಯಲಾಗುತ್ತದೆ. ಈ ವ್ಯವಸ್ಥೆಯು ಸಾಲಗಾರನಿಗೆ ಸ್ವಲ್ಪ ಅನುಕೂಲಕರವಾಗಿರುತ್ತದೆ ಹಾಗೂ ಇಎಂಐ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತದೆ.
ಮಾಸಿಕ ಕಡಿತ ವಿಧಾನ: ಈ ವ್ಯವಸ್ಥೆಯಲ್ಲಿ, ನೀವು ಬಡ್ಡಿಯನ್ನು ಪಾವತಿಸುವ ಅಸಲು, ನಿಮ್ಮ ಇಎಂಐ ಅನ್ನು ಪಾವತಿಸಿದಂತೆ ಪ್ರತಿ ತಿಂಗಳು ಕಡಿಮೆ ಮಾಡಲಾಗುತ್ತದೆ. ಮೇಲೆ ಹೇಳಿದ ಉದಾಹರಣೆ ಪ್ರಕಾರವೇ ನೋಡುವುದಾದರೆ 15ನೇ ತಾರಿಕಿಗೆ ಸಾಲಗಾರ 5 ಲಕ್ಷ ರೂಪಾಯಿ ಪಾವತಿ ಮಾಡಿದ ಹೊರತಾಗಿಯೂ ಅದು ಆ ದಿನದಂದಲೇ ಅಸಲಿಗೆ ಹೋಗುವುದಿಲ್ಲ. ಮುಂದಿನ ಇಎಂಐ ದಿನಾಂಕದ ಬಳಿಕ ಇಳಿಕೆಯಾಗುತ್ತದೆ. ಅಂದರೆ ಅಕ್ಟೋಬರ್ 10ಕ್ಕೆ ಇಳಿಕೆಯಾಗುತ್ತದೆ. ಇದರ ಲಾಭ ಸಾಲಗಾರನಿಗೆ ಸಿಗುವುದು ನವೆಂಬರ್ ತಿಂಗಳಿನಲ್ಲಿ.
ಇದನ್ನೂ ಓದಿ : Home Loan : 50 ಲಕ್ಷ ಗೃಹ ಸಾಲದ ಬಡ್ಡಿಯಲ್ಲಿ 30 ಲಕ್ಷ ಉಳಿಸಬೇಕೇ? ಆರ್ಬಿಐನ ಈ ಹೊಸ ನಿಯಮಗಳನ್ನು ಪಾಲಿಸಿ
ವಾರ್ಷಿಕ ಕಡಿತ ವಿಧಾನ: ಈ ವ್ಯವಸ್ಥೆಯಲ್ಲಿ ಇಎಂಐ ಜತೆ ಪಾವತಿ ಮಾಡುವ ಬಡ್ಡಿಯನ್ನು ಪಾವತಿಸುವ ಅಸಲು ವರ್ಷದ ಕೊನೆಯಲ್ಲಿ ಕಡಿಮೆ ಮಾಲಾಗುತ್ತದೆ. ಹೀಗಾಗಿ, ಸಾಲಗಾರನು ಮರುಪಾವತಿ ಮಾಡಿದ ಅಸಲಿನ ಒಂದು ನಿರ್ದಿಷ್ಟ ಭಾಗದ ಮೇಲೆ ಬಡ್ಡಿಯನ್ನು ವರ್ಷಪೂರ್ತಿ ಪಾವತಿಸಬೇಕಾಗುತ್ತದೆ. ಲೆಕ್ಕಾಚಾರ ಹಾಕುವ ದಿನಾಂಕ ಸಾಲ ಮಂಜೂರಾದ ದಿನಾಂಕವೇ ಆಗಿರುತ್ತದೆ. ಮೇಲಿನ ಉದಾರಹಣೆಯನ್ನು ಇಲ್ಲಿಗೆ ಅನ್ವಯಿಸಿ ನೋಡುವಾದರೆ ಸಾಲಗಾರ ಸೆಪ್ಟೆಂಬರ್ 15ರಂದು 5 ಲಕ್ಷ ರೂಪಾಯಿ ಜಮೆ ಮಾಡಿದ ಹೊರತಾಗಿಯೂ ಅದನ್ನು ಅಸಲಿನಿಂದ ಇಳಿಸುವುದು ಸಾಲ ಮಂಜೂರಾದ ದಿನಾಂಕವಾಗಿರುವ ಮಾರ್ಚ್ 15ರಂದು. ಅಲ್ಲಿಯವರೆಗೆ ಆತ ಹಿಂದಿನ ವರ್ಷದ ಮಾರ್ಚ್ 15ರಂದು ನಿಗದಿ ಮಾಡಲಾದ ಅಸಲಿಗೆ ಬಡ್ಡಿಯನ್ನು ಐಎಂಐ ಒಂದ ಭಾಗವಾಗಿ ಕಟ್ಟಬೇಕಾಗುತ್ತದೆ. ಇದು ಸಾಲಗಾರನ ಪಾಲಿಗೆ ಸ್ವಲ್ಪ ದುಬಾರಿ ಲೆಕ್ಕಾಚಾರವಾಗಿರುತ್ತದೆ.
ಹೋಮ್ ಲೋನ್ ಬಡ್ಡಿದರಗಳು ಫಿಕ್ಸೆಡ್ ಅಥವಾ ಫ್ಲೋಟಿಂಗ್ ಆಗಿರಬಹುದು. ಫಿಕ್ಸೆಡ್ನಲ್ಲಿ ಸಾಲದ ಅವಧಿಯುದ್ದಕ್ಕೂ ಬಡ್ಡಿ ದರ ಏಕ ರೂಪದಲ್ಲಿರುತ್ತದೆ. ಆದರೆ ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ಫ್ಲೋಟಿಂಗ್ ದರಗಳು ಕಾಲಕಾಲಕ್ಕೆ ಬದಲಾಗಬಹುದು. ಬಡ್ಡಿಯನ್ನು ಲೆಕ್ಕಹಾಕುವ ವಿಧಾನವು ಒಂದೇ ಆಗಿದ್ದರೂ ಫ್ಲೋಟಿಂಗ್ ರೇಟ್ನಲ್ಲಿ ಹೆಚ್ಚು ಕಡಿಮೆಯಾಗುತ್ತದೆ.
ಪ್ರಮುಖ ಸುದ್ದಿ
Home Loan : 50 ಲಕ್ಷ ಗೃಹ ಸಾಲದ ಬಡ್ಡಿಯಲ್ಲಿ 30 ಲಕ್ಷ ಉಳಿಸಬೇಕೇ? ಆರ್ಬಿಐನ ಈ ಹೊಸ ನಿಯಮಗಳನ್ನು ಪಾಲಿಸಿ
ಆರ್ಬಿಐ ಹೊಸ ನಿಯಮದ ಪ್ರಕಾರ ಸಾಲ ನೀಡಿದ ಬ್ಯಾಂಕ್ಗಳು ಗೃಹ ಸಾಲ (Home Loan) ಪಡೆದವರಿಗೆ ಇಎಂಐ ಹೆಚ್ಚಳದಿಂದ ಆಗುವ ಲಾಭ ಹಾಗೂ ಅವಧಿ ಹೆಚ್ಚಿಸದೇ ಇರುವುದಿಂದ ಪಾವತಿಸಬೇಕಾದ ಹೆಚ್ಚುವರಿ ಬಡ್ಡಿಯ ಬಗ್ಗೆ ಮಾಹಿತಿ ನೀಡಬೇಕು.
ಬೆಂಗಳೂರು: ಗೃಹ ಸಾಲದ (Home Loan) ಬಡ್ಡಿದರವು ಹೆಚ್ಚಾದಾಗ ಇಎಂಐಗಳಿಂದ ಸಾಲಗಾರರನ್ನು ರಕ್ಷಿಸಲು ಬ್ಯಾಂಕುಗಳು ಸಾಮಾನ್ಯವಾಗಿ ಸಾಲದ ಅವಧಿಯನ್ನು ಹೆಚ್ಚಿಸುತ್ತವೆ. ಆ ಕ್ಷಣಕ್ಕೆ ಇದು ಸಾಲಗಾರರಿಗೆ ಪೂರಕ ಎಂದು ಎನಿಸಿದರೂ ದೀರ್ಘ ಅವಧಿಯಲ್ಲಿ ಅದರ ಬಡ್ಡಿಯನ್ನು ಕಟ್ಟಲೇಬೇಕಾಗುತ್ತದೆ. ಈ ಸಮಸ್ಯೆಯಿಂದ ಸಾಲಗಾರರನ್ನು ಕಾಪಾಡಲು ರಿಸರ್ವ್ ಬ್ಯಾಂಕ್ ಇಂಡಿಯಾ (ಆರ್ಬಿಐ) ಕೆಲವೊಂದು ಅನುಕೂಲಗಳನ್ನು ಮಾಡಿಕೊಟ್ಟಿದೆ. ಇಎಂಐ ಹೆಚ್ಚಿಸುವುದು, ಸಾಲದ ಅವಧಿಯನ್ನು ವಿಸ್ತರಿಸಲು ಅಥವಾ ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ಮರುಹೊಂದಿಸುವ ಆಯ್ಕೆಗಳನ್ನು ಒಟ್ಟಿಗೆ ಬಳಸುವುದಕ್ಕೆ ಅವಕಾಶ ನೀಡಿದೆ. ಹಾಗಾದರೆ ಈ ನಿಯಮ ಹೇಗೆ ಸಾಲಗಾರರಿಗೆ ಹೇಗೆ ಅನುಕೂಲಕರ ಹಾಗೂ ಅದನ್ನು ಹೇಗೆ ಬಳಸಬಹುದು ಇದರಲ್ಲಿ ಹೊಸತೇನಿದೆ ಮತ್ತು ಇದು ಗೃಹ ಸಾಲಗಾರರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ನೋಡೋಣ.
ಇಎಂಐಗಳ ಹೆಚ್ಚಳ ಅಥವಾ ಅವಧಿ ವಿಸ್ತರಣೆ- ಸಾಮಾನ್ಯ ಮಾನದಂಡ ಯಾವುದು?
ಬಡ್ಡಿ ಹೆಚ್ಚಾದಾಗ, ಬ್ಯಾಂಕ್ಗಳು ಸಾಮಾನ್ಯವಾಗಿ ಇಎಂಐ ಹೆಚ್ಚಿಸುವ ಬದಲು ಸಾಲದ ಅವಧಿಯನ್ನು ವಿಸ್ತರಿಸಲು ಬಯಸುವೆ. ಇಲ್ಲಿಯವರೆಗೆ ದರ ಏರಿಕೆಯ ಸಂದರ್ಭದಲ್ಲಿ ಬ್ಯಾಂಕ್ಗಳಿಗೆ ಅವಧಿ ವಿಸ್ತರಣೆ ಬಿಟ್ಟರೆ ಬೇರೆ ಅವಕಾಶ ಇಲಿಲ್ಲ. ಬ್ಯಾಂಕ್ಗಳು ಸಾಲಗಾರನ ಮರುಪಾವತಿ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಬದಲು ಅವಧಿ ವಿಸ್ತರಣೆ ನಿರ್ಧಾರಗಳನ್ನು ಜಾರಿಗೆ ತರುತ್ತವೆ. ಸಾಲಗಾರರು ಇದರಿಂದ ತಕ್ಷಣ ಇಎಂಐ ಹೆಚ್ಚಳದ ತೊಂದರೆ ಅನುಭವಿಸುವುದಿಲ್ಲ. ಆದರೆ ಸಾಲಗಾರರಿಗೆ ವಿಸ್ತರಣೆ ಅವಧಿಯ ಬಡ್ಡಿ ಹೊರೆಯಾಗುತ್ತದೆ ಎಂಬುದು ಸತ್ಯ. ಇದಕ್ಕೆ ಉತ್ತಮ ಪರಿಹಾರವೇ ಇಎಂಐ ಹೆಚ್ಚಳ ಮಾಡುವುದು. ಇದು ಆರ್ಬಿಐ ಮಾಡಿರುವ ಹೊಸ ಅನುಕೂಲ . ಸಾಲ ಕೊಟ್ಟ ಬ್ಯಾಂಕ್ಗಳ ಬಳಿಗೆ ತೆರಳಿ ಅವಧಿ ವಿಸ್ತರಣೆ ಮಾಡುವ ಬದಲು ಇಎಂಐ ಹೆಚ್ಚಿಸುವಂತೆ ಕೋರಿಕೊಳ್ಳಬಹುದು.
ಗೃಹ ಸಾಲದ ಬಗ್ಗೆ ಆರ್ಬಿಐನ ಹೊಸ ಆದೇಶ ಏನು?
ಆಗಸ್ಟ್ 18, 2023 ರಂದು ಬಿಡುಗಡೆಯಾದ ಅಧಿಸೂಚನೆಯಲ್ಲಿ, ಆರ್ಬಿಐ ಸಾಲಗಾರರಿಗೆ ಇಎಂಐ ಹೆಚ್ಚಿಸಲು ಅಥವಾ ಸಾಲದ ಅವಧಿಯನ್ನು ವಿಸ್ತರಿಸಲು ಅಥವಾ ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ಮರುಹೊಂದಿಸುವ ಸಮಯದಲ್ಲಿ ಎರಡೂ ಆಯ್ಕೆಗಳನ್ನು ಒಟ್ಟಿಗೆ ಬಳಸಲು ಅವಕಾಶ ನೀಡುವಂತೆ ಬ್ಯಾಂಕ್ಗಳಿಗೆ ಹೇಳಿದೆ. ‘
1) ಇಎಂಐ / ಅವಧಿ ಅಥವಾ ಎರಡರಲ್ಲೂ ಬದಲಾವಣೆಗೆ ಕಾರಣವಾಗುವ ಬೆಂಚ್ಮಾರ್ಕ್ ದರಗಳಲ್ಲಿನ ಬದಲಾವಣೆಯ ಸಂಭಾವ್ಯ ಪರಿಣಾಮದ ಕುರಿತು ಬ್ಯಾಂಕ್ಗಳು ಸಾಲಗಾರರಿಗೆ ಮಾಹಿತಿ ನೀಡಬೇಕು.
2) ಬಡ್ಡಿ ಮರುಹೊಂದಿಸುವ ಸಮಯದಲ್ಲಿ, ಸಾಲಗಾರರಿಗೆ ಸ್ಥಿರ ಬಡ್ಡಿ ದರಕ್ಕೆ ಬದಲಾಯಿಸುವ ಆಯ್ಕೆಯನ್ನು ನೀಡಬೇಕು. ಫ್ಲೋಟಿಂಗ್ ಬಡ್ಡಿಯಿಂದ ಫಿಕ್ಸೆಡ್ ಗೆ ಬದಲಾಯಿಸಲು ಅನ್ವಯವಾಗುವ ಎಲ್ಲಾ ಶುಲ್ಕಗಳ ವಿವರಗಳನ್ನು ಸಾಲ ಮಂಜೂರಾತಿ ಪತ್ರದಲ್ಲಿ ಬಹಿರಂಗಪಡಿಸಬೇಕು.
3) ಸಾಲಗಾರರಿಗೆ ಸಾಲದ ಅವಧಿಯನ್ನು ವಿಸ್ತರಿಸುವ ಅಥವಾ ಇಎಂಐಗಳಲ್ಲಿ ಹೆಚ್ಚಳ ಅಥವಾ ಎರಡನ್ನೂ ಹೆಚ್ಚಿಸುವ ಆಯ್ಕೆಯನ್ನು ನೀಡಬೇಕು.
4) ಅವಧಿಯ ವಿಸ್ತರಣೆಯು ನೆಗೆಟಿವ್ ಅಮೋರ್ಟೈಸೇಶನ್ ಕಾರಣವಾಗಬಾರದು ಎಂದು ಬ್ಯಾಂಕ್ಗಳು ಖಚಿತಪಡಿಸಿಕೊಳ್ಳಬೇಕು. ಅಂದರೆ ಮಾಸಿಕ ಸಾಲ ಪಾವತಿಗಳು ಸಾಲದ ಸಂಚಿತ ಬಡ್ಡಿದರವನ್ನು (Accruing intrest rate ) ಸರಿದೂಗಿಸಲೇಬೇಕು.
ಈ ಮೇಲಿನ ಹೊಸ ನಿಯಮಗಳ ಪ್ರಕಾರ ಸಾಲಗಾರನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬ್ಯಾಂಕುಗಳು ಸಾಲದ ಕೆಲವು ಅಂಶಗಳ ಬಗ್ಗೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಗೃಹ ಸಾಲ ಪಡೆದವರಿಗೆ ಈ ವಿಚಾರದಲ್ಲಿ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅವಕಾಶ ಲಭಿಸಿದೆ.
ಇಲ್ಲಿಯವರೆಗೆ ವಸೂಲಿ ಮಾಡಲಾದ ಒಟ್ಟು ಬಡ್ಡಿ ಮತ್ತು ಅಸಲು, ಉಳಿದ ಸಾಲದ ವಾರ್ಷಿಕ ಬಡ್ಡಿದರ, ಇಎಂಐ ಮೊತ್ತ ಮತ್ತು ಪ್ರತಿ ತ್ರೈಮಾಸಿಕದ ನಂತರ ಉಳಿದಿರುವ ಇಎಂಐಗಳ ಸಂಖ್ಯೆಯನ್ನು ವಿವರಿಸುವ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಸಾಲದ ಹೇಳಿಕೆಯನ್ನು ಹಂಚಿಕೊಳ್ಳುವಂತೆ ಆರ್ಬಿಐಗಳಿಗೆ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.
ಹೊಸ ನಿಯಮ: ಇದು ನಿಮಗೆ ಹೇಗೆ ಸಹಾಯ ಮಾಡುತ್ತದೆ?
ಬಡ್ಡಿ ದರವನ್ನು ಹೆಚ್ಚಿಸಿದಾಗ ಸಾಲಗಾರರಿಗೆ ಆಯ್ಕೆ ಸಿಗುತ್ತದೆ. ಸಾಲಗಾರರಿಗೆ ತಮ್ಮ ಸಾಲದ ಅವಧಿಯನ್ನು ವಿಸ್ತರಿಸಲು, ಇಎಂಐ ಹೆಚ್ಚಿಸಲು ಅಥವಾ ಎರಡೂ ಆಯ್ಕೆಗಳ ಹೋಗಲು ಬಯಸುತ್ತವೆಯೇ ಎಂದು ನಿರ್ಧರಿಸಲು ಬ್ಯಾಂಕುಗಳು ಅವಕಾಶವನ್ನು ನೀಡಬೇಕಾಗುತ್ತದೆ.
ಇಲ್ಲೊಂದು ಉದಾಹರಣೆಯಿದೆ
ನೀವು 2020ರಲ್ಲಿ 20 ವರ್ಷಗಳವರೆಗೆ (240 ತಿಂಗಳುಗಳು) 7% ಬಡ್ಡಿದರದಲ್ಲಿ 50 ಲಕ್ಷ ರೂ.ಗಳ ಗೃಹ ಸಾಲವನ್ನು ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ. ಸಾಲ ತೆಗೆದುಕೊಳ್ಳುವ ಸಮಯದಲ್ಲಿ ನಿಮ್ಮ ಮಾಸಿಕ ಇಎಂಐ 38,765 ರೂ. ಒಟ್ಟಾರೆ ಬಡ್ಡಿ 43.04 ಲಕ್ಷ ರೂಪಾಯಿ. ಮೂರು ವರ್ಷಗಳ ನಂತರ ಬಡ್ಡಿದರವನ್ನು 9.25% ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಭಾವಿಸೋಣ. ಹೊಸ ಆರ್ಬಿಐ ಆದೇಶದ ಪ್ರಕಾರ, ಬಡ್ಡಿದರವನ್ನು ಮರುಹೊಂದಿಸುವಾಗ ಬ್ಯಾಂಕುಗಳು ನಿಮ್ಮ ಇಎಂಐ ಅಥವಾ ಅವಧಿಯನ್ನು ಹೆಚ್ಚಿಸಲು ಅಥವಾ ಎರಡರ ಸಂಯೋಜನೆಯನ್ನು ಬಳಸಲು ನಿಮಗೆ ಆಯ್ಕೆ ನೀಡಬೇಕಾಗುತ್ತದೆ.
ನಿಮ್ಮ 20 ವರ್ಷಗಳ ಸಾಲವನ್ನು ಉಳಿದ 17 ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸಲು ನೀವು ಬಯಸಿದರೆ (3 ವರ್ಷಗಳು ಕಳೆದಿವೆ ಎಂದು ಪರಿಗಣಿಸಿ), ನಿಮ್ಮ ಇಎಂಐ ತಿಂಗಳಿಗೆ 44,978 ರೂ.ಗೆ ಏರುತ್ತದೆ. ಸಾಲದ ಅವಧಿಯ ಕೊನೆಯಲ್ಲಿ ನೀವು ಒಟ್ಟು 55.7 ಲಕ್ಷ ರೂ.ಗಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಇಎಂಐ ಹೆಚ್ಚಾದರೆ ಮತ್ತು ಸಾಲದ ಅವಧಿ ಒಂದೇ ಆಗಿದ್ದರೆ ಈ ರೀತಿ ಆಗುತ್ತದೆ
ಗೃಹ ಸಾಲ ( ಲಕ್ಷ ರೂಪಾಯಿಗಳಲ್ಲಿ) | 25 | 50 | 75 | 1 |
240 ತಿಂಗಳಿಗೆ ಶೇ 7 ಬಡ್ಡಿಯಂತೆ ಇಎಂಐ(ರೂಪಾಯಿಗಳಲ್ಲಿ) | 19,382 ರೂ. | 38,765 ರೂ. | 58,147 ರೂ. | 77,530 ರೂ. |
ಶೇ7 ರಂತೆ ಪಾವತಿಸುವ ಒಟ್ಟು ಬಡ್ಡಿ | 21.52 ಲಕ್ಷ | 43.04ಲಕ್ಷ | 64.55 ಲಕ್ಷ | 86.07 ಲಕ್ಷ |
36 ತಿಂಗಳಿಗೆ ಪಾವತಿ ಮಾಡಿದ ಬಡ್ಡಿ (ಲಕ್ಷ ರೂಪಾಯಿ) | 5.06 ಲಕ್ಷ | 10.12 ಲಕ್ಷ | 15.18 ಲಕ್ಷ | 20.24 ಲಕ್ಷ |
3ವರ್ಷಗಳ ಬಳಿಕ ಉಳಿಕೆ ಸಾಲ (ಲಕ್ಷಗಳಲ್ಲಿ) | 23.08 ಲಕ್ಷ | 6.16 ಲಕ್ಷ | 69.25 ಲಕ್ಷ | 92.33 ಲಕ್ಷ |
17 ವರ್ಷಕ್ಕೆ ಶೇ. 9.25ರಂತೆ ಇಎಂಐ | 22,485 ರೂ | 44,978 ರೂ | 67,466 ರೂ | 89,956 ರೂ |
ಶೇ. 9.25ರಂತೆ ಪಾವತಿಸಬೇಕಾದ ಬಡ್ಡಿ | 22.79 ಲಕ್ಷ | 45.58 ಲಕ್ಷ | 68.38 ಲಕ್ಷ | 91.17 ಲಕ್ಷ |
ಇಎಂಐ ಹೆಚ್ಚಿಸಿದರೆ ಪಾವತಿಸಬೇಕಾದ ಒಟ್ಡು ಬಡ್ಡಿ | 27.85 ಲಕ್ಷ | 55.7 ಲಕ್ಷ | 83.56 ಲಕ್ಷ | 1.11 ಕೋಟಿ. |
ಇಎಂಐ ಹೆಚ್ಚಿಸದೇ ಲೋನ್ ಪಾವತಿ ಅವಧಿ ಹೆಚ್ಚಿಸಿದರೆ
ಗೃಹ ಸಾಲ | 25 ಲಕ್ಷ | 50 ಲಕ್ಷ | 75 ಲಕ್ಷ | 1 ಕೋಟಿ |
ಪೂರ್ಣ ಅವಧಿಗೆ ಇಎಂಐ | 19,382 ರೂ. | 38,765 ರೂ. | 58147 ರೂ. | 77,530 ರೂ. |
ಇಎಂಐ ಹೆಚ್ಚಿಸದಿದ್ದರೆ ವಿಸ್ತರಣೆಯಾಗುವ ಅವಧಿ | 321 ತಿಂಗಳು | 321 ತಿಂಗಳು | 321 ತಿಂಗಳು | 321 ತಿಂಗಳು |
ಪಾವತಿಸಬೇಕಾದ ಪರಿಷ್ಕೃತ ಬಡ್ಡಿ | 39.3 ಲಕ್ಷ | 78.4 ಲಕ್ಷ | 1.17 ಕೋಟಿ | 1.56 ಕೋಟಿ |
ಒಟ್ಟು ಪಾವತಿ ಮಾಡುವ ಬಡ್ಡಿ | 44.36 ಲಕ್ಷ | 88.52 ಲಕ್ಷ | 1.32 ಕೋಟಿ | 1.7 ಕೋಟಿ |
ಇಎಂಐ ಹೆಚ್ಚಿಸಿದರೆ ಆಗುವ ಲಾಭ | 16.5 ಲಕ್ಷ ರೂ. | 33 ಲಕ್ಷ ರೂ. | 49.5 ಲಕ್ಷ ರೂ. | 66 ಲಕ್ಷ ರೂ. |
ಸಾಲದ ಇಎಂಐ ಅನ್ನು 38,765 ರೂ.ಗೆ ಉಳಿಸಿಕೊಳ್ಳಲು ಆರಿಸಿಕೊಂಡರೆ ಸಾಲ ಪ್ರಾರಂಭವಾದಾಗ ಇದ್ದಂತೆಯೇ – ಸಾಲವು 321 ತಿಂಗಳುಗಳು ಅಥವಾ 26 ವರ್ಷಗಳು ಮತ್ತು 10 ತಿಂಗಳುಗಳವರೆಗೆ ಮುಂದುವರಿಯುತ್ತದೆ. ಸಾಲದ ಅವಧಿಯ ಕೊನೆಯಲ್ಲಿ ನಿಮ್ಮ ಒಟ್ಟಾರೆ ಬಡ್ಡಿ ಪಾವತಿ 88.52 ಲಕ್ಷ ರೂ. ನೀವು ಹೆಚ್ಚಿನ ಇಎಂಐ ಬದಲಿಗೆ ಹೆಚ್ಚಿನ ಅವಧಿಯನ್ನು ಆರಿಸಿಕೊಂಡರೆ ನೀವು 33 ಲಕ್ಷ ರೂ.ಗಳ ಹೆಚ್ಚುವರಿ ಬಡ್ಡಿದರ ಪಾವತಿಸಬೇಕಾಗುತ್ತದೆ.
ನೀವು ಹೋಮ್ ಲೋನ್ ಇಎಂಐ ಹೆಚ್ಚಿಸಬೇಕೇ ಅಥವಾ ಅವಧಿಯನ್ನು ವಿಸ್ತರಿಸಬೇಕೇ?
ಬಡ್ಡಿದರವು ಹೆಚ್ಚಾದಾಗ ಇಎಂಐ ಅಥವಾ ಸಾಲದ ಅವಧಿಯನ್ನು ಹೆಚ್ಚಿಸುವುದು ಉತ್ತಮ ಆಯ್ಕೆಯೇ ಎಂದು ಗೃಹ ಸಾಲಗಾರ ಮೊದಲು ನಿರ್ಧರಿಸಬೇಕು. ಇಎಂಐಗಳನ್ನು ಹೆಚ್ಚಿಸಲು ನಿರ್ಧರಿಸಿದರೆ ಮರುಪಾವತಿ ಸಾಮರ್ಥ್ಯದೊಳಗೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅವಧಿ ಹೆಚ್ಚಿಸಲು ತೀರ್ಮಾನಿಸಿದರೆ ದೀರ್ಘಾವಧಿಯಲ್ಲಿ ಪಾವತಿಸಬೇಕಾದ ಹೆಚ್ಚುವರಿ ಬಡ್ಡಿ ಪಾವತಿಸಲು ಸಾಧ್ಯವೇ ಎಂದು ತಿಳಿದುಕೊಳ್ಳಬೇಕು.
ಇದನ್ನೂ ಓದಿ : Money Guide : ಸೆಪ್ಟೆಂಬರ್ ಅಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯ ಖಚಿತ
ನಿಮ್ಮ ದೈನಂದಿನ ವೆಚ್ಚಗಳ ಮೇಲೆ ಪರಿಣಾಮ ಬೀರದೆ ಸಾಧ್ಯವಾದಷ್ಟು ಪೂರ್ವಪಾವತಿ ಮಾಡಲು ಪ್ರಯತ್ನಿಸಿ. ಪೂರ್ವಪಾವತಿ ಹೆಚ್ಚಾದಷ್ಟೂ, ಬ್ಯಾಲೆನ್ಸ್ ಮೊತ್ತ ಕಡಿಮೆಯಾಗುತ್ತದೆ ಹಾಗೂ ಬಡ್ಡಿ ಶುಲ್ಕಗಳು ನಿಯಂತ್ರಣದಲ್ಲಿರುತ್ತವೆ.
ಬೋಸನ್ ಮೊತ್ತವನ್ನು ಬಳಸಿ
ಸಾಲಗಾರರು ಸಾಧ್ಯವಾದಷ್ಟು ಸಾಲಗಳನ್ನು ಪೂರ್ವಪಾವತಿ ಮಾಡಲು ವಾರ್ಷಿಕ ಬೋನಸ್ ಅಥವಾ ಅನಿರೀಕ್ಷಿತ ಲಾಭಗಳನ್ನು ಬಳಸಬೇಕು. ಸಾಲದ ಪೂರ್ವಪಾವತಿ ಮಾಡುವ ಮೊದಲು ತಮ್ಮ ಆರ್ಥಿಕ ಸ್ಥಿತಿಯನ್ನು ನಿರ್ಣಯಿಸಬೇಕು. ಆದಾಯ ಹೆಚ್ಚಾದರೆ, ಇಎಂಐ ಮೊತ್ತದಲ್ಲಿ ಹೆಚ್ಚಳವನ್ನು ಆರಿಸಿಕೊಳ್ಳಿ, ಏಕೆಂದರೆ ಇದು ಸಾಲ ಮರುಪಾವತಿಯನ್ನು ವೇಗಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಪ್ರಮುಖ ಸುದ್ದಿ
Money Guide : ಸೆಪ್ಟೆಂಬರ್ ಅಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯ ಖಚಿತ
ಮುಂಬಯಿ: ಆರ್ಥಿಕ ಚಟುವಟಿಕೆಗಳನ್ನು ವರ್ಷವಿಡೀ ಮಾಡಬೇಕು. ಆದರೆ, ಕೆಲವು ಕಡ್ಡಾಯ ಕೆಲಸಗಳನ್ನು (Money Guide ) ಸರಕಾರದ ಮತ್ತು ನಿರ್ದಿಷ್ಟ ಹಣಕಾಸು ಸಂಸ್ಥೆಗಳ ಸೂಚನೆಯನ್ನು ನಿಗದಿತ ಅವಧಿಯೊಳಗೆ ಮಾಡಲೇಬೇಕು. ಇಲ್ಲ ಎಂದಾದರೆ ನೀವು ಕೂಡಿಟ್ಟ ಹಣ ಅಥವಾ ನಿಮ್ಮ ಹಣವನ್ನು ಜೋಪಾನವಾಗಿ ಕಾಪಾಡುವ ಉಳಿತಾಯ ಖಾತೆಗಳು ವ್ಯತಿರಿಕ್ತ ಪರಿಣಾಮವನ್ನು ತಂದೊಡ್ಟಬಹುದು. ನಿಮ್ಮದೇ ಹಣವನ್ನು ಪಡೆಯುವುದಕ್ಕೆ ಮುಂದೆ ಕಷ್ಟ ಪಡಬೇಕಾಗಬಹುದು. ಹಣ ಇದ್ದರೂ ಬಳಕೆಗೆ ಬಾರದಿರಬಹುದು. ತುರ್ತು ಸಂದರ್ಭದಲ್ಲಿ ನಿಮ್ಮ ಉಳಿತಾಯ ಪ್ರಯೋಜನಕ್ಕೆ ಸಿಗದೇ ಇರಬಹುದು. ನೀವಿಗ ಸೆಪ್ಟೆಂಬರ್ ತಿಂಗಳಿನಲ್ಲಿದ್ದೀರಿ. ಈ ತಿಂಗಳು ಮುಗಿಯಲು ಇನ್ನು ಎರಡು ವಾರಗಳು ಮಾತ್ರ ಬಾಕಿ ಉಳಿದಿದೆ. ಈ ತಿಂಗಳ ಅಂತ್ಯಕ್ಕೆ ಕೆಲವೊಂದು ಹಣಕಾಸು ಗಡುವುಗಳಿವೆ ಎಂಬುದನ್ನು ನಾವಿಲ್ಲಿ ಸ್ಮರಿಸುತ್ತಿದ್ದೇವೆ. ಅವುಗಳು ಯಾವುದೆಂದು ನೋಡೋಣ.
ಸಣ್ಣ ಉಳಿತಾಯ ಯೋಜನೆಗೆ ಆಧಾರ್ ಜೋಡಣೆ
ಸೆಪ್ಟೆಂಬರ್ 30, 2023 ರೊಳಗೆ ತಮ್ಮ ಆಧಾರ್ ಸಂಖ್ಯೆಗಳನ್ನು ಒದಗಿಸದಿದ್ದರೆ ಅಕ್ಟೋಬರ್ 1, 2023 ರಂದು ಚಾಲ್ತಿಯಲ್ಲಿರುವ ಗ್ರಾಹಕರ ಖಾತೆಗಳನ್ನು ಅಮಾನತುಗೊಳ್ಳುತ್ತವೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಅಥವಾ ಇತರ ಅಂಚೆ ಕಚೇರಿ ಯೋಜನೆಗಳಂತಹ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ಅಂಚೆ ಕಚೇರಿ ಅಥವಾ ತಮ್ಮ ಬ್ಯಾಂಕ್ ಶಾಖೆಗೆ ಸೆಪ್ಟೆಂಬರ್ 30ರೊಳಗೆ ಒದಗಿಸಲೇಬೇಕು.
ಕೊಡದಿದ್ದರೇ ಏನಾಗುತ್ತದೆ?
- ಸಂಗ್ರಹವಾಗಿರುವ ಬಡ್ಡಿಯನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ.
- ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ.
- ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಖಾತೆಗಳ ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ. \
2,000 ರೂ ವಿನಿಮಯ ಮಾಡಿಕೊಳ್ಳಲು ಕೊನೆಯ ದಿನ
ಠೇವಣಿದಾರರು ಮತ್ತು ವಿನಿಮಯದಾರರಿಗೆ 2000 ರೂ.ಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಸೆಪ್ಟೆಂಬರ್ 30, 2023 ರೊಳಗೆ, ನೋಟುಗಳನ್ನು ವಿನಿಮಯ ಮಾಡಬೇಕು ಅಥವಾ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು.
ಎಸ್ ಬಿಐ ವೀಕೇರ್
ಹಿರಿಯ ನಾಗರಿಕರಿಗಾಗಿ ಎಸ್ಬಿಐನ ವಿಕೇರ್ ವಿಶೇಷ ಸ್ಥಿರ ಠೇವಣಿಗಳು ಹೂಡಿಕೆ ಮಾಡಲು ಸೆಪ್ಟೆಂಬರ್ 30, 2023 ಕೊನೆಯ ದಿನಾಂಕ. ಹೆಚ್ಚಿನ ಎಫ್ಡಿ ಬಡ್ಡಿದರಗಳನ್ನು ನೀಡುವ ಈ ಯೋಜನೆಗೆ ಹಿರಿಯ ನಾಗರಿಕರು ಮಾತ್ರ ಅರ್ಹರಾಗಿದ್ದಾರೆ. ಬ್ಯಾಂಕ್ ಸಾರ್ವಜನಿಕರಿಗೆ ನೀಡುವ ಕಾರ್ಡ್ ದರಕ್ಕಿಂತ 50 ಬೇಸಿಸ್ ಪಾಯಿಂಟ್ (ಬಿಪಿಎಸ್) ಹೆಚ್ಚುವರಿ ಪ್ರೀಮಿಯಂ ಅನ್ನು ಈ ಪ್ಲ್ಯಾನ್ ಒದಗಿಸುತ್ತದೆ. ವಿ ಕೇರ್ ಯೋಜನೆಯಲ್ಲಿ ಹಿರಿಯ ನಾಗರಿಕರು 7.50 ಬಡ್ಡಿಯನ್ನು ಪಡೆಯುತ್ತಾರೆ. ಇದು ಹೊಸ ಠೇವಣಿ ಮತ್ತು ಇರುವ ಠೇವಣಿಯ ನವೀಕರಣಕ್ಕೂ ಅನ್ವಯವಾಗುತ್ತದೆ.
ಐಡಿಬಿಐ ಅಮೃತ ಮಹೋತ್ಸವ ಎಫ್ಡಿ
375 ದಿನಗಳ ಅಮೃತ ಮಹೋತ್ಸವ್ ಎಫ್ಡಿ ಯೋಜನೆಯಡಿ, ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7.10% ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ, ಬ್ಯಾಂಕ್ 7.60% ನೀಡುತ್ತದೆ. 444 ದಿನಗಳ ಸ್ಕೀಮ್ನಲ್ಲಿ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7.15% ಮತ್ತು ಹಿರಿಯ ನಾಗರಿಕರಿಗೆ 7.65% ಬಡ್ಡಿದರವನ್ನು ನೀಡುತ್ತದೆ.
ಡೆಮಾಟ್, ಎಂಎಫ್ ನಾಮನಿರ್ದೇಶನ
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮಿನಿಗಳನ್ನು ಸೂಚಿಸಲು ಅಥವಾ ನಾಮಿನಿಯಿಂದ ಹೊರಗುಳಿಯಲು ಸಮಯವನ್ನು ವಿಸ್ತರಿಸಿತ್ತು. ಪರಿಷ್ಕೃತ ಗಡುವು ಸೆಪ್ಟೆಂಬರ್ 30, 2023.
-
ವೈರಲ್ ನ್ಯೂಸ್14 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಸುವಚನ4 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ19 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema16 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಪ್ರಮುಖ ಸುದ್ದಿ12 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ದೇಶ23 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಬಾಲಿವುಡ್20 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕರ್ನಾಟಕ18 hours ago
Mother-Child death : 3 ವರ್ಷದ ಮಗುವಿನ ಕತ್ತು ಹಿಸುಕಿ ಬಾವಿಗೆ ಹಾರಿದ ತಾಯಿ; ಎಷ್ಟು ಕಷ್ಟ ಅನುಭವಿಸಿದ್ದಳೋ?