Site icon Vistara News

Ramayana | ದ್ವಿಪದಿ ಕಾವ್ಯದಲ್ಲಿಯೇ ಸಂಪೂರ್ಣ ರಾಮಾಯಣ ಬರೆದ ಹೈದರಾಬಾದ್‌ನ 92 ವರ್ಷದ ವ್ಯಕ್ತಿ!

Ramayana

ಹೈದರಾಬಾದ್: ವಾಲ್ಮೀಕಿ ಅವರು ಬರೆದ ರಾಮಾಯಣವನ್ನು (Ramayana) ಹತ್ತಾರು ಭಾಷೆಗಳಿಗೆ ಅನುವಾದ ಮಾಡಲಾಗಿದೆ. ನೂರಾರು ಲೇಖಕರು ಹತ್ತಾರು ರೀತಿಯಲ್ಲಿ ರಾಮಾಯಣ ಬರೆದಿದ್ದಾರೆ. ಆದರೆ, ಹೈದರಾಬಾದ್‌ನಲ್ಲಿ ೯೨ ವರ್ಷದ ವ್ಯಕ್ತಿಯೊಬ್ಬರು ದ್ವಿಪದಿ ಕಾವ್ಯ (ಪ್ರತಿ ಸಾಲಿನಲ್ಲೂ ಪ್ರಾಸ ಇರುವಂತೆ ಎರಡು ಸಾಲಿನ ಪದ್ಯದಲ್ಲಿ ರಚನೆ)ದ ಮೂಲಕ ರಾಮಾಯಣ ಬರೆದಿದ್ದಾರೆ.

ಪೆರೆಪಿ ಮಲ್ಲಿಕಾರ್ಜುನ ಶರ್ಮಾ ಅವರು ೧೫ ವರ್ಷದಿಂದ ಶ್ರಮ ವಹಿಸಿ, ದ್ವಿಪದಿಗಳನ್ನು ಬರೆಯುತ್ತ, ಕೊನೆಗೆ ತಮ್ಮ ೯೨ನೇ ವರ್ಷದಲ್ಲಿ ಗ್ರಂಥ ಬಿಡುಗಡೆ ಮಾಡಿದ್ದಾರೆ. ಇಡೀ ಗ್ರಂಥವನ್ನು ದ್ವಿಪದಿಯಲ್ಲಿಯೇ ಬರೆದಿರುವುದು ವಿಶೇಷವಾಗಿದೆ. ಹಾಳೆಗಳಲ್ಲಿ, ನೋಟ್ಸ್‌ ಮಾಡಿಕೊಂಡು, ಕೊನೆಗೆ ಕಂಪ್ಯೂಟರ್‌ನಲ್ಲಿ ಕಂಪೋಸ್‌ ಮಾಡಿ, ಪುಸ್ತಕ ಪ್ರಕಟಿಸಿರುವುದು ಅವರು ರಾಮಾಯಣ ಹಾಗೂ ದ್ವಿಪದಿಗಳ ಮೇಲೆ ಇಟ್ಟಿರುವ ಅಭಿಮಾನ, ಬದ್ಧತೆಗೆ ಸಾಕ್ಷಿಯಾಗಿದೆ.

“ನಾನು ಚಿಕ್ಕವನಾಗಿದ್ದಾಗ ನನ್ನ ತಾಯಿ ಪೆರೆಪಿ ರಾಜಮ್ಮ ಅವರಿಂದ ರಾಮಾಯಣದ ಕತೆಯನ್ನು ಕೇಳಿದ್ದೆ. ವೇದ ವ್ಯಾಸ ಅಧ್ಯಾತ್ಮ ರಾಮಾಯಣ ಹಾಗೂ ವಾಲ್ಮೀಕಿ ರಾಮಾಯಣವು ನನ್ನ ಜೀವನದ ಮೇಲೆ ಹೆಚಚು ಪರಿಣಾಮ ಬೀರಿದವು. ನನ್ನ ಆಸಕ್ತಿಗಳಿಗೆ ಹೊಂದಾಣಿಕೆ ಆದವು. ರಾಜ್ಯ ಅರಣ್ಯ ಇಲಾಖೆಯಿಂದ ೭೭ನೇ ವರ್ಷದಲ್ಲಿ ನಿವೃತ್ತಿಯಾದ ಬಳಿಕ ದ್ವಿಪದಿಗಳಲ್ಲಿ “ಶ್ರೀ ಬ್ರಹ್ಮಸೂತ್ರ ರಾಮಾಯಣಂ” ಗ್ರಂಥ ಬರೆಯಲು ಆರಂಭಿಸಿದೆ. ೧೫ ವರ್ಷಗಳ ಬಳಿಕ ಪುಸ್ತಕ ಪ್ರಕಟಿಸಿದ್ದೇನೆ” ಎಂದು ಪೆರೆಪಿ ಮಲ್ಲಿಕಾರ್ಜುನ ಶರ್ಮಾ ತಿಳಿಸಿದ್ದಾರೆ. ಪುಸ್ತಕವು ೫೫೭ ಪುಟಗಳನ್ನು ಹೊಂದಿದ್ದು, ೧೩,೧೬೭ ದ್ವಿಪದಿಗಳಿವೆ.

ಇದನ್ನೂ ಓದಿ | ಶ್ರೀರಾಮನ ಜಪಿಸುವ ಬಿಜೆಪಿಯವರೇ ರಾಮಾಯಣ ದರ್ಶನ೦ ಬರೆದ ಕವಿಯನ್ನು ಅವಮಾನಿಸಿದ್ದಾರೆ!

Exit mobile version