Site icon Vistara News

Congress Yatra | ಜ.26ರಿಂದ ಹಾಥ್ ಸೇ ಹಾಥ್ ಜೋಡೋ ಯಾತ್ರೆಗೆ ಕಾಂಗ್ರೆಸ್ ಸಜ್ಜು

Jharkhand Congress

ನವದೆಹಲಿ: ಭಾರತ್ ಜೋಡೋ ಯಾತ್ರೆ ಮುಗಿಯುವ ಮುನ್ನವೇ ಕಾಂಗ್ರೆಸ್ ಮತ್ತೊಂದು ಯಾತ್ರೆಗೆ (Congress Yatra) ಸಿದ್ಧವಾಗುತ್ತಿದೆ. ಜನವರಿ 26ರಿಂದ ಹಾಥ್ ಸೇ ಹಾಥ್ ಜೋಡೋ ಯಾತ್ರೆಯನ್ನು (Hath se Hath Jodo Yatra) ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಈ ಯಾತ್ರೆಯು ಹಳ್ಳಿಗಳಲ್ಲಿ ನಡೆಯಲಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಸಮಾವೇಶ ಮತ್ತು ರಾಜ್ಯ ಮಟ್ಟದಲ್ಲಿ ರ್ಯಾಲಿಗಳನ್ನು ಆಯೋಜಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ರಚಿಸಿರುವ ಚಾಲನಾ ಸಮಿತಿ ಮೊದಲ ಸಭೆ ಭಾನುವಾರ ದಿಲ್ಲಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಸೋನಿಯಾ ಗಾಂಧಿ, ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಸಭೆಯ ಬಳಿಕ ಕೆ.ಸಿ.ವೇಣುಗೋಪಾಲ್ ಅವರು ಈ ಮಾಹಿತಿಯನ್ನು ನೀಡಿದರು.

ಫೆಬ್ರವರಿಯಲ್ಲಿ ಛತ್ತೀಸ್‌ಗಢ ರಾಯಪುರದಲ್ಲಿ ಎಐಸಿಸಿ ಸರ್ವಸದಸ್ಯರ ಅಧಿವೇಶನವನ್ನು ನಡೆಸಲು ಕಾಂಗ್ರೆಸ್ ಪಕ್ಷದ ಸ್ಟೀರಿಂಗ್ ಸಮಿತಿಯು ನಿರ್ಧರಿಸಿದೆ. ಈ ಸಮಾವೇಶವು ಬಹುಶಃ ಬಜೆಟ್ ಅಧಿವೇಶನದ ವಿರಾಮದ ವೇಳೆಯಲ್ಲಿ ಪೂರ್ಣಗೊಳ್ಳಲಿದೆ. ಈ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾವ ರೀತಿ ಮುನ್ನಡೆಸಬೇಕು ಎಂಬುದರ ಕುರಿತು ಚಿಂತನ ಮಂಥನ ನಡೆಯಲಿದೆ. ಸಭೆಯ ಬಳಿಕ ಬೃಹತ್ ಮಟ್ಟದ ಸಮಾವೇಶ ಕೂಡ ನಡೆಯಲಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ ಅವರು ಈ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಹಾಥ್ ಸೇ ಹಾಥ್ ಜೋಡೋ ಯಾತ್ರೆಯ ಭಾಗವಾಗಿ ರಾಜ್ಯಗಳ ಮಟ್ಟದಲ್ಲಿ ಮಹಿಳಾ ಮೋರ್ಚಾ ರ್ಯಾಲಿಗಳನ್ನು ಪ್ರಿಯಾಂಕಾ ಗಾಂಧಿ ಅವರು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ | Video| ಭಾರತ್​ ಜೋಡೋ ಯಾತ್ರೆಗೆ ನಟಿ ಸ್ವರಾ ಭಾಸ್ಕರ್​ ಸಾಥ್​; ರಾಹುಲ್ ಗಾಂಧಿ ಜತೆ ಮಾತು-ನಡಿಗೆ

Exit mobile version