Site icon Vistara News

Kashmir Dispute: ಕಾಶ್ಮೀರಕ್ಕೂ ಗಾಜಾ, ಪ್ಯಾಲೆಸ್ತೀನ್ ಪರಿಸ್ಥಿತಿ ಬರುತ್ತೆ ಎಂದ ಫಾರೂಖ್ ಅಬ್ದುಲ್ಲಾ!

Farooq Abdullah

Pakistan not wearing bangles: Farooq Abdullah's reminder as Rajnath Singh says 'PoK will be merged with India'

ನವದೆಹಲಿ: ಮಾತುಕತೆಯ ಮೂಲಕ ಕಾಶ್ಮೀರ ವಿವಾದಕ್ಕೆ (Kashmir Dispute) ಭಾರತ (India) ಮತ್ತು ಪಾಕಿಸ್ತಾನಗಳೆರಡೂ (Pakistan) ಪರಿಹಾರ ಕಂಡುಕೊಳ್ಳದಿದ್ದರೆ, ಜಮ್ಮು ಮತ್ತು ಕಾಶ್ಮೀರ (Jammu and Kashmir) ಮತ್ತೊಂದು ಗಾಜಾ-ಪ್ಯಾಲೆಸ್ತೀನ್ (Gaza and Palestine) ಆಗಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ (Farooq Abdullah) ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು(ಭಾರತ) ನಮ್ಮ ನೆರೆಯ ಹೊರೆಯವರೊಂದಿಗೆ ಸ್ನೇಹಿತರಾಗಿದ್ದರೆ ಎರಡೂ ದೇಶಗಳು ಪ್ರಗತಿ ಕಾಣಲಿವೆ ಎಂದು ಹೇಳಿದರು.

ನಾವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು. ಆದರೆ ನಮ್ಮ ನೆರೆಹೊರೆಯವರನ್ನಲ್ಲ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ನಾವು ನಮ್ಮ ನೆರೆಹೊರೆಯವರೊಂದಿಗೆ ಸೌಹಾರ್ದಯುತವಾಗಿ ಇದ್ದರೆ, ಎರಡೂ ಕಡೆಯೂ ಪ್ರಗತಿಯಾಗುತ್ತದೆ. ಯುದ್ಧವು ಈಗ ಆಯ್ಕೆಯಾಗಿಲ್ಲ ಮತ್ತು ಮಾತುಕತೆಯ ಮೂಲಕ ವಿಷಯಗಳನ್ನು ಪರಿಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆಂದು ಅವರು ಹೇಳಿದರು. ಹೇಳಿಕೆಗಳ ಹೊರತಾಗಿ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂಬ ಬೇಸರವನ್ನು ಅವರು ವ್ಯಕ್ತಪಡಿಸಿದರು.

ಮಾತುಕತೆಯಾಗುತ್ತಿದೆಯೇ ? ನವಾಜ್ ಷರೀಫ್ (ಪಾಕಿಸ್ತಾನದ) ಪ್ರಧಾನಿಯಾಗಲಿದ್ದಾರೆ ಮತ್ತು ನಾವು (ಭಾರತದೊಂದಿಗೆ) ಮಾತನಾಡಲು ಸಿದ್ಧ ಎಂದು ಅವರು ಹೇಳುತ್ತಿದ್ದಾರೆ, ಆದರೆ ನಾವು ಮಾತನಾಡಲು ಸಿದ್ಧವಾಗಿಲ್ಲದ ಕಾರಣವೇನು? ಎಂದು ಅಬ್ದುಲ್ಲಾ ಅವರು ಪ್ರಶ್ನಿಸಿದರು. ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಇಸ್ರೇಲ್ ಬಾಂಬ್ ದಾಳಿ ನಡೆಸುತ್ತಿರುವ ಗಾಜಾ, ಪ್ಯಾಲೆಸ್ತೀನ್ ಗಳಂತ ಸ್ಥಿತಿ ಕಾಶ್ಮೀರಕ್ಕೂ ಬರಲಿದೆ ಎಂದು ಎಚ್ಚರಿಸಿದರು.

ಭಾರತವು ಮೊದಲಿನಿಂದಲೂ ಕಾಶ್ಮೀರ ಸಮುಗ್ರ ಭಾರತದ ಅಂಗವಾಗಿದೆ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಕಾಶ್ಮೀರವು ನಮ್ಮ ಆಂತರಿಕ ವಿಷಯವಾಗಿದೆ ಎಂದು ಮೊದಲಿನಿಂದಲೂ ವಾದಿಸುತ್ತಿದೆ. ಭಯೋತ್ಪಾದನೆ, ಹಿಂಸಾಚಾರ ಮತ್ತು ಹಗೆತನ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ, ಸೌಹಾರ್ದ ಸಂಬಂಧವನ್ನು ಬಯಸುತ್ತದೆ ಎಂದು ಭಾರತವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ವಾದವನ್ನು ಮಂಡಿಸುತ್ತಾ ಬಂದಿದೆ.

ಯಾರಿಗೆ ಗೊತ್ತು? 200 ವರ್ಷದಲ್ಲಿ ಮತ್ತೆ ಆರ್ಟಿಕಲ್ 370 ವಾಪಸ್ ಬರಬಹುದು ಎಂದ ಫಾರೂಖ್

ಕೇಂದ್ರ ಸರ್ಕಾರವನ್ನು (Central Government) ಬೆಂಬಲಿಸುವ ಸುಪ್ರೀಂ ಕೋರ್ಟ್ (Supreme Court) ತೀರ್ಪು 370ನೇ ವಿಧಿಯ (Article 370) ಅಂತಿಮ ಚೌಕಟ್ಟಾಗಿರುವುದಿಲ್ಲ. ಯಾರಿಗೆ ಗೊತ್ತು, ಮುಂದಿನ 200 ವರ್ಷಗಳಲ್ಲಿ ಮತ್ತೆ ಈ 370ನೇ ವಿಧಿ ಮತ್ತೆ ವಾಪಸ್ ಬಂದರೂ ಬರಬಹುದು ಎಂದು ಈ ಹಿಂದಿನ ಅಖಂಡ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಎರಡು ವಾರದಿಂದ ಹೇಳಿದ್ದಾರೆ(Ex CM Farooq Abdullah).

ನಾವು ಆದೇಶವನ್ನು ಗೌರವಿಸುತ್ತೇವೆ. ಆದರೆ ಅದೇ ಸುಪ್ರೀಂ ಕೋರ್ಟ್, ಅದರ ಮೂವರು ನ್ಯಾಯಾಧೀಶರು, ಆರ್ಟಿಕಲ್ 370 ಅನ್ನು ಕಾಯಂ ಆಗಿ ಹಿಡಿದಿದ್ದರು. ಅದು ಇನ್ನೂ ನಿಂತಿದೆಯೇ? ಭವಿಷ್ಯವು ಏನಾಗುತ್ತದೆ ಎಂದು ಯಾರಿಗೆ ತಿಳಿದಿದೆ? ನಾವು ಮತ್ತೆ ಒಂದು ದಿನ ನ್ಯಾಯಾಲಯಕ್ಕೆ ಹೋಗುತ್ತೇವೆ. ನಂತರ ನಾವು ಏನನ್ನು ನೋಡುತ್ತೇವೆ. ಆಗ ಏನಾಗುತ್ತದೆ ನೋಡೋಣ. ಆರ್ಟಿಕಲ್ 370 ಅನ್ನು ವಾಪಸ್ ಪಡೆಯಲು 70 ವರ್ಷಗಳ ಬೇಕಾದವು. ಯಾರಿಗೆ ಗೊತ್ತು, ಮುಂದೊಂದು ದಿನ 200 ವರ್ಷಗಳಲ್ಲಿ ಮತ್ತೆ ಇದೇ ವಿಧಿ ಜಾರಿಯಾಗಬಹುದು ಎಂದು ಫಾರೂಕ್ ಅಬ್ದುಲ್ಲಾ ಅವರು ಹೇಳಿದ್ದಾರೆ.

ಸೋಮವಾರದ ಸುಪ್ರೀಂ ಕೋರ್ಟ್ ಆದೇಶವು ಜಮ್ಮು ಮತ್ತು ಕಾಶ್ಮೀರದಲ್ಲಿ ಹತಾಶೆಯನ್ನು ಉಂಟು ಮಾಡಿದೆ. ಅಲ್ಲಿ ತೀರ್ಪು ತಮ್ಮ ಪರವಾಗಿ ಬರಬಹುದು ಎಂದು ಹಲವರು ಆಶಿಸಿದರು. ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಅವರಂತೆ ಹಲವರು ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Farooq Abdullah | ಕಾಶ್ಮೀರದಲ್ಲಿ ಎಲ್ಲಿಯ ತನಕ ಕೊಲೆಗಳಾಗಲಿವೆ? ಫಾರೂಖ್ ಅಬ್ದುಲ್ಲಾ ಹೇಳಿದ್ದೇನು?

Exit mobile version