Site icon Vistara News

Manipur Violence: ಮಾತುಕತೆಯ ಮೇಜಿಗೆ ಬಂದ ಮೈತಿ, ಕುಕಿ ಸಂಘಟನೆಗಳು

manipur

ಇಂಫಾಲ: ಮಣಿಪುರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು (Manipur Violence) ಶಮನಗೊಳಿಸುವುದಕ್ಕಾಗಿ, ಮೈತಿ (meitei people) ಹಾಗೂ ಕುಕಿ (kuki tribe) ಸಂಘಟನೆಗಳ ಜತೆಗೆ ಮಹತ್ವದ ಮಾತುಕತೆಗಳನ್ನು ಕೇಂದ್ರ ಸರ್ಕಾರ ಬುಧವಾರ ನಡೆಸಿದೆ.

ಈಶಾನ್ಯ ಭಾರತಕ್ಕೆ ಕೇಂದ್ರದ ಪ್ರತಿನಿಧಿ, ಇಂಟೆಲಿಜೆನ್ಸ್ ಬ್ಯೂರೋದ ಮಾಜಿ ಹೆಚ್ಚುವರಿ ನಿರ್ದೇಶಕ ಅಕ್ಷಯ್ ಮಿಶ್ರಾ ಅವರು ಕುಕಿ ತೀವ್ರಗಾಮಿ ಗುಂಪುಗಳ ಜತೆಗೆ ಕಾರ್ಯಾಚರಣೆ ತಡೆಯುವ ಒಪ್ಪಂದದ (SOO) ಭಾಗವಾಗಿ ಮಾತುಕತೆ ನಡೆಸಿದ್ದಾರೆ. ಮೈತಿ ಸಂಘಟನೆಯಾದ ಮಣಿಪುರ ಏಕಾತ್ಮತಾ ಸಮಿತಿ (COCOMI) ಪ್ರತಿನಿಧಿಗಳೊಂದಿಗೂ ಪ್ರತ್ಯೇಕ ಸುತ್ತಿನ ಮಾತುಕತೆ ಕೇಂದ್ರವನ್ನು ಪ್ರತಿನಿಧಿಸುವ IB ಅಧಿಕಾರಿ ನಡೆಸಿದ್ದಾರೆ.

ರಾಜ್ಯದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವ ಕುಕಿ ಉಗ್ರವಾದಿ ಗುಂಪುಗಳ ಜತೆ ಮಾತುಕತೆ ನಡೆಸಬಾರದು ಎಂದು ಸರ್ಕಾರವನ್ನು ಮೈತಿ ಸಂಘಟನೆಗಳು ಆಗ್ರಹಿಸಿದ್ದವು. ಕುಕಿಗಳ ಜತೆ ಶಾಂತಿ ಒಪ್ಪಂದದ ಮಾತುಕತೆಗಳು ಹಲವು ತಿಂಗಳುಗಳಿಂದಲೂ ನಡೆದಿವೆ. ಆದರೆ ಮೇ ಬಳಿಕ ಇದು ಹಳಿ ತಪ್ಪಿದೆ. ಹಿಂಸಾಚಾರಕ್ಕೆ ಮೊದಲಿನ ಮಾತುಕತೆಗಳು ಕುಕಿಗಳ ಒಕ್ಕಲೆಬ್ಬಿಸುವಿಕೆ, ಪುನರ್ವಸತಿ ಕುರಿತಾಗಿ ಇತ್ತು. ಈಗಿನ ಮಾತುಕತೆ ಹಿಂಸಾಚಾರ ತಡೆಯುವುದಕ್ಕಾಗಿ ನಡೆದಿದೆ.

ಇದು ರಾಜಕೀಯ ಮಾತುಕತೆಗಳಿಗೆ ಸಮಯವಲ್ಲ. ಕುಕಿ ಸಂಘಟನೆಗಳು ಪ್ರತ್ಯೇಕ ಆಡಳಿತ ವ್ಯವಸ್ಥೆಗಾಗಿ ಒತ್ತಾಯಿಸುತ್ತಿವೆ. ಅದನ್ನು ಈಗ ಚರ್ಚೆಗೆ ತೆಗೆದುಕೊಂಡಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕುಕೀ ಸಂಘಟನೆಗಳ ಪ್ರಕಾರ ಮಣಿಪುರ ಸರ್ಕಾರ ಅವರಿಗೆ ಬೇಕಿಲ್ಲ; ತಮ್ಮದೇ ಆದ ಆಡಳಿತ ವ್ಯವಸ್ಥೆ ಅವರಿಗೆ ಬೇಕಿದೆ. ಇದಕ್ಕಾಗಿ ಜಿಲ್ಲಾ ಸಮಿತಿಗಳ ಪ್ರಸ್ತಾವವನ್ನು ಸರ್ಕಾರ ಇಟ್ಟಿದೆ.

ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರ ಪ್ರಯತ್ನದ ಫಲವಾಗಿ ಮೈತಿ ಸಮುದಾಯದ ಕಡೆಯಿಂದ ಕೆಲವು ಹೆಜ್ಜೆಗಳನ್ನು ಇಡಲಾಗಿದೆ. ಸಂಘರ್ಷ ಹೆಚ್ಚಾಗಿ ಇರುವ ಕಡೆಗಳಲ್ಲಿ ಇದ್ದ ಬಂಕರ್‌ಗಳನ್ನು ಮೈತಿಗಳು ತೆರವು ಮಾಡಿದ್ದಾರೆ. ಆದರೆ ಕುಕಿಗಳು ತೆರವು ಮಾಡಲು ಒಪ್ಪಿಲ್ಲ. ಜುಲೈನಲ್ಲಿ ಹಿಂಸಾಚಾರ ತಣ್ಣಗಾಗಿತ್ತು ಎನ್ನುವಾಗಲೇ ಬೆತ್ತಲೆ ಮೆರವಣಿಗೆಯ ವಿಡಿಯೋ ಕಾಣಿಸಿಕೊಂಡು ಮತ್ತೆ ಉಲ್ಬಣಿಸಿತ್ತು.

ಇದನ್ನೂ ಓದಿ: Manipur Violence: 2 ದಿನದಲ್ಲಿ 700 ಮ್ಯಾನ್ಮಾರ್ ಪ್ರಜೆಗಳು ಮಣಿಪುರಕ್ಕೆ ಎಂಟ್ರಿ! ʼಹೊರ ತಳ್ಳಿʼ ಎಂದ ಸರ್ಕಾರ

Exit mobile version