Site icon Vistara News

Menstrual Leave: ಕೇರಳದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ವಿದ್ಯಾರ್ಥಿನಿಯರಿಗೆ ಇನ್ಮುಂದೆ ಸಿಗಲಿದೆ ಮುಟ್ಟಿನ ರಜೆ

Frame menstrual leave policy, Parliamentary panel tells Central Govt

Frame menstrual leave policy, Parliamentary panel tells Central Govt

ತಿರುವನಂತಪುರಂ: ಕೇರಳದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ (Menstrual Leave In Kerala) ನೀಡುವ ಸಂಬಂಧ ಅಂತಿಮ ನಿರ್ಧಾರ ಹೊರಬಿದ್ದಿದ್ದು, ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಡಿ ಬರುವ ಎಲ್ಲ ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿನಿಯರಿಗೂ ಇನ್ನುಮುಂದೆ ಮುಟ್ಟಿನ ದಿನದ ರಜೆ ನೀಡುವುದಾಗಿ ಕೇರಳ ಉನ್ನತ ಶಿಕ್ಷಣ ಸಚಿವೆ ಆರ್​.ಬಿಂದು ಹೇಳಿದ್ದಾರೆ. ಹೀಗೊಂದು ನಿರ್ಧಾರವನ್ನು ಮೊದಲು ಪ್ರಕಟಿಸಿದ್ದು ಕೊಚ್ಚಿನ್​​ ಯುನಿವರ್ಸಿಟಿ ಆಫ್​ ಸೈನ್ಸ್​ ಆ್ಯಂಡ್ ಟೆಕ್ನಾಲಜಿ. ಇನ್ನು ಮುಂದೆ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡುವುದಾಗಿ ಈ ಯೂನಿವರ್ಸಿಟಿ ಘೋಷಿಸಿತ್ತು. ಈ ಉಪಕ್ರಮವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ರಾಜ್ಯ ಸರ್ಕಾರ ಈಗ ಎಲ್ಲ ಯೂನಿವರ್ಸಿಟಿಗಳಿಗೂ ವಿಸ್ತರಿಸಲು ಮುಂದಾಗಿದೆ.

ಋತುಚಕ್ರದ ದಿನಗಳಲ್ಲಿ ಹೆಣ್ಣುಮಕ್ಕಳು ಎದುರಿಸುವ ಮಾನಸಿಕ ಮತ್ತು ದೈಹಿಕ ತೊಂದರೆಗಳು, ಅನನುಕೂಲತೆಗಳನ್ನು ಪರಿಗಣಿಸಿ ಈ ರಜೆ ನೀಡಲು ನಿರ್ಧರಿಸಲಾಗಿದೆ. ಎಲ್ಲ ಯೂನಿವರ್ಸಿಟಿಗಳಲ್ಲೂ ವಿದ್ಯಾರ್ಥಿನಿಯರಿಗೆ ಇನ್ನು ಮುಂದೆ ಋತುಚಕ್ರದ ರಜೆ ಲಭ್ಯವಿರುತ್ತದೆ ಎಂದು ಸಚಿವೆ ಬಿಂದು ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Period problems | ಚಳಿಗಾಲದಲ್ಲೇ ಮುಟ್ಟಿನ ತೊಂದರೆಗಳು ಉಲ್ಬಣಿಸುವುದ್ಯಾಕೆ? ಇಲ್ಲಿವೆ ಪರಿಹಾರಗಳು!

ಹಾಗೇ, ಮೊಟ್ಟಮೊದಲು ಈ ಉಪಕ್ರಮ ತೆಗೆದುಕೊಂಡ ಕೊಚ್ಚಿನ್​ ಯೂನಿವರ್ಸಿಟಿಯನ್ನು ಸಚಿವೆ ಹೊಗಳಿದ್ದಾರೆ. ಇದು ವಿದ್ಯಾರ್ಥಿನಿಯರ ದೀರ್ಘಕಾಲದ ಬೇಡಿಕೆಯಾಗಿತ್ತು. ಅದನ್ನು ಕೇರಳದಲ್ಲಿ ಮೊಟ್ಟಮೊದಲಿಗೆ ಅನುಷ್ಠಾನಕ್ಕೆ ತಂದಿದ್ದು ಕೊಚ್ಚಿನ್​ ಯೂನಿವರ್ಸಿಟಿ. ಆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಪ್ರಯತ್ನವೂ ಇದರಲ್ಲಿದೆ. ಋತುಚಕ್ರದ ದಿನಗಳಲ್ಲಿ ಹೆಣ್ಣುಮಕ್ಕಳು ಮಾನಸಿಕವಾಗಿಯೂ-ಭಾವನಾತ್ಮಕವಾಗಿಯೂ ಕುಗ್ಗಿರುತ್ತಾರೆ. ಹೀಗಾಗಿ ಅವರಿಗೆ ರಜೆ ಕೊಡುವುದರಿಂದ ಆರಾಮಾಗಿ ಇರಬಹುದು. ವಿಶ್ರಾಂತಿ ಪಡೆಯಬಹುದು’ ಎಂದು ಆರ್​. ಬಿಂದು ತಿಳಿಸಿದ್ದಾರೆ. ಅಂದಹಾಗೇ, ಈ ಮುಟ್ಟಿನ ರಜೆ ವಿಶ್ವವಿದ್ಯಾಲಯಗಳಲ್ಲಿ ಪಿಎಚ್​ಡಿ ಮಾಡುತ್ತಿರುವವರಿಂದ ಹಿಡಿದು ಎಲ್ಲ ವಿಭಾಗದ ವಿದ್ಯಾರ್ಥಿನಿಯರಿಗೂ ಅನ್ವಯ ಆಗುತ್ತದೆ.

Exit mobile version