Top Restaurants: ಭಾರತದ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಬೆಂಗಳೂರಿನ ಹೋಟೆಲ್‌ಗಳಿಗೆ ಅಗ್ರಸ್ಥಾನ! Vistara News

ಆಹಾರ/ಅಡುಗೆ

Top Restaurants: ಭಾರತದ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಬೆಂಗಳೂರಿನ ಹೋಟೆಲ್‌ಗಳಿಗೆ ಅಗ್ರಸ್ಥಾನ!

Top Restaurants: ‘ವಿಶ್ವದ ಅಗ್ರ 1,000 ರೆಸ್ಟೋರೆಂಟ್‌ʼಗಳ ಪಟ್ಟಿ ಬಿಡುಗಡೆಯಾಗಿದ್ದು, ಬೆಂಗಳೂರಿನ ಹಲವು ಹೋಟೆಲ್‌ಗಳು ಸ್ಥಾನ ಪಡೆದಿವೆ.

VISTARANEWS.COM


on

hotel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರು ಸದ್ಯ ವಿಶ್ವ ಮಟ್ಟದಲ್ಲಿ ಜನಪ್ರಿಯವಾಗಿದೆ. ಸಿಲಿಕಾನ್‌ ಸಿಟಿ, ಗಾರ್ಡನ್‌ ಸಿಟಿ ಎಂದೇ ಗುರುತಿಸಿಕೊಂಡಿದೆ. ಜತೆಗೆ ಬೆಂಗಳೂರು ಆಹಾರ ಪ್ರಿಯರ ನೆಚ್ಚಿನ ತಾಣವೂ ಹೌದು. ಇಲ್ಲಿ ಸಿಗುವ ವೈವಿಧ್ಯಮಯ ಆಹಾರಕ್ಕೆ, ಆತಿಥ್ಯಕ್ಕೆ ಬಹುತೇಕರು ಮನ ಸೋಲುತ್ತಾರೆ. ಈ ಮಧ್ಯೆ ಪ್ರಪಂಚದ ಟಾಪ್‌ 1,000 ರೆಸ್ಟೋರೆಂಟ್‌ (Top Restaurant) ಪಟ್ಟಿಯಲ್ಲಿ ನಮ್ಮ ಬೆಂಗಳೂರಿನ ರೆಸ್ಟೋರೆಂಟ್‌ಗಳು ಸ್ಥಾನ ಪಡೆದಿವೆ.

ಯಾವೆಲ್ಲ ರೆಸ್ಟೋರೆಂಟ್‌ಗಳು?

ಫ್ರಾನ್ಸ್ ಮೂಲದ ರೆಸ್ಟೋರೆಂಟ್ ಮಾರ್ಗದರ್ಶಿ ಮತ್ತು ಶ್ರೇಯಾಂಕ ಕಂಪನಿ ಲಾ ಲಿಸ್ಟೆ (La Liste) ಇತ್ತೀಚೆಗೆ 2024ರ ‘ವಿಶ್ವದ ಅಗ್ರ 1,000 ರೆಸ್ಟೋರೆಂಟ್‌ʼಗಳ(Top 1,000 Restaurants In the World) ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಭಾರತದ ವಿವಿಧ ರೆಸ್ಟೋರೆಂಟ್‌ಗಳು ಸ್ಥಾನ ಪಡೆದಿವೆ. ಆ ಪೈಕಿ ಬೆಂಗಳೂರಿನ ಹಲವು ಹೋಟೆಲ್‌ಗಳಿವೆ ಎನ್ನುವುದು ವಿಶೇಷ. ನವದೆಹಲಿಯ ಇಂಡಿಯನ್‌ ಆಕ್ಸೆಂಟ್‌ (95 ಅಂಕ) ದೇಶದಲ್ಲೇ ನಂಬರ್‌ 1 ಎನಿಸಿಕೊಂಡಿದೆ. ಬೆಂಗಳೂರಿನ ಕರಾವಳ್ಳಿ (86 ಅಂಕ), ಜಮಾವರ್‌- ಲೀಲಾ ಪ್ಯಾಲೇಸ್ (83 ಅಂಕ) ಮತ್ತು ಲೆ ಸಿರ್ಕ್ ಸಿಗ್ನೇಚರ್- ದಿ ಲೀಲಾ ಪ್ಯಾಲೇಸ್ (82.5 ಅಂಕ) ರೆಸ್ಟೋರೆಂಟ್‌ಗಳು ಅತ್ಯುತ್ತಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಇನ್ನು ದೆಹಲಿಯ ದಮ್ ಪುಖ್ತ್ (84 ಅಂಕ), ಮೆಗು-ಲೀಲಾ ಪ್ಯಾಲೇಸ್ (82 ಅಂಕ), ಬುಖಾರ- ಐಟಿಸಿ ಮೌರ್ಯ (79 ಅಂಕ), ಮುಂಬೈಯ ಯೌಚಾ (84 ಅಂಕ) ಮತ್ತು ಜಿಯಾ (78.5 ಅಂಕ) ರೆಸ್ಟೋರೆಂಟ್‌ಗಳೂ ಆಯ್ಕೆಯಾಗಿವೆ. ಜತೆಗೆ ಹೈದರಾಬಾದ್‌ನಿಂದ ಅದಾ-ಫಲಕ್ನುಮಾ ಪ್ಯಾಲೇಸ್‌ (84 ಅಂಕ) ರೆಸ್ಟೋರೆಂಟ್‌ ಹೆಸರನ್ನು ಕೂಡ ಪಟ್ಟಿಗೆ ಪರಿಗಣಿಸಲಾಗಿದೆ.

ಅಲ್ಲದೆ ಮುಂಬೈಯ ವಸಾಬಿ ಬೈ ಮೊರಿಮೊಟೊ- ದಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ದಿ ಟೇಬಲ್, ಮಾಸ್ಕ್, ದಿ ಬಾಂಬೆ ಕ್ಯಾಂಟೀನ್, ಇಜುಮಿ ಬಾಂದ್ರಾ, ಒ ಪೆಡ್ರೊ, ಅಮೇರಿಕಾನೊ ಮತ್ತು ಸೀಫಾ ಸ್ಥಾನ ಪಡೆದಿವೆ. ಜತೆಗೆ ಬೆಂಗಳೂರಿನ ಬೆಂಗಳೂರು ಊಟಾ ಕಂಪನಿ, ಫಾರ್ಮ್ಲೂರು, ಲುಪಾ ಮತ್ತು ಫಲಕ್ ಕೂಡ ಇದೆ. ಕೋಲ್ಕತ್ತಾದ ಬಾನ್ ಥಾಯ್ ಮತ್ತು ಸಿಯೆನ್ನಾ ಸ್ಟೋರ್ & ಕೆಫೆ, ಚೆನ್ನೈನ ಅವರ್ತನಾ ಮತ್ತು ಗೋವಾದ ಅವಿನಾಶ್ ಮಾರ್ಟಿನ್ಸ್ ಮತ್ತು ಬೊಮ್ರಾಸ್ ಮತ್ತಿತರ ರೆಸ್ಟೋರೆಂಟ್‌ಗಳ ಹೆಸರು ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.

ಜಗತ್ತಿನ ಟಾಪ್‌ ಟೆನ್‌

ಅಮೇರಿಕದ ಲೆ ಬರ್ನಾರ್ಡಿನ್, ಇಂಗ್ಲೆಂಡ್‌ನ ಎಲ್’ ಎನ್ಕ್ಲೂಮ್-ಸಿಮೋನ್‌ ರೋಗನ್‌, ಫ್ರಾನ್ಸ್‌ನ ಗೈ ಸವೊಯ್, ಲಾ ವಾಗ್ಯೂ ಡಿಓರ್‌-ಲೆ ಚೇವಲ್‌ ಬ್ಲಾಂಕ್‌, ಜರ್ಮನಿಯ ಶೆವರ್ಝವಾಡ್‌ಸ್ಟುಬಿ, ಚೀನಾದ ಲುಂಗ್‌ ಕಿಂಗ್‌ ಹೀನ್‌, ಜಪಾನ್‌ನ ಸುಶಿ ಸೈಟೊ, ಸ್ಪೈನ್‌ನ ಅಟ್ರಿಯೊ, ಸ್ವಿಜರ್‌ಲ್ಯಾಂಡ್‌ನ ಚೇವಲ್‌ ಬ್ಲಾಂಕ್‌ ಬೈ ಪೀಟರ್‌ ಕ್ನೋಗ್ಲ್‌, ಇಟಲಿಯ ಡ ವೆಟೊರಿಯೊ ಟಾಪ್‌ 10ರಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ಮೊದಲ ಏಳು ಸಂಸ್ಥೆಗಳು 99.5 ಅಂಕಗಳನ್ನು ಪಡೆದಿವೆ.

ಭಾರತೀಯ ಪ್ರತಿಭೆಗೆ ಸಂದ ಗೌರವ

ಲಾ ಲಿಸ್ಟ್ 2024ರ ‘ವರ್ಷದ ಹೊಸ ಪ್ರತಿಭೆಗಳಲ್ಲಿ’ ಒಬ್ಬರಾಗಿ ಬಾಣಸಿಗರಾದ ಮುಂಬೈಯ ವಾಣಿಕಾ ಚೌಧರಿ (ನೂನ್ ಮತ್ತು ಸೀಕ್ವೆಲ್ ಖ್ಯಾತಿ) ಆಯ್ಕೆಯಾಗಿರುವುದು ವಿಶೇಷ.

ಟಾಪ್‌ 1,000 ರೆಸ್ಟೋರೆಂಟ್‌ಗಳ ಪಟ್ಟಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Death Threat: ಮೋದಿ, ಯೋಗಿಗೆ ಜೀವ ಬೆದರಿಕೆ; ಕರೆ ಮಾಡಿದ ಕಮ್ರಾನ್ ಖಾನ್‌ ಯಾರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Food Tips: ನೇರಳೆ ಬಣ್ಣದ ತರಕಾರಿಗಳನ್ನೇಕೆ ನಾವು ತಿನ್ನಬೇಕು ಗೊತ್ತೇ?

ನೇರಳೆ ಬಣ್ಣದ ತರಕಾರಿಗಳೂ (Violet vegetables) ಕೂಡಾ ಇತರ ತರಕಾರಿಗಳಿಗಿಂತ ಭಿನ್ನ. ಇವುಗಳಲ್ಲಿ ಇತರ ತರಕಾರಿಗಳಲ್ಲಿ ಕಾಣಸಿಗದ ಅಪರೂಪದ ಪೋಷಕಾಂಶವಿದೆ. ಅದರ ಹೆಸರು ಆಂಥೋಸಯನಿನ್.‌

VISTARANEWS.COM


on

violet vegetables
Koo

ಬಣ್ಣದಲ್ಲೇನಿದೆ ಎಂದು ನೀವು ಕೇಳಬಹುದು. ದೊಣ್ಣೆ ಮೆಣಸಿನಕಾಯಿ ಹಸಿರಾದರೇನು, ಕೆಂಪಾದರೇನು, ಹಳದಿಯಾದರೇನು, ಯಾವುದೇ ಬಣ್ಣದಲ್ಲಿರಲಿ ಬಣ್ಣ, ರುಚಿ ದೊಣ್ಣೆ ಮೆಣಸಿನಕಾಯಿಯೇ ಅಲ್ಲವೇ ಎಂದು ವಾದ ಮಾಡಬಹುದು. ಇನ್ನು ಕ್ಯಾಬೇಜು ತಿಳಿ ಹಸಿರು ಬಣ್ಣದ್ದಾದರೇನು, ನೇರಳೆ ಬಣ್ಣದ್ದಾದರೇನು ಎಂದೂ ಅನಿಸಬಹುದು. ಸಾಮಾನ್ಯ ಬಣ್ಣದ ಹಸಿರು ತರಕಾರಿಗಳು ಸಾಮಾನ್ಯರ ಕೈಗೆಟಕುವ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾದರೆ, ಈ ವಿಶೇಷ ಬಣ್ಣಗಳಲ್ಲಿ ಸಿಗುವ ತರಕಾರಿಗಳು ಮಾತ್ರ ದುಪ್ಪಟ್ಟು ಬೆಲೆ ತೆತ್ತು ಯಾಕೆ ಕೊಳ್ಳಬೇಕು ಎಂದೂ ಎನಿಸಬಹುದು. ಬಹಳ ಸಾರಿ, ಮಾಡಿದ ಅಡುಗೆಯನ್ನು ಅಲಂಕರಿಸಲು, ಬಣ್ಣಗಳಲ್ಲಿ ಚಂದ ಕಾಣಿಸುವಂತೆ ಮಾಡಲು ಇವನ್ನು ಕೊಂಡರೂ, ಇವುಗಳಿಂದ ಹೆಚ್ಚು ಉಪಯೋಗ ಇಲ್ಲ ಎಂದು ನಿಮಗನಿಸಿದರೆ ಅದು ತಪ್ಪು. ತರಕಾರಿಯ ಬಣ್ಣಗಳಿಗೂ ಅದರ ಬಣ್ಣವನ್ನವಲಂಬಿಸಿರುವ ವಿಶೇಷ ಮಹತ್ವವಿದೆ.

ನೇರಳೆ ಬಣ್ಣದ ತರಕಾರಿಗಳೂ (Violet vegetables) ಕೂಡಾ ಇತರ ತರಕಾರಿಗಳಿಗಿಂತ ಭಿನ್ನ. ಇವುಗಳಲ್ಲಿ ಇತರ ತರಕಾರಿಗಳಲ್ಲಿ ಕಾಣಸಿಗದ ಅಪರೂಪದ ಪೋಷಕಾಂಶವಿದೆ. ಅದರ ಹೆಸರು ಆಂಥೋಸಯನಿನ್(anthocyanins).‌ ಇದರಿಂದ ಹಲವು ಬಗೆಯಲ್ಲಿ ಇದು ಆರೋಗ್ಯಕರವಾಗಿರಲು (Healthy food) ತನ್ನ ಕಾಣಿಕೆ ಸಲ್ಲಿಸುತ್ತದೆ. ನೇರಳೆ ಬಣ್ಣದ ಕ್ಯಾರೆಟ್‌, ಮೂಲಂಗಿ, ಸಿಹಿಗೆಣಸು, ಹೂಕೋಸು, ಕ್ಯಾಬೇಜು, ಬದನೆಕಾಯಿ, ಬ್ಲ್ಯಾಕ್‌ಬೆರಿ, ದ್ರಾಕ್ಷಿ ಹೀಗೆ ಯಾವುದೇ ಹಣ್ಣು ತರಕಾರಿಗಳನ್ನು ತೆಗೆದುಕೊಳ್ಳಿ ಅವುಗಳಲ್ಲಿ ಆಂಥೋಸಯನಿನ್‌ ಇರುತ್ತದೆ. ಬನ್ನಿ, ಇಂದು ನಾವಿಲ್ಲಿ ಮುಖ್ಯವಾಗಿ, ನೇರಳೆ ಬಣ್ಣದ ಕ್ಯಾಬೇಜು ಇತರ ಕ್ಯಾಬೇಜುಗಳಿಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಪೋಷಕಾಂಶಗಳನ್ನು (nutrients) ಹೊಂದಿದೆ ಎಂಬುದನ್ನು ನೋಡೋಣ.

1. ನೇರಳೆ ಬಣ್ಣದ ಕ್ಯಾಬೇಜಿನಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ವಿಟಮಿನ್‌ ಕೆ ಹಾಗೂ ಬಿ೬ ಕೂಡಾ ಸಾಕಷ್ಟು ಪ್ರಮಾಣದಲ್ಲಿದೆ. ಜೊತೆಗೆ ಮ್ಯಾಂಗನೀಸ್‌, ನಾರಿನಂಶ, ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇದರಲ್ಲಿವೆ.

2. ಕ್ಯಾಬೇಜಿಗೆ ನೇರಳೆ ಬಣ್ಣವನ್ನು ಕೊಡುವ ಆಂಥೋಸಯನಿನ್‌ ಇದರಲ್ಲಿ ಹೇರಳವಾಗಿರುವುದರಿಂದ ಇದು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟನ್ನು ನೀಡುತ್ತದೆ. ಜೊತೆಗೆ ಆಕ್ಸಿಡೇಟಿವ್‌ ಸ್ಟ್ರೆಸ್‌ ಅನ್ನು ದೇಹದಿಂದ ಕಡಿಮೆಗೊಳಿಸುತ್ತದೆ.

3. ಹೃದಯದ ಆರೋಗ್ಯಕ್ಕೆ ಈ ನೇರಳೆ ಕ್ಯಾಬೇಜು ಬಹಳ ಒಳ್ಳೆಯದು. ಇದರಲ್ಲಿ ಹೇರಳವಾಗಿರುವ ಆಂಥೋಸಯನಿನ್‌ಗಳು ಹಾಗೂ ಪಾಲಿಫೀನಾಲ್‌ಗಳು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನಗೊಳಿಸಿ, ಕೊಲೆಸ್ಟೆರಾಲ್‌ ಕಡಿಮೆಗೊಳಿಸಿ ಪರೋಕ್ಷವಾಗಿ ಹೃದಯದ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.

4. ಇದರಲ್ಲಿ ಹೇರಳವಾಗಿ ನಾರಿನಂಶವೂ ಇರುವುದರಿಂದ ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಇದು ಜೀರ್ಣಾಂಗವ್ಯೂಹವನ್ನು ಆರೋಗ್ಯವಾಗಿರಿಸಿ ಮಲಬದ್ಧತೆಯನ್ನೂ ನಿವಾರಿಸುತ್ತದೆ.

5. ನೇರಳೆ ಕ್ಯಾಬೇಜಿನಲ್ಲಿ ಅಧಿಕಾವಹಿರುವ ಫೈಟೀ ನ್ಯೂಟ್ರಿಯೆಂಟ್‌ಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಕೆಲವು ಬಗೆಯ ಕ್ಯಾನ್ಸರ್‌ನನ್ನೂ ಬರದಂತೆ ತಡೆಗಟ್ಟುತ್ತದೆ.

6. ನೇರಳೆ ಕ್ಯಾಬೇಜಿನಲ್ಲಿ ವಿಟಮಿನ್‌ ಎ ಕೂಡಾ ಹೆಚ್ಚಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಉತ್ತಮ ದೃಷ್ಟಿಗೆ ಹಾಗೂ ಕಣ್ಣಿನ ಇತರ ಸಮಸ್ಯೆಗಳಿಗೂ ಇದು ಅತ್ಯುತ್ತಮ.

ಇದನ್ನೂ ಓದಿ: Food Tips: ಈ ಆಹಾರಗಳನ್ನು ಬೇಯಿಸಿದರೇ ಪೋಷಕಾಂಶಗಳಿಂದ ಸಮೃದ್ಧ, ಮರೆಯಬೇಡಿ

7. ಇದರಲ್ಲಿರುವ ವಿಟಮಿನ್‌ ಕೆ, ಎಲುಬಿನ ಆರೋಗ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಎಲುಬು ಕ್ಯಾಲ್ಶಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಎಲುಬು ನಷ್ಟವಾಗದಂತೆ ನೋಡಿಕೊಳ್ಳುತ್ತದೆ.

8. ತೂಕ ಇಳಿಸಿಕೊಳ್ಳುವ ಮಂದಿಗೂ ಇದು ಬಹಳ ಒಳ್ಳೆಯದು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ, ನೇರಳೆ ಕ್ಯಾಬೇಜು ತೂಕ ಇಳಿಸಲು ಸಹಾಯ ಮಾಡುತ್ತದೆ.

9. ನೇರಳೆ ಕ್ಯಾಬೇಜಿನಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳೂ ಹೆಚ್ಚಿವೆ. ಹೀಗಾಗಿ ಇದು ಯಾವುದೇ ಬಗೆಯ ಉರಿಯೂತ ಇತ್ಯಾದಿ ಸಮಸ್ಯೆಗಳನ್ನು ತಡೆಯುತ್ತದೆ. ಸಂಧಿವಾತದಂತಹ ಸಮಸ್ಯೆಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಉರಿಯೂತಕ್ಕೂ ಹೀಗಾಗಿ ಇದು ಬಹಳ ಒಳ್ಳೆಯದು.

ಇದನ್ನೂ ಓದಿ: Food Tips: ಇಲ್ಲಿವೆ ಬಗೆಬಗೆಯ ಉಪ್ಪು: ಯಾರು ಹಿತವರು ನಿಮಗೆ ಈ ಉಪ್ಪಿನೊಳಗೆ!

Continue Reading

ಆಹಾರ/ಅಡುಗೆ

Hot chocolate: ನಿಮ್ಮ ಮಕ್ಕಳಿಗಾಗಿ ಸ್ಪೆಷಲ್‌ ಹಾಟ್‌ ಚಾಕೋಲೇಟ್‌ ಡ್ರಿಂಕ್‌ ಹೀಗೆ ಮಾಡಿ!

ರೆಸ್ಟೋರೆಂಟ್‌ ಕೂಡಾ ಸೋಲುವಂಥ ಕ್ರೀಮೀ ಚಾಕೋಲೇಟೀಯಾಗಿರುವ ರುಚಿಯಾದ ಬಾಯಿ ಚಪ್ಪರಿಸುವ ಹಾಟ್‌ ಚಾಕೋಲೇಟ್‌ (Hot chocolate)‌ ಮಾಡುವ ಟಿಪ್ಸ್‌ ಇಲ್ಲಿವೆ.

VISTARANEWS.COM


on

hot chocolate
Koo

ಈ ಚಳಿಗಾಲ ಎಂತಹ ಸೋಂಬೇರಿ ಎಂದರೆ, ಚುರುಕಾಗಿದ್ದವರನ್ನೂ ಸೋಂಬೇರಿ ಮಾಡುತ್ತದೆ. ಶಿಸ್ತಾಗಿ ವ್ಯಾಯಾಮ ಮಾಡಿ ತಿಂದುಂಡು ಕೆಲಸ ಮಾಡುತ್ತಿದ್ದವರನ್ನೂ ಆಲಸಿಗಳನ್ನಾಗಿ ಮಾಡುತ್ತದೆ. ಇನ್ನು ಮಕ್ಕಳ ಕಥೆಯೇನು ಹೇಳಿ. ಮಕ್ಕಳನ್ನು ಪಾಲನೆ ಪೋಷಣೆ ಮಾಡುವ ಹೆತ್ತವರಿಗಂತೂ ಅವರನ್ನು ತೃಪ್ತಿಪಡಿಸುವುದೇ ದೊಡ್ಡ ಟಾಸ್ಕ್‌. ಬೇಸಿಗೆಯಲ್ಲಾದರೆ, ಮಕ್ಕಳಿಗೆ ಐಸ್‌ಕ್ರೀಂ ಕೊಡಿಸುವುದು ಪರಿಪಾಠ. ಆದರೆ, ಚಳಿಗಾಲ ಬಂದರೆ, ಬಿಸಿಬಿಸಿಯಾಗಿ ಅವರಿಗಿಷ್ಟವಾಗುವ ತಿನಿಸುಗಳನ್ನೂ ಡ್ರಿಂಕ್‌ಗಳನ್ನೂ ಮಾಡಿಕೊಡುವುದೇ ಇಂದಿನ ಪೋಷಕರಿಗಿರುವ ದೊಡ್ಡ ಚಾಲೆಂಜ್‌. ಅಂಥ ಸಂದರ್ಭದಲ್ಲಿ ಪೋಷಕರಿಗೆ ಸುಲಭವಾಗಿ ಕೈಗೆಟಕುವ ಮಕ್ಕಳೂ ಇಷ್ಟಪಡುವ ಡ್ರಿಂಕ್‌ ಎಂದರೆ ಅದು ಹಾಟ್‌ ಚಾಕೋಲೇಟ್‌ (Hot chocolate). ಬಹುತೇಕ ಎಲ್ಲ ಮಕ್ಕಳಿಗೂ ಪ್ರಿಯವಾದ ಡ್ರಿಂಕ್‌. ಆದರೆ, ಈಗಿನ ಮಕ್ಕಳು ರೆಸ್ಟೋರೆಂಟ್‌ಗಳಲ್ಲಿ ಹಾಟ್‌ ಚಾಕೋಲೇಟ್‌ ಕುಡಿದು, ಮನೆಯಲ್ಲಿ ಮಾಡಿಕೊಡುವ ಅಂತಿಂಥ ಹಾಟ್‌ ಚಾಕೋಲೇಟ್‌ ಇಷ್ಟಪಡುವುದಿಲ್ಲ. ರುಚಿಯಲ್ಲಿ ಅದು ರೆಸ್ಟೋರೆಂಟನ್ನೂ ಮೀರಿಸುವಂತಿರಬೇಕು. ಹಾಗಿದ್ದರೆ ಮಾತ್ರ ಮಾಡಿಕೊಟ್ಟವರಿಗೆ ನೆಮ್ಮದಿ. ಹಾಗಾದರೆ ಬನ್ನಿ, ರೆಸ್ಟೋರೆಂಟ್‌ ಕೂಡಾ ಸೋಲುವಂಥ ಕ್ರೀಮೀ ಚಾಕೋಲೇಟೀಯಾಗಿರುವ ರುಚಿಯಾದ ಬಾಯಿ ಚಪ್ಪರಿಸುವ ಹಾಟ್‌ ಚಾಕೋಲೇಟ್‌ (Hot chocolate)‌ ಮಾಡುವ ಟಿಪ್ಸ್‌ ಇಲ್ಲಿವೆ.

1. ಹಾಟ್‌ ಚಾಕೋಲೇಟ್‌ ಮಾಡುವಾಗ ಯಾವಾಗಲೂ, ಫುಲ್‌ ಕ್ರೀಂ ಹಾಲನ್ನು ಬಳಸಿ. ಪ್ಯಾಶ್ಚರೀಕರಿಸಿದ, ಟೋನ್‌ ಮಾಡಿದ, ಕ್ರೀಂ ಎರಡು ಬಾರಿ ತೆಗೆದ ಹಾಲನ್ನು ಬಳಸಿದರೆ,ರುಚಿಯಾದ ಹಾಟ್‌ ಚಾಕೋಲೇಟ್‌ ಸಿದ್ಧವಾಗದು. ನೀರು ಸೇರಿಸದೆ, ಫುಲ್‌ ಕ್ರೀಂ ಹಾಲನ್ನು ಇದಕ್ಕೆ ಉಪಯೋಗಿಸಿದರೆ ಮಾತ್ರ ಕ್ರೀಮೀಯಾಗಿರುವ ಹಾಟ್‌ ಚಾಕೋಲೇಟ್‌ ಮಾಡಲು ಸಾಧ್ಯವಾಗುತ್ತದೆ.

2. ಹಾಟ್‌ ಚಾಕೋಲೇಟ್‌ ಮಾಡಲು ಹಾಲು ಹೇಗೆ ಮುಖ್ಯವೋ ಅಷ್ಟೇ ಮುಖ್ಯ ಚಾಕೋಲೇಟ್‌ ಕೂಡಾ. ಉತ್ತಮ ಗುಣಮಟ್ಟದ ಚಾಕೋಲೇಟ್‌ ಬಹಳ ಮುಖ್ಯವಾಗುತ್ತದೆ. ಉತ್ತಮ ಗುಣಮಟ್ಟದ ಡಾರ್ಕ್‌ ಚಾಕೋಲೇಟ್‌ ಅಥವಾ ಕೋಕೋ ಪುಡಿ ಸೇರಿಸಿ. ಒಳ್ಳೆಯ ಕೊಕೋ ಪುಡಿಯಿಂದ ಹಾಟ್‌ ಚಾಕೋಲೇಟ್‌ ದಪ್ಪವಾಗಿಯೂ, ಕ್ರೀಮೀಯಾಗಿಯೂ ಆಗುತ್ತದೆ.

3. ಹಾಟ್‌ ಚಾಕೋಲೇಟ್‌ ದಪ್ಪವಾಗದಿದ್ದರೆ, ಕ್ರೀಮೀಯಾಗಿ ಆಗದಿದ್ದರೆ ಅದಕ್ಕೆ ವಿಪ್‌ ಮಾಡಿದ ಕ್ರೀಮನ್ನೂ ಸೇರಿಸಬಹುದು. ವಿಪ್‌ ಮಾಡಿದ ಕ್ರೀಂ ಹಾಕಿದರೆ ಹಾಟ್‌ ಚಾಕೋಲೇಟ್‌ ರುಚಿ ಹೆಚ್ಚಿತ್ತದೆ. ದಪ್ಪವೂ ಆಗುತ್ತದೆ.

4. ಹೆಚ್ಚಿನವರು ಹಾಟ್‌ ಚಾಕೋಲೇಟ್‌ಗೆ ಮನೆಯಲ್ಲಿ ಸಾದಾ ಸಕ್ಕರೆಯನ್ನು ಸೇರಿಸುವುದು ರೂಢಿ. ಆದರೆ, ಕಂಡೆನ್ಸ್‌ಡ್‌ ಮಿಲ್ಕ್‌ ಸೇರಿಸಿ ನೋಡಿ. ರುಚಿ ಅದ್ಭುತವಾಗಿಯೂ, ದಪ್ಪವೂ, ಕ್ರೀಮೀಯಾಗಿಯೂ ಆಗುತ್ತದೆ.

5. ಹಾಟ್‌ ಚಾಕೋಲೇಟ್‌ ಮಾಡುವಾಗ ಇದನ್ನು ಒಲೆಯ ಮೇಲಿಟ್ಟು ಕೊಂಚ ಹೊತ್ತು ಸಣ್ಣ ಉರಿಯಲ್ಲಿರಲು ಬಿಡಿ. ಆಗ ಅದು ಒಂದಕ್ಕೊಂದು ಸರಿಯಾಗಿ ಹೊಂದಿಕೊಂಡು ರುಚಿಕಟ್ಟಾಗಿ ಹೊರಹೊಮ್ಮುತ್ತದೆ.

6. ಹಾಟ್‌ ಚಾಕೋಲೇಟ್‌ ಹೀಗೆ ಮಾಡಲು ಟ್ರೈ ಮಾಡಿ: ಹಾಲನ್ನು ಕುದಿಸಿ. ನಂತರ, ಅದಕ್ಕೆ ಕರಗಿಸಿದ ಚಾಕೋಲೇಟ್‌ ಸೇರಿಸಿ. ಸ್ವಲ್ಪ ಕಂಡೆನ್ಸ್‌ಡ್‌ ಮಿಲ್ಕ್‌ ಸೇರಿಸಿ. ಕೊಕೋ ಪುಡಿಯನ್ನೂ ಸೇರಿಸಿ ಚೆನ್ನಾಗಿ ಕರಗಿಸಿ, ಗಂಟುಗಳಾಗದಂತೆ ನೋಡಿಕೊಳ್ಳಿ. ಒಂದು ಸಣ್ಣ ಚಕ್ಕೆಯ ತುಂಡನ್ನು ಹಾಕಿ ಅದರೊಳಗೆ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿರಲು ಬಿಡಿ. ಮೂರ್ನಾಲ್ಕು ಹನಿ ವೆನಿಲ್ಲಾ ಎಸೆನ್ಸ್‌ ಕೂಡಾ ಸೇರಿಸಿ. ಈಗ ಒಲೆಯಿಂದ ಕೆಳಗಿಳಿಸಿ, ಮೇಲಿನಿಂದ ವಿಪ್‌ ಮಾಡಿದ ಕ್ರೀಂ ಹಾಕಿ. ಈಗ ಹಾಟ್‌ ಚಾಕೋಲೇಟ್‌ ಡ್ರಿಂಕ್‌ ರೆಸ್ಟೋರೆಂಟ್‌ನ ಯಾವ ಡ್ರಿಂಕ್‌ಗೂ ಕಡಿಮೆಯಿಲ್ಲ. ಮಕ್ಕಳೇಕೆ, ನೀವೇ ನಿಮ್ಮ ಹಾಟ್‌ ಚಾಕೋಲೇಟ್‌ ಡ್ರಿಂಕ್‌ನ ರುಚಿಗೆ ಫಿದಾ ಆಗುತ್ತೀರಿ. ತಡವೇಕೆ, ಟ್ರೈ ಮಾಡಿ ನೋಡಿ!

ಇದನ್ನೂ ಓದಿ: Drugs Mafia : ಮಕ್ಕಳು ಚಾಕೊಲೇಟ್‌ ತಿನ್ನುತ್ತಿದ್ದರೆ ಹುಷಾರಾಗಿರಿ; ಅಂಗಡಿಗಳಲ್ಲಿ ಸಿಗ್ತಿದೆ ಭಾಂಗ್‌ ಚಾಕೊಲೇಟ್‌!

Continue Reading

ಆರೋಗ್ಯ

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

ಕೃತಕ ಬಣ್ಣ, ರುಚಿ, ಪರಿಮಳ, ಹೆಚ್ಚು ಕಾಲ ಉಳಿಯುವ ಪ್ರಿಸರ್ವೇಟಿವ್‌ಗಳು ಸೇರಿದಂತೆ ಆಹಾರಕ್ಕೆ ಹಲವು ಕಾರಣಗಳಿಗಾಗಿ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇವು ನಮ್ಮ ದೇಹಕ್ಕೆ ಅತ್ಯಂತ (Harmful chemicals) ಮಾರಕವಾಗಿವೆ.

VISTARANEWS.COM


on

healthy food
Koo

ದೇಹದಲ್ಲಾಗುವ ಯಾವುದೇ ರಾಸಾಯನಿಕ ಪ್ರಕ್ರಿಯೆಗೂ ನಾವು ಸೇವಿಸುವ ಆಹಾರ, ಗಾಳಿ, ನೀರಿನ ಅವಶ್ಯಕತೆ ಇದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ (Health Tips) ನಾವು ಉತ್ತಮ ಆಹಾರ (Healthy Food) ಸೇವಿಸಲೇಬೇಕು ಎಂಬ ಸತ್ಯ ನಮಗೆ ತಿಳಿದಿದೆ. ನೈಸರ್ಗಿಕವಾಗಿ ಸಿಗುವ ಆಹಾರಗಳನ್ನು ಸೇವಿಸುವುದಷ್ಟೇ ಅಲ್ಲ, ಈಗ ನಾವು ಸಂಸ್ಕರಿಸಿದ ಆಹಾರಗಳನ್ನೂ ಸಾಕಷ್ಟು ಹೊಟ್ಟೆಗಿಳಿಸುತ್ತಿದ್ದೇವೆ. ಪ್ಯಾಕೆಟ್ಟುಗಳಲ್ಲಿ ಸುಲಭವಾಗಿ ದೊರೆಯುವ ಆಹಾರ, ಅರ್ಧ ತಯಾರಿಸಲ್ಪಟ್ಟ ರೆಡಿ ಟು ಈಟ್‌ಗಳು ಸೇರಿದಂತೆ ನಾನಾ ಬಗೆಯಲ್ಲಿ ನಮ್ಮ ದೇಹಕ್ಕೆ ಸಂಸ್ಕರಿಸಿದ ಆಹಾರ (processed food) ಸೇರುತ್ತದೆ. ಆಹಾರವನ್ನು ಮಾರುಕಟ್ಟೆಯಲ್ಲಿ ಖರೀದಿಸುವಾಗ ಅದರೊಳಗೆ ಯಾವೆಲ್ಲ ವಸ್ತುಗಳನ್ನು ಬಳಸಿದ್ದಾರೆ, ಯಾವೆಲ್ಲ ವಸ್ತುಗಳನ್ನು ಹಾಕಿ ಆ ವಸ್ತು ತಯಾರಿಸಲಾಗಿದೆ ಅಥವಾ ಅದರಲ್ಲಿರುವ ಪೋಷಕಾಂಶಗಳ ಪ್ರವಾಣಗಳೆಷ್ಟು ಎಂಬ ಯಾವ ವಿಚಾರವನ್ನೂ ನಾವು ಹೆಚ್ಚು ತಲೆ ಕೆಡಿಸಿಕೊಳ್ಳದೆ, ಎಲ್ಲರೂ ಖರೀದಿಸುತ್ತೇವೆ. ಮಕ್ಕಳಿಗೂ ಪ್ಯಾಕೆಟ್ಟುಗಳನ್ನು ಖರೀದಿಸಿ ಕೊಡುತ್ತೇವೆ. ಸುಲಭವಾಗಿ ದೊರೆಯುವಾಗ, ಕಷ್ಟಪಟ್ಟು ಮಾಡುವ ಅಭ್ಯಾಸ ಬಹುತೇಕ ಮರೆತೇ ಹೋಗಿದೆ. ಅಥವಾ ಒಂದಿಷ್ಟನ್ನು ಮನೆಯಲ್ಲೇ ಮಾಡಿ, ಕೆಲವಕ್ಕೆ ಮಾರುಕಟ್ಟೆಯ ರೆಡಿಮೇಡ್‌ ಆಹಾರಗಳನ್ನೇ (ready to eat) ಅವಲಂಬಿಸುವುದು ನಮಗೆ ಅಭ್ಯಾಸವೇ ಆಗಿಬಿಟ್ಟಿದೆ.ಆದರೆ ನಿಜವಾಗಿ ನೋಡಿದರೆ, ನಮಗೆ ನಾವು ಏನು ತಿನ್ನುತ್ತಿದ್ದೇವೆ ಎಂಬ ಅರಿವೇ ಇಲ್ಲ!

ಹೌದು, ಅಧ್ಯಯನಗಳ ಪ್ರಕಾರ, ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಆಹಾರಗಳಿಗೆ ಸುಮಾರು 3000ಕ್ಕೂ ಹೆಚ್ಚು ಬಗೆಯ ವಿವಿಧ ರಾಸಾಯನಿಕಗಳನ್ನು ಸೇರಿಸುತ್ತಾರಂತೆ. ಕೃತಕ ಬಣ್ಣ, ರುಚಿ, ಪರಿಮಳ, ಹೆಚ್ಚು ಕಾಲ ಇಳಿಯುವ ಪ್ರಿಸರ್ವೇಟಿವ್‌ಗಳು ಸೇರಿದಂತೆ ಆಹಾರಕ್ಕೆ ಹಲವು ಕಾರಣಗಳಿಗಾಗಿ ಇಂತಹ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಅವೆಲ್ಲವೂ ಆಹಾರದೊಳಗೆ ಸೇರಿಕೊಂಡರೆ ನಮಗೆ ನಾವು ತಿನ್ನುವ ಆಹಾರದಲ್ಲಿ ಏನಿದೆ ಎಂದೇ ತಿಳಿದೇ ಇರುವುದಿಲ್ಲ. ಬಹುತೇಕ ಇಂತಹ ರಾಸಾಯನಿಕಗಳನ್ನು ಕಾರ್ಸಿನೋಜೆನ್‌ಗಳೆಂದು ಕರೆಯಲಾಗುತ್ತಿದ್ದು, ಇವು ನಮ್ಮ ದೇಹಕ್ಕೆ ಅತ್ಯಂತ (Harmful chemicals) ಮಾರಕವಾಗಿವೆ. ಹಾಗಾದರೆ ಬನ್ನಿ, ನೀವು ಖರೀದಿಸುವ ಆಹಾರ ತಯಾರಿಕೆಗೆ ಇವನ್ನು ಬಳಸಿದ್ದರೆ, ಅವನ್ನು ಬಳಸಬೇಡಿ. ಅವು ಯಾವುವು ಎಂಬುದನ್ನು ನೋಡೋಣ.

1. ಹೈ ಫ್ರಕ್ಟೋಸ್‌ ಕಾರ್ನ್‌ ಸಿರಪ್‌ (ಎಚ್‌ಎಫ್‌ಸಿಎಸ್):‌ ಈ ರಾಸಾಯನಿಕ ನಮ್ಮ ದೇಹಕ್ಕೆ ಸೇರಿದರೆ ಇದು ದೇಹದಲ್ಲಿರುವ ಲಿಪೋಪ್ರೊಟೀನ್‌ನನ್ನು ಹೆಚ್ಚು ಮಾಡುವ ಮೂಲಕ ಬಹುಬೇಗನೆ ಮಧುಮೇಹದಂಥ ಖಾಯಿಲೆ ತರಿಸುತ್ತದೆ.

2. ಕೃತಕ ಸಿಹಿಗಳು: ಅಸ್ಪಾಟೇಮ್‌ ಎಂಬ ಕೃತಕ ಸಿಹಿಯನ್ನು ಇಂದು ಬಹುತೇಕ ಆಹಾರಗಳಿಗೆ ಹಾಕಲಾಗುತ್ತದೆ. ಇದು ನಮ್ಮ ದೇಹ ಸೇರುವುದರಿಂದ ತಲೆನೋವು, ತಲೆಸುತ್ತು, ವರ್ಟಿಗೋ, ತೊದಲು ಮಾತು, ಸ್ಮರಣ ಶಕ್ತಿ ಕಡಿಮೆಯಾಗುವುದು, ಕಿವಿ ಗುಂಯ್‌ಗುಡುವುದು, ರುಚಿಗ್ರಹಣ ಶಕ್ತಿ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳು ಮುಂದೆ ಕಾಡಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಡ್ರಿಂಕ್‌ಗಳಲ್ಲಿ ಇದನ್ನು ಸಕ್ಕರೆಯ ಬದಲಾಗಿ ಬಳಸಿರುತ್ತಾರೆ.

3. ಮೋನೋಸೋಡಿಯಂ ಗ್ಲುಟಮೇಟ್‌: ಇದು ರುಚಿಯನ್ನು ಹೆಚ್ಚಿಸುವ ರಸಾಯನಿಕ. ಇದರಿಂದ ಆಹಾರದ ರುಚಿ ಹೆಚ್ಚಾಗುತ್ತದೆಯಾದರೂ, ಅಂಗಾಂಶಗಳಿಗೆ ಹಾನಿ ಮಾಡುತ್ತದೆ.

4. ಟ್ರಾನ್ಸ್‌ಫ್ಯಾಟ್‌: ಹೊರಗಿನ ತಿಂಡಿಗಳಲ್ಲಿ ಟ್ರಾನ್ಸ್‌ಫ್ಯಾಟ್‌ ಅಧಿಕವಾಗಿರುವುದನ್ನು ನೀವು ಪ್ಯಾಕಟ್ಟುಗಳ ಹಿಂಬದಿಯಲ್ಲಿ ಬರೆದಿರುವುದನ್ನು ಓದಿರಬಹುದು. ಇದರಿಂದ ಎಲ್‌ಡಿಎಲ್‌ ಕೊಲೆಸ್ಟೆರಾಲ್‌ನಲ್ಲಿ ಏರಿಕೆಯಾಗುತ್ತದೆ.

5. ಕೃತಕ ಬಣ್ಣಗಳು: ಕೃತಕ ಬಣ್ಣಗಳಿಂದ ತಯಾರಿಸಿದ ಆಹಾರಗಳ ಅತಿಯಾದ ಸೇವನೆಯಿಂದ ಮಕ್ಕಳ ನಡವಳಿಕೆಯ ಸಂಬಂಧಿ ಸಮಸ್ಯೆಗಳೂ ಬರಬಹುದು. ಮಾನಸಿಕ ಸಮಸ್ಯೆಗಳೂ ಮಕ್ಕಳಿಗೆ ಬರುವ ಸಾಧ್ಯತೆಗಳಿವೆ.

super foods to cure irregular periods

6. ಸಲ್ಫರ್‌ ಡೈ ಆಕ್ಸೈಡ್‌: ಈಗಾಗಲೇ ಯುಎಸ್‌ನಲ್ಲಿ ಬಹಿಷ್ಕಾರ ಹಾಕಲಾಗಿರುವ ಇದನ್ನು ಹಣ್ಣು ತರಕಾರಿಗಳನ್ನು ತಾಜಾ ಆಗಿ ಇರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದ ಶ್ವಾಸಕೋಶದ ತೊಂದರೆಗಳು, ಅಧಿಕ ರಕ್ತದೊತ್ತಡದಂತ ಸಮಸ್ಯೆಗಳೂ ಬರಬಹುದು.

7. ಪೊಟಾಶಿಯಂ ಬ್ರೋಮೇಟ್‌: ಕೆಲವು ಬಗೆಯ ಬ್ರೆಡ್‌ಗಳಲ್ಲಿ ಇದನ್ನು ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ಖಾಯಿಲೆಗಳೂ ಬರಬಹುದು.

ಹೊರಗಿನ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಈಗಿನ ಕಾಲಘಟ್ಟದಲ್ಲಿ ಸಾಧ್ಯವಿಲ್ಲ ನಿಜ. ಆದರೆ, ಆದಷ್ಟೂ ಇಂತಹ ವಸ್ತುಗಳು ನೀವು ತಿನ್ನುವ ಆಹಾರದಲ್ಲಿದೆಯೇ ಎಂದು ಗಮನಿಸಬಹುದು. ಪ್ರಕೃತಿಯಲ್ಲೇ ದೊರೆವ ಅವಸ್ತುಳನ್ನು ಬಳಸಿಕೊಂಡು ಮನೆಯಲ್ಲೇ ತಾಜಾ ಆಗಿ ತಯಾರಿಸಿ ತಿನ್ನುವುದೇ ಹೆಚ್ಚು ಒಳ್ಳೆಯದು. ಆರೋಗ್ಯಕರ ಕೂಡಾ.

ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಇವುಗಳಲ್ಲಿ ಯಾವುದು ಒಳ್ಳೆಯದು?

Continue Reading

ಆರೋಗ್ಯ

Winter Food: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ಮಾತ್ರ ಎಂದಿಗೂ ಮರೆಯಬಾರದು!

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ (Health tips, Health guide) ನಾವು ತಿನ್ನಲೇಬೇಕಾದ ಕೆಲವು ಆಹಾರಗಳನ್ನು ನೋಡೋಣ.

VISTARANEWS.COM


on

winter food
Koo

ಚಳಿಗಾಲ ಬರುತ್ತಿದ್ದಂತೆ ಪರ್ವತ ಪ್ರದೇಶಗಳ, ಎತ್ತರದ ಜಾಗಗಳಲ್ಲಿ ವಾಸಿಸುವ, ಅಥವಾ ಹಿಮಸುರಿಯುವ ಚಳಿಯೂರುಗಳ ಮಂದಿಯ ಆಹಾರ ಪದ್ಧತಿಯನ್ನು (winter food) ಗಮನಿಸಬೇಕು. ಅವರೆಲ್ಲ, ಚಳಿಗಾಲ ಬರುತ್ತಿದ್ದಂತೆ ಚಳಿಗಾಲಕ್ಕೆ ಬೇಕಾದ ಬಟ್ಟೆಬರೆ, ಆಹಾರಗಳನ್ನು ಜೋಡಿಸಲು ಆರಂಭಿಸುತ್ತಾರೆ. ಆವರೆಗೆ ತಿನ್ನುತ್ತಿದ್ದ ಆಹಾರವನ್ನೆಲ್ಲ ನಿಧಾನವಾಗಿ ಕಡಿಮೆಗೊಳಿಸಿ, ಬಹುತೇಕ ಬೇರೆಯದೇ ಅನ್ನುವಂಥ ಆಹಾರ ತಿನ್ನಲು ಆರಂಭಿಸುತ್ತಾರೆ. ದೇಹವನ್ನು ತಂಪಾಗಿಸುವ ಆಹಾರಗಳಿಗೆ ಗುಡ್‌ಬೈ ಹೇಳಿ, ದೇಹ ಬೆಚ್ಚಗಾಗಿರಿಸುವ ಶಕ್ತಿಭರಿತ ಆಹಾರಗಳನ್ನು ನಿತ್ಯಾಹಾರದಲ್ಲಿ ಸೇರಿಸುತ್ತಾರೆ. ಆಯಾ ಸಮಯಕ್ಕೆ ದೊರೆಯುವ ತರಕಾರಿಗಳು, ಹಣ್ಣುಗಳು ಇದ್ದೇ ಇವೆಯಾದರೂ, ಒಂದಿಷ್ಟು ಬಗೆಯ ಬೀಜಗಳು, ಕಾಳುಗಳು, ಧಾನ್ಯಗಳು ಹೀಗೆ ನಾನಾ ಬಗೆಯ ಆಹಾರಗಳು ಚಳಿಗಾಲದಲ್ಲಿ ಮುಖ್ಯವಾಗಿ ಎಲ್ಲರೂ ತಿನ್ನುತ್ತಾರೆ. ಹಾಗಾದರೆ ಬನ್ನಿ, ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ (Health tips, Health guide) ನಾವು ತಿನ್ನಲೇಬೇಕಾದ ಕೆಲವು ಆಹಾರಗಳನ್ನು ನೋಡೋಣ.

1. ಹುರಿಗಡಲೆ: ಚಳಿಗಾಲದ ಆಹಾರಗಳಲ್ಲಿ ಹುರಿಡಲೆಯ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನುವ ಸಂಪ್ರದಾಯ ಉತ್ತರ ಭಾರತ ಸೇರಿದಂತೆ ಹಲವು ಚಳಿಯೂರುಗಳಲ್ಲಿದೆ. ಇವು ಪ್ರೊಟೀನ್‌ ಹಾಗೂ ಕಾರ್ಬೋಹೈಡ್ರೇಟ್‌ನಿಂದ ಸಮೃದ್ಧವಾಗಿರುವ ಕಾಂಬಿನೇಶನ್.‌ ಇದರಲ್ಲಿರುವ ಝಿಂಕ್‌ ಚರ್ಮದ ಕಾಂತಿಯನ್ನು ಹೆಚ್ಚಿಸಿದರೆ, ಪೊಟಾಶಿಯಂ ಹಾಗೂ ಇತರ ಖನಿಜಾಂಶಗಳು ಮಾಂಸಖಂಡಗಳ ಬಲವರ್ಧನೆಗೆ ಸಹಾಯ ಮಾಡುತ್ತವೆ. ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಮಲಬದ್ಧತೆಯಂತ ಸಮಸ್ಯೆಗಳಿದ್ದರೆ ಅದಕ್ಕೆ ಮುಕ್ತಿ ನೀಡುವ ಸಾಮರ್ಥ್ಯವೂ ಇದರಲಲ್ಲಿದೆ. ವಿಶೇಷವೆಂದರೆ, ಇದನ್ನು ತಿನ್ನುವುದರಿಂದ ತೂಕ ಏರುವ ಭಯವಿಲ್ಲ. ಇದು ಒಳ್ಳೆಯ ವರ್ಕೌಟ್‌ ಸ್ನ್ಯಾಕ್‌ ಕೂಡಾ ಹೌದು. ಮುಖ್ಯವಾಗಿ ಮಹಿಳೆಯರಿಗೆ ಋತುಚಕ್ರದ ದಿನಗಳಲ್ಲಿ ಇದರಿಂದ ಸುಸ್ತು ಕಡಿಮೆಯಾಗಿ ಶಕ್ತಿ ದೊರೆಯುತ್ತದೆ. ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ.

2. ನೆಲಗಡಲೆ: ಚಳಿಗಾಲದ ಸಮಯಕ್ಕೆ ಕರೆಕ್ಟಾಗಿ ಮಾರುಕಟ್ಟೆಗೆ ಹಾಜರಾಗುವ ನೆಲಗಡಲೆ ಚಳಿಗಾಲದ ಬೆಸ್ಟ್‌ ಆಹಾರ ಕೂಡಾ. ಪ್ರೊಟೀನಿನಿಂದ ಸಮೃದ್ಧವಾಗಿರುವ ಇದರ ಸೇವನೆಯಿಂದ ಚಳಿಗಾಲದಲ್ಲಿ ಶಕ್ತಿ ಸಾಮರ್ಥ್ಯ ಹೆಚ್ಚುವುದಷ್ಟೇ ಅಲ್ಲ, ರೋಗ ನಿರೋಧಕತೆ ಹೆಚ್ಚಿ, ದೇಹವೂ ಬೆಚ್ಚಗಿರುತ್ತದೆ.

groundnut

3. ತುಪ್ಪ: ಹೌದು.ಆಶ್ಚರ್ಯವೆನಿಸಿದರೂ ಸತ್ಯ. ತುಪ್ಪದ ಬಳಕೆ ಹಿತಮಿತವಾಗಿದ್ದರೆ ಒಳ್ಳೆಯದು. ಚಳಿಗಾಲದಲ್ಲಿ ತುಪ್ಪ ತಿನ್ನುವುದು ಅತ್ಯಂತ ಅಗತ್ಯ. ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬ ಭ್ರಮೆಯಲ್ಲಿ ತುಪ್ಪವನ್ನು ಸೇವಿಸದೇ ಇರುವವರು ಅನೇಕರು. ಆದರೆ ತುಪ್ಪ, ಚೆನ್ನಾಗಿ ಜೀರ್ಣಕ್ರಿಯೆ ಆಗುವಂತೆ ನೋಡಿಕೊಂಡು, ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಿತ್ಯ ಉಣ್ಣುವ ದಾಲ್‌, ರಸಂ, ಪರಾಠಾ, ಚಪಾತಿಯ ಮೇಲೆ ತುಪ್ಪ ಹಾಕಿಕೊಂಡು ಚಳಿಗಾಲದಲ್ಲಿ ತಿಂದರೆ ಒಳ್ಳೆಯದು. ದೇಹಕ್ಕೆ ಚಳಿಗಾಲದಲ್ಲಿ ಕೊಬ್ಬು ಬೇಕೇ ಬೇಕು. ಇನ್ನು ತುಪ್ಪದಲ್ಲಿರುವ ಒಳ್ಳೆಯ ಕೊಬ್ಬು ಬೇಡವೆಂದರೆ ಹೇಗೆ? ಆದರೆ, ಹಿತಮಿತ ಪ್ರಮಾಣದ ಬಗ್ಗೆ ಅರಿವಿರಲಿ.

4. ಬೆಲ್ಲ: ಬೆಲ್ಲವನ್ನು ಎಲ್ಲ ಕಾಲದಲ್ಲಿ ಬಳಸುತ್ತೇವಾದರೂ, ಬೆಲ್ಲದ ನಿಜವಾದ ಲಾಭ ತಿಳಿಯುವುದು ಚಳಿಗಾಲದಲ್ಲಿಯೇ. ಕಬ್ಬಿಣಾಂಶ ಹೇರಳವಾಗಿರುವ ಬೆಲ್ಲದಲ್ಲಿ ಸಾಕಷ್ಟು ಇತರ ಖನಿಜಾಂಶಗಳೂ ಇವೆ. ಚಳಿಗಾಲದಲ್ಲಿ ದೇಹವನ್ನು ಇವು ಬೆಚ್ಚಗಿಡುವುದಲ್ಲದೆ ಆರೋಗ್ಯವಾಗಿಡುವಲ್ಲಿ ಸಹಾಯ ಮಾಡುತ್ತದೆ. ನೆಲಗಡಲೆ, ಹುರಿಗಡಲೆಯ ಜೊತೆಗೆ ಬೆಲ್ಲ ಸೇರಿಸಿಯೂ ತಿನ್ನಬಹುದು.

jaggery

ಇದನ್ನೂ ಓದಿ: Heart Health In Winter: ಚಳಿಗಾಲದಲ್ಲಿ ಹೃದಯಾಘಾತದಿಂದ ಪಾರಾಗುವುದು ಹೇಗೆ?

5. ಸಾಸಿವೆ ಎಣ್ಣೆ: ಉತ್ತರ ಭಾರತದಲ್ಲಿ ಅಡುಗೆ ಎಣ್ಣೆಯಾಗಿ ಬಳಸುವ ಸಾಸಿವೆ ಎಣ್ಣೆಯ ಬಳಕೆ ದಕ್ಷಿಣ ಭಾರತದಲ್ಲಿ ಕಡಿಮೆ. ಆದರೆ, ಇದು ದೇಹವನ್ನು ಬೆಚ್ಚಗಿಡುವ ಇನ್ನೊಂದು ಆಹಾರ. ಇದಕ್ಕೆ ದೇಹದಲ್ಲಿ ಬಿಸಿಯನ್ನು ಉತ್ಪತ್ತಿ ಮಾಡುವ ಗುಣವಿದೆ.  ಅತಿಯಾಗಿ ಚಳಿಯಿದ್ದಾಗ ಪಾದದ ಅಡಿಭಾಗಕ್ಕೆ ಸಾಸಿವೆ ಎಣ್ಣೆಯಿಂದ ಮಸಾಜ್‌ ಮಾಡಿ ಮಲಗುವುದರಿಂದ ದೇಹ ಬೆಚ್ಚಗಿರುತ್ತದೆ. ಜೊತೆಗೆ, ಶೀತ, ನೆಗಡಿಯಂಥ ತೊಂದರೆಗಳೂ ಬರುವುದಿಲ್ಲ.

sesame-seeds

6. ಎಳ್ಳು: ಎಳ್ಳಿನಲ್ಲಿ ಅತ್ಯಧಿಕ ಪೋಷಕಾಂಶಗಳಿದ್ದು, ಚಳಿಗಾಲಕ್ಕೆ ಅಗತ್ಯವಾಗಿ ತಿನ್ನಬೇಕಾದ ಆಹಾರಗಳಲ್ಲಿ ಇದೂ ಒಂದು. ಇದು ದೇಹವನ್ನು ಬೆಚ್ಚಗಾಗಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಎಳ್ಳಿನ ಚಿಕ್ಕಿ, ಉಂಡೆಗಳ ರೂಪದಲ್ಲಿ ಇದನ್ನು ಚಳಿಗಾಲದಲ್ಲಿ ತಿನ್ನುವುದು ಬಹಳ ಒಳ್ಳೆಯದು.

7. ಶುಂಠಿ: ಶೀತ, ನೆಗಡಿ, ಕೆಮ್ಮು ಮತ್ತಿತರ ತೊಂದರೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿರುವ ಆಹಾರ ಶುಂಠಿ ಚಳಿಗಾಲಕ್ಕೆ ಅದ್ಭುತ ಸಾಥ್‌ ನೀಡುತ್ತದೆ. ಇದರಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವ ಗುಣವಿದ್ದು, ದೇಹವನ್ನು ಬೆಚ್ಚಗಿಡುವಲ್ಲಿ ತನ್ನ ಕಾಣಿಕೆ ನೀಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ.

ಇದನ್ನೂ ಓದಿ: Winter foods | ಚಳಿಗಾಲದಲ್ಲಿ ಮೆದುಳನ್ನು ಆರೋಗ್ಯವಾಗಿಡಿ, ಇವನ್ನು ಸೇವಿಸೋಕೆ ಮರೆಯದಿರಿ!

Continue Reading
Advertisement
Elephant Arjuna
ಕರ್ನಾಟಕ43 mins ago

Elephant Arjuna: ಮೈಸೂರು, ಹಾಸನದಲ್ಲಿ ಅರ್ಜುನ ಆನೆಯ ಸ್ಮಾರಕ ನಿರ್ಮಾಣ: ಈಶ್ವರ ಖಂಡ್ರೆ

Kabaddi news
ಕ್ರೀಡೆ1 hour ago

Pro Kabaddi : ಮುಂಬಾ ವಿರುದ್ಧ ಜಯಂಟ್ಸ್​​ಗೆ 39-37 ಅಂಕಗಳ ಜಯ

Belagavi Winter Session
ಕರ್ನಾಟಕ1 hour ago

Belagavi Winter Session: ವೇತನ ಆಯೋಗದ ವರದಿ ಬಗ್ಗೆ ಅತೃಪ್ತಿ; ಸಭಾತ್ಯಾಗ ಮಾಡಿದ ಕಮಲ, ದಳ ಸದಸ್ಯರು

our former mlas they did not get even 50 votes in Madhya Pradesh Says Congress
ದೇಶ1 hour ago

ಮಾಜಿ ಎಮ್ಮೆಲ್ಲೆಗಳಿಗೆ ಅವರ ಊರಲ್ಲೇ 50 ವೋಟು ಬಿದ್ದಿಲ್ಲ! ಕಾಂಗ್ರೆಸ್ ನಾಯಕ

Team India1
ಟಾಪ್ 10 ನ್ಯೂಸ್2 hours ago

VISTARA TOP 10 NEWS : ಸಿದ್ದು ಮುಸ್ಲಿಂ ಓಲೈಕೆ ಜಟಾಪಟಿ, ʼಅರ್ಜುನʼನಿಗೆ ಕಂಬನಿಯ ವಿದಾಯ ಇತ್ಯಾದಿ ಪ್ರಮುಖ ಸುದ್ದಿಗಳು

Vistara News Best Teacher Award -2023 programme inauguration by Yadgiri DC Sushila B. at Yadgiri
ಕರ್ನಾಟಕ2 hours ago

ಯಾದಗಿರಿಯಲ್ಲಿ ‘ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್’ ಕಾರ್ಯಕ್ರಮಕ್ಕೆ ಚಾಲನೆ

BJP knew the result two days earlier vote count Says Congress
ದೇಶ3 hours ago

ಬಿಜೆಪಿಗೆ ರಿಸಲ್ಟ್ ಎರಡು ದಿನ ಮೊದ್ಲೇ ಗೊತ್ತಿತ್ತು! ಕಾಂಗ್ರೆಸ್ ಹೊಸ ವರಾತ್

HD Kumaraswamy
ಕರ್ನಾಟಕ3 hours ago

HD Kumaraswamy: ವೈಯಕ್ತಿಕವಾಗಿ ಕೆಣಕಿದರೆ ನಾನು ಸುಮ್ಮನಿರಲ್ಲ ಎಂದ ಎಚ್‌ಡಿಕೆ

Rahul Dravid
ಕ್ರಿಕೆಟ್3 hours ago

Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

Minister Ramalinga Reddy statement
ಕರ್ನಾಟಕ3 hours ago

5 ಕೋಟಿ ವೆಚ್ಚದಲ್ಲಿ‌ ಇಟಗಿ-ಸಾಸಲವಾಡ ಏತ ನೀರಾವರಿ ಯೋಜನೆ ಪೂರ್ಣ: ಸಚಿವ ರಾಮಲಿಂಗಾ ರೆಡ್ಡಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

CM Siddaramaiah and Black magic
ಕರ್ನಾಟಕ3 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ4 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ4 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ19 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

ಟ್ರೆಂಡಿಂಗ್‌