Site icon Vistara News

Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

Mallikarjun Kharge falls ill on stage while delivering his speech

ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ್‌ ಖರ್ಗೆ (Mallikarjun Kharge) ವೇದಿಕೆ ಮೇಲೆಯೇ ತೀವ್ರ ಅಸ್ವಸ್ಥಗೊಂಡಿದ್ದಾರೆ. ಜಮ್ಮು ಕಾಶ್ಮೀರದ ಕಥುವಾನಲ್ಲಿ ಚುನಾವಣೆ ಪ್ರಚಾರದ ಭಾಗವಾಗಿ ಭಾಷಣ ಮಾಡುತ್ತಿದ್ದ ವೇಳೆ 83 ವರ್ಷದ ಮಲ್ಲಿಕಾರ್ಜುನ್‌ ಖರ್ಗೆ ಅಸ್ವಸ್ಥಗೊಂಡಿದ್ದರು. ಭಾಷಣ ಮಾಡಲಾಗದೆ ಕುಸಿಯುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್‌ ನಾಯಕರು ಖರ್ಗೆ ನೆರವಿಗೆ ಧಾವಿಸಿದ್ರು. ನೀರು ಕುಡಿದು ಸುಧಾರಿಸಿಕೊಂಡ ಮಲ್ಲಿಕಾರ್ಜುನ್‌ ಖರ್ಗೆ ತಮ್ಮ ಭಾಷಣವನ್ನು ಮುಂದುವರಿಸಿದರು. ವಿಶ್ರಾಂತಿ ಇಲ್ಲದೇ ನಿರಂತರವಾಗಿ ಪಕ್ಷದ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಆಯಾಸಗೊಂಡಿದ್ದರು ಎನ್ನಲಾಗಿದೆ. ಚುನಾವಣೆ ನಿಮಿತ್ತ ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಹೀಗಾಗಿ ಅಸ್ವಸ್ಥಗೊಂಡಿದ್ದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಕೊನೆಯ ಹಂತದ ಚುನಾವಣೆಯ ಕಸರತ್ತು ನಡೆದಿದೆ. ಅಕ್ಟೋಬರ್‌ 1ರಂದು ಮೂರನೇ ಹಂತದ ಮತದಾನವು ನಡೆಯಲಿದೆ. ಈ ಕೊನೆ ಹಂತದ ಚುನಾವಣೆಯಲ್ಲಿ 40 ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ಇದ್ದು, ಮೂರನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿದೆ. ನಾಳೆಯಿಂದ ಪಕ್ಷಗಳು ಮನೆ ಮನೆ ಪ್ರಚಾರ ನಡೆಸಲಿವೆ. ಮೊದಲೆರಡು ಹಂತದ ಚುನವಾಣೆಗಳು ಶಾಂತಿಯುತವಾಗಿ ನಡೆದಿದೆ. ಹೀಗಾಗಿ ಕೊನೆಯ ಹಂತದ ಚುನಾವಣೆ ಕೂಡ ಶಾಂತಿಯುತವಾಗಿ ನಡೆಸಲು ಪೊಲೀಸರು, ಚುನಾವಣಾ ಆಯೋಗದಿಂದ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Exit mobile version