ಕರ್ನಾಟಕ
DK Shivakumar : ಬೂತ್ ಮಟ್ಟದ ಮತ ಗಳಿಕೆ ಮೇಲೆ ಕಾರ್ಯಕರ್ತರಿಗೆ ಸಮಿತಿಗಳಲ್ಲಿ ಅಧಿಕಾರ: ಡಿ.ಕೆ. ಶಿವಕುಮಾರ್
DK Shivakumar : ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರನ್ನು ನೇಮಕ ಮಾಡುತ್ತೇವೆ. ರಾಜ್ಯ ಮಟ್ಟದ ಪದಾಧಿಕಾರಿಗಳಿಗೂ ಸಮಿತಿಗೆ ಹೆಸರು ಶಿಫಾರಸು ಮಾಡಲು ಅವಕಾಶ ಇದೆ. ಇಂಧನ ಇಲಾಖೆಯಲ್ಲಿ ಕಾರ್ಯಕರ್ತರನ್ನು ಸಮಿತಿಗಳಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು: ನಾಯಕರಿಗೆ ಅಧಿಕಾರದ ಜತೆಗೆ ಕಾರ್ಯಕರ್ತರಿಗೂ ಅಧಿಕಾರ ನೀಡುವ ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ಕೆಲವು ಮಾನದಂಡಗಳನ್ನು ಇಟ್ಟುಕೊಂಡಿದ್ದೇವೆ. ನಿಗಮ ಮಂಡಳಿಗಳಿಗೆ ಅರ್ಜಿ ಹಾಕಿದ ನಾಯಕರು ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly elections) ಬೂತ್ ಮಟ್ಟದಲ್ಲಿ (Booth Level) ಎಷ್ಟು ಮತ ಪಡೆದಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ. ಅದರ ಆಧಾರದ ಮೇಲೆ ಕಾರ್ಯಕರ್ತರಿಗೆ ಸಮಿತಿಗಳಲ್ಲಿ ಅಧಿಕಾರವನ್ನು ನೀಡುತ್ತೇವೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.
ಕೆಪಿಸಿಸಿ ನೂತನ ಕಟ್ಟಡದಲ್ಲಿ ಸೋಮವಾರ (ಆಗಸ್ಟ್ 14) ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರನ್ನು ನೇಮಕ ಮಾಡುತ್ತೇವೆ. ರಾಜ್ಯ ಮಟ್ಟದ ಪದಾಧಿಕಾರಿಗಳಿಗೂ ಸಮಿತಿಗೆ ಹೆಸರು ಶಿಫಾರಸು ಮಾಡಲು ಅವಕಾಶ ಇದೆ. ಇಂಧನ ಇಲಾಖೆಯಲ್ಲಿ ಕಾರ್ಯಕರ್ತರನ್ನು ಸಮಿತಿಗಳಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ. ಈ ಬಗ್ಗೆ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರಿಗೂ ಮನವಿ ಮಾಡಿದ್ದೇವೆ. ಇನ್ನು ಸಹಕಾರ ಇಲಾಖೆಯಲ್ಲಿ ಸಹ ಸಮಿತಿಗೆ ನೇಮಕ ಮಾಡಲು ಅವಕಾಶ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಾವು ಅಧಿಕಾರಕ್ಕೆ ತಂದಿದ್ದೇವೆ. ಆದರೆ, 30-40 ಜನರಿಗೆ ಮಾತ್ರ ಅಧಿಕಾರವೇ ಎಂಬ ಬೇಸರ ಪಕ್ಷದ ಪ್ರಮುಖ ಕಾರ್ಯಕರ್ತರಲ್ಲಿ ಇದೆ. ಬಹಳ ಜನ ಅರ್ಜಿ ಹಾಕಿದ್ದೀರಿ. ಎಲ್ಲರಿಗೂ ಸಹಾಯ ಮಾಡಲು ಆಗಲಿಲ್ಲ. ಎಲ್ಲವನ್ನೂ ಸರಿಯಾಗಿ ಮಾಡಿದ್ದೇವೆ ಅಂತ ನಾನು ಹೇಳೋದಿಲ್ಲ. ಕೆಲವೊಂದು ತಪ್ಪುಗಳನ್ನು ಸಹ ಮಾಡಿದ್ದೇವೆ. ಆದರೆ, ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಅನ್ನೋದನ್ನು ಬಿಡಬೇಕು. ಮುಂದೆ ಇನ್ನಷ್ಟು ಹೋರಾಟ ಮಾಡಬೇಕು. ಕಳೆದ ಚುನಾವಣೆ ವೇಳೆ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸುವ ಪಣ ತೊಟ್ಟಿದ್ದೆವು. ಈಗಲೂ ಅದನ್ನು ಮತ್ತೆ ಮಾಡಬೇಕಿದೆ. ಜನರನ್ನು ನಮ್ಮ ಜತೆ ಸೇರಿಸಿಕೊಳ್ಳಬೇಕು. ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕಿದೆ. ನಾವೆಲ್ಲ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಯೋಗಕ್ಕಿಂತ ಯೋಗಕ್ಷೇಮ ಮುಖ್ಯ: ಡಿಕೆಶಿ
ಎಲ್ಲಿರಿಗೂ ಯೋಗ ಬರುತ್ತದೆ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಬಂದಿರುವ ಯೋಗವನ್ನ ಯಾವ ರೀತಿ ಉಪಯೋಗಿಸಿಕೊಳ್ಳಬೇಕೆಂಬುದು ಮುಖ್ಯ. ಜನರ ವಿಶ್ವಾಸ ಗಮನಿಸಿಕೊಂಡು ಅದನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ತಿಳಿದು ನಾನು ಮತ್ತು ಸಿಎಂ ಸಿದ್ದರಾಮಯ್ಯ ಅವರು ಕೆಲಸ ಮಾಡುತ್ತಾ ಬಂದಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೊಂದೇ ಗುರಿಯಾಗಿತ್ತು
224 ಸೀಟ್‌ಗೆ 218 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಒಮ್ಮತದಿಂದ ಮಾಡಿದ್ದೇವೆ. ಇದು ದೇಶಕ್ಕೆ ಮಾದರಿಯಾಗಿದೆ. ಎಲ್ಲೆಡೆ ಕರ್ನಾಟಕ ಮಾದರಿ ಮಾಡಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ. ನಮಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೊಂದೇ ಗುರಿಯಾಗಿತ್ತು. ನಿಮಗೂ ನಿದ್ರೆ ಮಾಡಲು ಬಿಡುವುದಿಲ್ಲ. ನಾನೂ ನಿದ್ದೆ ಮಾಡೋದಿಲ್ಲ ಎಂದು ಹೇಳಿದ್ದೆ. ಆಗ ಕೆಲವರು ಬಯ್ದುಕೊಂಡರು, ಮತ್ತೆ ಹಲವರು ಖುಷಿಯಾದರು. ಪ್ರತಿ ಬೂತ್‌ನಲ್ಲೂ ಡಿಜಿಟಲ್ ತಂತ್ರಜ್ಞಾನ ಅಳವಡಿಸಲು ಹೇಳಿದ್ದೆ. ಇಡೀ ದೇಶದ ನಾಯಕರು ನಮ್ಮ ರಾಜ್ಯದತ್ತ ನೋಡುತ್ತಿದ್ದರು. ದೇಶದ ಎಲ್ಲ ವಿರೋಧ ಪಕ್ಷಗಳ ನಾಯಕರು ಕರ್ನಾಟಕಕ್ಕೆ ಬಂದಿದ್ದರು. ಇಂಡಿಯಾ ಹೆಸರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದರು ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಯಾರನ್ನೋ ಹೆದರಿಸಿದಂತೆ ಈ ಡಿ.ಕೆ. ಶಿವಕುಮಾರ್‌ನನ್ನು ಹೆದರಿಸೋಕೆ ಆಗಲ್ಲ. ನಾನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮುಜುಗರ ಉಂಟು ಮಾಡುವುದಿಲ್ಲ. ಯಾರು 15 ಪರ್ಸೆಂಟ್ ಕೇಳಿದ್ದಾರೆ ಅನ್ನೋದನ್ನೂ ಕೂಡ ತನಿಖೆ ಮಾಡಿಸುತ್ತೇನೆ. ನಾನು ಮುಜುಗರ ಉಂಟು ಮಾಡುವ ಕೆಲಸ ಮಾಡಿದ್ದಿದ್ದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬಂದು ನನ್ನ ಜತೆಗೆ ಜೈಲಿನಲ್ಲಿ ಮಾತನಾಡುತ್ತಿದ್ದರಾ? ಗುತ್ತಿಗೆದಾರರ ಬಗ್ಗೆ ನನ್ನ ಹತ್ತಿರ ಎಲ್ಲ ದಾಖಲೆ ಇದೆ. ಎರಡು ಮೂರು ದಿನ ಆಗಲಿ, ಎಲ್ಲ ಬಿಡುಗಡೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ತರುವಂತಹ ಯಾವ ಕೆಲಸವನ್ನೂ ನಾನು ಮಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅತ್ತ ಡಿಸಿಎಂ ಭಾಷಣ, ಇತ್ತ ಸಿಎಂ ನಿದ್ದೆ
ಹೆಣದಲ್ಲೂ ಹಣ ಹೊಡೆದರಲ್ಲ ಅದನ್ನೆಲ್ಲ ಕಂಡು ಹಿಡಿಬೇಕೋ ಬೇಡವೋ? ಎಲ್ಲ ದಾಖಲೆ ರೆಡಿ ಮಾಡಿ ಇಟ್ಟಿದ್ದೇನೆ. ಪಾಪ ಸಚಿವ ಚೆಲುವರಾಯಸ್ವಾಮಿ ಮೇಲೆ ಅರ್ಜಿ ಬರೆದುಕೊಟ್ಟಿದ್ದಾರಂತೆ. ಮೊದಲು ಅವರ ಮೇಲೆ, ಆಮೇಲೆ ನನ್ನ ಮೇಲೆ ಆರೋಪ ಮಾಡಿದರು. ಸಿ.ಟಿ. ರವಿಯಂತೆ, ಅಶ್ವಥ್ ನಾರಾಯಣನಂತೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ. ಸಿಎಂ ಎಲ್ಲ ಬಹಿರಂಗ ಮಾಡು ಅಂತ ಹೇಳಿದ್ದಾರೆ. ಪ್ರೆಸ್‌ಮೀಟ್ ಕರೆದು ದಾಖಲೆ ಬಿಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ನಮಗೆ ಜಿಲ್ಲಾ, ತಾಲೂಕು ಹಾಗೂ ಬಿಬಿಎಂಪಿ ಚುನಾವಣೆ ಬಹಳ ಮುಖ್ಯ. ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಕೋರ್ಟ್‌ನಲ್ಲಿದೆ. ಬಿಜೆಪಿಯವರು 243 ವಾರ್ಡ್‌ಗಳನ್ನು ಮಾಡಿದ್ದರು. ನಾವು ಈಗ ಅದನ್ನು 223ಕ್ಕೆ ಇಳಿಸಿದ್ದೇವೆ. ನಾಳೆ, ನಾಡಿದ್ದು ಆಕ್ಷೇಪಣೆ ಸಲ್ಲಿಸಲು ಆದೇಶ ಹೊರಬೀಳಲಿದೆ. ಬೇರೆ ಪಕ್ಷಗಳಿಗೆ ಏನೇನು ಆಕ್ಷೇಪ ಇದೆಯೋ ಅದನ್ನು ಸಲ್ಲಿಸಬಹುದು. ಚುನಾವಣೆಗೆ ಎಲ್ಲರೂ ಸಿದ್ಧರಾಗಿರಬೇಕು. ಚುನಾವಣೆ ನಡೆಸಲು ನಾವು ಬದ್ಧರಾಗಿದ್ದೇವೆ. ಇದರಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ನ್ಯಾಯಾಲಯ ಹೇಳಿದರೆ ಚುನಾವಣೆ ನಡೆಸಲು ಬದ್ಧರಾಗಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಎಚ್‌ಡಿಕೆ ಪೆನ್‌ಡ್ರೈವ್ ಬಗ್ಗೆ ಸಿಎಂ ವ್ಯಂಗ್ಯ; ವಿಡಿಯೊ ಇಲ್ಲಿದೆ
ಎಚ್‌ಡಿಕೆ ಹಿಟ್ ಆ್ಯಂಡ್ ರನ್ ಕೇಸ್
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಪೆನ್‌ಡ್ರೈವ್ ಇಟ್ಟುಕೊಂಡಿದ್ದೇನೆ ಎಂದು ಹೇಳಿ ತೆಗೆದು ತೋರಿಸೋದು, ಒಳಗಿಟ್ಟುಕೊಳ್ಳೋದು ಮಾಡುತ್ತಿದ್ದಾರೆ. ಬಿಜೆಪಿಯವರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಬಂದ ಕೂಡಲೇ ವರ್ಗಾವಣೆ ದಂಧೆ ಅಂತ ಆರೋಪ ಮಾಡಿದರು. ಯಾಕೆ ನಿಮ್ಮ ಕಾಲದಲ್ಲಿ ವರ್ಗಾವಣೆಗಳು ನಡೆದೇ ಇಲ್ವಾ? ಚೆಲುವರಾಯಸ್ವಾಮಿ ಸದನದಲ್ಲೇ ಕುಮಾರಸ್ವಾಮಿ ಸರ್ಕಾರದ ವರ್ಗಾವಣೆ ಬಗ್ಗೆ ಎಲ್ಲ ಮಾಹಿತಿ ಬಿಚ್ಚಿಟ್ಟರು. ಕುಮಾರಸ್ವಾಮಿ ಇದಾರಲ್ಲ ಅವರದ್ದು ಯಾವಾಗಲೂ ಹಿಟ್ ಆ್ಯಂಡ್ ರನ್ ಕೇಸೇ. ಬಿಜೆಪಿಯವರಿಗೆ ತನಿಖೆಗಳಿಂದ ನಡುಕ ಶುರುವಾಗಿದೆ. ಭಂಡತನದಿಂದ ಮಾತನಾಡುತ್ತಿದ್ದವರಿಗೆ ಈಗ ಭಯ ಶುರುವಾಗಿದೆ. ತನಿಖಾ ವರದಿಗಳು ಬರಲಿ ಅವರಿಗೆ ಎಲ್ಲವೂ ಗೊತ್ತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಲೋಕಸಭೆ ಚುನಾವಣೆಯಲ್ಲಿ ಶೇಕಡಾ ನೂರಕ್ಕೆ ನೂರು ಬಿಜೆಪಿ ಸೋಲುತ್ತದೆ. 25 ಸ್ಥಾನ ಪಡೆದಿದ್ದ ಬಿಜೆಪಿಯವರು ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ, ಅವರು ಯಾವ ಸ್ಥಿತಿಗೆ ಹೋಗಿದ್ದಾರೆ ಎಂದು? ಅವರಿಗೆ ಭಯ ಶುರುವಾಗಿದೆ. ನಾನು ಹೈಕಮಾಂಡ್‌ಗೆ 20 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದೇನೆ. ಈ ಜೆಡಿಎಸ್‌ನವರು ಕಳೆದ ಬಾರಿ 1 ಸ್ಥಾನ ಗೆದ್ದಿದ್ದರು. ಈ ಬಾರಿ ಅದನ್ನೂ ಗೆಲ್ಲಲಾರರು ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು, ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ. ಈ ವರ್ಷ ಶಿಕ್ಷಣ ನೀತಿ ಜಾರಿ ಸ್ವಲ್ಪ ತಡವಾಯಿತು ಎಂದು ತಿಳಿಸಿದರು.
ಕರ್ನಾಟಕ
Bangalore Bandh : ಬೆಂಗಳೂರಿನ ಈ ಭಾಗದಲ್ಲಿ ಪ್ರತಿಭಟನೆ ಜೋರು, ಆ ಕಡೆ ಹೋಗುವಾಗ ಹುಷಾರು
Bangalore Bandh : ಬೆಂಗಳೂರು ಬಂದ್ ಕಾವೇರುತ್ತಿದೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಇಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದೆ. ಹೀಗಾಗಿ ಆ ಭಾಗಕ್ಕೆ ಹೋಗುವಾಗ ಹುಷಾರಾಗಿರಿ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery Water Dispute) ಮಾಡುತ್ತಿರುವುದನ್ನು ಪ್ರತಿಭಟಿಸಿ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಬೆಂಗಳೂರು ಬಂದ್ (bangalore bandh) ಕಾವೇರುತ್ತಿದೆ. ಯಾವ ಕಾರಣಕ್ಕೂ ಬಲವಂತದ ಬಂದ್‌ಗೆ ಅವಕಾಶವಿಲ್ಲ ಎಂದು ಪೊಲೀಸರು ಸ್ಪಷ್ಟವಾಗಿ ಹೇಳಿರುವುದರಿಂದ ಕೆಲವು ಕಡೆಗಳಲ್ಲಿ ವ್ಯಾಪಾರ ವಹಿವಾಟುಗಳು (Business as usual) ಎಂದಿನಂತೆ ನಡೆಯುತ್ತಿವೆ. ಆದರೆ, ಪ್ರಮುಖ ಸ್ಥಳಗಳಾದ ಮೆಜೆಸ್ಟಿಕ್ (Majestic Bus stand), ಕೆ.ಆರ್. ಮಾರ್ಕೆಟ್‌ನಲ್ಲಿ (KR Market) ಜನ ಸಂಚಾರ ಬಹುತೇಕ ಸ್ತಬ್ಧವಾಗಿದೆ. ಈ ನಡುವೆ ಪೊಲೀಸರು ಬಂದ್‌ಗೆ ಕರೆ ನೀಡಿದ ಮುಖಂಡರಲ್ಲಿ ಒಬ್ಬರಾದ ರೈತ ಮುಖಂಡ ಕುರುಬೂರು ಶಾಂತ ಕುಮಾರ್ (Kuruburu Shanthakumar) ಅವರನ್ನು ಬಂಧಿಸಿದ್ದಾರೆ.
ರಾಜಧಾನಿಯ ಹಲವು ಕಡೆಗಳಲ್ಲಿ ಇಂದು ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಅಂದರೆ ಆ ಭಾಗದಲ್ಲಿ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಹೀಗಾಗಿ ಆ ಭಾಗಕ್ಕೆ ಹೋಗದಿದ್ದರೆ ಒಳ್ಳೆಯದು. ಹೋಗಲೇಬೇಕು ಎಂದಾದರೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ಹೋಗಬಹುದು. ಪ್ರತಿಭಟನೆ ಮುಗಿದ ನಂತರ ಹೋಗಬಹುದು.
ಅಲ್ಲಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿರುವ ಸಂಘಟನೆಗಳು ಸ್ವಲ್ಪ ಹೊತ್ತು ಆ ಭಾಗದಲ್ಲಿ ಮೆರವಣಿಗೆ ನಡೆಸುವ ಸಾಧ್ಯತೆ ಇರುತ್ತದೆ. ರಸ್ತೆಗಳು ಬಂದ್ ಆಗುತ್ತದೆ. ಸೋ ಹುಷಾರಾಗಿ ಓಡಾಡಿ ಎನ್ನುವುದಕ್ಕಾಗಿ ಪ್ರತಿಭಟನೆಯ ಪೂರ್ಣ ಮಾಹಿತಿ ಇಲ್ಲಿ ನೀಡುತ್ತಿದ್ದೇವೆ.
ಯಾವ ಸಂಘಟನೆಗಳ ಪ್ರತಿಭಟನೆ ಎಲ್ಲಿ? ಏನೇನು ಕಾರ್ಯಕ್ರಮ?
- ಕಾವೇರಿ ಹೋರಾಟ ಸಮಿತಿ: ಬೆಳಗ್ಗೆ 09.30ಕ್ಕೆ ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಬಳೆಪೇಟೆ, ಮೈಸೂರು ಬ್ಯಾಂಕ್ ಸರ್ಕಲ್, ಟೌನ್ ಹಾಲ್ ಸಮೀಪ ಜನರಲ್ಲಿ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.
- ಕನ್ನಡ ಚಳುವಳಿ ಕೇಂದ್ರ ಸಮಿತಿ, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ವತಿಯಿಂದ ಟೋಲ್ ಗೇಟ್ ಸಿಗ್ನಲ್ ನಿಂದ ಟೌನ್ ಹಾಲ್ ತನಕ ಬೆಳಗ್ಗೆ 9 ಘಂಟೆಗೆ ಬೈಕ್ ರ್ಯಾಲಿ
- ಜಯ ಕರ್ನಾಟಕ ಸಮರ ಸೇನೆ: ಬಾಪೂಜಿನಗರಿಂದ ಸ್ಯಾಟಲೈಟ್ ಬಸ್ ನಿಲ್ದಾಣ ತನಕ ಕಾಲ್ನಡಿಗೆ ಮೂಲಕ ಬಂದು ತಮಿಳುನಾಡು ಬಸ್ ತಡೆ.
- ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಟೌನ್ ಹಾಲ್ ತನಕ ಸೈಕಲ್ ಜಾಥ ( ಖಾಲಿ ಬಿಂದಿಗೆಯನ್ನ ಸೈಕಲ್ಗಳಿಗೆ ಕಟ್ಟಿಕೊಂಡು ಕೆ.ಆರ್. ಮಾರ್ಕೆಟ್, ಟೌನ್ ಹಾಲ್ ತನಕ ಗುಲಾಬಿ ಹೂ ನೀಡಿ ಬಂದ್ ಗೆ ಮನವಿ
- ಖಾಸಗಿ ವಾಹನ ಮಾಲೀಕರ ಒಕ್ಕೂಟ: ನ್ಯಾಷನಲ್ ಕಾಲೇಜ್ ಮೈದಾನದಿಂದ ಟೌನ್ ಹಾಲ್ ವರೆಗೆ ಒಂದು ಸಾವಿರ ಆಟೋ, 300 ಕ್ಯಾಬ್ ಗಳ ಮೂಲಕ ಮೆರವಣಿಗೆ
- ಸ್ವಾಭಿಮಾನಿ ಸೇನೆಯಿಂದ ಮೈಸೂರು ರೋಡ್ ನ ಗಾಳಿ ಆಂಜನೇಯ ದೇವಸ್ಥಾನ ದಿಂದ ಮೆಜೆಸ್ಟಿಕ್, ಗಾಂಧಿನಗರ, ಬ್ರಿಗೇಡ್ , ಟೌನ್ ಹಾಲ್ ತನಕ ಕ್ಯಾಂಟರ್ ವಾಹನ ಮೂಲಕ ಬಂದ್ ಬಗ್ಗೆ ಜಾಗೃತಿ, ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡುವಂತೆ ಮನವಿ.
- ಪೀಸ್ ಆಟೋ ಸಂಘಟನೆಯಿಂದ 9 ಗಂಟೆಗೆ ಆಟೋ ರ್ಯಾಲಿ
- ಕರ್ನಾಟಕ ಕ್ರೈಸ್ತ ಸಂಘಟನೆಯ 200 ಜನರಿಂದ ಟೌನ್ ಹಾಲ್ ನಿಂದ ಫ್ರೀಡಂಪಾರ್ಕ್ ವರೆಗೆ ಬೈಕ್ ರ್ಯಾಲಿ
- ನಮ್ಮ ಕರುನಾಡು ಯುವ ಸೇನೆಯಿಂದ ನವರಂಗ್ ಸರ್ಕಲ್ ಬಳಿ ಟೈರ್ ಗೆ ಬೆಂಕಿ, ರಾಜ್ಯ ನಾಯಕರ ಪ್ರತಿಕೃತಿ ದಹನ
ಇದನ್ನೂ ಓದಿ: Bangalore Bandh : ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ: ಕುರುಬೂರು ಶಾಂತ ಕುಮಾರ್ ಪೊಲೀಸ್ ವಶಕ್ಕೆ
ಮೆರವಣಿಗೆಗೆ ಅವಕಾಶವಿಲ್ಲ, ಫ್ರೀಡಂಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆ
ಹೋರಾಟಗಾರರು ಈ ಹಿಂದೆ ಮೈಸೂರು ಬ್ಯಾಂಕ್‌ನಿಂದ ಟೌನ್ ಹಾಲ್, ಅಲ್ಲಿಂದ ಫ್ರೀಡಂ ಪಾರ್ಕ್‌ಗೆ ಮೆರವಣಿಗೆ ನಡೆಸಲು ಪ್ಲ್ಯಾನ್ ಮಾಡಿದ್ದರು. ಆದರೆ, ಪೊಲೀಸರು ಯಾವ ಮೆರವಣಿಗೆಗೂ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪ್ರತಿಭಟನೆ ಫ್ರೀಡಂ ಪಾರ್ಕ್‌ಗೆ ಸೀಮಿತವಾಗಲಿದೆ.
ಕರ್ನಾಟಕ
Bangalore Bandh : ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ: ಕುರುಬೂರು ಶಾಂತ ಕುಮಾರ್ ಪೊಲೀಸ್ ವಶಕ್ಕೆ
Bangalore Bandh : ಬೆಂಗಳೂರಿನಲ್ಲಿ ಬಂದ್ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ದೊರಕಿದೆ. ಈ ನಡುವೆ, ಬಂದ್‌ಗೆ ಕರೆ ನೀಡಿದ್ದ ಕುರುಬೂರು ಶಾಂತ ಕುಮಾರ್ ಅವರನ್ನು ಬೆಳಗ್ಗೆಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಕಾವೇರಿ ನೀರು ಬಿಡುಗಡೆಯನ್ನು ನಿಲ್ಲಿಸಬೇಕು (Cauvery water Dispute) ಎಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಿರುವ ಜಲ ಸಂರಕ್ಷಣಾ ಸಮಿತಿಯ ಮುಖ್ಯಸ್ಥರಲ್ಲಿ ಒಬ್ಬರಾದ ರೈತ ಮುಖಂಡ ಕುರುಬೂರು ಶಾಂತ ಕುಮಾರ್ (Kuruburu Shantha kumar) ಅವರನ್ನು ಪೊಲೀಸರು ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ವಶಕ್ಕೆ ಪಡೆದಿದ್ದಾರೆ (Kuruburu Shantha kumar Detained)
ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ (Mysore Bank Circle) ಜಮಾವಣೆಗೊಂದು ಪ್ರತಿಭಟನೆ ನಡೆಸಿ ಅಲ್ಲಿಂದ ಟೌನ್ ಹಾಲ್ ಕಡೆಗೆ ಹೋಗುವ ಪ್ಲ್ಯಾನ್ ಹೊಂದಿದ್ದ ಕುರುಬೂರು ಶಾಂತ ಕುಮಾರ್ ಅವರನ್ನು ಸರ್ಕಲ್‌ನಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 144 ಅಡಿ ಜಾರಿ ಮಾಡಿರುವ ನಿಷೇಧಾಜ್ಞೆ ನಿಯಮದಡಿ ಅವರನ್ನು ಬಂಧಿಸಿದ್ದಾರೆ. ಆದರೆ, ಇದೊಂದು ಗೂಂಡಾಗಿರಿ ಎಂದು ಶಾಂತ ಕುಮಾರ್ ಮತ್ತು ಅವರ ಬೆಂಬಲಿಗರು ಆಕ್ಷೇಪಿಸಿದ್ದಾರೆ. ಶಾಂತಕುಮಾರ್ ಅವರ ಜತೆ ಇನ್ನೂ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಸೆಕ್ಷನ್ ಹಾಕಿದ್ದಕ್ಕೆ ಕುರುಬೂರು ಆಕ್ಷೇಪ
ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತ ಕುಮಾರ್, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಮೊದಲಾದ ರಾಜ್ಯದ ಅಸ್ಮಿತೆಯ ವಿಚಾರ ಬಂದಾಗ ಪೊಲೀಸರು ಪ್ರತಿಭಟನಾಕಾರರಿಗೆ ಬೆಂಬಲ ಕೊಡುತ್ತಾರೆ. ಆದರೆ, ಇಲ್ಲಿ ದಮನ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಪೊಲೀಸರು ಪ್ರತಿಭಟನಾಕಾರರಿಗೆ ತೊಂದರೆ ಕೊಡುತ್ತಿದ್ದಾರೆ. ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂದು ಹೇಳಿದ ಅವರು, ಕುಡಿಯುವ ನೀರಿಲ್ಲ ಅಂದ್ರೆ ಮನೆಗೆ ಹೋದಾಗ ಏನು ಹೇಳ್ತೀರಾ ಎಂದು ಪೊಲೀಸರನ್ನೇ ಪ್ರಶ್ನಿಸಿದರು.
ʻʻಸದ್ಯದವರೆಗೂ ಬಂದ್ ಯಶಸ್ವಿಯಾಗಿದೆ. ಎಲ್ಲರೂ ಬೆಂಬಲ ನೀಡಿದ್ದಾರೆ. ನಮ್ಮ ಹೋರಾಟ, ಚಳುವಳಿ ಮುಂದುವರಿಯಲಿದೆʼʼ ಎಂದು ಕುರುಬೂರು ಇದೇ ಸಂದರ್ಭದಲ್ಲಿ ಹೇಳಿದರು.
ʻʻರಾಜ್ಯದ ರೈತರು ಗಮನಿಸುತ್ತಿದ್ದಾರೆ. ಇಲ್ಲಿ ಏನೇ ನಡೆದರೂ ಇಡೀ ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಹೀಗಾಗಿ ಪೋಲಿಸರು ಎಚ್ಚರಿಕೆಯಿಂದ ಇರಬೇಕುʼʼ ಎಂದು ಕುರುಬೂರು ಎಚ್ಚರಿಸಿದರು.
ಪೊಲೀಸರು-ಪ್ರತಿಭಟನಾಕಾರರ ನಡುವೆ ವಾಗ್ವಾದ
ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಸೇರಿದ್ದ ರೈತರನ್ನೂ ಪೊಲೀಸರು ಚದುರಿಸಿದರು. ಈ ವೇಳೆ ಪ್ರತಿಭನಾಕಾರರು ಪೋಲೀಸರ ಗೂಂಡಾಗಿರಿಗೆ ಧಿಕ್ಕಾರ ಎಂದು ಕೂಗಿದರು.
ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಪ್ರತಿಭಟನಾಕಾರರನ್ನು ಟೌನ್ ಗೆ ಹೋಗದಂತೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಭಾರಿ ವಾಗ್ವಾದ ನಡೆಯಿತು. ಸರ್ಕಾರ 144ನೇ ಸೆಕ್ಷನ್ ಹಾಕಿ ದಬ್ಬಾಳಿಕೆ ಮಾಡ್ತಿದೆ. ಕಾನೂನಿಗೆ ನಾವು ಗೌರವ ಕೊಡ್ತಿವಿ ಎಂದು ಹೇಳಿದರು.
ʻʻನೀವೂ ಹೋರಾಟ ಮಾಡಬೇಕಿತ್ತು. ಕಾವೇರಿ ನದಿ ನೀರು ನಿಮಗೆ ಬೇಡ್ವಾ..? ಪೊಲೀಸನವರು ರಜಾ ಹಾಕಿ ಭಾಗವಹಿಸಬೇಕು. ನಾವು ಯಾವುದೇ ತೊಂದರೆ ಮಾಡಲ್ಲʼʼ ಎಂದು ಪೊಲೀಸರಿಗೇ ಪ್ರತಿಭಟನಾಕಾರರು ಬುದ್ಧಿ ಹೇಳಿದರು.
ಹೇಗಿದೆ ಬೆಂಗಳೂರು ಬಂದ್?
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಬೆಂಗಳೂರಿನ ಪ್ರಮುಖ ಭಾಗಗಳಾದ ಮೆಜೆಸ್ಟಿಕ್‌ನಲ್ಲಿ ಜನ ಸಂಚಾರ ಕಡಿಮೆ ಇತ್ತು. ಬಿಎಂಟಿಸಿ ಬಸ್‌ಗಳು ಹೊರಟಿವೆಯಾದರೂ ಜನ ಸಂಚಾರ ಕಡಿಮೆ ಇತ್ತು. ಮೆಟ್ರೋ ಸಂಚಾರ ಎಂದಿನಂತೆ ಇದ್ದು, ಜನರೂ ದೊಡ್ಡ ಸಂಖ್ಯೆಯಲ್ಲಿ ಓಡಾಡುತ್ತಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಬಿಕೋ ಎನ್ನುತ್ತಿದೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಬಂದ್ ಹೆಚ್ಚು ಪರಿಣಾಮ ಬೀರಿಲ್ಲ. ಜನ ಜೀವನ ಎಂದಿನಂತೆಯೇ ಇದೆ. ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ಮಕ್ಕಳಿಗೆ ಏನೂ ಸಮಸ್ಯೆ ಆಗಿಲ್ಲ.
ದಕ್ಷಿಣ ಕನ್ನಡ
Road Accident: ಆಟೋಗೆ ಶಾಲಾ ಬಸ್ ಡಿಕ್ಕಿ, ಐವರ ದುರ್ಮರಣ
ಬಸ್ ಡಿಕ್ಕಿಯಾದ ರಭಸಕ್ಕೆ ಆಟೋ ಸಂಪೂರ್ಣ ಛಿದ್ರವಾಗಿದ್ದು, ಆಟೋದಲ್ಲಿದ್ದ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ.
ಮಂಗಳೂರು: ಶಾಲಾ ಬಸ್ ಹಾಗೂ ಆಟೋ ನಡುವೆ (bus auto accident) ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಪ್ರಯಾಣಿಕರು ದುರ್ಮರಣ ಹೊಂದಿದ ಘಟನೆ (Road Accident) ಕೇರಳ- ಕರ್ನಾಟಕ ಗಡಿಭಾಗದಲ್ಲಿ ನಡೆದಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪ ಈ ದುರ್ಘಟನೆ ನಿನ್ನೆ ಸಂಜೆ ವೇಳೆ ನಡೆದಿದೆ. ಕಾಸರಗೋಡಿನ ಮೊಗ್ರಾಲ್ ಪುತ್ತೂರು ಎಂಬಲ್ಲಿನ ಆಟೋ ರಿಕ್ಷಾಗೆ ಪೆರ್ಲ ಸಮೀಪದ ಆಂಗ್ಲ ಮಾಧ್ಯಮ ಶಾಲೆಯ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಆಟೋ ಸಂಪೂರ್ಣ ಛಿದ್ರವಾಗಿದ್ದು, ಆಟೋದಲ್ಲಿದ್ದ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಸ್ ಪಲ್ಟಿಯಾಗಿ 10 ಜನರಿಗೆ ಗಾಯ
ವಿಜಯನಗರ: ಖಾಸಗಿ ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ವಿಜಯನಗರದ MB ಅಯ್ಯನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಗಾಯಗೊಂಡ ಡ್ರೈವರ್ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರಿನಿಂದ ಕಲ್ಬುರ್ಗಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಕಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Road Accident: ಬಿಬಿಎಂಪಿ ಕಸದ ಲಾರಿಗೆ ಬೈಕ್ ಡಿಕ್ಕಿ, ಸವಾರ ಸಾವು
Live News
Bangalore Bandh Live: ಬೆಂಗಳೂರು ಬಂದ್ ಆರಂಭ; ಎಲ್ಲೆಲ್ಲಿ ಏನೇನಾಗ್ತಿದೆ?
ಕಾವೇರಿ ನೀರಿನಲ್ಲಾದ ಅನ್ಯಾಯ ಪ್ರತಿಭಟಿಸಿ ಹಲವು ಸಂಘಟನೆಗಳು ನೀಡಿರುವ ಬೆಂಗಳೂರು ಬಂದ್‌ಗೆ (Bangalore bandh) ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಎಲ್ಲೆಲ್ಲಿ ಏನಾಗುತ್ತಿದೆ ಎಂಬುದರ ಅಪ್‌ಡೇಟ್ ಇಲ್ಲಿದೆ. .
ಬೆಂಗಳೂರು: ಕಾವೇರಿ ನೀರಿನಲ್ಲಾದ ಅನ್ಯಾಯ ಪ್ರತಿಭಟಿಸಿ ಹಲವು ಸಂಘಟನೆಗಳು ನೀಡಿರುವ ಬೆಂಗಳೂರು ಬಂದ್‌ಗೆ (Bangalore bandh) ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಎಲ್ಲೆಲ್ಲಿ ಏನಾಗುತ್ತಿದೆ ಎಂಬುದರ ಅಪ್‌ಡೇಟ್ ಇಲ್ಲಿದೆ. .
-
ವಿದೇಶ19 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ17 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ12 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ13 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema16 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ದೇಶ17 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ಅಂಕಣ20 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ10 hours ago
Lawyer Sara Sunny: ಸುಪ್ರೀಂ ಕೋರ್ಟ್ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ