ಬರ್ಲಿನ್: ಇಂದು ನಡೆಯುವ ಯುರೋ ಕಪ್(Euro 2024) ಲೀಗ್ನಲ್ಲಿ 2 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹಂಗೆರಿ ಮತ್ತು ಸ್ವಿಜರ್ಲೆಂಡ್(Hungary vs Switzerland) ತಂಡಗಳು ಮುಖಾಮುಖಿಯಾದರೆ, ದ್ವಿತೀಯ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಸ್ಪೇನ್(ESP vs CRO) ಮತ್ತು ಕ್ರೊವೇಷಿಯಾ ಸೆಣಸಾಟ(euro cup) ನಡೆಸಲಿವೆ. ಈ ಪಂದ್ಯ ಜಿದ್ದಾಜಿದ್ದಿನಿಂದ ಸಾಗುವ ನಿರೀಕ್ಷೆ ಮಾಡಬಹುದು.
ಪೆದ್ರಿ ಗೊನ್ಸಾಲೆಝ್ ಅವರು ಲಯಕ್ಕೆ ಮರಳಿರುವುದು ಸ್ಪೇನ್ ತಂಡಕ್ಕೆ ಆನೆ ಬಲ ಬಂದಂತಾಗಿದೆ. 38 ವರ್ಷ ವಯಸ್ಸಿನ ಮಿಡ್‌ಫೀಲ್ಡರ್ ಪೆದ್ರಿ ಅವರ ಆಟವು ಸ್ಪೇನ್ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. 2020ರಲ್ಲಿ ಸ್ಪೇನ್ ತಂಡವು ಈ ಕೂಟದಲ್ಲಿ ಸೆಮಿಫೈನಲ್ ತಲುಪುವಲ್ಲಿ ಪೆದ್ರಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮಂಡಿ ಸ್ನಾಯುರಜ್ಜು ಗಾಯದಿಂದ ಹಿನ್ನಡೆ ಅನುಭವಿಸಿದ್ದರು. ಸದ್ಯ ಉತ್ತಮ ಲಯದಲ್ಲಿರುವ ಅವರು ಇಂದಿನ ಪಂದ್ಯದಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ತೋರುವ ಆತ್ಮವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ Euro 2024 : ಸ್ಕಾಟ್ಲೆಂಡ್ ವಿರುದ್ಧ ಜರ್ಮನಿಗೆ 5-1 ಗೋಲ್ಗಳ ಭರ್ಜರಿ ವಿಜಯ
ಅತ್ತ ಕ್ರೊವೇಷಿಯಾ ಕೂಡ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ. ಖ್ಯಾತ ರಿಯಲ್ ಮ್ಯಾಡ್ರಿಡ್ ತಂಡದ ಮಿಡ್‌ಫೀಲ್ಡರ್ ಮಾಡ್ರಿಕ್, ಮಾಟಿಯೊ ಕೊವಾಸಿಕ್ ಮತ್ತು ಮಾರ್ಸೆಲೊ ಬ್ರಾಝೊವಿಕ್ ಅವರನ್ನೊಳಗೊಂಡ ತಂಡದ ಸವಾಲು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಮಿಡ್‌ಫೀಲ್ಡ್ ಆಗಿರುವ ಇವರೆಲ್ಲ ಚಿರತೆ ವೇಗದಲ್ಲಿ ಓಡಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಚಾಕಚಕ್ಯತೆ ಹೊಂದಿದ್ದಾರೆ. ಯುರೋ 2020ರ ಕೂಟದ 16ರ ಘಟ್ಟದ ಪಂದ್ಯದಲ್ಲಿ ಸ್ಪೇನ್ ಹೆಚ್ಚುವರಿ ಅವಧಿಯ ಆಟದಲ್ಲಿ ಕ್ರೊವೇಷಿಯಾ ಮೇಲೆ ಜಯಗಳಿಸಿತ್ತು. ಇದೀಗ ಅಂದಿನ ಸೋಲಿಗೆ ಈ ಬಾರಿ ಸೇಡು ತೀರಿಸುವ ತವಕದಲ್ಲಿದೆ.
ಸ್ಕಾಟ್ಲೆಂಡ್ ವಿರುದ್ಧ ಜರ್ಮನಿಗೆ ಭರ್ಜರಿ ಗೆಲುವು
ಯೂರೊ ಕಪ್ ಫುಟ್ಬಾಲ್ 2024ನೇ (Euro 2024) ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಜರ್ಮನಿಯ ವಿರುದ್ಧ 5-1 ಗೋಲ್ಗಳ ಭರ್ಜರಿ ಗೆಲುವು ದಾಖಲಿಸಿತು. ಜರ್ಮನಿ ಪರ ಅಮೋಘ ಗೆಲುವಿನಲ್ಲಿ ಜಮಾಲ್ ಮುಸಿಯಾಲಾ, ನಿಕ್ಲಾಸ್ ಫುಲ್ಕ್ರುಗ್ ಮತ್ತು ಟೋನಿ ಕ್ರೂಸ್ ದೊಡ್ಡ ಪಾತ್ರ ವಹಿಸಿದರು. ಪಂದ್ಯದ 10ನೇ ನಿಮಿಷದಲ್ಲಿ ಫ್ಲೋರಿಯನ್ ವಿರ್ಟ್ಜ್ ಜರ್ಮನಿ ಪರ ಗೋಲ್ ಬಾರಿಸಿದ್ದರೆ, ಮೊದಲಾರ್ಧ ಮುಗಿಯುವುದರೊಳಗೆ ಜಮಾಲ್ ಮುಸಿಯಾಲಾ, ಕೈ ಹ್ಯಾವರ್ಟ್ಜ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು.
ಅಲಿಯನ್ಸ್ ಅರೆನಾದಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಮೊದಲಾರ್ಧದಲ್ಲಿ ರೆಡ್ ಕಾರ್ಡ್ ಪಡೆದುಕೊಂಡಿತು. ಹೀಗಾಗಿ ಬಲಿಷ್ಠ ಎದುರಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಬದಲಿ ಆಟಗಾರರಾದ ನಿಕ್ಲಾಸ್ ಫುಲ್ಕ್ರುಗ್ ಮತ್ತು ಎಮ್ರೆ ಕ್ಯಾನ್ ಅವರ 2 ಗೋಲುಗಳನ್ನು ಗಳಿಸಿದ ಕಾರಣ 1-5 ಗೋಲುಗಳ ಅಂತರದಲ್ಲಿ ಸೋಲು ಕಂಡಿತು.