ನವದೆಹಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) ಸಾರ್ವಕಾಲಿಕ ದಾಖಲೆ ಮಾಡಿದ್ದರು. ಡಿಸೆಂಬರ್ 19ರಂದು ನಡೆದ ಮಿನಿ ಹರಾಜಿನಲ್ಲಿ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಆಡಲು ಮಿಚೆಲ್ ಸ್ಟಾರ್ಕ್ ಅವರನ್ನು ತನ್ನ ತೆಕ್ಕೆಗೆ ತೆದುಕೊಂಡಿತ್ತು. ಅದಕ್ಕಾಗಿ 24.75 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದು ಐಪಿಎಲ್ ಇತಿಹಾಸದಲ್ಲಯೇ ಅತಿ ದೊಡ್ಡ ಬಿಡ್ ಆಗಿದೆ.
ಸ್ಟಾರ್ಕ್ ಅವರ ಬಿಡ್ ಆಗುವ ಕೇವಲ ಒಂದು ಗಂಟೆ ಮೊದಲು ಅವರ ಸಹ ಆಟಗಾರ ಪ್ಯಾಟ್ ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ದಾಖಲೆಯ 20.5 ಕೋಟಿ ರೂ.ಗೆ ಖರೀದಿಸಿತು. ಆದಾಗ್ಯೂ, ಸಿಡ್ನಿ ಮೂಲದ ಎಡಗೈ ವೇಗಿಗಾಗಿ ಅನೇಕ ತಂಡಗಳು ಬಿಡ್ಡಿಂಗ್ ಸಮರದಲ್ಲಿ ತೊಡಗಿದ್ದರಿಂದ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾದ ನಾಯಕನ ಅತ್ಯಂತ ದುಬಾರಿ ಬೆಲೆ ಅಲ್ಪಾವಧಿಯದ್ದಾಗಿತ್ತು. ಅಂತಿಮವಾಗಿ, ಇದು ಗುಜರಾತ್ ಟೈಟಾನ್ಸ್ ಮತ್ತು ನೈಟ್ ರೈಡರ್ಸ್ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಯಿತು. ಅಂತಿಮವಾಗಿ ಎರಡು ಬಾರಿಯ ಚಾಂಪಿಯನ್ಸ್ 33 ವರ್ಷದ ಆಟಗಾರನ ಸೇವೆಯನ್ನು ದಾಖಲೆಯ 24.75 ಕೋಟಿ ರೂ.ಗೆ ಪಡೆದರು.
ಪತ್ನಿ ಅಲಿಸಾ ಪ್ರತಿಕ್ರಿಯೆ ಹೀಗಿತ್ತು
ಭಾರತ ಮಹಿಳೆಯರ ತಂಡ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡಲು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಭಾರತಕ್ಕೆ ಆಗಮಿಸಿರುವ ಸ್ಟಾರ್ಕ್ ಅವರ ಪತ್ನಿ ಅಲಿಸ್ಸಾ ಹೀಲಿ, ಇದು ಅವರ ಕಠಿಣ ಪರಿಶ್ರಮ ಮತ್ತು ಎಂಟು ವರ್ಷಗಳ ಐಪಿಎಲ್ ವಿರಾಮದ ಸಮಯದಲ್ಲಿ ಅವರು ತೋರಿದ ಬದ್ಧತೆಯ ಫಲವಾಗಿದೆ ಎಂದು ಹೇಳಿದ್ದಾರೆ.
” ಅದು ಆಗಬೇಕಿತ್ತೊ ಅದುವೇ ಅಗಿದೆ. ಇದು ಮಿಚೆಲ್ ಸ್ಟಾರ್ಕ್ಗೆ ಅದ್ಭುತ ಕ್ಷಣವಾಗಿದೆ. ಅವರು ಮಾಡಿದ ಕಠಿಣ ಪರಿಶ್ರಮಕ್ಕೆ ಇದು ಉತ್ತಮ ಫಲವಾಗಿದೆ. ಬಹುಶಃ ಕಳೆದ ಎಂಟು ವರ್ಷಗಳಲ್ಲಿ ಅವರು ತಮ್ಮ ದೇಶವನ್ನು ಮೊದಲ ಸ್ಥಾನದಲ್ಲಿರಿಸಲು ಮಾಡಿದ ಕೆಲವು ಆಯ್ಕೆಗಳಿಗೆ ಇದು ಸಾಧ್ಯವಾಗಿದೆ ” ಎಂದು ಹೀಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : Sakshi Malik : ಕುಸ್ತಿ ಕ್ಷೇತ್ರ ತೊರೆಯುವ ಬೆದರಿಕೆ ಒಡ್ಡಿದ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್
2015ರಲ್ಲಿ ರಾಂಚಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ನಂತರದ ವರ್ಷಗಳಲ್ಲಿ, ಅವರು ದೇಶಕ್ಕಾಗಿ ಆಡಲು ಆದ್ಯತೆ ತೋರಿದ್ದರು. ಆದಾಗ್ಯೂ, ಅಂತರರಾಷ್ಟ್ರೀಯ ವೇಳಾಪಟ್ಟಿ ಮತ್ತು ಟಿ 20 ವಿಶ್ವಕಪ್ ನಡುವೆ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಐಪಿಎಲ್ನಲ್ಲಿ ಪಾಲ್ಗೊಳ್ಳಲುಮತ್ತೊಂದು ಬಾರಿ ಮನಸ್ಸು ಮಾಡಿದ್ದರು. ಅದರಲ್ಲಿ ಅವರು ದೊಡ್ಡ ಮೊತ್ತವನ್ನೇ ಪಡೆದುಕೊಂಡಿದ್ದಾರೆ.
27 ಐಪಿಎಲ್ ಪಂದ್ಯಗಳನ್ನಾಡಿರುವ ಸ್ಟಾರ್ಕ್ 20.38ರ ಸರಾಸರಿಯಲ್ಲಿ 34 ವಿಕೆಟ್ ಪಡೆದಿದ್ದಾರೆ. ಅವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲವು ಪಂದ್ಯಗಳನ್ನು ಆಡಿದ್ದಾರೆ. ಈ ಪಿಚ್ ಇದು ಬೌಲರ್ಗಳಿಗೆ ದುಃಸ್ವಪ್ನವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಅವರ ಎಕಾನಮಿ ರೇಟ್ ಕೇವಲ 7.17 ರಷ್ಟಿದ್ದು ಅವರ ಗುಣಮಟ್ಟದ ಬೌಲಿಂಗ್ಗೆ ಸಾಕ್ಷಿಯಾಗಿದೆ.