Site icon Vistara News

IPL 2024: ಗೆಲುವಿನೊಂದಿಗೆ ದಾಖಲೆ ಬರೆದ ಪಂಜಾಬ್​ ಕಿಂಗ್ಸ್​; ಮುಂಬೈ ರೆಕಾರ್ಟ್​ ಬ್ರೇಕ್​

Punjab Kings

ಅಹಮದಾಬಾದ್​: ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ ಗುರುವಾರ ನಡೆದ ಐಪಿಎಲ್​(IPL 2024) ಪಂದ್ಯದಲ್ಲಿ 3 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದ ಪಂಜಾಬ್​ ಕಿಂಗ್ಸ್(Punjab Kings)​ ಐಪಿಎಲ್​ ಇತಿಹಾಸದಲ್ಲಿ ನೂತನ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. 200 ಪ್ಲಸ್​ ಮೊತ್ತವನ್ನು ಅತ್ಯಧಿಕ ಬಾರಿ ಚೇಸಿಂಗ್​ ನಡೆಸಿ ಗೆಲುವು ಸಾಧಿಸಿದ ಮೊದಲ ತಂಡ ಎಂಬ ಸಾಧನೆ ಮಾಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್(Mumbai Indians) ತಂಡದ ದಾಖಲೆಯನ್ನು ಹಿಂದಿಕ್ಕಿದೆ.​

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್​ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 199 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಆರಂಭಿಕ ಆಘಾತದ ಕಂಡರೂ ಆ ಬಳಿಕ ಚೇತರಿಕೆ ಕಂಡು​ 19.5 ಓವರ್​ಗಳಲ್ಲಿ 200 ರನ್ ಬಾರಿಸಿ ಗೆಲುವು ಸಾಧಿಸಿತು. ಇದರೊಂದಿಗೆ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಸೋಲು ಕಂಡಿದ್ದ ಪಂಜಾಬ್ ತಂಡಕ್ಕೆ ಗೆಲುವಿನ ಚೈತನ್ಯ ದೊರಕಿತು.

ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲಿ 200 ಪ್ಲಸ್​ ಮೊತ್ತವನ್ನು ಅತಿ ಹೆಚ್ಚು ಬಾರಿ ಚೇಸಿಂಗ್​ ನಡೆಸಿದ ದಾಖಲೆ ಜಂಟಿಯಾಗಿ ಮುಂಬೈ ಮತ್ತು ಪಂಜಾಬ್​ ಪರ ಇತ್ತು. ಮುಂಬೈ 5 ಬಾರಿ ಈ ಸಾಧನೆ ಮಾಡಿತ್ತು. ಆದರೆ ಇದೀಗ ಈ ದಾಖಲೆಯನ್ನು ಪಂಜಾಬ್​ ತಂಡ ತನ್ನ ಹೆಸರಿಗೆ ಬರೆದಿದೆ. ಪಂಜಾಬ್​ 6 ಬಾರಿ ಈ ಸಾಧನೆ ಮಾಡಿದೆ. ಮುಂಬೈ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕೋಲ್ಕತ್ತಾ ಮತ್ತು ಚೆನ್ನೈ ಜಂಟಿಯಾಗಿ ಮೂರನೇ ಸ್ಥಾನ ಹಂಚಿಕೊಂಡಿದೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ 200 ಪ್ಲಸ್​ ರನ್​ ಚೇಸಿಂಗ್​ ನಡೆಸಿದ ತಂಡಗಳು


ಪಂಜಾಬ್​ ಕಿಂಗ್ಸ್​-6 ಬಾರಿ

ಮುಂಬೈ ಇಂಡಿಯನ್ಸ್-5 ಬಾರಿ

ಕೆಕೆಆರ್​- 3 ಬಾರಿ

ಸಿಎಸ್​ಕೆ- 3 ಬಾರಿ

ಶಶಾಂಕ್ ಸಿಂಗ್​ ಬಾರಿಸಿದ ಅಬ್ಬರದ ಅರ್ಧ ಶತಕ (29 ಎಸೆತ, 6 ಫೋರ್​, 4 ಸಿಕ್ಸರ್​) ಪಂಜಾಬ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಗುಜರಾತ್​ ತಂಡದ ನಾಯಕ ಶುಭ್​ಮನ್​ ಗಿಲ್​ (89) ಅವರ ಅರ್ಧ ಶತಕ ವ್ಯರ್ಥಗೊಂಡಿತು. ಅದೇ ರೀತಿ ಸ್ಥಳೀಯ ಗುಜರಾತ್ ತಂಡದ ಅಭಿಮಾನಿಗಳು ನಿರಾಸೆಗೊಂಡರು. ಗೆಲುವಿನಿಂದಿಗೆ ಪಂಜಾಬ್​ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ಪಂದ್ಯಕ್ಕೂ ಮುನ್ನ ಶಿಖರ್​ ಧವನ್​ ಪಡೆ 7ನೇ ಸ್ಥಾನಿಯಾಗಿತ್ತು. ಇದೀಗ ಗೆಲುವಿನೊಂದಿಗೆ 2 ಸ್ಥಾನಗಳ ಪ್ರಗತಿ ಸಾಧಿಸಿದೆ. ಸೋಲು ಕಂಡ ಗುಜರಾತ್​ ಒಂದು ಸ್ಥಾನ ಕುಸಿತ ಕಂಡು 6ನೇ ಸ್ಥಾನ ಪಡೆದಿದೆ.

ಇದನ್ನೂ ಒದಿ IPL 2024: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಸ್ಕರಿಸಿದ ನೀರು ಬಳಕೆ; ವರದಿ ಕೇಳಿದ ಎನ್‌ಜಿಟಿ

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೋಲ್ಕೊತಾ ನೈಟ್‌ ರೈಡರ್ಸ್​3306 (+2.518)
ರಾಜಸ್ಥಾನ್​ ರಾಯಲ್ಸ್​3306 (+1.249)
​ಚೆನ್ನೈ ಸೂಪರ್​ ಕಿಂಗ್ಸ್​3214 (+0.976)
ಲಕ್ನೋ ಸೂಪರ್​ ಜೈಂಟ್ಸ್​3214(+0.483)
ಪಂಜಾಬ್​ ಕಿಂಗ್ಸ್​4224 (-0.220)
ಗುಜರಾತ್​ ಟೈಟಾನ್ಸ್​4224 (-0.580)
ಹೈದರಾಬಾದ್​​3122 (+0.204)
ಆರ್​ಸಿಬಿ4132 (-0.876)
ಡೆಲ್ಲಿ ಕ್ಯಾಪಿಟಲ್ಸ್​4132 (-1.347)
ಮುಂಬೈ ಇಂಡಿಯನ್ಸ್​3030 (-1.423)
Exit mobile version