Site icon Vistara News

IPL Auction 2024 Live: 24.75 ಕೋಟಿ ಮೊತಕ್ಕೆ ಸ್ಟಾರ್ಕ್​ಗೆ ಬಲೆ ಬೀಸಿದ ಕೆಕೆಆರ್

Mallika Sagar

ದುಬೈ: ಬಹುನಿರೀಕ್ಷಿತ ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್​ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್​ ಮಾಹಿತಿಗಳು ಇಲ್ಲಿ ಲಭ್ಯ. 

Abhilash B C

ಟ್ರಾವಿಸ್​ ಹೆಡ್ ಈ ಬಾರಿಯ ಹರಾಜಿನಲ್ಲಿ ಕನಿಷ್ಠ 15 ಕೋಟಿ ಮೊತ್ತಕ್ಕೆ ಸೇಲ್​ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಅವರು ಕೇವಲ 6.80 ಕೋಟಿ ರೂ.ಗೆ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಸೇಲ್​ ಆದರು.

Abhilash B C

ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡದ ಗೆಲುವನ್ನು ಕಸಿದಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್​ ಹೆಡ್ ಅವರು ಈ ಬಾರಿಯ ಬಿಡ್ಡಿಂಗ್​ನ ಪ್ರಮುಖ ಆಕರ್ಷಣೆಯಾಗಿದ್ದರು. 2 ಕೋಟಿ ಮೂಲಬೆಲೆ ಹೊಂದಿದ್ದ ಅವರು ಬಹು ಕೋಟಿ ಮೊತ್ತಕ್ಕೆ ಸೇಲ್​ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ನಿರೀಕ್ಷೆ ಮಾಡಿಷ್ಟು ಮೊತ್ತಕ್ಕೆ ಅವರು ಸೇಲ್​ ಆಗಲಿಲ್ಲ. ಕೇವಲ 6.80 ಕೋಟಿ ಮೊತ್ತಕ್ಕೆ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಪಾಲಾದರು.

Abhilash B C

ಇಂಗ್ಲೆಂಡ್​ ತಂಡದ ಸ್ಫೋಟಕ ಬ್ಯಾಟರ್​ ಹ್ಯಾರಿ ಬ್ರೂಕ್​ ಅವರು 4 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಖರೀದಿ ಮಾಡಿದೆ.

Abhilash B C

ಅನ್​ ಸೋಲ್ಡ್​ ಆದ ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರಿಲಿ ರೊಸೊ. 2 ಕೋಟಿ ಮೂಲಬೆಲೆ ಹೊಂದಿದ್ದರು

Abhilash B C

Exit mobile version