Site icon Vistara News

IPL Auction 2024 Live: 24.75 ಕೋಟಿ ಮೊತಕ್ಕೆ ಸ್ಟಾರ್ಕ್​ಗೆ ಬಲೆ ಬೀಸಿದ ಕೆಕೆಆರ್

Mallika Sagar

ದುಬೈ: ಬಹುನಿರೀಕ್ಷಿತ ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್​ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್​ ಮಾಹಿತಿಗಳು ಇಲ್ಲಿ ಲಭ್ಯ. 

Abhilash B C

ಮಿಚೆಲ್ ಸ್ಟಾರ್ಕ್

ಕೆಲ ಕಾಲ ಐಪಿಎಲ್​ ಆಡಿ ಆ ಬಳಿಕ ಗಾಯದ ಸಮಸ್ಯೆ ಮತ್ತು ಕೊರೊನಾ ಜೈವಿಕ ಸುರಕ್ಷತಾ ವಲಯದಲ್ಲಿ ಆಡಲು ನಿರಾಕರಿಸಿ ಐಪಿಎಲ್​ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್​ ವೇಗಿ ಮಿಚೆಲ್​ ಸ್ಟಾಕ್​ ಅವರು ಈ ಬಾರಿಯ ಆಟಗಾರರ ಹಾರಜಿಗೆ ಹೆಸರು ನೊಂದಾಯಿಸಿದ್ದಾರೆ. ಎಂಟು ವರ್ಷಗಳ ಬಳಿಕ ಮತ್ತೆ ಐಪಿಎಲ್‌ ಟೂರ್ನಿಗೆ ಮರಳುವ ಕಾತರದಲ್ಲಿದ್ದಾರೆ. 2015ರಲ್ಲಿ ಕೊನೆಯ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಿಚೆಲ್‌ ಸ್ಟಾರ್ಕ್ ಆಡಿದ್ದರು. ಇವರಿಗೂ ಈ ಬಾರಿಯ ಹರಾಜಿನಲ್ಲಿ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ. ಮುಂಬೈ ಇಂಡಿಯನ್ಸ್​ ತಂಡ ಇವರ ಮೇಲೆ ಕಣ್ಣಿಟ್ಟಿದೆ.

Abhilash B C

ಜೆರಾಲ್ಡ್ ಕೋಟ್ಜಿ

ಈಗಾಗಲೇ 2 ಕೋಟಿ ರೂ. ಮೂಲಬೆಲೆ ಹೊಂದಿರುವ ದಕ್ಷಿಣ ಆಫ್ರಿಕಾ ತಂಡದ ಯುವ ವೇಗಿ ಮತ್ತು ಬ್ಯಾಟಿಂಗ್​ ಆಲ್​ರೌಂಡರ್​ ಆಗಿರುವ ಜೆರಾಲ್ಡ್ ಕೋಟ್ಜಿ ಅವರಿಗೆ ಈ ಬಾರಿ ಐಪಿಎಲ್​ನಲ್ಲಿ ಅದೃಷ್ಟ ಖಲಾಯಿಸುವ ಸಾಧ್ಯತೆ ಇದೆ. ವಿಶ್ವಕಪ್​ನಲ್ಲಿ ಜೆರಾಲ್ಡ್ ಕೋಟ್ಜಿ 20 ವಿಕೆಟ್​ ಕಿತ್ತು ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

Abhilash B C

ಡ್ಯಾರಿಲ್ ಮಿಚೆಲ್

ನ್ಯೂಜಿಲ್ಯಾಂಡ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಮತ್ತು ಆಲ್​ರೌಂಡರ್​ ಆಗಿರುವ ಡ್ಯಾರಿಲ್​ ಮಿಚೆಲ್​ ಅವರಿಗೂ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ. ಯಾವುದೇ ಹಂತದಲ್ಲಿಯೂ ತಂಡಕ್ಕೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಿಗಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿಯೂ ಮಿಚೆಲ್​ ಗಮನಾರ್ಹ ಪ್ರದರ್ಶನ ತೋರಿದ್ದರು. 552 ರನ್​ ಬಾರಿಸಿ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ಗಳಿಸಿದ 5ನೇ ಆಟಗಾರನಾಗಿ ಹೊರಮೊಮ್ಮಿದ್ದರು.

Abhilash B C

ರಚಿನ್ ರವೀಂದ್ರ

50 ಲಕ್ಷ ಮೂಲಬೆಲೆ ಹೊಂದಿರುವ ನ್ಯೂಜಿಲ್ಯಾಂಡ್​ನ ಯುವ ಆಟಗಾರ ರಚಿನ್​ ರವೀಂದ್ರ ಅವರಿಗೂ ಭಾರಿ ಮೊತ್ತ ಸಿಗುವ ಸಾಧ್ಯತೆ ಇದೆ. ಈ ಬಾರಿಯ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿದರೂ, ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ರನ್​ ಸಾಧಕರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದರು. ವಿಶ್ವಕಪ್​ನಲ್ಲಿ ಅವರು 578 ರನ್​ ಬಾರಿಸಿದ್ದರು. ಎಲ್ಲ ಫ್ರಾಂಚೈಸಿಗಳು ಇವರ ಮೇಲೆ ಕಣ್ಣಿಟ್ಟಿದೆ.

Abhilash B C

ಬಹುಬೇಡಿಕೆಯ ಟಾಪ್​ 5 ಆಟಗಾರರು

ಟ್ರಾವಿಸ್​ ಹೆಡ್​

ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಭಾರತದ ವಿಶ್ವಕಪ್​ ಟ್ರೋಫಿ ಕನಸನ್ನು ಭಗ್ನ ಗೊಳಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ಈ ಬಾರಿಯ ಹರಾಜಿನಲ್ಲಿ ಭಾರಿ ಮೊತ್ತ ಸಿಗುವ ನಿರೀಕ್ಷೆ ಇದೆ. ಈಗಾಗಕೇ ಅವರನ್ನು ಆಕ್ಷನ್​ನಲ್ಲಿ 20 ಕೋಟಿ ರೂ. ನೀಡಿಯಾದರೂ ಖರೀದಿಸಲು ಕೆಲವು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ ಹೆಡ್​ ಅವರು ಈ ಬಾರಿ ಅತ್ಯಧಿಕ ಮೊತ್ತಕ್ಕೆ ಸೇಲ್​ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಿದ ಅನುಭವ ಹೊಂದಿದ್ದಾರೆ.

Exit mobile version