Site icon Vistara News

ODI Ranking : ವಿಶ್ವ ಕಪ್​ಗೆ ಮೊದಲೇ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಪಾಕಿಸ್ತಾನ!

Pakistan Cricket Team

ಇಸ್ಲಾಮಾಬಾದ್​: 2023ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ (Pakista Cricket Team) ವಿಶ್ವದ ನಂಬರ್​ ಒನ್​ ಏಕದಿನ ಕ್ರಿಕೆಟ್​ ತಂಡವಾಗಿ ಪಾಲ್ಗೊಳ್ಳಲಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿದ ನಂತರ ಏಷ್ಯಾದ ಈ ತಂಡ ಅಂಕಪಟ್ಟಿಯಲ್ಲಿ (ODI Ranking) ಅಗ್ರಸ್ಥಾನಕ್ಕೇರಿದೆ.

ಈ ಗೆಲುವಿನೊಂದಿಗೆ ಪಾಕಿಸ್ತಾನವು ಆಸ್ಟ್ರೇಲಿಯಾವನ್ನು ಅಗ್ರಸ್ಥಾನದಿಂದ ಕೆಳಗಿಳಿಸಿತು. ಅದೇ ರೀತಿ ಮೂರನೇ ಶ್ರೇಯಾಂಕದ ಭಾರತಕ್ಕಿಂತ ಅಂತರವನ್ನು ಹೆಚ್ಚಿಸಿಕೊಂಡಿತು.

ಹಂಬಂಟೋಟದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಅಫ್ಘಾನಿಸ್ತಾನವನ್ನು 142 ರನ್​ಗಳಿಂದ ಸೋಲಿಸಿತ್ತು. ‘ಮೆನ್ ಇನ್ ಗ್ರೀನ್’ ಎರಡನೇ ಗೇಮ್ ನಲ್ಲಿ ಮತ್ತಷ್ಟು ಮೇಲುಗೈ ಸಾಧಿಸಿತು, ಅಂತಿಮ ಓವರ್ ಥ್ರಿಲ್ಲರ್ ನಲ್ಲಿ ಒಂದು ಚೆಂಡು ಮತ್ತು ಒಂದು ವಿಕೆಟ್ ಬಾಕಿ ಇರುವಾಗ ಗೆಲುವು ಸಾಧಿಸಿತು.

ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನದ ಇತ್ತೀಚಿನ ಗೆಲುವುಗಳು ಐಸಿಸಿ ಏಕದಿನ ತಂಡ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ. ಇದರಿಂದಾಗಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಕ್ಕೆ ಕೆಲವೇ ವಾರಗಳ ಮೊದಲು ಈ ಸಾಧನೆಯನ್ನು ಸಾಧಿಸಿದೆ. ಏತನ್ಮಧ್ಯೆ, ಆಸ್ಟ್ರೇಲಿಯಾ ಎರಡನೇ ಸ್ಥಾನಕ್ಕೆ ಕುಸಿದರೆ, ಭಾರತ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಅಗ್ರ 10 ಸ್ಥಾನಗಳಲ್ಲಿ ಮುಂದಿನ ಮೂರು ಸ್ಥಾನಗಳಲ್ಲಿವೆ.

ಇದನ್ನೂ ಓದಿ: Afghanistan vs Pakistan: ಪಾಕಿಸ್ತಾನ ವಿರುದ್ಧ ಆಕರ್ಷಕ ಶತಕ ಬಾರಿಸಿದ ರಹಮಾನುಲ್ಲಾ ಗುರ್ಬಾಜ್

ಬಾಬರ್ ಅಜಮ್​ ಮತ್ತು ತಂಡವು ಮುಂಬರುವ ಏಷ್ಯಾ ಕಪ್ 2023 ಟೂರ್ನಿಯಲ್ಲಿ ತವರು ಮತ್ತು ಶ್ರೀಲಂಕಾದಲ್ಲಿ ಅವರ ಪ್ರದರ್ಶನ ನೀಡಲಿದೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ಶ್ರೇಯಾಂಕವನ್ನು ಮತ್ತಷ್ಟು ಹೆಚ್ಚಿಸಬಹುದು. ಪ್ರೀಮಿಯರ್ ಕಾಂಟಿನೆಂಟಲ್ ಟೂರ್ನಮೆಂಟ್​ಗೆ ಮುಂಚಿತವಾಗಿ ಅವರು ತಮ್ಮ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದ್ದಾರೆ.

2023ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಮುನ್ನ ಪಾಕಿಸ್ತಾನ ತಂಡ ಡ್ರೆಸ್ ರಿಹರ್ಸಲ್ ನಡೆಸಲಿದೆ. ಅಕ್ಟೋಬರ್ 6 ರಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದೊಂದಿಗೆ ಅವರು ತಮ್ಮ ಅಭಿಯಾನ ಪ್ರಾರಂಭಿಸಲಿದ್ದು, ಅಕ್ಟೋಬರ್ 14 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಮತ್ತು ಆತಿಥೇಯ ಭಾರತವನ್ನು ಎದುರಿಸಲಿದ್ದಾರೆ.

ಮಗಳ ಶಾಲಾ ಫೀಸ್​ ಕಟ್ಟಲೂ ದುಡ್ಡಿರಲಿಲ್ಲ, ಪಾಕ್​ ಕ್ರಿಕೆಟಿಗನ ಅಳಲು

ಪಿಸಿಬಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ 2020ರಲ್ಲಿ ಅಮಾನತುಗೊಂಡ ನಂತರ ಪಾಕಿಸ್ತಾನದ ಹಿರಿಯ ಬ್ಯಾಟರ್ (Pakistan Cricket)​ ಉಮ್ರಾನ್ ಅಕ್ಮಲ್​ ಸಾಕಷ್ಟು ಕಷ್ಟಪಟ್ಟಿದ್ದರಂತೆ. ಅವರು ಆ ವಿಷಯವನ್ನು ಇದೀಗ ನೆನಪಿಸಿಕೊಂಡಿದ್ದಾರೆ. ಇದು ತನಗೆ ಮತ್ತು ಕುಟುಂಬ ಸದಸ್ಯರಿಗೆ ತುಂಬಾ ಕಷ್ಟದ ಸಮಯವಾಗಿತ್ತು ಎಂದು ಅಕ್ಮಲ್ ಹೇಳಿದ್ದಾರೆ. ತನ್ನ ಮಗಳ ಶಾಲಾ ಫೀಸ್ ಕಟ್ಟುವುದಕ್ಕೂ ನನ್ನ ಬಳಿ ದುಡ್ಡು ಇರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅಕ್ಮಲ್ 2019 ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಈಗಲೂ ಅವರು ರಾಷ್ಟ್ರೀಯ ತಂಡಕ್ಕೆ ಮರಳುವ ಭರವಸೆ ಹೊಂದಿದ್ದಾರೆ.

ನಾನು ಎದುರಿಸಿದ ಕೆಟ್ಟ ಸಮಯವನ್ನು ಯಾರೂ ಎದುರಿಸಬಾರದು. ನನ್ನ ಶತ್ರುಗಳು ಸಹ ಎದುರಿಸಬೇಕಾಗಿಲ್ಲ. ಅಲ್ಲಾಹನು ಒಬ್ಬ ವ್ಯಕ್ತಿಯನ್ನು ಪರೀಕ್ಷಿಸುತ್ತಾನೆ. ಆದಾಗ್ಯೂ, ನಾನು ಕೆಟ್ಟ ಹಂತವನ್ನು ಎದುರಿಸುತ್ತಿದ್ದಾಗ, ಬಹಳಷ್ಟು ಜನರು ತಮ್ಮ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದರು. ನನ್ನ ಪರವಾಗಿ ನಿಲ್ಲಲಿಲ್ಲ. ಆದರೆ ಇನ್ನೂ ನನ್ನ ಪಕ್ಕದಲ್ಲಿ ನಿಂತಿರುವವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಅಕ್ಮಲ್ ಜಿಯೊ ನ್ಯೂಸ್​ಗೆ ತಿಳಿಸಿದ್ದಾರೆ.

ನಾನು ನನ್ನ ಮಗಳನ್ನು ಎಂಟು ತಿಂಗಳವರೆಗೆ ಶಾಲೆಗೆ ಕಳುಹಿಸಲು ಸಾಧ್ಯವಾಗಲಿಲ್ಲ. ಆ ಕಠಿಣ ದಿನಗಳಲ್ಲಿ ನನ್ನ ಹೆಂಡತಿ ನನ್ನನ್ನು ನಿರಾಸೆಗೊಳಿಸಲಿಲ್ಲ ಎಂದು ಅವರು ನೆನಪಿಸಿಕೊಂಡರು. ಆ ದಿನಗಳ ಬಗ್ಗೆ ಯೋಚಿಸಿದಾಗಲೆಲ್ಲಾ ಪತ್ನಿಯ ಕಣ್ಣುಗಳಲ್ಲಿ ನೀರು ಬರುತ್ತದೆ. “ನನ್ನ ಹೆಂಡತಿ ಚಿನ್ನದ ಚಮಚ ಬಾಯಲಿಟ್ಟುಕೊಂಡು ಜನಿಸಿದವಳು. ಆದರೆ ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಅವಳು ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಳು. ಅದಕ್ಕಾಗಿ ನಾನು ಅವಳಿಗೆ ಕೃತಜ್ಞನಾಗಿದ್ದೇನೆ ಎಂದು ಅಕ್ಮಲ್ ಹೇಳಿದ್ದಾರೆ.

ವಿಕೆಟ್ ಕೀಪರ್-ಬ್ಯಾಟರ್​​ 2019ರಲ್ಲಿ ಕೊನೆಯ ಬಾರಿಗೆ ಅಂತಾರರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ, 33 ವರ್ಷದ ಅಕ್ಮಲ್ ಕಠಿಣ ಪರಿಶ್ರಮದಿಂದ ಫಲಿತಾಂಶಗಳನ್ನು ನೀಡುವ ಭರವಸೆ ಹೊಂದಿದ್ದಾರೆ. ಅಲ್ಲದೆ, ದೇಶಕ್ಕಾಗಿ ಆಡುವ ಉತ್ಸಾಹವನ್ನು ತೋರಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್​​ ಪಿಸಿಬಿ 2020ರಲ್ಲಿ ಅಮಾನತುಗೊಳಿಸಿತು.

Exit mobile version