Site icon Vistara News

PBKS vs GT: ಗುಜರಾತ್​ ವಿರುದ್ಧವಾದರೂ ಪಂಜಾಬ್​ಗೆ ಒಲಿದೀತೇ ಗೆಲುವಿನ ಅದೃಷ್ಟ?

PBKS vs GT

ಮುಲ್ಲಾನ್‌ಪುರ್‌ (ಚಂಡೀಗಢ): ಪ್ರತಿ ಪಂದ್ಯದಲ್ಲಿಯೂ ಗೆಲುವಿನಂಚಿಗೆ ಬಂದು ವಿರೋಚಿತ ಸೋಲು ಕಾಣುತ್ತಿರುವ ಪಂಜಾಬ್​ ಕಿಂಗ್ಸ್(Punjab Kings)​ ತಂಡ ಭಾನುವಾರದ ರಾತ್ರಿಯ ಐಪಿಎಲ್(IPL 2024) ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್(PBKS vs GT)​ ವಿರುದ್ಧ ಆಡಲಿದೆ. ಪಂಜಾಬ್‌ನ ನೂತನ ಹೋಮ್‌ ಗ್ರೌಂಡ್‌ ಆಗಿರುವ ಮುಲ್ಲಾನ್‌ಪುರ್‌ನಲ್ಲಿ ಈ ಮಹತ್ವದ ಮುಖಾಮುಖಿ ಸಾಗಲಿದೆ. ಪ್ಲೇ ಆಫ್​ ಹಾದಿ ಜೀವಂತವಿರಿಸಬೇಕಿದ್ದರೆ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಮುಖ್ಯ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆ ಇದೆ.

ಪಂಜಾಬ್​ಗೆ ದೊಡ್ಡ ಸಮಸ್ಯೆಯೆಂದರೆ ಓಪನಿಂಗ್‌ನಲ್ಲಿ ಅನುಭವಿಸುತ್ತಿರುವ ಹಿನ್ನಡೆ. ಬ್ಯಾಟಿಂಗ್‌ ಲೈನ್‌ಆಪ್‌ ಉತ್ತಮ ವಾಗಿದ್ದರೂ ಕೂಡ ಯಾರೊಬ್ಬರು ನಿಂತು ಆಡುತ್ತಿಲ್ಲ. ಯುವ ಬ್ಯಾಟರ್‌ಗಳಾದ ಶಶಾಂಕ್‌ ಸಿಂಗ್‌ ಮತ್ತು ಅಶುತೋಷ್‌ ಶರ್ಮ ಜೋಡಿಯಷ್ಟೇ ಭರವಸೆ ಮೂಡಿಸಿದೆ. ಉಭಯ ಆಟಗಾರರೇ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ಆಸರೆಯಾಗಿ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಉಳಿದವರು ಛಾತಿಗೆ ತಕ್ಕ ಪ್ರದರ್ಶನ ನೀಡುತ್ತಿಲ್ಲ.

ಇದನ್ನೂ ಓದಿ Impact Player Rule : ಇಂಪ್ಯಾಕ್ಟ್​ ಪ್ಲೇಯರ್​​ ಸಿಕ್ಕಾಪಟ್ಟೆ ವಿರೋಧ; ಇದೀಗ ಋತುರಾಜ್​ ಸರದಿ

ಖಾಯಂ ನಾಯಕ ಶಿಖರ್​ ಧವನ್​ ಈ ಪಂದ್ಯದಲ್ಲಿಯೂ ಆಡುವುದು ಅನುಮಾನ. ಹೀಗಾಗಿ ಹಂಗಾಮಿ ನಾಯಕ ಸ್ಯಾಮ್​ ಕರನ್​ ಅವರೇ ತಂಡವನ್ನು ಮುನ್ನಡೆಸಬಹುದು. ಪಂಜಾಬ್‌ ಬೌಲಿಂಗ್‌ ಈವರೆಗೆ ಘಾತಕವಾಗಿ ಪರಿಣಮಿ ಸಿಲ್ಲ. ಕಗಿಸೊ ರಬಾಡ, ಅರ್ಷದೀಪ್‌ ಸೀಂಗ್​, ಕರನ್‌, ಬ್ರಾರ್‌ ಮ್ಯಾಜಿಕ್‌ ಮಾಡಿದರಷ್ಟೇ ಗೆಲುವು ಸಾಧ್ಯ.

ಗುಜರಾತ್​​ ತಂಡ ತವರಿನ ಪಂದ್ಯದಲ್ಲಿ ಹೆಚ್ಚು ಪಂದ್ಯ ಗೆದ್ದಿದೆ. ಹೊರಗಡೆ ಆಡಿದ ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ತಂಡದ ಮೇಲೆ ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ. ಬೌಲಿಂಗ್​ ಮತ್ತು ಬ್ಯಾಟಿಂಗ್​ ಸಾಧಾರಣ ಮಟ್ಟದಲ್ಲಿದೆ. ಕಳೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 89 ರನ್​ಗೆ ಸರ್ವಪತನ ಕಂಡಿತ್ತು. ಬೌಲಿಂಗ್​ ಕೂಡ ಚೆತರಿಕೆ ಕಾಣದ ಹೊರತು ಗೆಲುವು ದೂರದ ಬೆಟ್ಟವಾಗಿ ಉಳಿಯಲಿದೆ.

ಮುಖಾಮುಖಿ


ಗುಜರಾತ್​ ಟೈಟಾನ್ಸ್ ಮತ್ತು ಪಂಜಾಬ್​ ಕಿಂಗ್ಸ್ ಇದುವರೆಗೆ ಒಟ್ಟು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಉಭಯ ತಂಡಗಳು ಕೂಡ ತಲಾ 2 ಗೆಲುವು ಮತ್ತು ಸೋಲು ಕಂಡಿದೆ. ಕಳೆದ ಆವೃತ್ತಿಯ ಮುಖಾಮುಖಿಯಲ್ಲಿ ಪಂಜಾಬ್​ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು


ಗುಜರಾತ್​: ಶುಭಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆ), ಸಾಯಿ ಸುದರ್ಶನ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಸ್ಪೆನ್ಸರ್ ಜಾನ್ಸನ್, ಸಂದೀಪ್ ವಾರಿಯರ್.

ಪಂಜಾಬ್​ ಕಿಂಗ್ಸ್​: ರಿಲೀ ರೊಸೊವ್, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕರ್ರಾನ್ (ನಾಯಕ), ಜಿತೇಶ್ ಶರ್ಮಾ (ವಿಕೆ), ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.

Exit mobile version