ಜೈಪುರ: ಮುಂಬೈ ಇಂಡಿಯನ್ಸ್(Mumbai Indians) ಮತ್ತು ರಾಜಸ್ಥಾನ್ ರಾಯಲ್ಸ್(Rajasthan Royals) ನಡುವಣ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮ(Rohit Sharma) ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್(Shane Bond) ಕಿಸ್ ಕೊಡಲು ಬಂದ ಘಟನೆಯೊಂದು ನಡೆದಿದೆ. ಕಿಸ್ ಕೊಡಲು ಬಂದ ಬಾಂಡ್ ಕಂಡು ರೋಹಿತ್ ಒಂದು ಕ್ಷಣ ತಬ್ಬಿಬ್ಬಾದರು. ಈ ವಿಡಿಯೊವನ್ನು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಉಭಯ ತಂಡಗಳ ಪಂದ್ಯಕ್ಕೂ ಮುನ್ನ ಆಟಗಾರರು ಅಭ್ಯಾಸ ನಡೆಸುತ್ತಿದ್ದರು. ರೋಹಿತ್ ಶರ್ಮ ಅವರು ಅಶ್ವಿನ್ ಜತೆ ಮಾತುಕತೆಯಲ್ಲಿ ನಿರತರಾಗಿದ್ದರು. ಈ ವೇಳೆ ಹಿಂದಿನಿಂದ ಬಂದ ಶೇನ್ ಬಾಂಡ್ ಅವರು ರೋಹಿತ್ ಕೆನ್ನೆಗೆ ಕಿಸ್ ಕೊಡಲು ಮುಂದಾದರು. ಇದನ್ನು ಕಂಡ ರೋಹಿತ್ ಒಂದು ಕ್ಷಣ ಗಾಬರಿಯಾದರು. ಬಳಿಕ ನಗುತ್ತಾ ಕುಶಲೋಪರಿ ನಡೆಸಿದರು. ಶೇನ್ ಬಾಂಡ್ ಅವರು ಈ ಹಿಂದೆ ಮುಂಬೈ ತಂಡದ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ರೋಹಿತ್ ಜತೆ ಆತ್ಮೀಯತೆ ಇದೆ. ಇದೇ ಕಾರಣದಿಂದ ಅವರು ಫನ್ ಮಾಡುವ ನಿಟ್ಟಿನಲ್ಲಿ ಕಿಸ್ ಕೊಟ್ಟಂತೆ ಸನ್ನೆ ಮಾಡಿದ್ದಾರೆ. ಈ ವಿಡಿಯೊ ವೈರಲ್(viral video) ಆಗಿದೆ.
Some 𝘉𝘰𝘯𝘥𝘴 are priceless 💙🩷#MumbaiMeriJaan #MumbaiIndians | @ImRo45 pic.twitter.com/s627hbYzuN
— Mumbai Indians (@mipaltan) April 21, 2024
ಇದನ್ನೂ ಓದಿ IPL 2024 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್
ರೋಹಿತ್ ಶರ್ಮ ಅವರು ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು. ಮುಂಬೈ ತಂಡ 9 ವಿಕೆಟ್ಗಳ ಅಂತರದ ಹೀನಾಯ ಸೋಲು ಕಂಡಿತು. ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್ ಮಾಡಿತು. ಅಂತೆಯೇ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್ಆರ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ನೆರವಾದರು. ಬಟ್ಲರ್ 25 ಎಸೆತಕ್ಕೆ 35 ರನ್ ಬಾರಿಸ ಔಟಾದರೆ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿ 60 ಎಸೆತಕ್ಕೆ ಅಜೇಯ 104 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್ 28 ಎಸೆತಕ್ಕೆ 38 ರನ್ ಬಾರಿಸಿ ಕೊನೇ ತನಕ ಉಳಿದರು. ಬೌಲಿಂಗ್ನಲ್ಲಿ 4 ಓವರ್ ದಾಳಿ ನಡೆಸಿದ ಸಂದೀಪ್ 18 ರನ್ಗೆ 5 ವಿಕೆಟ್ ಕೆಡವಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.