Site icon Vistara News

ಐಸಿಸಿ ವರ್ಷದ ಟಿ20 ತಂಡಕ್ಕೆ ಸೂರ್ಯಕುಮಾರ್​ ನಾಯಕ; ರೋಹಿತ್​, ಕೊಹ್ಲಿಗಿಲ್ಲ ಸ್ಥಾನ

Suryakumar Yadav

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2023ರ ವರ್ಷದ(ICC T20I team of the year) ಟಿ20 ತಂಡವನ್ನು ಪ್ರಕಟಿಸಿದ್ದು ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್ ಯಾದವ್(Suryakumar Yadav) ಈ ತಂಡಕ್ಕೆ ನಾಯಕನಾಗಿದ್ದಾರೆ. ಅಚ್ಚರಿ ಎಂದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್​ಪ್ರೀತ್​ ಬುಮ್ರಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಈ ತಂಡದಲ್ಲಿ ಒಟ್ಟು ಭಾರತದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಅವರೆಂದರೆ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್, ರವಿ ಬಿಷ್ಣೋಯಿ ಮತ್ತು ಅರ್ಶದೀಪ್ ಸಿಂಗ್. ಬೆರಳೆಣಿಕೆಯ ಟಿ20 ಪಂದ್ಯ ಆಡಿದ್ದರೂ ಕೂಡ ಜೈಸ್ವಾಲ್​ ಮತ್ತು ಬಿಷ್ಣೋಯಿ ಈ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು ಅಚ್ಚರಿಯಾಗಿದೆ.

ಜಿಂಬಾಬ್ವೆ ತಂಡದ ಸಿಕಂದರ್ ರಾಜಾ, ಉಗಾಂಡಾದ ಅಲ್ಪೇಶ್ ರಂಜಾನಿ ಮತ್ತು ಐರ್ಲೆಂಡ್ ನ ಮಾರ್ಕ್ ಅಡೈರ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಂಜಾನಿ 2023ರಲ್ಲಿ 30 ಟಿ20 ಪಂದ್ಯಗಳನ್ನು ಆಡಿ 50 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದರು. ವಿಂಡೀಸ್​ ತಂಡೆದಿಂದ ನಿಕೋಲಸ್​ ಪೂರನ್​ ಮಾತ್ರ ಅವಕಾಶ ಪಡೆದಿದ್ದಾರೆ.

ಐಸಿಸಿ ಟಿ20 ತಂಡ 2023


ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಫಿಲ್ ಸಾಲ್ಟ್, ನಿಕೋಲಸ್ ಪೂರನ್, ಮಾರ್ಕ್ ಚಾಪ್ಮನ್, ಸಿಕಂದರ್ ರಜಾ, ಅಲ್ಪೇಶ್ ರಂಜಾನಿ, ಮಾರ್ಕ್ ಅಡೈರ್, ರವಿ ಬಿಷ್ಣೋಯಿ, ರಿಚರ್ಡ್ ಎನ್ ಗರವ, ಅರ್ಶದೀಪ್ ಸಿಂಗ್.

ಇದನ್ನೂ ಓದಿ ICC T20I Rankings: ಬೌಲಿಂಗ್​ ಶ್ರೇಯಾಂಕದಲ್ಲಿ ಜೀವನ ಶ್ರೇಷ್ಠ ಪ್ರಗತಿ ಸಾಧಿಸಿದ ಅಕ್ಷರ್​ ಪಟೇಲ್

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಸೂರ್ಯಕುಮಾರ್​


ದಕ್ಷಿಣ ಆಫ್ರಿಕಾ ಟಿ20 ಸರಣಿಯ ಪ್ರವಾಸದ ವೇಳೆ ಎಡ ಪಾದದ ನೋವಿಗೆ ಸಿಲುಕಿದ್ದ ಸೂರ್ಯಕುಮಾರ್​ ಲಂಡನ್​ನಲ್ಲಿ ಕಳೆದ ವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಅವರು ಲಂಡನ್​ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರ್ನಿಯಾ ಶಸ್ತ್ರಚಿಕಿತ್ಸೆಯ ಒಳಗಾದ ಅವರು ಕ್ರಿಕೆಟ್​ ತರಬೇತಿಯನ್ನು ಪ್ರಾರಂಭಿಸಲು ಎಂಟು-ಒಂಬತ್ತು ವಾರಗಳು ತೆಗೆದುಕೊಳ್ಳಬಹುದು ಎನ್ನಲಾಗಿದೆ. ಐಪಿಎಲ್ ಸಮಯದಲ್ಲಿ ಅವರು ಫಿಟ್ ಆಗುವ ಸಾಧ್ಯತೆ ಇದೆ. ಆದರೆ ಟಿ20 ವಿಶ್ವಕಪ್​ ಕೂಡ ಇರುವುದರಿಂದ ಅವರಿಗೆ ಬಿಸಿಸಿಐ ಪೂರ್ಣ ಪ್ರಮಾಣದಲ್ಲಿ ಐಪಿಎಲ್​ ಆಡಲು ಅನುಮತಿ ನೀಡುವುದು ಕೂಡ ಅನುಮಾನ ಎನ್ನಲಾಗಿದೆ.

ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯ ಎಡ ಪಾದದ ನೋವಿಗೆ ಸಿಲುಕಿದ್ದರು. ಗಾಯದ ಬಳಿಕ ಸ್ಟಿಕ್​ನಲ್ಲಿ ನಡೆದಾಡುದ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. “ಗಾಯಗಳು ಎಂದಿಗೂ ವಿನೋದಮಯವಾಗಿರುವುದಿಲ್ಲ, ಆದರೆ ನಾನು ಅದನ್ನು ನನ್ನ ಹೆಜ್ಜೆಯಲ್ಲಿ ತೆಗೆದುಕೊಳ್ಳುತ್ತೇನೆ ಮತ್ತು ಯಾವುದೇ ಸಮಯದಲ್ಲಿ ಹಿಂತಿರುಗಿ, ಸಂಪೂರ್ಣವಾಗಿ ಫಿಟ್ ಆಗುತ್ತೇನೆ ಎಂದು ಭರವಸೆ ನೀಡುತ್ತೇನೆ! ಅಲ್ಲಿಯವರೆಗೆ, ನೀವೆಲ್ಲರೂ ರಜಾದಿನವನ್ನು ಆನಂದಿಸುತ್ತಿದ್ದೀರಿ ಮತ್ತು ಪ್ರತಿದಿನ ಸ್ವಲ್ಪ ಸಂತೋಷವನ್ನು ಕಂಡುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ” ಎಂದು ಸೂರ್ಯಕುಮಾರ್​ ಬರೆದುಕೊಂಡಿದ್ದರು.

Exit mobile version