ಕರಾಚಿ: ಒಂದೆಡೆ ಪಾಕಿಸ್ತಾನ ತಂಡ(Pakistan Cricket Team) ವಿಶ್ವಕಪ್ನಲ್ಲಿ ಸೋಲು ಕಾಣುತ್ತಿರುವ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಪಾಕಿಸ್ತಾನ ತಂಡದ ಮಾಜಿ ನಾಯಕ ರಶೀದ್ ಲತೀಫ್(Rashid Latif) ಅವರು ಪಾಕ್ ಕ್ರಿಕೆಟ್ ಮಂಡಳಿಯ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಕಳೆದ 5 ತಿಂಗಳಿನಿಂದ ಪಾಕ್ ಆಟಗಾರರಿಗೆ ವೇತನವನ್ನೇ ನೀಡಿಲ್ಲ ಎಂದು ಆರೋಪಿದ್ದಾರೆ.
ಪಾಕ್ನ ಸ್ಥಳೀಯ ಸುದ್ದಿವಾಹಿನಿಯೊಂದರಲ್ಲಿ ಈ ವಿಚಾರವನ್ನು ಬಹಿರಂಪಡಿಸಿರುವ ಲತೀಫ್, “ಕಳೆದ 5 ತಿಂಗಳಿನಿಂದ ಪಾಕ್ ಆಟಗಾರರಿಗೆ ವೇತನವೇ ನೀಡಿಲ್ಲ. ಹೀಗಿರುವಾಗ ಆಟಗಾರರು ನಿಮ್ಮ ಮಾತನ್ನು ಎಲ್ಲಿ ಕೇಳುತ್ತಾರೆ. ಸೋಲು ಕಂಡರೂ ಅವರು ತಂಡದ ಬಗ್ಗೆ ಚಿಂತಿಸುವುದಿಲ್ಲ. ಅವರ ಮಾತನ್ನು ನೀವು ಪಾಲಿಸದ ಹೊರತು ನಿಮ್ಮ ಮಾತನ್ನು ಏಕೆ ಅವರು ಕೆಳುತ್ತಾರೆ. ಇದೇ ಕಾರಣಕ್ಕೆ ತಂಡ ಸೋಲು ಕಾಣುತ್ತಿದೆ. ಅವರಿಗೆ ಸಿಗಬೇಕಾದ ವೇತನವನ್ನು ನೀಡಿದರೆ ಆಟಗಾರರು ಕೂಡ ತಂಡಕ್ಕಾಗಿ ಆಡಲು ಸಿದ್ಧರಿರುತ್ತಾರೆ. ವೇತನ ನೀಡದ ಪಿಸಿಬಿಗೆ ತಂಡದ ಸೋಲಿನ ಬಗ್ಗೆ ಟೀಕೆ ಮಾಡುವ ಯಾವುದೇ ಹಕ್ಕು ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ Pakistan Cricket Team : ಸೋಲಿಗೆ ಶಿಕ್ಷೆ; ಪಾಕ್ ಆಟಗಾರರಿಗೆ ಇನ್ನುಮುಂದೆ ಬಿರಿಯಾನಿ ಬಂದ್!
ಇಂಜಮಾಮ್ ದಿಢೀರ್ ರಾಜೀನಾಮೆ
ಪಾಕ್ ತಂಡದ ಮುಖ್ಯ ಆಯ್ಕೆಗಾರ ಇಂಜಮಾಮ್ ಉಲ್ ಹಕ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಭಾರತದಲ್ಲಿರುವ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡುತ್ತಿರುವ ಬಗ್ಗೆ ಅರ್ಥವಿಲ್ಲದ ಪ್ರಶ್ನೆಗಳನ್ನು ಕೇಳಿ ಪಾಕ್ ಜನರು ಹಿಂಸ ನೀಡುತ್ತಿದ್ದಾರೆ, ಇದೇ ಕಾರಣಕ್ಕೆ ನಾನು ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿ ತಮ್ಮ ಸ್ಥಾನದಿಂದ ಕೆಳಗಿಳಿದ್ದಾರೆ.
ಇಂಜಮಾಮ್ ರಾಜೀನಾಮೆಯ ಬಗ್ಗೆಯೂ ಮಾತನಾಡಿದ ಲತೀಫ್, ಪಾಕ್ ಕ್ರಿಕೆಟ್ ಮಂಡಳಿಯ ಕೆಲ ನಿರ್ಧಾರಕ್ಕೆ ಬೇಸತ್ತು ಅವರು ರಾಜೀನಾಮೆ ನೀಡಿದ್ದೇ ಹಿರತು ಜನರ ಪ್ರಶ್ನೆಗಳಿಂದ ನೋವಾಗಿ ಅಲ್ಲ ಎಂದಿದ್ದಾರೆ. ಆಟಗಾರರ ಮತ್ತು ಆಯ್ಕೆ ಸಮಿತಿಯ ಯಾವುದೇ ನಿರ್ಧಾರ ಮತ್ತು ಬೇಡಿಕೆಗಳನ್ನು ಪಾಕ್ ಕ್ರಿಕೆಟ್ ಮಂಡಳಿ ಇದುವರೆಗೂ ನಡೆಸಿ ನೆರವೇರಿಸಿಲ್ಲ. ಬೇರೆ ಯಾವುದೇ ದೇಶದ ಕ್ರಿಕೆಟ್ ಮಂಡಳಿಯೂ ಈ ರೀತಿಯಲ್ಲಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿಯ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ.
ಹಿತಾಸಕ್ತಿ ಸಂಘರ್ಷ?
ಇಂಜಮಾಮ್ ಅವರು ಆಟಗಾರರ ಏಜೆನ್ಸಿಯಾದ ‘ಯಾಜೋ ಇಂಟರ್ನ್ಯಾಷನಲ್ ಲಿಮಿಟೆಡ್’ ನ ಪಾಲುದಾರರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ರಿಜ್ವಾನ್ ಈ ಕಂಪನಿಯನ್ನು ಪ್ರತಿನಿಧಿಸುವ ಕೆಲವು ತಾರೆಗಳಲ್ಲಿ ಸೇರಿದ್ದಾರೆ. ಇಂಜಮಾಮ್ ಕಂಪನಿಯ ಮಧ್ಯಸ್ಥಗಾರ ಮತ್ತು ಮುಖ್ಯ ಆಯ್ಕೆದಾರನಾಗಿರುವುದರಿಂದ ಇದು ಖಂಡಿತವಾಗಿಯೂ ಪ್ರಮುಖ ಹಿತಾಸಕ್ತಿ ಸಂಘರ್ಷವಾಗುತ್ತದೆ. ಈ ಕುರಿತು ತನಿಖೆ ಆರಂಭಗೊಂಡಿದೆ.
🗣️Inzamam Ul Haq reveals the reason behind his resignation.pic.twitter.com/fuKSjwj9AB
— CricTracker (@Cricketracker) October 30, 2023
ಅಜಂ ವಾಟ್ಸ್ಆ್ಯಪ್ ಮಾಹಿತಿ ಸೋರಿಕೆ
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರು ತಂಡದ ಸಮಸ್ಯೆ ಕುರಿತು ಪಾಕಿಸ್ತಾನ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್(PCB chief Zaka Ashraf) ಅವರಿಗೆ ಕಳುಹಿಸಿರುವ ವಾಟ್ಸ್ಆ್ಯಪ್ ಸಂದೇಶ ಸೋರಿಕೆಯಾಗಿದೆ. ಅಚ್ಚರಿ ಎಂದರೆ ಇದನ್ನು ಸೋರಿಕೆ ಮಾಡಿದ್ದೇ ಝಾಕಾ ಅಶ್ರಫ್. ಭಾನುವಾರ ತಡರಾತ್ರಿ ಬಾಬರ್ ಅಜಂ ಅವರ ವೈಯಕ್ತಿಕ ವಾಟ್ಸಾಪ್ ಸಂದೇಶಗಳನ್ನು ಅಶ್ರಫ್ ಲೈವ್ ಟಿವಿಯಲ್ಲಿ ಸೋರಿಕೆ ಮಾಡಿದ್ದರು. ಪಿಸಿಬಿ ಮುಖ್ಯಸ್ಥರ ಕ್ರಮಗಳು ನೈತಿಕ ಕಳವಳಗಳನ್ನು ಹುಟ್ಟುಹಾಕಿದೆ. ಏಕೆಂದರೆ ಪಾಕಿಸ್ತಾನ ನಾಯಕ ಬಾಬರ್ ತಮ್ಮ ಖಾಸಗಿ ಸಂದೇಶಗಳನ್ನು ಲೈವ್ ಟಿವಿಯಲ್ಲಿ ಹಂಚಿಕೊಳ್ಳಲು ಅನುಮತಿ ನೀಡಿದ್ದಾರೆಯೇ ಎಂಬುದು ತಿಳಿದಿಲ್ಲ. ಖಾಸಗಿ ಸಂದೇಶಗಳನ್ನು ಸೋರಿಕೆ ಮಾಡುವುದು ಗೌಪ್ಯತೆ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.