Viral News: ಮಾಜಿ ಸೇನಾಧಿಕಾರಿಯನ್ನು ಒಂದೇ ಏಟಿನಿಂದ ಕೊಂದ ಬಾಲಕ! ಶಾಕಿಂಗ್‌ ವಿಡಿಯೊ Vistara News

ವಿದೇಶ

Viral News: ಮಾಜಿ ಸೇನಾಧಿಕಾರಿಯನ್ನು ಒಂದೇ ಏಟಿನಿಂದ ಕೊಂದ ಬಾಲಕ! ಶಾಕಿಂಗ್‌ ವಿಡಿಯೊ

Viral News: 82ರ ವರ್ಷದ ಮಾಜಿ ಸೇನಾಧಿಕಾರಿಯನ್ನು ಕೊಂದ ಹದಿ ಹರೆಯದ ಯುವಕನಿಗೆ ಇಂಗ್ಲೆಂಡ್‌ನ ಕೋರ್ಟ್‌ ಶಿಕ್ಷೆ ವಿಧಿಸಿದೆ. ಆತ ದಾಳಿ ನಡೆಸಿದ ವಿಡಿಯೊ ಇದೀಗ ವೈರಲ್‌ ಆಗಿದೆ.

VISTARANEWS.COM


on

uk
ಒಮರ್ ಮೌಮೆಚೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: ಎರಡು ವರ್ಷಗಳ ಹಿಂದೆ 82 ವರ್ಷದ ಮಾಜಿ ಸೇನಾಧಿಕಾರಿಯನ್ನು (Army veteran) ಒಂದೇ ಏಟಿನಿಂದ ಕೊಂದ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೊಲೆಗೆ ಕಾರಣವಾದ ಘಟನೆ 2021ರ ಮೇಯಲ್ಲಿ ನಡೆದಿತ್ತು. 16 ವರ್ಷದ ಒಮರ್ ಮೌಮೆಚೆ (Omar Moumeche) ಇಂಗ್ಲೆಂಡ್‌ನ ಡರ್ಬಿ ಬಸ್ ನಿಲ್ದಾಣದಲ್ಲಿ (Derby bus station) 82 ವರ್ಷದ ಡೆನ್ನಿಸ್ ಕ್ಲಾರ್ಕ್ (Dennis Clarke) ಮೇಲೆ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣನಾಗಿದ್ದ. ಸದ್ಯ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪೊಲೀಸರು ಹೊರ ಬಿಟ್ಟಿದ್ದು, ವೈರಲ್‌ ಆಗಿದೆ (Viral News).

ಘಟನೆಯ ವಿವರ

ಅಂದು ಡೆನ್ನಿಸ್ ಕ್ಲಾರ್ಕ್ ಶಾಪಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದರು. ಆಗ ಒಮರ್ ಮೌಮೆಚೆ ಮತ್ತು ಆತನ ಸ್ನೇಹಿತರು ಎಸ್ಕಲೇಟರ್‌ನಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿ ಆ ಬಗ್ಗೆ ಪ್ರಶ್ನಿಸಿದರು. ಸೂಪರ್‌ ಮಾರ್ಕೆಟ್‌ನಿಂದ ಹೊರಟ ಅವರು ಡರ್ಬಿ ಬಸ್ ನಿಲ್ದಾಣದವರೆಗೆ ಒಮರ್ ಮೌಮೆಚೆ ಮತ್ತು ಆತನ ಗುಂಪನ್ನು ಹಿಂಬಾಲಿಸಿದರು. ಬಸ್ ನಿಲ್ದಾಣದಲ್ಲಿ ಅವರ ಮೇಲೆ ಮೌಮೆಚೆ ಹಲ್ಲೆ ನಡೆಸಿದ. ಡೆನ್ನಿಸ್ ಕ್ಲಾರ್ಕ್ ಅವರನ್ನು ನೆಲಕ್ಕೆ ಬೀಳಿಸಿ ಮೌಮೆಚೆ ಬಲವಾಗಿ ಗುದ್ದಿದ. ಬಳಿಕ ಮೌಮೆಚೆ ಮತ್ತು ಆತನ ಸ್ನೇಹಿತರು ಸ್ಥಳದಿಂದ ಓಡಿ ಹೋದರೂ ಕೆಲವೇ ನಿಮಿಷಗಳಲ್ಲಿ ಅವರನ್ನು ಬಂಧಿಸಲಾಯಿತು. ಮೌಮೆಚೆ ಹೊಡೆದ ರಭಸಕ್ಕೆ ಡೆನ್ನಿಸ್ ಕ್ಲಾರ್ಕ್ ನೆಲಕ್ಕೆ ಬಿದ್ದು, ತಲೆಬುರುಡೆ ಒಡೆದು ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಸುಮಾರು 9 ದಿನಗಳ ನಂತರ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಡರ್ಬಿಶೈರ್ ಪೊಲೀಸರು ದಾಳಿಯ ಆಘಾತಕಾರಿ ತುಣುಕನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕ್ಲಾರ್ಕ್ ಅವರನ್ನು ಹದಿಹರೆಯದವರ ಗುಂಪು ಸುತ್ತುವರಿದಿರುವುದು ಕಾಣಿಸುತ್ತದೆ. ಸದ್ಯ ಇದು ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. 18 ವರ್ಷದ ಮೌಮೆಚೆ ನರಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದ್ದು, ಡರ್ಬಿ ಕ್ರೌನ್ ನ್ಯಾಯಾಲಯದಲ್ಲಿ ಶುಕ್ರವಾರ (ನವೆಂಬರ್‌ 17) ಎರಡು ವರ್ಷಗಳ ಬಂಧನದ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: Viral Video: ಕೋಳಿಯ ಹಿಂಭಾಗಕ್ಕೆ ಪಟಾಕಿ ತುರುಕಿ ಸಿಡಿಸಿದರು! ಕೃತ್ಯ ಎಸಗಿದವರಿಗೆ ಶಿಕ್ಷೆಗೆ ಆಗ್ರಹ

ಅಧಿಕಾರಿ ಹೇಳಿದ್ದೇನು?

ಕ್ಲಾರ್ಕ್ ಸಾವಿನ ತನಿಖೆ ನಡೆಸಿದ ಅಧಿಕಾರಿಯೊಬ್ಬರು ಮಾತನಾಡಿ, “ಸಿಸಿಟಿವಿ ದೃಶ್ಯಾವಳಿಗಳು ಮತ್ತು ಅನೇಕ ಸಾಕ್ಷಿಗಳ ಹೇಳಿಕೆಗಳು ನಮ್ಮ ತನಿಖೆಗೆ ನೆರವಾದವು. ಮೌಮೆಚೆ ತಾನು ಆತ್ಮರಕ್ಷಣೆಗಾಗಿ ಈ ರೀತಿ ವರ್ತಿಸಿದ್ದೇನೆ ಎಂದು ವಾದಿಸಿದ್ದರೂ ಘಟನೆಯನ್ನು ಕೂಲಂಕುಷವಾಗಿ ಗಮನಿಸಿದ ನ್ಯಾಯಾಧೀಶರು ಆತನ ಹೇಳಿಕೆಯನ್ನು ನಿರಾಕರಿಸಿದರುʼʼ ಎಂದು ವಿವರಿಸಿದ್ದಾರೆ. “ಆ ದುರಂತ ಘಟನೆ ಕ್ಲಾರ್ಕ್ ಮತ್ತು ಮೌಮೆಚೆ ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಯಾವುದೇ ಗಂಭೀರ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಕೋಪದ ಕೈಗೆ ಬುದ್ಧಿ ಕೊಡುವ ಮುನ್ನ ಸಾವಧಾನದಿಂದ ಆಲೋಚಿಸಬೇಕು ಎನ್ನುವುದರ ಪ್ರಾಧಾನ್ಯತೆಯನ್ನು ಈ ಘಟನೆ ತಿಳಿಸುತ್ತದೆʼʼ ಎಂದು ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಆ ಸಮಯದಲ್ಲಿ ಬಂಧಿಸಲ್ಪಟ್ಟ ಇತರ ಇಬ್ಬರು ಹದಿಹರೆಯದ ಹುಡುಗರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ಲಾರ್ಕ್ ಈ ಹಿಂದೆ ಸಿಂಗಾಪುರದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Lakhbir Singh: ಸಿಖ್​ ಪ್ರತ್ಯೇಕತವಾದಿ ಸಂಘಟನೆ ಮುಖ್ಯಸ್ಥ ಲಖ್ಬೀರ್ ಸಿಂಗ್ ಸಾವು

ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಮತ್ತು ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ.

VISTARANEWS.COM


on

Lakhbir Singh Rode
Koo

ನವದೆಹಲಿ: ನಿಷೇಧಿತ ಸಂಘಟನೆಗಳಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಮತ್ತು ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ. 72 ವರ್ಷದ ಲಖ್ಬೀರ್ ಸಿಂಗ್ ರೋಡ್​(Lakhbir Singh) ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ‘ವೈಯಕ್ತಿಕ ಭಯೋತ್ಪಾದಕ’ ಎಂದು ಪಟ್ಟಿಮಾಡಲಾಗಿತ್ತು. ಭಾರತದಿಂದ ಪಲಾಯನ ಮಾಡಿದ ನಂತರ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ.

ಲಖ್ಬೀರ್ ಸಿಂಗ್ ಖಲಿಸ್ತಾನಿ ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ(Bhindranwale) ಅವರ ಸೋದರಳಿಯರಾಗಿದ್ದರು. ಲಖ್ಬೀರ್ ಸಿಂಗ್ ರೋಡೆ ಅವರ ನಿಧನದ ಸುದ್ದಿಯನ್ನು ಅವರ ಸಹೋದರ ಮತ್ತು ಮಾಜಿ ಅಕಲ್ ತಖ್ತ್ ಜತೇದಾರ್, ಖಚಿತಪಡಿಸಿದ್ದಾರೆ. ಲಖ್ಬೀರ್ ಸಿಂಗ್ ರೋಡ್ ಅವರನ್ನು ಈಗಾಗಲೇ ಪಾಕಿಸ್ತಾನದಲ್ಲಿ ದಹನ ಮಾಡಲಾಗಿದೆ ಎಂದು ಜಸ್ಬೀರ್ ಹಳಿದ್ದಾರೆ.

ಈ ವರ್ಷದ ಅಕ್ಟೋಬರ್‌ನಲ್ಲಿ, ಪಂಜಾಬ್‌ನ ಮೊಹಾಲಿಯಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯವು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್ 33 (5) ರ ಅಡಿಯಲ್ಲಿ ಲಖ್ಬೀರ್ ಸಿಂಗ್ ಅವರಿಗೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿತ್ತು.

ಅಕ್ಟೋಬರ್ 1, 2021 ರಂದು ರೋಡ್ ವಿರುದ್ಧ ನ್ಯಾಯಾಲಯ ಸ್ಫೋಟಕ ವಸ್ತುಗಳ ಕಾಯಿದೆ 1908 ರ ವಿಭಾಗಗಳು 3, 4, 5 & 6 ಸೇರಿದಂತೆ ಬಹು ಆರೋಪಗಳು; UA(P) ಆಕ್ಟ್ 1967 ರ ಸೆಕ್ಷನ್ 16, 17, 18, 18B, 20, 38 & 39, NDPS ಆಕ್ಟ್ 1985 ರ ಸೆಕ್ಷನ್ 21B, 27A, 29, ಮತ್ತು IPC ಯ ಸೆಕ್ಷನ್ 120B. ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

ಭಾರತದ ರಾಯಭಾರಿ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿಗಳು!

ಭಾರತದ ಪಂಜಾಬ್‌, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ಸೇರಿ ಹಲವು ರಾಷ್ಟ್ರಗಳಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿ ಉಗ್ರರು (Khalistani Terrorists) ಕೆಲ ದಿನಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿದ ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಣ್‌ಜಿತ್‌ ಸಿಂಗ್‌ ಸಂಧು (Taranjit Singh Sandhu) ಅವರ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರು.

ಇದನ್ನೂ ಓದಿ Khalistani Terrorist: ಖಲಿಸ್ತಾನ್- ಗ್ಯಾಂಗ್‌ಸ್ಟರ್ ಜಾಲ ಭೇದಿಸಲು 6 ರಾಜ್ಯಗಳ 50 ಕಡೆ NIA ದಾಳಿ

ತರಣ್‌ಜಿತ್‌ ಸಿಂಗ್‌ ಸಂಧು ಅವರು ನ್ಯೂಯಾರ್ಕ್‌ನ ಲಾಂಗ್‌ ಐಲ್ಯಾಂಡ್‌ನಲ್ಲಿರುವ ಗುರುದ್ವಾರಕ್ಕೆ ತೆರಳಿದ್ದರು. ಇದೇ ವೇಳೆ ಕೆಲ ಖಲಿಸ್ತಾನಿ ಬೆಂಬಲಿಗರು ಅವರನ್ನು ಅಡ್ಡಹಾಕಿದ್ದರು. ತಳ್ಳಾಟವೂ ನಡೆದಿತ್ತು. ತರಣ್‌ಜಿತ್‌ ಸಿಂಗ್‌ ಸಂಧು ಅವರು ವಾಹನದಲ್ಲಿ ತೆರಳುವಾಗ ಖಲಿಸ್ತಾನಿ ಧ್ವಜ ಪ್ರದರ್ಶಿಸುವ ಜತೆಗೆ ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗಿದ್ದರು. ಈ ವಿಡಿಯೊ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿತ್ತು.

ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆಲ ತಿಂಗಳ ಹಿಂದಷ್ಟೇ ಕೆನಡಾ ಆರೋಪಿಸಿತ್ತು. ಈ ಆರೋಪವನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿತ್ತು ಹಾಗೂ ಸಾಕ್ಷ್ಯ ಕೊಡಿ ಎಂದು ಕೇಳಿತ್ತು. ಅಲ್ಲದೆ, ತರಣ್‌ಜಿತ್‌ ಸಿಂಗ್‌ ಸಂಧು ಅವರು ಕೂಡ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಮಾತನಾಡಿದ್ದಾರೆ. ಕೆನಡಾ ಆರೋಪಗಳಿಗೆ ತಿರುಗೇಟು ನೀಡಿದ್ದರು. ಇದೇ ಕಾರಣಕ್ಕಾಗಿ ಖಲಿಸ್ತಾನಿಗಳು ತರಣ್‌ಜಿತ್‌ ಸಿಂಗ್‌ ಸಂಧು ಅವರ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, “ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ನೀವೇ ಕಾರಣ. ನೀವೇ ಸಂಚು ಮಾಡಿ ಹತ್ಯೆ ಮಾಡಿದ್ದೀರಿ” ಎಂದು ಕೂಡ ಖಲಿಸ್ತಾನಿಗಳು ಘೋಷಣೆ ಕೂಗಿದ್ದರು.

Continue Reading

ದೇಶ

ಸಮರಾಂಕಣ: ಭಾರತಕ್ಕೆ ಬರಲಿದೆಯೇ ಎಫ್-35 ಯುದ್ಧ ವಿಮಾನ?: ಏನಿದರ ಸಾಮರ್ಥ್ಯ?

ಭಾರತ ಅಧಿಕೃತವಾಗಿ ಎಫ್-35 ಖರೀದಿಗೆ ಪ್ರಯತ್ನ ನಡೆಸಿಲ್ಲ ಮತ್ತು ಖರೀದಿಸಿಯೂ ಇಲ್ಲವಾದರೂ, ರಕ್ಷಣಾ ವಲಯದಲ್ಲಿ ಭಾರತ ಈ ವಿಮಾನಗಳನ್ನು ಖರೀದಿಸಬಹುದು ಎಂಬ ಕುರಿತು ಚರ್ಚೆಗಳಾಗಿವೆ.

VISTARANEWS.COM


on

F-35 fighter jet
Koo
Girish Linganna

ಲಾಕ್‌ಹೀಡ್‌ ಮಾರ್ಟಿನ್ ಎಫ್-35 ಲೈಟ್ನಿಂಗ್ II ಒಂದು ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಅಪಾರ ಪ್ರಮಾಣದ ವಾಯು ಪಾರಮ್ಯವನ್ನು ಹೊಂದಿದೆ. ಇದು ಭೂ ದಾಳಿ, ವಿಚಕ್ಷಣೆ, ಮತ್ತು ವಾಯು ರಕ್ಷಣೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ನಡೆಸಬಲ್ಲದಾಗಿದ್ದು, ಅದು ಹೊಂದಿರುವ ಸ್ಟೆಲ್ತ್ ತಂತ್ರಜ್ಞಾನ ಈ ಕಾರ್ಯಾಚರಣೆಗಳಿಗೆ ಪೂರಕವಾಗಿದೆ. ಆದರೆ, ಭಾರತ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಲು ನಿರ್ಧರಿಸುವ ಮೊದಲು, ವಿವಿಧ ಕಾರ್ಯತಂತ್ರದ, ರಾಜಕೀಯ ಮತ್ತು ಆರ್ಥಿಕ ಆಯಾಮಗಳನ್ನು ಗಮನಿಸಬೇಕಿದೆ.
ಭಾರತ ಅಧಿಕೃತವಾಗಿ ಎಫ್-35 ಖರೀದಿಗೆ ಪ್ರಯತ್ನ ನಡೆಸಿಲ್ಲ ಮತ್ತು ಖರೀದಿಸಿಯೂ ಇಲ್ಲವಾದರೂ, ರಕ್ಷಣಾ ವಲಯದಲ್ಲಿ ಭಾರತ ಈ ವಿಮಾನಗಳನ್ನು ಖರೀದಿಸಬಹುದು ಎಂಬ ಕುರಿತು ಚರ್ಚೆಗಳಾಗಿವೆ. ಆದರೆ, ಒಂದು ವೇಳೆ ಭಾರತ ಏನಾದರೂ ಎಫ್-35 ವಿಮಾನವನ್ನು ಖರೀದಿಸಲು ಮುಂದಾದರೆ, ರಕ್ಷಣಾ ಖರೀದಿಯಲ್ಲಿರುವ ಅಂತರ್ಗತ ಸಮಸ್ಯೆಗಳ ಕಾರಣದಿಂದ, ಎಫ್-35 ವಿಮಾನದ ಬೆಲೆ ನಿಗದಿ ಪ್ರಕ್ರಿಯೆ ಸಂಕೀರ್ಣಗೊಳ್ಳಬಹುದು.

ಎಫ್-35 ಬೆಲೆಯಲ್ಲಿನ ಸಂಕೀರ್ಣತೆ

ಎಫ್-35 ವಿಮಾನದ ಮೂಲ ಬೆಲೆ ಕೇವಲ ವಿಮಾನದ ಬೆಲೆಯನ್ನು ಮಾತ್ರವೇ ಹೊಂದಿದೆ. ಆದರೆ, ಭಾರತ ವಿಮಾನ ಖರೀದಿಸುವಾಗ ಅದಕ್ಕೆ ವಿವಿಧ ಹೆಚ್ಚುವರಿ ವೆಚ್ಚಗಳೂ ತಗಲುತ್ತವೆ. ಈ ವಿಮಾನದ ಬೆಲೆಯನ್ನು ಬಿಡಿ ಬಿಡಿಯಾಗಿ ಗಮನಿಸಿದಾಗ, ಇದು ಕೇವಲ ವಿಮಾನದ ಬೆಲೆ ಮಾತ್ರವೇ ಆಗಿರದೆ, ಇತರ ಉಪಕರಣಗಳ ಬೆಲೆಯನ್ನೂ ಒಳಗೊಂಡಿರುತ್ತದೆ.

F-35 fighter jets

ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ (R&D) ಸಂಬಂಧಿಸಿದ ವೆಚ್ಚ

ಈ ಒಟ್ಟು ವೆಚ್ಚವನ್ನು ಪ್ರತಿಯೊಂದು ವಿಮಾನದ ಮೇಲೆ ವಿಧಿಸುವುದರಿಂದ, ಒಟ್ಟಾರೆಯಾಗಿ ಪ್ರತಿಯೊಂದು ವಿಮಾನದ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ.

ವಿಮಾನದ ಪೂರ್ಣ ಜೀವಿತಾವಧಿಯಲ್ಲಿ ಒಟ್ಟು ಖರ್ಚಿನ ಅರ್ಥೈಸುವಿಕೆ

ವಿಮಾನದ ನಿರ್ವಹಣೆ, ಸಿಬ್ಬಂದಿಗಳ ತರಬೇತಿ, ಸಹಾಯಕ ಉಪಕರಣಗಳು, ಹಾಗೂ ಸಿಬ್ಬಂದಿಗಳ ವೆಚ್ಚಗಳು ನಿರಂತರವಾಗಿರಲಿದ್ದು, ಇವುಗಳು ಆರಂಭಿಕ ಖರೀದಿ ಮೊತ್ತವನ್ನು ಮೀರಿ ಹೆಚ್ಚಲಿವೆ.

ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳು

ಈ ವೆಚ್ಚಗಳಲ್ಲಿ ವಿಮಾನದ ಇಂಧನ, ದುರಸ್ತಿ, ಕೂಲಂಕಷ ಪರೀಕ್ಷೆ, ಮತ್ತು ವಿಮಾನದ ಕಾರ್ಯಾಚರಣಾ ಅವಧಿಯಾದ್ಯಂತ ಅದರ ಮೇಲ್ದರ್ಜೆಗೇರಿಸುವಿಕೆಯ ವೆಚ್ಚಗಳು ಸೇರಿರುತ್ತವೆ.

ಖರೀದಿ ಒಪ್ಪಂದ ಹೇಗಿರುತ್ತದೆ?

ಭಾರತ ಖರೀದಿ ಒಪ್ಪಂದ ನಡೆಸುವಾಗ ಸರ್ಕಾರದಿಂದ ಸರ್ಕಾರಕ್ಕೆ ವಿದೇಶೀ ಮಿಲಿಟರಿ ವ್ಯಾಪಾರ (ಫಾರೀನ್ ಮಿಲಿಟರಿ ಸೇಲ್ – ಎಫ್ಎಂಎಸ್) ನಡೆಸುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನೇರ ವ್ಯಾಪಾರ ಪ್ರಕ್ರಿಯೆಗಿಂತ ಹೆಚ್ಚಿನ ವೆಚ್ಚವನ್ನು ಒಳಗೊಂಡಿರುತ್ತದೆ. ಈ ಹೆಚ್ಚುವರಿ ವೆಚ್ಚ ಸಾಮಾನ್ಯವಾಗಿ ಸರ್ಕಾರದ ಹೆಚ್ಚುವರಿ ಪಾಲ್ಗೊಳ್ಳುವಿಕೆ ಮತ್ತು ಸಹಾಯದ ಪರಿಣಾಮದಿಂದ ಉಂಟಾಗುತ್ತದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಮತ್ತು ಈಗಾಗಲೇ ಇರುವ ರಕ್ಷಣಾ ವ್ಯವಸ್ಥೆಗಳು ಮತ್ತು ಮೂಲ ಸೌಕರ್ಯಗಳನ್ನು ಒಳಗೊಂಡು, ಎಫ್-35 ಯುದ್ಧ ವಿಮಾನದ ಒಟ್ಟಾರೆ ವೆಚ್ಚ ಮಾತುಕತೆಯ ಮೂಲಕ ಬದಲಾಯಿಸಬಹುದಾಗಿದ್ದು, ಯಾವುದೋ ಒಂದು ನಿರ್ದಿಷ್ಟ, ನಿಗದಿತ ಬೆಲೆಯಾಗಿರುವುದಿಲ್ಲ.

ಕಾಲ್ಪನಿಕ ಬೆಲೆ ನಿಗದಿ ಪ್ರಕ್ರಿಯೆಗೊಂದು ಒಳನೋಟ

ಪ್ರತಿಯೊಂದು ಎಫ್-35ಎ ವಿಮಾನದ ಬೆಲೆಯೂ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದಕ್ಕೆ ಉತ್ಪಾದನಾ ದಕ್ಷತೆಯ ಹೆಚ್ಚಳ ಮತ್ತು ವಿಮಾನಕ್ಕೆ ಹೆಚ್ಚಾದ ದೊಡ್ಡ ಖರೀದಿ ಬೇಡಿಕೆಗಳು ಕಾರಣವಾಗಿದೆ. 2023ರ ವೇಳೆಗೆ, ವಿಮಾನದ ಅಂದಾಜು ಮೊತ್ತ 80 ಮಿಲಿಯನ್ ಡಾಲರ್ ಆಸುಪಾಸಿನಲ್ಲಿತ್ತು. ಆದರೆ, ಭಾರತದ ಖರೀದಿಗೆ ಈ ಬೆಲೆಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಗಮನಾರ್ಹ ವಿಚಾರವೆಂದರೆ, ಯಾವುದಾದರೂ ಒಂದು ಅಧಿಕೃತ ಹೇಳಿಕೆಯ ಹೊರತಾಗಿ, ಅಥವಾ ಸಾರ್ವಜನಿಕವಾಗಿ ಲಭ್ಯವಿರುವ ಒಪ್ಪಂದದ ಹೊರತಾಗಿ, ಭಾರತದಲ್ಲಿ ಎಫ್-35 ವಿಮಾನದ ಬೆಲೆಯ ಕುರಿತ ಚರ್ಚೆ ಕೇವಲ ಊಹಾಪೋಹಗಳಷ್ಟೇ ಆಗಿರುತ್ತದೆ. ಆದ್ದರಿಂದ ವಿಮಾನದ ಅಂತಿಮ ಖರೀದಿ ಬೆಲೆ ನಿರ್ದಿಷ್ಟ ಷರತ್ತುಗಳು ಮತ್ತು ಖರೀದಿ ಒಪ್ಪಂದದ ಸಂದರ್ಭದಲ್ಲಿ ನಡೆಸುವ ಬೆಲೆಯ ಕುರಿತಾದ ಚರ್ಚೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಕಾರ್ಯತಂತ್ರದ ಮೌಲ್ಯ ಮತ್ತು ಆರ್ಥಿಕ ಪರಿಣಾಮ

ಎಫ್-35 ಯುದ್ಧ ವಿಮಾನದ ಖರೀದಿಯ ನಿರ್ಧಾರ ಭಾರತದ ಪಾಲಿಗೆ ಕಾರ್ಯತಂತ್ರದ ಹೂಡಿಕೆಯಾಗಿರಲಿದ್ದು, ಇದು ಭಾರತದ ಮಿಲಿಟರಿ ಸಾಮರ್ಥ್ಯವನ್ನು ಸಾಕಷ್ಟು ಹೆಚ್ಚಿಸಲಿದೆ. ಆದರೆ, ಇದರ ನಿರ್ವಹಣೆ ಮತ್ತು ಕಾರ್ಯಾಚರಣಾ ವೆಚ್ಚವನ್ನು ಗಮನಿಸಿದರೆ, ಇದರ ಖರೀದಿ ಆರ್ಥಿಕ ಸವಾಲುಗಳನ್ನೂ ಒಡ್ಡಲಿದೆ ಎಂಬುದನ್ನು ಭಾರತ ಗಮನಿಸಬೇಕಾಗುತ್ತದೆ. ಭಾರತ ಈ ಅತ್ಯಾಧುನಿಕ ಯುದ್ಧ ವಿಮಾನದ ಪ್ರಯೋಜನಗಳು ಮತ್ತು ಅದರ ನಿರ್ವಹಣೆಗಾಗಿ ದೀರ್ಘಕಾಲದ ಹಣಕಾಸು ವೆಚ್ಚಗಳ ನಡುವೆ ತುಲನೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

F-35 fighter jets price

ಭಾರತಕ್ಕೆ ಎಫ್-35 ವಿಮಾನ ಖರೀದಿಸಲು ಆಸಕ್ತಿ ಇದೆಯೇ?

ಭಾರತ ಇಲ್ಲಿಯತನಕ ಅಧಿಕೃತವಾಗಿ ಎಫ್-35 ವಿಮಾನದ ಖರೀದಿಯ ಕುರಿತು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿಲ್ಲ. ಈ ವಿಮಾನದ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆಗಳನ್ನೂ ನಡೆಸಿಲ್ಲ.

ಎಫ್-35 ವಿಮಾನ ಖರೀದಿಯಿಂದ ಭಾರತವನ್ನು ನಿರುತ್ತೇಜನಗೊಳಿಸುವ ಅಂಶಗಳು

ಭಾರತದ ರಕ್ಷಣಾ ಬಜೆಟ್‌ನ ಇತಿಮಿತಿಗಳು, ಈಗಾಗಲೇ ಇರುವ ರಕ್ಷಣಾ ಬದ್ಧತೆಗಳು, ಹಾಗೂ ಭಾರತ ನಡೆಸುತ್ತಿರುವ ಸ್ವದೇಶೀ ಯುದ್ಧ ವಿಮಾನ ನಿರ್ಮಾಣ ಸಾಮರ್ಥ್ಯ ಅಭಿವೃದ್ಧಿಯ ಪ್ರಯತ್ನಗಳು ಎಫ್-35 ವಿಮಾನ ಖರೀದಿಯಿಂದ ಭಾರತ ಹಿಂದೆ ಸರಿಯುವಂತೆ ಮಾಡಬಲ್ಲ ಅಂಶಗಳಾಗಿವೆ.

ಎಫ್-35 ಮತ್ತು ಭಾರತದ ಪ್ರಸ್ತುತ ಯುದ್ಧ ವಿಮಾನಗಳ ನಡುವಿನ ಹೋಲಿಕೆ

ಎಫ್-35 ಯುದ್ಧ ವಿಮಾನ ಸ್ಟೆಲ್ತ್ ಸಾಮರ್ಥ್ಯ (ಶತ್ರುಗಳ ರೇಡಾರ್‌ಗೆ ಕಾಣಿಸಿಕೊಳ್ಳದೆ ಚಲಿಸುವ ಸಾಮರ್ಥ್ಯ), ಅದು ಒಳಗೊಂಡಿರುವ ಅತ್ಯಾಧುನಿಕ ಸೆನ್ಸರ್‌ಗಳು, ಹಾಗೂ ಬಹುಪಾತ್ರಗಳ ಕಾರ್ಯಾಚರಣಾ ಸಾಮರ್ಥ್ಯದಿಂದ ಎಫ್-35 ಯುದ್ಧ ವಿಮಾನ ಭಾರತದ ಬಳಿ ಇರುವ ಯಾವುದೇ ಯುದ್ಧ ವಿಮಾನಕ್ಕಿಂತ ಹೆಚ್ಚು ಸಮರ್ಥವೂ, ಆಧುನಿಕವೂ ಆಗಿದೆ.

ಭಾರತಕ್ಕೆ ಎಫ್-35 ಯುದ್ಧ ವಿಮಾನದಿಂದ ಕಾರ್ಯತಂತ್ರದ ಮೇಲುಗೈ

ಎಫ್-35 ಯುದ್ಧ ವಿಮಾನ ಭಾರತಕ್ಕೆ ಬಹಳಷ್ಟು ಕಾರ್ಯತಂತ್ರದ ಮೇಲುಗೈ ಒದಗಿಸಬಲ್ಲದು. ಅದರಲ್ಲಿ ಹೆಚ್ಚಿನ ತಾಂತ್ರಿಕ ಸಾಮರ್ಥ್ಯ ಹಾಗೂ ನೆಟ್‌ವರ್ಕ್ ಕೇಂದ್ರಿತ ಯುದ್ಧ ಸಾಮರ್ಥ್ಯಗಳು ಪ್ರಮುಖವಾಗಿವೆ.
ಭಾರತ ಇನ್ನೂ ಎಫ್-35 ಯುದ್ಧ ವಿಮಾನ ಖರೀದಿಯ ಕುರಿತು ಅಧಿಕೃತವಾಗಿ ಆಸಕ್ತಿ ವ್ಯಕ್ತಪಡಿಸಿಲ್ಲ. ಆದ್ದರಿಂದ ವಿಮಾನದ ಬೆಲೆಯ ಕುರಿತ ಚರ್ಚೆಗಳೂ ಕೇವಲ ಊಹಾಪೋಹಗಳಷ್ಟೇ ಆಗಿವೆ. ಒಂದು ವೇಳೆ ಭಾರತ ಏನಾದರೂ ಈ ವಿಮಾನದ ಖರೀದಿಗೆ ಆಸಕ್ತಿ ತೋರಿದರೆ, ಆಗ ನಡೆಯುವ ಅಧಿಕೃತ ಮಾತುಕತೆಗಳು ಹಣಕಾಸಿನ ಆಯಾಮದ ಕುರಿತು ಸ್ಪಷ್ಟವಾಗಿ ಬೆಳಕು ಚೆಲ್ಲಬಲ್ಲವು. ಭಾರತದ ಏರೋಸ್ಪೇಸ್ ಹೆಬ್ಬಯಕೆಗಳ ಕುರಿತು ಆಸಕ್ತಿ ಹೊಂದಿರುವವರಿಗೆ, ಎಫ್-35ಗಳು ಕೇವಲ ವಿಮಾನಗಳಾಗಿರದೆ, ಭಾರತದ ಹೆಚ್ಚುತ್ತಿರುವ ರಕ್ಷಣಾ ಕಾರ್ಯತಂತ್ರ ಮತ್ತು ಖರೀದಿ ವಿಧಾನಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Sukhoi Su-57: ರಷ್ಯಾದ ಸು-57 ಯುದ್ಧ ವಿಮಾನ ಪವರ್‌ಫುಲ್‌; ಆದರೆ ಭಾರತ ಖರೀದಿಸುತ್ತಿಲ್ಲ, ಏಕೆಂದರೆ…

Continue Reading

ಪ್ರಮುಖ ಸುದ್ದಿ

Tsunami Warning: 7.6 ತೀವ್ರತೆಯ ಭೂಕಂಪ; ಭೀಕರ ಸುನಾಮಿಯ ವಾರ್ನಿಂಗ್‌!

Tsunami Warning: ಫಿಲಿಪೈನ್ಸ್‌ನಲ್ಲಿ ಕಳೆದ ಒಂದು ತಿಂಗಳಲ್ಲಿ ಸಂಭವಿಸುತ್ತಿರುವ ಎರಡನೇ ಭೂಕಂಪ ಇದಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಕೂಡ ಭೂಕಂಪ ಸಂಭವಿಸಿ 8 ಜನ ಮೃತಪಟ್ಟಿದ್ದರು.

VISTARANEWS.COM


on

Tsunami
Koo

ಮನಿಲಾ: ಫಿಲಿಪೈನ್ಸ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದೆ. ಫಿಲಿಪೈನ್ಸ್‌ನ ಮಿಂಡಾನಾವೋ (Mindanao) ಎಂಬಲ್ಲಿ ಶನಿವಾರ (ನವೆಂಬರ್‌ 3) ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, ದೇಶಾದ್ಯಂತ ಆತಂಕ ಮನೆಮಾಡಿದೆ. ರಿಕ್ಟರ್‌ ಮಾಪನದಲ್ಲಿ 7.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಯುರೋಪಿಯನ್‌ ಮೆಡಿಟೇರಿಯನ್‌ ಸೈಸ್ಮೊಲಾಜಿಕಲ್‌ ಸೆಂಟರ್‌ (EMSC) ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಅಮೆರಿಕವು ಸುನಾಮಿ ಅಪ್ಪಳಿಸುವ ಎಚ್ಚರಿಕೆ (Tsunami Warning) ನೀಡಿದೆ.

ಸುಮಾರು 63 ಕಿಲೋಮೀಟರ್‌ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಮಾಹಿತಿ ನೀಡಿದೆ. “ಭೂಕಂಪವು ಪ್ರಬಲವಾಗಿದೆ. ಇದು ದೇಶದಲ್ಲಿ ಸುನಾಮಿಗೆ ಕಾರಣವಾಗಬಹುದು. ದೊಡ್ಡ ದೊಡ್ಡ ಅಲೆಗಳು ಅಪ್ಪಳಿಸಬಹುದು” ಎಂಬುದಾಗಿ ಫಿಲಿಪೈನ್ಸ್‌ಗೆ ಅಮೆರಿಕ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಫಿಲಿಪೈನ್ಸ್‌ನ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಭೂಕಂಪದಿಂದ ಯಾವುದೇ ಸಾವು-ನೋವಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ತಿಂಗಳಲ್ಲಿ ಎರಡನೇ ಬಾರಿ ಕಂಪಿಸಿದ ಭೂಮಿ

ಕಳೆದ ಒಂದು ತಿಂಗಳಲ್ಲಿ ಫಿಲಿಪೈನ್ಸ್‌ನಲ್ಲಿ ಎರಡನೇ ಬಾರಿ ಭೂಕಂಪ ಸಂಭವಿಸಿದೆ. ನವೆಂಬರ್‌ ತಿಂಗಳ ಆರಂಭದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಎಂಟು ಜನ ಮೃತಪಟ್ಟಿದ್ದರು. ಸಾರಂಗಾನಿ, ಸೌತ್‌ ಕೊಟಾಬಟೊ ಹಾಗೂ ಡಾವಾವೋ ಪ್ರಾಂತ್ಯಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. 13ಕ್ಕೂ ಅಧಿಕ ಜನ ಗಾಯಗೊಂಡಿದ್ದರೆ, 50 ಅಧಿಕ ಮನೆಗಳು ಕುಸಿದಿದ್ದವು. ಇನ್ನು ಶನಿವಾರ ಸಂಜೆ ಭೂಕಂಪ ಸಂಭವಿಸಿದ ಕಾರಣ ಜಪಾನ್‌ನಲ್ಲೂ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Earthquake: ಕಾಶ್ಮೀರದಲ್ಲಿ ಪ್ರಬಲ ಭೂಕಂಪ; 24 ಗಂಟೆಯಲ್ಲಿ 3 ದುರಂತ

ನೇಪಾಳದಲ್ಲಿ 157 ಜನ ಸಾವು

ನೇಪಾಳದಲ್ಲೂ ಇತ್ತೀಚೆಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 157 ಜನ ಮೃತಪಟ್ಟಿದ್ದು, 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಜನರ ರಕ್ಷಣೆಗೆ ಹರಸಾಹಸ ಮಾಡಬೇಕಾಗಿತ್ತು. ಮಹಿಳೆಯರು, ಮಕ್ಕಳು, ಹಿರಿಯರು ಭೂಕಂಪಕ್ಕೆ ಬಲಿಯಾಗಿದ್ದರು. ಅಷ್ಟಕ್ಕೂ, ನೇಪಾಳದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರ್ನಾಲ್ಕು ಬಾರಿ ಭೂಮಿ ಕಂಪಿಸಿದ ಕಾರಣ ಜನರಲ್ಲಿ ಭಯ ಮನೆಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

‘ಹುಡುಕು, ಕೊಲ್ಲು’; ಹಮಾಸ್‌ ಉಗ್ರರ ದಮನಕ್ಕೆ ಇಸ್ರೇಲ್‌ ಮಾಸ್ಟರ್‌ ಪ್ಲಾನ್‌ ಹೇಗಿದೆ?

ಹಮಾಸ್‌ ಉಗ್ರರ ಜತೆಗಿನ ಸಮರ ಮುಗಿದ ಮೇಲೆ ಏನು ಮಾಡಬೇಕು ಎಂಬ ಸ್ಪಷ್ಟ ಚಿತ್ರಣ ಇಸ್ರೇಲ್‌ ಬಳಿ ಇದೆ. ಹಮಾಸ್‌ ಉಗ್ರರನ್ನು ಹುಡುಕಿ ಕೊಲ್ಲಲು ಬೆಂಜಮಿನ್‌ ನೆತನ್ಯಾಹು ಮಾಸ್ಟರ್‌ ಪ್ಲಾನ್‌ ರೂಪಿಸಿದ್ದಾರೆ. ಏನದು?

VISTARANEWS.COM


on

Benjamin Netanyhu
Koo

ಜೆರುಸಲೇಂ: ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ದಾಳಿ ಮಾಡಿದ ಬಳಿಕ ಯುದ್ಧ (Israel Palestine War) ಘೋಷಿಸಿದ ಇಸ್ರೇಲ್‌ ಇದುವರೆಗೆ ಹಿಂದಡಿ ಇಟ್ಟಿಲ್ಲ. ಪ್ಯಾಲೆಸ್ತೀನ್‌ನ ಗಾಜಾ ನಗರದಲ್ಲಿ ಬೀಡು ಬಿಟ್ಟಿರುವ ಹಮಾಸ್‌ ಉಗ್ರರು (Hamas Terrorists) ಮನವಿ ಮಾಡುವಷ್ಟರಮಟ್ಟಿಗೆ ಇಸ್ರೇಲ್‌ ನಿರಂತರವಾಗಿ ದಾಳಿ ಮಾಡಿದೆ. ಕೆಲ ದಿನಗಳ ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆ ಬಳಿಕ ಈಗ ಮತ್ತೆ ಗಾಜಾ ನಗರದ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ಮಾಡಿ 175 ಜನರನ್ನು ಕೊಂದಿದೆ. ಇದರ ಬೆನ್ನಲ್ಲೇ, ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಇಸ್ರೇಲ್‌ ಹೊಸ ಯೋಜನೆ ರೂಪಿಸಿದೆ.

ಹೌದು, ಗಾಜಾ ನಗರದ ಮೇಲೆ ನಡೆಯುತ್ತಿರುವ ದಾಳಿ ಮುಗಿದ ಬಳಿಕ, ಯುದ್ಧ ನಿಲ್ಲಿಸಿದ ನಂತರ ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಹಮಾಸ್‌ ಉಗ್ರರನ್ನು ಸದೆಬಡಿಯಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಹಮಾಸ್‌ ಉಗ್ರರ ಜತೆಗಿನ ಕಾಳಗ ಮುಗಿಯುತ್ತಲೇ ಇಸ್ರೇಲ್‌ ಮತ್ತೊಂದು ಕಾರ್ಯಾಚರಣೆ ಆರಂಭಿಸುವುದು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

“ಹಮಾಸ್‌ ಉಗ್ರರ ಜತೆಗಿನ ಯುದ್ಧ ಮುಗಿದ ಬಳಿಕ ಹಮಾಸ್‌ ಮುಖಂಡರನ್ನು, ಉಗ್ರರನ್ನು ಹತ್ಯೆಗೈಯಲು ಗುಪ್ತಚರ ಸಂಸ್ಥೆಯಾದ ಮೊಸಾದ್‌ ಯೋಜನೆ ರೂಪಿಸಬೇಕು. ಇದಕ್ಕೂ ಮೊದಲು ಶತ್ರುಗಳ ದಮನಕ್ಕೆ ಇಸ್ರೇಲ್‌ ಕೈಗೊಂಡಿದ್ದ ಆಪರೇಷನ್‌ ವ್ರ್ಯಾತ್‌ ಆಫ್‌ ಗಾಡ್‌ನಂತಹ (Operation Wrath of God) ಕಾರ್ಯಾಚರಣೆ ಕೈಗೊಳ್ಳಬೇಕು. ಉಗ್ರರನ್ನು ಹುಡುಕಬೇಕು, ಕೊಲೆ ಮಾಡಬೇಕು ಎಂಬುದಷ್ಟೇ ಕಾರ್ಯಾಚರಣೆಯ ಗುರಿಯಾಗಿರಬೇಕು” ಎಂಬುದಾಗಿ ಮೊಸಾದ್‌ ಅಧಿಕಾರಿಗಳಿಗೆ ಬೆಂಜಮಿನ್‌ ನೆತನ್ಯಾಹು ಆದೇಶಿಸಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ಹಿಟ್‌ ಲಿಸ್ಟ್‌ನಲ್ಲಿ ಯಾರಿದ್ದಾರೆ?

ಜಗತ್ತಿನ ಯಾವ ಮೂಲೆಯಲ್ಲಿಯೇ ಹಮಾಸ್‌ ಹಿರಿಯ ಉಗ್ರರು ಇರಲಿ, ಅವರನ್ನು ಹತ್ಯೆಗೈಯಬೇಕು ಎಂಬುದು ನೆತನ್ಯಾಹು ಆದೇಶವಾಗಿದೆ ಎಂದು ಮೊಸಾದ್‌ ಮಾಜಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಗಾಗಿ ಒಂದು ಹಿಟ್‌ ಲಿಸ್ಟ್‌ಅನ್ನೂ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ. ಪ್ಯಾಲೆಸ್ತೀನ್‌ ಮಾಜಿ ಪ್ರಧಾನಿ, ಈಗ ಹಮಾಸ್‌ ರಾಜಕೀಯ ಮುಖಸ್ಥನಾಗಿರುವ ಇಸ್ಮಾಯಿಲ್‌ ಹನಿಯೇಹ್‌, ಹಮಾಸ್‌ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ಡೈಫ್‌, ಗಾಜಾ ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವರ್‌ ಸೇರಿ ಹಲವು ಪ್ರಮುಖರನ್ನು ಹಿಟ್‌ಲಿಸ್ಟ್‌ನಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Israel Palestine War: 5 ಒತ್ತೆಯಾಳುಗಳ ಸಾವು; ಕದನ ವಿರಾಮ ಅಂತ್ಯ, ಮತ್ತೆ ಹಮಾಸ್‌ ಮೇಲೆ ಇಸ್ರೇಲ್‌ ಬಾಂಬ್‌ ಮಳೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Lakhbir Singh Rode
ದೇಶ15 mins ago

Lakhbir Singh: ಸಿಖ್​ ಪ್ರತ್ಯೇಕತವಾದಿ ಸಂಘಟನೆ ಮುಖ್ಯಸ್ಥ ಲಖ್ಬೀರ್ ಸಿಂಗ್ ಸಾವು

Head injury represetational
ಕರ್ನಾಟಕ25 mins ago

Labourer death: ವಿಜಯಪುರದ ಬಳಿಕ ನಂಜನಗೂಡಿನಲ್ಲೂ ದುರಂತ; ಕಾರ್ಮಿಕ ಸಾವು

lokayukta raid in channakeshava
ಕರ್ನಾಟಕ44 mins ago

Lokayukta Raid: ರಾಜ್ಯದೆಲ್ಲೆಡೆ ಲೋಕಾಯುಕ್ತ ದಾಳಿ, ಬೆಸ್ಕಾಂ ಇಇ ಮನೆಯಲ್ಲಿ ಕೋಟಿ ಕೋಟಿ ಪತ್ತೆ

David Warner
ಕ್ರಿಕೆಟ್53 mins ago

David Warner: ಮೋಸಗಾರನಿಗೆ ವಿದಾಯ ಪಂದ್ಯದ ಅಗತ್ಯವಿಲ್ಲ; ಮಿಚೆಲ್​ ಜಾನ್ಸನ್

sadghuru with students
ಅಂಕಣ2 hours ago

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

ಕರ್ನಾಟಕ2 hours ago

ವಿಜಯಪುರ ಗೋದಾಮು ದುರಂತ: ಮೃತರ ಸಂಖ್ಯೆ 7ಕ್ಕೆ, ಇನ್ನೂ ನಾಲ್ಕು ಶವ ಸಿಕ್ಕಿಲ್ಲ

cm siddaramaih respect captain pranjal
ಕರ್ನಾಟಕ2 hours ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ3 hours ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ3 hours ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್3 hours ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ5 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌