Site icon Vistara News

Viral Video: ಮಕ್ಕಳ ಮುಗ್ಧ ನಗುವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಶಿಕ್ಷಕಿ ಏನು ಮಾಡಿದ್ದಾರೆ ನೋಡಿ…

Viral Video

ಸೇಲಂ: ಮಕ್ಕಳ ಮುಗ್ಧ ನಗುವನ್ನು ಸೆರೆ ಹಿಡಿಯಲು ಶಿಕ್ಷಕಿಯೊಬ್ಬರು (Teacher’s) ಮಾಡಿದ ಪ್ರಯತ್ನದ ವಿಡಿಯೊವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಶಿಕ್ಷಕಿಯ ಕಾರ್ಯಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಕೇಳಿ ಬಂದಿದೆ. ತಮಿಳುನಾಡಿನ (Tamilnadu) ಮಾಂಟೆಸ್ಸರಿ ಶಾಲೆಯ (Montessori school) ಶಿಕ್ಷಕಿಯೊಬ್ಬರು ತಮ್ಮ ತರಗತಿಯ ಮಕ್ಕಳ ವಿಡಿಯೊವನ್ನು ವಿಶಿಷ್ಟ ರೀತಿಯಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸರಳ ಮತ್ತು ಸ್ಪರ್ಶದ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ವಿಡಿಯೊದಲ್ಲಿ “ಈ ಮುದ್ದಾದ ಸ್ಮೈಲ್‌ಗಳಿಗಾಗಿ ಮಾತ್ರ” ಎಂದು ಹೇಳಲಾಗಿದೆ. ವಿಡಿಯೊದಲ್ಲಿ ಸಣ್ಣ ಮೆಟ್ಟಿಲುಗಳ ಮೇಲೆ ಪುಟ್ಟಪುಟ್ಟ ಮಕ್ಕಳು ಮತ್ತು ಶಿಕ್ಷಕರು ಕುಳಿತುಕೊಂಡಿರುತ್ತಾರೆ. ಈ ಅಮೂಲ್ಯ ಕ್ಷಣವನ್ನು ಸೆರೆಹಿಡಿಯಲು ಮತ್ತೊಬ್ಬ ಶಿಕ್ಷಕಿ ಬಳಸಿದ ಚತುರ ವಿಧಾನವೇ ಈ ವಿಡಿಯೊವನ್ನು ಮತ್ತಷ್ಟು ವಿಶೇಷಗೊಳಿಸಿದೆ.

ಸಾಂಪ್ರದಾಯಿಕ ವಿಧಾನದ ಬದಲಿಗೆ ಶಿಕ್ಷಕಿ ನೆಲದ ಮೇಲೆ ಮಲಗುತ್ತಾರೆ. ಇನ್ನೊಬ್ಬ ಶಿಕ್ಷಕಿ ಅವರನ್ನು ಎಳೆಯುತ್ತಾರೆ. ಇದನ್ನು ನೋಡಿ ಮಕ್ಕಳು ಸಂತೋಷದಿಂದ ನಗುತ್ತಾರೆ. ಮಕ್ಕಳ ಮುಗ್ದ ನಗುವನ್ನು ಸೆರೆ ಹಿಡಿಯಲು ಶಿಕ್ಷಕಿ ಸ್ವತಃ ಕ್ಯಾಮೆರಾ ಮೆನ್‌ನ ಕೆಲಸ ಮಾಡಿರುವುದು ಭಾರೀ ಶ್ಲಾಘನೆಗೆ ಕಾರಣವಾಗಿದೆ.

ಇದನ್ನೂ ಓದಿ: Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

ಕೆಲವು ದಿನಗಳ ಹಿಂದೆ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಅಂದಿನಿಂದ ಸುಮಾರು 19.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸಾಕಷ್ಟು ಮಂದಿ ಪ್ರೀತಿ ತುಂಬಿದ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರೊಬ್ಬರು, ಶಿಕ್ಷಕರಿಗೆ ಹ್ಯಾಟ್ಸ್ ಆಫ್. ಮಕ್ಕಳ ನಗುವಿಗಾಗಿ ಮಾಡಿರುವ ಒಂದು ಸೆಕೆಂಡಿನ ಈ ವಿಡಿಯೊ ತುಂಬಾ ಸುಂದರವಾಗಿದೆ. ಶಿಕ್ಷಕರನ್ನು ನೋಡಿದ ಮಕ್ಕಳ ನಗು ಈ ವಿಡಿಯೊವನ್ನು ಮತ್ತಷ್ಟು ಸುಂದರಗೊಳಿಸಿದೆ ಎಂದು ಹೇಳಿದ್ದಾರೆ.


ಶೂಟಿಂಗ್ ಮಾಡುತ್ತಿರುವ ಮಹಿಳೆ ನಿಜವಾಗಿಯೂ ಶಿಕ್ಷಕಿಯೇ? ಹೌದಾದರೆ ನೀವೊಬ್ಬ ಸ್ವೀಟ್ ಟೀಚರ್ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಶಿಕ್ಷಕಿ, ಹೌದು, ನಾನೇ. ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿ, ನಾನು ಅಂತಹ ಶಿಕ್ಷಕರನ್ನು ಎಲ್ಲಿ ಪಡೆಯಬಹುದು ಎಂದು ಹೇಳಿದ್ದಾರೆ. ವರ್ಷದ ಅತ್ಯುತ್ತಮ ಶಿಕ್ಷಕ ಎಂದು ಇನ್ನೊಬ್ಬರು ಹೇಳಿದ್ದಾರೆ.

ಶಿಕ್ಷಕಿ ತಮಿಳುನಾಡಿನ ಸೇಲಂ ಮೂಲದವರಾಗಿದ್ದು, ವೃಕ್ಷ ಮಾಂಟೆಸ್ಸರಿ ಇಂಟರ್‌ನ್ಯಾಶನಲ್‌ನಲ್ಲಿ ಬೋಧಿಸುತ್ತಿದ್ದಾರೆ. ಅವರು ನಿಯಮಿತವಾಗಿ ತಮ್ಮ ವೈಯಕ್ತಿಕ ಇನ್ ಸ್ಟಾ ಗ್ರಾಮ್ ಮತ್ತು ಫೇಸ್ ಬುಕ್ ಪುಟಗಳಲ್ಲಿ ವಿವಿಧ ಮೆಹೆಂದಿ ವಿನ್ಯಾಸಗಳನ್ನು ಚಿತ್ರಿಸುತ್ತಿರುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

Exit mobile version