Site icon Vistara News

Lok Sabha Election : ಚುನಾವಣೆ ಘೋಷಣೆ ಮೊದಲೇ ಬಿಜೆಪಿಯ 300 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?

Narendra modi

ನವದೆಹಲಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯದ್ಲಲೇ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ಕರೆಯಲಿದ್ದಾರೆ. ಬಿಜೆಪಿಯ ಉನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯ ಸಭೆಯಲ್ಲಿ ಅವರು ಭಾಗವಹಿಸಿ ಚರ್ಚಿಸಲಿದ್ದಾರೆ. ಚುನಾವಣಾ ದಿನಾಂಕಗಳನ್ನು ಆಯೋಗ ಪ್ರಕಟಗೊಳಿಸುವ ಮೊದಲು ಪಕ್ಷವು ಕೆಲವು ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಈ ಕ್ರಮವು ಪ್ರತಿಪಕ್ಷ ಇಂಡಿಯಾ ಬ್ಲಾಕ್ಮೇ ಒತ್ತಡ ಹೇರುವ ತಂತ್ರವಾಗಿದೆ. ಯಾಕೆಂದರೆ ಇಂಡಿಯಾ ಬ್ಲಾಕ್​ ಪಕ್ಷಗಳು ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿವೆ.

ಪ್ರಧಾನಿ ಮೋದಿ ಪಕ್ಷದ ಮುಖ್ಯ ಕಾರ್ಯತಂತ್ರಜ್ಞ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ 550ಕ್ಕೂ ಹೆಚ್ಚು ಸದಸ್ಯರಿರುವ ಚುನಾವಣ ಸಮಿತಿಯು ಮಾಡಿರುವ ಪಟ್ಟಿಯನ್ನು ಮುಖಂಡರು ವೀಕ್ಷಿಸಲಿದ್ದಾರೆ.

ಹಿರಿಯ ನಾಯಕರಾದ ದೇವೇಂದ್ರ ಫಡ್ನವಿಸ್​, ಪ್ರಕಾಶ್ ಜಾವಡೇಕರ್, ಮನ್ಸುಖ್ ಮಾಂಡವಿಯಾ, ಪುಷ್ಕರ್ ಧಾಮಿ, ಪ್ರಮೋದ್ ಸಾವಂತ್, ಭೂಪೇಂದ್ರ ಯಾದವ್, ಜ್ಯೋತಿರಾದಿತ್ಯ ಸಿಂಧಿಯಾ, ಕೇಶವ್ ಮೌರ್ಯ, ಯೋಗಿ ಆದಿತ್ಯನಾಥ್ ಮತ್ತು ಇತರರು ಈ ಸಭೆಯಲ್ಲಿ ಉಪಸ್ಥಿತರಿರುತ್ತಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್ ಗಢ, ಕೇರಳ, ತೆಲಂಗಾಣ, ರಾಜಸ್ಥಾನ, ಗೋವಾ, ಗುಜರಾತ್ ನಂಥ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳ್ಳಲಿದೆ.

ಇದನ್ನೂ ಓದಿ : R Ashok : ರಾಜ್ಯ ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ

ಪಂಜಾಬ್, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಅಭ್ಯರ್ಥಿಗಳ ನಿರ್ಧಾರವನ್ನು ಕೊನೆ ಹಂತದಲ್ಲಿ ಆಗಲಿದೆ. ಪಂಜಾಬ್​ನಲ್ಲಿ ಅಕಾಲಿ ದಳ, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಮತ್ತು ತಮಿಳುನಾಡಿನಲ್ಲಿ ಎಐಎಡಿಎಂಕೆಯೊಂದಿಗೆ ಮೈತ್ರಿ ಚರ್ಚೆಗಳು ಪ್ರಗತಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

300 ಅಭ್ಯರ್ಥಿಗಳ ಘೋಷಣೆ

ಪ್ರತಿ ಸ್ಥಾನಕ್ಕೆ ಮೊದಲ ಮೂರು ಅಭ್ಯರ್ಥಿಗಳನ್ನು ಹೆಸರಿಸುವ ಶಾರ್ಟ್​ಲಿಸ್ಟ್​​​ ಸಿದ್ಧಪಡಿಸಲಾಗಿದ್ದು, ಮಾರ್ಚ್ 10 ರೊಳಗೆ 300 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಭರವಸೆಯನ್ನು ಬಿಜೆಪಿ ಹೊಂದಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲೂ ಇದೇ ಆಟದ ಯೋಜನೆಯಾಗಿತ್ತು, ಮಾರ್ಚ್ 21 ರಂದು ಬಿಜೆಪಿ 164 ಅಭ್ಯರ್ಥಿಗಳನ್ನು ಘೋಷಿಸಿತ್ತು.

ಏತನ್ಮಧ್ಯೆ, ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಕಾಂಗ್ರೆಸ್ ಆಶಿಸುತ್ತಿದೆ. ಮಹಾ ವಿಕಾಸ್ ಅಘಾಡಿಯ ನಾಯಕರು ಮುಂಬೈನಲ್ಲಿ ಸಭೆ ಸೇರಿದ್ದಾರೆ. ಮೊದಲ ಹಂತದ ಕಾರ್ಯತಂತ್ರವು ಕಾಂಗ್ರೆಸ್ ಮೇಲೆ ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ ಮತ್ತು ಮತದಾರರ ಮುಂದೆ ಅವರ ‘ಅಸಮರ್ಥತೆಯನ್ನು’ ಪ್ರಕಟಗೊಳ್ಳಲಿದೆ ಎಂದು ಬಿಜೆಪಿ ನಿರೀಕ್ಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Exit mobile version