Edited By: Pragati Bhandari

1963: ಮೊದಲ ಬಾರಿ ರಾಕೆಟ್ ಉಡಾವಣೆ ಭಾರತದ ಉಪಗ್ರಹ ಇತಿಹಾಸದಲ್ಲಿ ಇದು ಮಹತ್ವದ ಸಾಧನೆ. ಡಾ. ವಿಕ್ರಮ್ ಸಾರಾಭಾಯಿ ಮತ್ತು ಡಾ. ಎ ಪಿ ಜೆ ಅಬ್ದುಲ್ ಕಲಾಂ ಈ ಸಾಧನೆಯ ಹಿಂದಿನ ಶಕ್ತಿ.

1965: ಯುದ್ಧದಲ್ಲಿ  ಪಾಕ್ ವಿರುದ್ಧ ಗೆಲುವು  ಕಾಶ್ಮೀರ ಕಬಳಿಸಲು ಬಂದ ಪಾಕಿಸ್ತಾನಿ ಸೈನಿಕರನ್ನು ಮಣ್ಣು ಮುಕ್ಕಿಸಿದ ಭಾರತದ ವೀರ ಯೋಧರು.

1969: ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಷನ್ (ಇಸ್ರೊ) ಸ್ಥಾಪನೆ ಡಾ. ವಿಕ್ರಮ್ ಸಾರಾಭಾಯ್ ಸಾರಥ್ಯದಲ್ಲಿ ಇಸ್ರೊ ಅಸ್ತಿತ್ವಕ್ಕೆ ಬಂತು. ಇದು ಭಾರತದ ಉಪಗ್ರಹ ಸಾಧನೆಗೆ ವೇದಿಕೆಯಾಯಿತು.

1971: ಪಾಕಿಸ್ತಾನ ವಿರುದ್ಧ ದಿಗ್ವಿಜಯ  ಪಾಕಿಸ್ತಾನದ ವಿರುದ್ಧ ಸಮರ ಸಾರಿದ ಭಾರತೀಯ ಸೇನೆ ಬಾಂಗ್ಲಾ ದೇಶದ ಸೃಷ್ಟಿಗೆ ಕಾರಣವಾಯಿತು. ಸಾವಿರಾರು ಪಾಕ್ ಸೈನಿಕರು ಇಂಡಿಯನ್ ಆರ್ಮಿ ಎದುರು ಮಂಡಿಯೂರಿದರು.

1982: ಕಲರ್ ಟಿವಿ ಮಾರುಕಟ್ಟೆಗೆ  ದೂರದರ್ಶನದ ರಾಷ್ಟ್ರೀಯ ಕಾರ್ಯಕ್ರಮ ಪ್ರಸಾರ ಆರಂಭವಾಯಿತು. ಇದೇ ವರ್ಷದ ಸ್ವಾತಂತ್ರ್ಯೋತ್ಸವ ಪರೇಡ್ ನ ಲೈವ್ ಕಲರ್ ನಲ್ಲಿ ಪ್ರಸಾರವಾಯಿತು.

1983: ಭಾರತಕ್ಕೆ  ವಿಶ್ವಕಪ್ ಕಿರೀಟ  ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯ ಫೈನಲ್ ನಲ್ಲಿ ಕಪಿಲ್ ದೇವ್ ನೇತೃತ್ವದ ತಂಡ ಬಲಿಷ್ಠ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಯಿತು.

1989: ಅಗ್ನಿ ಕ್ಷಿಪಣಿ ಸಕ್ಸೆಸ್ ಒಡಿಶಾದ ಚಂಡಿಪುರದಲ್ಲಿ ಅಗ್ನಿ 1 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಪರಮಾಣು ಸಿಡಿತಲೆಯನ್ನು ಹೊತ್ತು ಸಾಗುವುದು ಈ ಕ್ಷಿಪಣಿಯ ವಿಶೇಷವಾಗಿತ್ತು.

1995: ದಿಲ್ಲಿ ಮೆಟ್ರೊ ರೈಲ್ ಕಾರ್ಪೊರೇಷನ್ ಲಿ. ಅಸ್ತಿತ್ವಕ್ಕೆ  ಆಗ ಪ್ರಧಾನಿಯಾಗಿದ್ದ ಕನ್ನಡಿಗ ಎಚ್ ಡಿ ದೇವೇಗೌಡ ಮತ್ತು ದಿಲ್ಲಿ ಮುಖ್ಯಮಂತ್ರಿಯ ಸಮ್ಮುಖದಲ್ಲಿ ಇದು ಅಸ್ತಿತ್ವಕ್ಕೆ ಬಂತು. ಬೆಂಗಳೂರಿನ ನಮ್ಮ ಮೆಟ್ರೊಗೆ ಇದು ಮಾದರಿಯಾಯಿತು.

1998: ಪೊಖ್ರಾನ್ 2 ಅಣ್ವಸ್ತ್ರ ಪರೀಕ್ಷೆ ಪೊಖ್ರಾನ್ 1 ಪರೀಕ್ಷೆ  ನಡೆದ 24 ವರ್ಷಗಳ ಬಳಿಕ ಈ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಭಾರತ ಬಲಿಷ್ಠ ಪರಮಾಣು ದೇಶ ಎಂಬ ಸಂದೇಶವನ್ನು ಇದು ಸಾರಿತು. ಆಗ ಪ್ರಧಾನಿಯಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ.

1999: ಕಾರ್ಗಿಲ್ ವಿಜಯ  ಕಳ್ಳ ವೇಷದಿಂದ ಭಾರತದೊಳಕ್ಕೆ ನುಸುಳಿ ಬಂದಿದ್ದ ಪಾಕ್ ಸೈನಿಕರನ್ನು ಪ್ರತಿಕೂಲ ಸನ್ನಿವೇಶದಲ್ಲೂ ಬಗ್ಗು ಬಡಿದರು ನಮ್ಮ ವೀರ ಯೋಧರು. ಪಾಕ್ ಮತ್ತೊಮ್ಮೆ ಮುಖಭಂಗ ಅನುಭವಿಸಿತು.

2008: ಚಂದ್ರಯಾನ 1 ಉಡಾವಣೆ ಇಸ್ರೊ ಸಾರಥ್ಯದಲ್ಲಿ ಚಂದ್ರಯಾನ 1 ಉಡಾವಣೆ ಮಾಡಲಾಯಿತು. ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಇದರಿಂದ ಮಹತ್ವದ ಉತ್ತೇಜನ ಸಿಕ್ಕಂತಾಯಿತು. ಬಾಹ್ಯಾಕಾಶ ಸಂಶೋಧನೆಯಲ್ಲಿ ಸ್ವದೇಶಿ ತಂತ್ರಜ್ಞಾನಕ್ಕೆ ಮೊದಲ ಯಶ ಸಿಕ್ಕಿತು.