Edited By: Pragati Bhandari

ಬೆಸ್ಟಿ ಆಗಿದ್ದ ವಿನಯ್‌ ಅವರನ್ನು ನಮ್ರತಾ ಆಟದಿಂದ ಹೊರಕ್ಕೆ ಇಟ್ಟಿರುವುದು ಪ್ರೆಕ್ಷಕರಿಗೂ ಆಶ್ಚರ್ಯ ತಂದಿದೆ.

ತನಿಷಾ ಪರವಾಗಿ ಅಡಲು ಈ ವಾರ ನಮ್ರತಾ ಮುಂದೆ ಬಂದರು.

ಸರಣಿ ಟಾಸ್ಕ್‌ಗಳನ್ನು ಬಿಗ್‌ ಬಾಸ್‌ ನೀಡಿದ್ದರು. ಕ್ಯಾಪ್ಟನ್ಸಿ ರೇಸ್‌ನಲ್ಲಿ ನಮ್ರತಾ, ಸ್ನೇಹಿತ್ ಹಾಗೂ ವಿನಯ್‌ ಮಾತ್ರ ಉಳಿದಿದ್ದರು.

ಕ್ಲಿಪ್ ಟಾಸ್ಕ್‌ನಲ್ಲಿ ನಮ್ರತಾ ಜಯ ಸಾಧಿಸಿದರು.  ನಮ್ರತಾ ತಮ್ಮ ಕ್ಲೋಸ್‌ ಫ್ರೆಂಡ್‌ ವಿನಯ್ ಅವರನ್ನೇ ಔಟ್‌ ಮಾಡಿಬಿಟ್ಟರು. ಇದು ವಿನಯ್‌ಗೂ ಅರಗಿಸಿಕೊಳ್ಳು ಆಗಿಲ್ಲ.

ವಿನಯ್ ಅವರು ಅಗ್ರೆಸ್ಸಿವ್‌ ಆಗಿ ನಿರ್ಧಾರಗಳನ್ನ ತಗೊಳ್ತಾರೆ ಎಂದು ಕಾರಣ ಕೊಟ್ಟರು ನಮ್ರತಾ

ನಮ್ರತಾ ಅವರ ನಿರ್ಧಾರ ಕೂಡ ಮನೆಯವರಿಗೆ ಆಶ್ವರ್ಯ ತಂದಿತು. ವಿನಯ್‌ ಕೂಡ ನಮ್ರತಾಗೆ ರೈಟ್‌ ಡಿಸಿಷನ್‌ ಅಂದರು.

ಇಷ್ಟು ದಿನ ವಿನಯ್‌ ಅವರ ಚಮಚ ಎಂದು ಕರೆಸಿಕೊಳ್ಳುತ್ತಿದ್ದ ನಮ್ರತಾ ಈ ಬಾರಿ ತಾವೊಬ್ಬರೇ ನಿಂತು ಆಡಿದ್ದಾರೆ.

ಈ ವಾರ ನಮ್ರತಾ ವೋಟ್‌ ವಿಚಾರವಾಗಿಯೂ ಕುಗ್ಗಿ ಹೋಗಿದ್ದರು. ಆದರೀಗ ತಮ್ನನ್ನು ತಾವು ಪ್ರೂವ್‌ ಮಾಡಿಕೊಂಡಿದ್ದಾರೆ.