Edited By: Pragati Bhandari

ಪರೋಕ್ಷವಾಗಿ ನಮ್ರತಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದಾರೆ ಸ್ನೇಹಿತ್. 

ಕಳೆದ ಸಂಚಿಕೆಯಲ್ಲಿ ಈ ವಿಚಾರವಾಗಿ ನಮ್ರತಾ ತುಂಬಾ ಕಿರಿಕಿರಿ ಅನುಭವಿಸಿದ್ದಾರೆ. 

ನಮ್ರತಾ ಈಗ ಕಣ್ಣೀರು ಹಾಕುವ ಹಂತಕ್ಕೆ ಹೋಗಿ ತಲುಪಿದ್ದಾರೆ.

ಸ್ನೇಹಿತ್ ಗೌಡ ಅವರು ನಮ್ರತಾ ಗೌಡ ಜತೆ ಆಪ್ತತೆ ಬೆಳೆಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಲೇ ಇದ್ದಾರೆ.

ಕೆಲವೊಮ್ಮೆ ನಮ್ರತಾ ಗೌಡ ನೇರವಾಗಿ ಹೇಳಿದ್ದಿದೆ. 

ಕಾರ್ತಿಕ್ ಹಾಗೂ ಸಂಗೀತಾ ಸಂಬಂಧದ ರೀತಿ ಟಾಕ್ಸಿಕ್ ಆಗುವ ಮೊದಲು ನಾವು ಇದನ್ನು ಸ್ಟಾಪ್ ಮಾಡಬೇಕು ಎಂದರು ನಮ್ರತಾ

ನೀವು ನಿಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡ್ತಿದ್ದೀರಾ? ಟೈಮ್ ತಗೋಳಿʼʼ ಎಂದಿದ್ದರು ಸ್ನೇಹಿತ್‌. 

ಮೊದಲಿಗೆ ಸಂಗೀತಾ ಜತೆ ಕ್ಲೋಸ್‌ ಆಗಲು ನೋಡಿದ ಸ್ನೇಹಿತ್‌ಗೆ ಕಾರ್ತಿಕ್‌ ಕಾರಣಗಳಿಂದ ವಿಫಲವಾಯ್ತು.

ಇಶಾನಿಗೂ ಟ್ರೈ ಮಾಡಿದ್ದರೂ ಮೈಕಲ್‌ ಜತೆ ಇಶಾನಿ ಕ್ಲೋಸ್‌ ಆದ ಕಾರಣ ಅಲ್ಲಿಯೂ ಅವರಿಗೆ ಹಿನ್ನಡೆ ಆಯ್ತು.

ನಮ್ರತಾಗೂ ಮೊದಲ ದಿನದಂದಲೂ ಕಾಳು ಹಾಕುತ್ತಲೇ ಇರುವ ಸ್ನೇಹಿತ್‌ ಟಾಸ್ಕ್‌ ವಿಚಾರವಾಗಿ ನಮ್ರತಾ ಜತೆ ಸ್ವಲ್ಪ ಸಲುಗೆಯಿಂದ ಕೂಡ ಇದ್ದಿದ್ದರು.