Edited By: Pragati Bhandari

ಒಂದೇ ಭಂಗಿಯಲ್ಲಿ ದೀರ್ಘಕಾಲದವರೆಗೆ ಕೂರಬೇಡಿ, ನಿಲ್ಲಬೇಡಿ. ಭಂಗಿಯನ್ನು ಆಗಾಗ ಬದಲಿಸಿ.

 ದೇಹ ತೂಕ ಹೆಚ್ಚಿದ್ದರೆ ಇಳಿಸುವುದು ಅಗತ್ಯ. ಇಲ್ಲದಿದ್ದರೆ ಕೀಲುಗಳ  ಮೇಲೆ ಒತ್ತಡ ಹೆಚ್ಚಾಗುತ್ತದೆ

ವಯಸ್ಸು ಏರುತ್ತಿದ್ದಂತೆ ಎಲ್ಲಾ ವ್ಯಾಯಾಮಗಳನ್ನೂ ಮಾಡುವುದು ಕಷ್ಟ. ನಡಿಗೆ, ಈಜು, ಸೈಕಲ್‌ ಹೊಡೆಯುವಂಥವು ಸೂಕ್ತ 

ಮಂಡಿಯ ಕೀಲುಗಳಲ್ಲಿ ತೊಂದರೆ ಇದ್ದರೆ ಜಾಗಿಂಗ್‌, ಓಡುವುದು, ಮೆಟ್ಟಿಲು ಹತ್ತುವುದು, ಕಾಲು ಮಡಿಸಿ ಕುಳಿತುಕೊಳ್ಳುವಂಥದ್ದನ್ನು ಮಾಡಬೇಡಿ

ಆಹಾರದಲ್ಲಿ ಪ್ರೊಟೀನ್‌ಗಳು, ವಿಟಮಿನ್‌ ಡಿ ಮತ್ತು ಸಿ, ಒಮೇಗಾ 3 ಕೊಬ್ಬಿನಾಮ್ಲ, ಕ್ಯಾಲ್ಸಿಯಂನಂಥವು ಧಾರಾಳವಾಗಿರಲಿ. ಕೆಫೇನ್‌, ಸಕ್ಕರೆಗಳನ್ನು ದೂರ ಮಾಡಿ

ಧೂಮಪಾನ ಮತ್ತು ಮದ್ಯಪಾನಗಳಿಂದ ಮೂಳೆಗಳು ದುರ್ಬಲಗೊಂಡು ಆಸ್ಟಿಯೊಪೊರೊಸಿಸ್‌ ಬರಬಹುದು

ಸರಿಯಾದ ಪಾದರಕ್ಷೆಗಳನ್ನು ಧರಿಸಿ, ಹೈಹೀಲ್ಸ್‌ ಚಪ್ಪಲಿಗಳು ಮಂಡಿ ಮತ್ತು ಬೆನ್ನಿನ ಆರೋಗ್ಯಕ್ಕೆ ಬಾಧೆ ನೀಡುತ್ತವೆ 

ಪ್ರತಿದಿನ ಚೆನ್ನಾಗಿ  ನೀರು ಕುಡಿಯಿರಿ. ಕೀಲುಗಳನ್ನು ಕಾಪಾಡುವ ಸೈನೋವಿಯಲ್‌ ದ್ರವ ಉತ್ಪತ್ತಿಗೆ ಇದು ಸಹಕಾರಿ