bigg boss kannada winners bigg boss kannada elimination
ನಮ್ರತಾ ಗೌಡ ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ’ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ನಂತರ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ಸ್ಪರ್ಧಿಯಾಗಿದ್ದರು.
ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಸ್ನೇಹಿತ್ ಗೌಡ ಮನೆ ಮಾತಾದರು. ಹಲವು ಧಾರಾವಾಹಿಗಳಿಗೆ ಅಡಿಷನ್ ನೀಡಿ ಕೊನೆಗೆ ಆಯ್ಕೆಯಾದೆ ಎಂದು ಅವರು ಸುದೀಪ್ ಜತೆ ಹೇಳಿಕೊಂಡರು.
ರ‍್ಯಾಪರ್ ಆಗಿರುವಂತಹ ಇಶಾನಿ ಕೂಡ ಬಿಗ್ ಬಾಸ್ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಮೂಲತಃ ಮೈಸೂರಿನವರಾಗಿದ್ದು, ದುಬೈನಲ್ಲಿ ನೆಲೆಸಿದ್ದಾರೆ. ಈಗಾಗಲೇ 17 ಇಂಗ್ಲೀಷ್ ಆಲ್ಬಂ ಸಾಂಗ್‌ನಲ್ಲಿ ಹಾಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸುಮಾರು 2 ವರ್ಷಗಳ ಕಾಲ ಪ್ರಸಾರವಾದ ʼಹರ ಹರ ಮಹಾದೇವʼ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ವಿನಯ್ ಗೌಡ ಗಮನ ಸೆಳೆದರು. ಬಳಿಕ ʼಉಘೇ ಉಘೇ ಮಾದೇವ’, ‘ಜೈ ಹನುಮಾನ್’ ʼಯಡಿಯೂರು ಸಿದ್ಧಲಿಂಗೇಶ್ವರ’ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದಾರೆ.
ಸಂತೋಷ್ ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸಿಪುರ ತಾಲೂಕಿನ ಉದ್ದೂರು ಹೊಸಹಳ್ಳಿಯವರು. ಸಂತೋಷ್ ಈಗಾಗಲೇ ಕನ್ನಡದ 12 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಮಜಾಭಾರತ ಹಾಗೂ ಜೀ ಟಿವಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಸಂತೋಷ್ ಮನೆ ಮಾತಾಗಿದ್ದಾರೆ.
ಮಿಸ್ ಟ್ರಾನ್ಸ್ ಕ್ವೀನ್ ಇಂಡಿಯಾ 2019’ ಪಟ್ಟ ಗೆದ್ದ ನೀತು ಹುಟ್ಟಿದ್ದು ಗದಗದಲ್ಲಿ. ಇವರ ಬಾಲ್ಯದ ಹೆಸರು ಮಂಜುನಾಥ್. ‘ಸೂಪರ್ ಕ್ವೀನ್ಸ್’ (Super Queens) ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದರು. ನೀತು ವನಜಾಕ್ಷಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ UI ಚಿತ್ರದಲ್ಲಿ ನಟಿಸಿದ್ದಾರೆ.
ಸುಮಾರು 20 ವರ್ಷಗಳಿಂದ ಸಿರಿ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದಾರೆ. ಇತ್ತೀಚೆಗೆ ಅವರು ಕಲರ್ಸ್ ಕನ್ನಡ ವಾಹಿನಿಯ ‘ರಾಮಾಚಾರಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ನಂತರ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಸಿರಿ ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’, ʼಬಂದೇ ಬರುತಾವ ಕಾಲʼ, ‘ಅಂಬಿಕಾ’ ಸೇರಿ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಚಿಕ್ಕಂದಿನಿಂದಲೂ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿರುವ ಶ್ಯಾಂ ದಶಕಗಳಿಂದ ಇದನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಮೈಸೂರಿನ ಜನರಿಗೆ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್.
‘ಬದುಕು’, ‘ಲಕ್ಷಣ’ದಂಥ ಧಾರಾವಾಹಿಗಳ ಮೂಲಕ ಇವರು ಜನಪ್ರಿಯ. ‘ಬದುಕೇ ನನಗೆ ತುಂಬ ಕಲಿಸಿದೆ. ಪ್ರಿಪೇರ್ ಆಗಿ ಬದುಕುವುದು ನನಗೆ ಗೊತ್ತಿಲ್ಲ. ಪರಿಸ್ಥಿತಿ ಹೇಗೆಬರುತ್ತದೆಯೋ ಹಾಗೆ ಇರುತ್ತೇನೆ’ ಎನ್ನುವ ಭಾಗ್ಯಶ್ರೀ ಅವರಿಗೆ ವೋಟಿಂಗ್ ಮನವಿಗೆ ಜನರು ಸ್ಪಂದಿಸಿದ್ದು 81% ಮಂದಿ.
ವರ್ಷಗಳ ಕಾಲ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ ಗೌರೀಶ್ ಅಕ್ಕಿ ಆನಂತರ ಡೈರೆಕ್ಟರ್ ಕ್ಯಾಪ್ ತೊಟ್ಟರು. 2016ರಲ್ಲಿ ತೆರೆಗೆ ಬಂದ ‘ಸಿನಿಮಾ ಮೈ ಡಾರ್ಲಿಂಗ್’ ಚಿತ್ರವನ್ನ ಗೌರೀಶ್ ಅಕ್ಕಿ ನಿರ್ದೇಶಿಸಿದರು. ‘ಕೆಂಗುಲಾಬಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು.
ನೈಜೇರಿಯಾ ಮೂಲದ ಮೈಖಲ್ ಅಜಯ್ ಕೂಲ್ ಹೇರ್‌ಸ್ಟೈಲ್‌ನಿಂದಲೇ ಗಮನಸೆಳೆಯುತ್ತಾರೆ. ಬಾಸ್ಕೆಟ್‌ಬಾಲ್‌ನಿಂದ ಫಿಟ್‌ನೆಸ್ ಹವ್ಯಾಸಕ್ಕೆ, ಅಲ್ಲಿಂದ ಮಾಡಲಿಂಗ್ ಕ್ಷೇತ್ರಕ್ಕೆ ಜಿಗಿದಿರುವ ಅಜಯ್ ಈಗ ಬರ್ಗರ್ ಶಾಪ್ ನಡೆಸುತ್ತಿದ್ದಾರೆ.