Edited By: Pragati Bhandari
Edited By: Pragati Bhandari
ರಾತ್ರಿಯ ನಿದ್ದೆ ಬಿಡುವುದರಿಂದ ದೇಹದ ಸರ್ಕಾಡಿಯನ್ ಲಯವೆಂಬ ಆಂತರಿಕ ಗಡಿಯಾರ ವ್ಯತ್ಯಾಸವಾಗುತ್ತದೆ.
ಮಾನಸಿಕ ಆರೋಗ್ಯದ ಸ್ಥಿತಿ-ಗತಿ ಸೂಕ್ಷ್ಮವಾಗುತ್ತದೆ.
ಒತ್ತಡ, ಖಿನ್ನತೆಗಳು ಅಮರಿಕೊಳ್ಳುತ್ತವೆ.
ದೇಹದ ಚಯಾಪಚಯ ಹಾಳಾಗಿ, ತೂಕ ನಿಯಂತ್ರಿಸುವುದು ಕಷ್ಟವಾಗುತ್ತದೆ.
ರಾತ್ರಿಯ ನಿದ್ದೆ ದೂರವಾದರೆ ರಕ್ತದ ಏರೊತ್ತದ, ಹೃದಯ ರೋಗಗಳು ಹತ್ತಿರವಾಗುತ್ತವೆ.
ಆಸಿಡಿಟಿ, ಹುಳಿತೇಗು, ಹೊಟ್ಟೆಯುಬ್ಬರಗಳು ನಿದ್ದೆಗೇಡಿಗಳ ಕಾಯಂ ಅತಿಥಿಗಳಾಗುತ್ತವೆ.
ಮೆದುಳಿನ ಸಾಮರ್ಥ್ಯ ಕ್ರಮೇಣ ಕ್ಷಯಿಸುತ್ತದೆ. ತಪ್ಪು ನಿರ್ಧಾರಗಳು, ಮರೆವು ಸಾಮಾನ್ಯವಾಗಬಹುದು.
ದೇಹದ ಹಾರ್ಮೋನುಗಳ ಮಟ್ಟ ಏರುಪೇರಾಗಬಹುದು. ಫಲವಂತಿಕೆ ಕುಸಿಯಬಹುದು.
ನಿದ್ದೆಗೆಡುವುದರಿಂದ ಬೊಜ್ಜು, ಮಧುಮೇಹ, ಬಿಪಿ ಮಾತ್ರವಲ್ಲ, ಕೆಲವು ಕ್ಯಾನ್ಸರ್‌ಗಳ ಸಾಧ್ಯತೆಯೂ ಇದೆ.
For Web Stories
For Articles