Edited By: Pragati Bhandari

ಹಸಿಯಾಗಿ, ಬಿಸಿಯಾಗಿ, ಬೇಯಿಸಿ, ಜ್ಯೂಸ್‌ ಮಾಡಿ- ಹೇಗೇ ತಿಂದರೂ ಇದು ರುಚಿ

ಇದರಲ್ಲಿ ವಿಟಮಿನ್‌ ಎ ಅಂಶ ತುಂಬಿದ್ದು ದೃಷ್ಟಿಯ ರಕ್ಷಣೆಗೆ ಅಗತ್ಯವಾಗಿದೆ.

ವಿಟಮಿನ್‌ ಸಿ ಸತ್ವವೂ ಹೇರಳವಾಗಿದ್ದು, ಶರೀರದ ಪ್ರತಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ

ಇದರಲ್ಲಿ ಸೂಕ್ಷ್ಮ ಪೋಷಕಾಂಶಗಳು ಬಹಳಷ್ಟಿದ್ದು, ನಿಯಮಿತವಾಗಿ ತಿನ್ನಬೇಕಾದ ಗಡ್ಡೆಯಿದು.

ಗಜ್ಜರಿಯಲ್ಲಿ ನಾರಿನಂಶ ವಿಫುಲವಾಗಿದ್ದು, ಆಹಾರ ಜೀರ್ಣವಾಗಲು ನೆರವಾಗುತ್ತದೆ.

 ಮಲಬದ್ಧತೆಯಂಥ ಜೀರ್ಣಾಂಗಗಳ ಸಮಸ್ಯೆಯನ್ನು ದೂರ ಮಾಡಲು ಇದರ ನಿಯಮಿತ ಬಳಕೆಯಿಂದ ಸಾಧ್ಯ.

ಕಡಿಮೆ ಕ್ಯಾಲರಿ ಮತ್ತು ಹೆಚ್ಚು ನಾರು ಹೊಂದಿರುವ ಇದು ತೂಕ ಇಳಿಸುವವರಿಗೂ ಅನುಕೂಲ.

ಪೊಟಾಶಿಯಂ ಅಧಿಕವಾಗಿದ್ದು ಹೃದಯದ ರಕ್ಷಣೆಗೆ ಸಹಾಯ ಹಸ್ತ ನೀಡುತ್ತದೆ.