Edited By: Pragati Bhandari

ಮೊಟ್ಟೆಯ ಹಳದಿ ಅಥವಾ ಬಿಳಿ ಭಾಗಗಳ ಜೊತೆ ಸ್ವಲ್ಪ ಆಲಿವ್‌ ಎಣ್ಣೆ ಸೇರಿಸಿ ಕೂದಲಿಗೆ ಮಾಸ್ಕ್‌ ಮಾಡಬಹುದು

ಎಣ್ಣೆ ಬೇಡವೆಂದಿದ್ದರೆ, ಇಡೀ ಮೊಟ್ಟೆಯನ್ನು ಬಳಸಿ ಕೂದಲಿಗೆ ಲೇಪ ಮಾಡಬಹುದು

ಮೊಟ್ಟೆಯಲ್ಲಿರುವ ಪ್ರೊಟೀನ್‌ ಅಂಶದಿಂದಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ 

ಕೂದಲು ಉದುರುವುದು ಮತ್ತು ತುಂಡಾಗುವುದನ್ನು ಕಡಿಮೆ ಮಾಡುವ ಸಾಮರ್ಥ್ಯ ಮೊಟ್ಟೆಯ ಪ್ರೊಟೀನ್‌ಗಿದೆ

ಮೊಟ್ಟೆಯ ಹಳದಿ ಭಾಗವು ಕೂದಲಿಗೆ ಉತ್ತಮ ಕಂಡೀಶನರ್‌ ಆಗಿದ್ದು, ಕೇಶರಾಶಿಯ ಹೊಳಪು ಹೆಚ್ಚಿಸುತ್ತದೆ

ಮೊಟ್ಟೆಯಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಕೂದಲಿನ ದೃಢತೆಯನ್ನು ಹೆಚ್ಚಿಸಿ, ಬುಡವನ್ನು ಬಿಗಿ ಮಾಡುತ್ತವೆ

ಒಣ ಕೂದಲುಗಳಿಗೆ ಮೊಟ್ಟೆ ಲೇಪಿಸುವುದರಿಂದ ಕೂದಲ ಬುಡದಲ್ಲಿ ತೇವ ವೃದ್ಧಿಸುತ್ತದೆ 

ಮೊಟ್ಟೆಯ ಜೊತೆಗೆ ಬಾಳೆಹಣ್ಣು ಅಥವಾ ಮೆಂತೆ ಅಥವಾ ಈರುಳ್ಳಿಯಂಥವನ್ನೂ ಲೇಪಕ್ಕೆ ಉಪಯೋಗಿಸಬಹುದು