Lakshmi Baramma Season 2:  ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಸುರೇಶ್‌ ರೈ ಪತ್ನಿ ಬಗ್ಗೆ ಗೊತ್ತಿರದ ಸಂಗತಿಗಳಿವು!

ಸುರೇಶ್ ರೈ ಕೂಡ 'ಕುಲವಧು' ಸೇರಿದಂತೆ ಅನೇಕ ಸೀರಿಯಲ್, ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್‌ ತಂದೆ, ಕಾವೇರಿ ಪತಿ ಕೃಷ್ಣಕಾಂತ್‌ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

 ಸುರೇಶ್‌ ರೈ ಪತ್ನಿ ಕೂಡ ಖ್ಯಾತ ನಟಿ. ಪತ್ನಿ ಭವ್ಯಶ್ರೀ ರೈ ರಾಮಾಚಾರಿ ಧಾರಾವಾಹಿಯಲ್ಲಿ ಸದ್ಯ ನಟಿಸುತ್ತಿದ್ದಾರೆ.

 ಭವ್ಯಶ್ರೀ ರೈ ಸಿನಿಮಾ, ಕಿರುತೆರೆಯಲ್ಲಿ ಮಿಂಚಿದ್ದಾರೆ.

 ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ಭವ್ಯಶ್ರೀಗೆ ಪುಟ್ಟ ಮಗನಿದ್ದಾನೆ, ಆದರೆ ಅವರು ಪರದೆ ಮೇಲೆ ದೊಡ್ಡ ದೊಡ್ಡ ಮಕ್ಕಳಿಗೆ ತಾಯಿ ಪಾತ್ರ ಮಾಡುತ್ತಿರುವುದನ್ನು ನೆನಪಿಡಬೇಕು.

 ಅಭಿಮಾನ, ಕಾವ್ಯಾಂಜಲಿ, ಮನೆಯೊಂದು ಮೂರು ಬಾಗಿಲು, ಅರುಂಧತಿ, ಕಮಲಿ, ಕುಂಕುಮ ಭಾಗ್ಯ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

ಸುರೇಶ್‌ ರೈ-ಕಾವ್ಯಶ್ರೀ ಅವರದದ್ದು ಅರೇಂಜ್ಡ್‌ ಮ್ಯಾರೇಜ್‌. ಕುರಿಗಳು ಸಾರ್‌ ಕುರಿಗಳು, ಹಗಲುವೇಷ, ಹೀಗೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 

 ಈ ದಂಪತಿಗೆ ಸಪ್ರಭಮ್‌ ಎಂಬ ಪುತ್ರನಿದ್ದಾನೆ.