Edited By: Pragati Bhandari

ಚೆನ್ನಾಗಿ ನೀರು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗಿ ಹೊಟ್ಟೆನೋವು, ಉಬ್ಬರ ಕಡಿಮೆಯಾಗುತ್ತದೆ

ಆಹಾರವನ್ನು ನಿಧಾನವಾಗಿ ಜಗಿದು ತಿನ್ನುವುದು ಅಗತ್ಯ. ಇದರಿಂದ ಪಚನಕ್ರಿಯೆ ಸುಧಾರಿಸುತ್ತದೆ 

ಏನನ್ನು, ಎಷ್ಟು ತಿನ್ನುತ್ತೇವೆ ಎಂಬ ಗಮನ ಇರಲಿ. ಒಮ್ಮೆಲೇ ಹೆಚ್ಚು ತಿನ್ನುವುದಕ್ಕಿಂತ ಅಷ್ಟಷ್ಟಾಗಿ ತಿನ್ನುವುದು ಅನುಕೂಲ

ಆಹಾರದಲ್ಲಿ ಶುಂಠಿ, ಪುದೀನಾ, ಸೋಂಪು, ಮೊಸರು ಇತ್ಯಾದಿಗಳನ್ನು ಸೇರಿಸಿಕೊಳ್ಳಿ. ಇವೆಲ್ಲ ಜೀರ್ಣಕ್ಕೆ ನೆರವಾಗುತ್ತವೆ

ಕಡ್ಡಾಯವಾಗಿ ವ್ಯಾಯಾಮ ಮಾಡಿ. ಇದರಿಂದಲೂ ಹೊಟ್ಟೆಯುಬ್ಬರ ಕಡಿಮೆ ಆಗುತ್ತದೆ. 

ಊಟವಾದ ಕೂಡಲೇ ಮಲಗಬೇಡಿ. ಹತ್ತು ನಿಮಿಷ ವಾಕಿಂಗ್‌ ಮಾಡಿ

 ಒತ್ತಡ ಹೆಚ್ಚಾದರೂ ಪಚನಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ಒತ್ತಡ ಇಳಿಸುವತ್ತ ಗಮನಕೊಡಿ

ಗ್ರೀನ್ ಟೀ‌, ಕ್ಯಾಮೊಮೈಲ್‌ ಚಹಾ, ಪೆಪ್ಪರ್‌ಮಿಂಟ್‌ ಚಹಾ, ಜೀರಿಗೆ ಅಥವಾ ಶುಂಠಿ ಕಷಾಯಗಳ ಸೇವನೆ ಉಪಯುಕ್ತ