Edited By: Pragati Bhandari

ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದೇ ಇರುವುದು ಮೊದಲ ಆದ್ಯತೆಯಾಗಬೇಕು. ಇದಕ್ಕಾಗಿ ಕೆಲವು ಕ್ರಮಗಳು ಅಗತ್ಯವಾಗುತ್ತವೆ.

ಮನೆಯ ಸುತ್ತಲೂ ನೀರು ನಿಲ್ಲದಂತೆ ಜಾಗ್ರತೆ ಮಾಡಿ. ನೀರು ನಿಂತರೆ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚುತ್ತದೆ. 

ತೆರೆದ ಚರಂಡಿಗಳು, ಕಸದ ಬುಟ್ಟಿಗಳು, ಎಳನೀರಿನ ಚಿಪ್ಪುಗಳೂ ಸೊಳ್ಳೆ ಬೆಳೆಯುವ ತಾಣಗಳಾಗುತ್ತವೆ. ಹಾಗಾಗಿ ಪರಿಸರ ಸ್ವಚ್ಛವಾಗಿರಲಿ.

ಮನೆಯೊಳಗೆ ಮತ್ತು ಹೊರಗೆ ತುಂಬು ತೋಳಿನ/ ಕಾಲಿನ ವಸ್ತ್ರಗಳನ್ನು ಧರಿಸಿ. ತಿಳಿಬಣ್ಣದ ವಸ್ತ್ರಗಳತ್ತ ಸೊಳ್ಳೆಗಳಿಗೆ ಆಕರ್ಷಣೆ ಕಡಿಮೆ. 

ಬಾಗಿಲು, ಕಿಟಕಿಗಳಿಗೆ ಸೊಳ್ಳೆ ತಡೆಯುವ ಜಾಲರಿಯಂಥ ಪರದೆಗಳನ್ನು ಹಾಕುವುದು ಪ್ರಯೋಜನಕಾರಿ.

ಮನೆಯ ಸುತ್ತ ಪುದೀನಾ, ನಿಂಬೆಹುಲ್ಲಿನಂಥ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆ ಕಡಿಮೆಯಾಗಬಹುದು. ಈ ಸಸ್ಯಗಳ ಘಮ ಸೊಳ್ಳೆಗಳಿಗಾಗದು.

ಬೆಳಗಿನ ಜಾವ ಮತ್ತು ಇಳಿ ಸಂಜೆಯ ಹೊತ್ತು ಸೊಳ್ಳೆಗಳ ಚಟುವಟಿಕೆ ಹೆಚ್ಚು. ಆಗ ಎಚ್ಚರಿಕೆಯಿಂದ ಇರಿ.

ಪ್ರಯಾಣ ಮಾಡುವುದಿದ್ದರೆ  ಆ ಸ್ಥಳಗಳಲ್ಲಿನ ಸಾಂಕ್ರಾಮಿಕಗಳ ಸ್ಥಿತಿಗತಿಯನ್ನು ಅರಿತುಕೊಳ್ಳಿ