Edited By: Pragati Bhandari

Edited By: Pragati Bhandari

ಹಾಲು ಇದರ ಆಯಸ್ಸು ಕೆಲವೇ ತಾಸುಗಳು. ಹಾಗಾಗಿ ಶೀತಲೀಕರಿಸುವುದು ಅನಿವಾರ್ಯ

ಮೊಟ್ಟೆ  ಬೇಸಿಗೆಯಲ್ಲಿ ನಾಲ್ಕಾರು ದಿನಗಳಿಗಿಂತ ಹೆಚ್ಚು ಇರಿಸಿಕೊಳ್ಳಬೇಕೆಂದರೆ ಫ್ರಿಜ್‌ನಲ್ಲಿಡುವುದು ಅನಿವಾರ್ಯ

ಹಣ್ಣುಗಳು ಸೇಬು, ಬಾಳೆ, ಪೇರ್‌ ಮತ್ತು ಮಾವಿನಂಥ ಹಣ್ಣುಗಳನ್ನು ತಾಜಾ ಇರುವಾಗಲೇ ಸೇವಿಸಿ. ಬಾಳೆಹಣ್ಣು ಫ್ರಿಜ್‌ನಲ್ಲಿಟ್ಟರೂ ಕಪ್ಪಾಗುತ್ತದೆ.

ಚೀಸ್ ಚೆಡ್ಡರ್‌, ಪರ್ಮೇಸನ್‌ನಂಥ ಚೀಸ್‌ಗಳು ಶೀಥಲೀಕರಿಸದೆಯೂ ಹಲವಾರು ದಿನಗಳ ಕಾಲ ಇರಬಲ್ಲವು. ಕ್ರೀಮ್‌ ಚೀಸ್‌, ಕಾಟೇಜ್‌ ಚೀಸ್‌ ಮುಂತಾದವುಗಳನ್ನು ಫ್ರಿಜ್‌ನಲ್ಲಿಡುವುದು ಅಗತ್ಯ 

ಬೇಯಿಸಿದ ಆಹಾರ ಇದರ ಆಯಸ್ಸೂ ಕ್ಷಣಿಕವೇ. ಒಂದೊಮ್ಮೆ ಫ್ರಿಜ್‌ನಲ್ಲಿಡುವ ಉದ್ದೇಶವಿಲ್ಲದಿದ್ದರೆ, ಚೆನ್ನಾಗಿ ಉಗಿ ಹಾಯುವಂತೆ ಬಿಸಿ ಮಾಡಬೇಕು

ಗಡ್ಡೆಗಳು ಆಲೂಗಡ್ಡೆ, ಬೀಟ್ರೂಟ್‌, ಗಜ್ಜರಿಯಂಥವನ್ನು ಬಿಸಿಲು, ಸೆಕೆ, ತಾಗದಂಥ ತಂಪಾದ ಆದರೆ ಗಾಳಿಯಾಡುವ ಜಾಗಗಳಲ್ಲಿ ಇರಿಸಿಕೊಳ್ಳಬಹುದು 

ಬೀಜಗಳು ಇವುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಗಾಳಿಯಾಡದ ಡಬ್ಬಿಗಳಲ್ಲಿ ಇರಿಸಿದರೆ ಸಾಕು

ಕೆಂಪು ಮೆಣಸಿನಕಾಯಿ  ಇವುಗಳನ್ನು ಬಿಸಿಲಲ್ಲಿ ಗರಿಯಾಗುವಂತೆ ಒಣಗಿಸಿ, ಗಾಳಿ ಮತ್ತು ಬೆಳಕು ತಾಗದಂತೆ ಶೇಖರಿಸಿ