ಕಿವಿಯಲ್ಲಿ ನೋವು, ಸೋರುವುದು, ತುಂಬಿದ ಅನುಭವ, ಕೇಳುವುದಕ್ಕೆ ಕಷ್ಟ, ಕೆಲವೊಮ್ಮೆ ಜ್ವರ ಇವೆಲ್ಲ ಕಿವಿಸೋಂಕಿನ ಲಕ್ಷಣಗಳು

ಕಿವಿ ಮತ್ತು ತಲೆಯ ಭಾಗವನ್ನು ಬೆಚ್ಚಗಿರಿಸಿ. ಕಿವಿಗೆ ಥಂಡಿ ಗಾಳಿ ಸೋಕದಂತೆ ಜಾಗ್ರತೆ ಮಾಡಿ

ಕಣ್ಣು, ಕಿವಿ, ಮೂಗನ್ನು ಮುಟ್ಟುವಾಗ ಕೈ ಶುಚಿಯಾಗಿರುವಂತೆ ಎಚ್ಚರಿಕೆ ವಹಿಸಿ

ಎಳೆಗೂಸುಗಳಿಗೆ ಕಿವಿನೋವು ಬರುತ್ತಿದ್ದರೆ ಪದೇಪದೆ ಹಾಲೂಡಿಸಿ 

ಮಳೆಗಾಲದಲ್ಲಿ ವೈರಲ್‌ ಸೋಂಕುಗಳ ವಿರುದ್ಧ ಲಸಿಕೆ ಪಡೆಯುವುದು ಸಹ ಕಿವಿಸೋಂಕು ತಡೆಯಲು ನೆರವಾಗುತ್ತದೆ

ಅಲರ್ಜಿಯ ಪ್ರಕೋಪಗಳಿಂದ ಕಿವಿನೋವು ಕಾಡುತ್ತಿದ್ದರೆ ನೇತಿಯಂಥ ಕ್ರಿಯೆಗಳು ನೆರವಾಗಬಹುದು

ಕಿವಿಗೆ ಕಡ್ಡಿ ಅಥವಾ ಬಡ್ಸ್ ಹಾಕಬೇಡಿ. ಇದರಿಂದ ಸೋಂಕಿನ ಸಾಧ್ಯತೆ ಹೆಚ್ಚುತ್ತದೆ

ಈಜುವ ಅಭ್ಯಾಸವಿದ್ದರೆ ಕಡ್ಡಾಯವಾಗಿ ಸ್ವಿಮ್‌ ಕ್ಯಾಪ್‌ ಧರಿಸಿ