Edited By: Pragati Bhandari

ಒಮೇಗಾ 3 ಕೊಬ್ಬಿನಾಮ್ಲವಿರುವ ಅಗಸೆಬೀಜ, ವಾಲ್‌ನಟ್‌, ಬೆಣ್ಣೆ ಹಣ್ಣು, ಮೀನುಗಳನ್ನು ಹೆಚ್ಚಾಗಿ ತಿನ್ನಿ  

ಉತ್ಕರ್ಷಣ ನಿರೋಧಕಗಳಿರುವ ಬೆರ್ರಿಗಳು, ಸೊಪ್ಪು ಸಹಿತ, ಮಳೆಬಿಲ್ಲಿನ ಬಣ್ಣದ ಆಹಾರಗಳನ್ನು ಸೇವಿಸಿ 

ಸಂಸ್ಕರಿಸಿದ ಆಹಾರಗಳು, ಸಕ್ಕರೆ, ಮೈದಾ, ಕರಿದ ತಿಂಡಿಗಳನ್ನು ಹತ್ತಿರವೂ ಸೇರಿಸಬೇಡಿ 

ಬಿಳಿ ಅಕ್ಕಿಯ ಬದಲು ಕೆಂಪಕ್ಕಿ, ಇಡೀ ಧಾನ್ಯಗಳು, ಓಟ್‌, ಕಿನೊವಾ, ಸಿರಿ ಧಾನ್ಯಗಳನ್ನು ಬಳಸಿ

ಆರೋಗ್ಯ ಸುಧಾರಣೆಗೆ ವ್ಯಾಯಾಮ ಅತಿ ಮುಖ್ಯ. ನಿಮ್ಮಿಷ್ಟದ ಯಾವುದಾದರೂ ವ್ಯಾಯಾಮ ಪ್ರತಿದಿನ ಮಾಡಿ

ಒತ್ತಡ ಹೆಚ್ಚಾದರೆ ಉರಿಯೂತ ಶಮನವಾಗದು. ಪ್ರಾಣಾಯಾಮ, ಯೋಗ, ಧ್ಯಾನದಂಥವು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ 

ನಿದ್ದೆ ಚೆನ್ನಾಗಿ ಮಾಡುತ್ತಿದ್ದೀರಾ? ದಿನಕ್ಕೆ ಎಂಟು ತಾಸುಗಳ ಗಾಢ ನಿದ್ದೆ ನಮ್ಮ ಸ್ವಾಸ್ಥ್ಯ ಸುಧಾರಣೆಗೆ ಅಗತ್ಯ. 

ತೂಕ ಹೆಚ್ಚಿದ್ದರೂ ಉರಿಯೂತ ಶಮನಕ್ಕೆ ಸಮಸ್ಯೆಯಾಗುತ್ತದೆ. ತೂಕ ಆರೋಗ್ಯಕರ ಮಿತಿಯಲ್ಲಿರಲಿ