Ranjani Raghavan: ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾದಲ್ಲಿ ಕನ್ನಡತಿ-ಆದಿತ್ಯ ಜೋಡಿ; ಹೊಸ ಹುಮ್ಮಸ್ಸು ಅಂದ್ರು ರಂಜನಿ ರಾಘವನ್

ಕನ್ನಡತಿ ಧಾರಾವಾಹಿ ಬಳಿಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ ರಂಜನಿ ರಾಘವನ್

ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ ಸಿನಿಮಾದಲ್ಲಿ ನಟ ಆದಿತ್ಯ ಜತೆ ಸದ್ದಿಲ್ಲದೇ ಶೂಟಿಂಗ್‌ಗೆ ಇಳಿದ ರಂಜನಿ ರಾಘವನ್

 ‘ಡೆಡ್ಲಿ ಸೋಮ’, ‘ಎದೆಗಾರಿಕೆ’ ರೀತಿಯ ಚಿತ್ರಗಳಿಂದ ಆದಿತ್ಯ ಅವರಿಗೆ ಖ್ಯಾತಿ ಸಿಕ್ಕಿದೆ. 

ಈ ಸಿನಿಮಾಗೆ ಕಿಶೋರ್ ಮೇಗಳಮನೆ ಅವರ ನಿರ್ದೇಶನವಿದೆ. 

ಕಿಶೋರ್ ಮೇಗಳಮನೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಇವರು ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. 

ಚಿತ್ರೀಕರಣ ಆರಂಭವಾಗಿದ್ದು, ಚಿಕ್ಕಮಗಳೂರು ಹಾಗೂ ಬೆಂಗಳೂರು ಸುತ್ತಮುತ್ತ 17 ದಿನಗಳ ಕಾಲ ಶೂಟಿಂಗ್​ ನಡೆಸಲಾಗಿದೆ.

``ಹೊಸ ಕಥೆ, ಹೊಸ ಪಾತ್ರ, ಹೊಸ ಹುಮ್ಮಸ್ಸು''ರಂಜನಿ ರಾಘವನ್ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

ಶಶಾಂಕ್ ಶೇಷಗಿರಿ ಅವರ ಸಂಗೀತ ನಿರ್ದೇಶನ, ಉದಯ್ ಲೀಲಾ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಅವರ ಸಂಕಲನದಲ್ಲಿ ಈ ಸಿನಿಮಾಕ್ಕಿದೆ.

ಈ ಸಿನಿಮಾದ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ.