Edited By: Pragati Bhandari

ಕಾರ್ತಿಕ್‌-ವಿನಯ್‌ ನಡುವಿನ ಜಗಳ ಬೇರೆಯದ್ದೇ ಹಂತ ತಲುಪಿದೆ. ಸಿಟ್ಟಿನಿಂದ ಕಾರ್ತಿಕ್‌ ಚಪ್ಪಲಿಯನ್ನು ನೆಲಕ್ಕೆ ಜೋರಾಗಿ ಬೀಸಿದರು. 

ಆಗ ಚಪ್ಪಲಿ ಬೌನ್ಸ್‌ ಆಗಿ ವಿನಯ್‌ಗೆ ತಾಕಿತು. ಇದಾದ ಬಳಿಕ ದೊಡ್ಡ ಜಗಳವೇ ನಡೆದಿದ್ದು, ಕಾರ್ತಿಕ್​ ಅವರನ್ನು ಹೊಡೆಯಲು ವಿನಯ್ ಪದೇ-ಪದೇ ಏರಿ ಹೋದ ಘಟನೆ ನಡೆದಿದೆ. 

ವಿನಯ್‌ ಅವರು ಬಿಗ್‌ ಬಾಸ್‌ ಮನೆಯ ಕದ ತಟ್ಟಿ, ಬ್ಯಾಗ್‌ ಒದ್ದಿದ್ದಾರೆ. ವಿನಯ್‌ ಅವರನ್ನು ಸುಧಾರಿಸಲು ಸ್ಪರ್ಧಿಗಳು ಪರದಾಡುವಂತಾಯ್ತು.

ಕಾರ್ತಿಕ್‌ ತಂಡ ಮಾಡಿರುವ ಅಗ್ರೆಸಿವ್‌ ಆಟವನ್ನು ವಿನಯ್‌ ಅವರ ನಿನ್ನೆಯ ಸಂಚಿಕೆಯಲ್ಲಿ ಸೇಡು ತೀರಿಸಿಕೊಂಡರು.  ಆ ಬಳಿ ಸಂಗೀತಾ ಮಾಡಿರುವ ಸ್ಟ್ರಾಟೆಜಿಯಿಂದಾಗಿ ರಾಕ್ಷಸರ ಗುಂಪಿಗೆ ತಲೆ ನೋವಾಗಿ ಪರಿಣಮಿಸಿತು.

ಟಾಸ್ಕ್‌ ಆರಂಭವಾಗುತ್ತಿದ್ದಂತೆ ವಿನಯ್‌ ಅವರು ಕಾರ್ತಿಕ್‌ ಅವರಿಗೆ ʻಗುಲಾಮʼಎಂತಲೇ ಕೆಣಕುತ್ತಿದ್ದರು. ಆರಂಭದಲ್ಲಿ ಕಾರ್ತಿಕ್‌ಗೆ ಕಷ್ಟದ ಕೆಲಸಗಳನ್ನು ವಿನಯ್ ಮಾಡಿಸಿದರು.

ಕಾರ್ತಿಕ್​ ಮೇಲೆ ಸಿಟ್ಟಾದ ವಿನಯ್​ ಹೊಡೆಯಲು ಹೋದರು, ಆದರೆ ಸ್ನೇಹಿತ್, ನಮ್ರತಾ ಇನ್ನೂ ಹಲವರು ಅವರನ್ನು ತಡೆದರು. 

ಇಂದು ಕೊನೆಯ ಟಾಸ್ಕ್‌ ನಡೆಯಲಿದೆ. ಯಾರೇ ಗೆದ್ದರು, ಬಿಗ್​ಬಾಸ್ ಮನೆಯ ಬಹುತೇಕ ಸದಸ್ಯರು ಸೋತತಂತೆಯೇ ಲೆಕ್ಕ ಎನ್ನುತ್ತಿದ್ದಾರೆ ಪ್ರೇಕ್ಷಕರು.