Edited By: Pragati Bhandari

 ದಿನವಿಡೀ ಕುಳಿತು ಕೆಲಸ ಮಾಡುವವರು ನೀವಾದರೆ ಪ್ರತಿ ಎರಡು ತಾಸಿಗೊಮ್ಮ 10 ನಿಮಿಷ ವಾಕ್‌ ಮಾಡಿ

 ಪ್ರತಿ ದಿನ ನಿಯಮಿತವಾಗಿ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ.

ಆಹಾರದಲ್ಲಿ ಶರ್ಕರಪಿಷ್ಟಾದಿಗಳು ಮಾತ್ರವಲ್ಲದೆ ಪ್ರೊಟೀನ್‌, ನಾರು, ಖನಿಜಗಳು ಹೆಚ್ಚಿರಲಿ.

ಬೊಜ್ಜು ಮತ್ತು ಅತಿತೂಕಕ್ಕೆ ಅವಕಾಶ ನೀಡದಿರಿ. ತೂಕ ನಿಗದಿತ ಮಿತಿಯಲ್ಲೇ ಇರಲಿ.

  ಕುಟುಂಬದಲ್ಲಿ ಮಧುಮೇಹಿಗಳಿದ್ದರೆ, ಕಾಲಕಾಲಕ್ಕೆ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ

ಧೂಮಪಾನ ಮತ್ತು ಮದ್ಯಪಾನ ಹತ್ತಿರವಾದಷ್ಟು ಮಧುಮೇಹವೂ ಹತ್ತಿರವಾಗುತ್ತದೆ, ನೆನಪಿರಲಿ.

  ದಿನಕ್ಕೆಂಟು ತಾಸಿನ ನಿದ್ದೆಯು ದೇಹದಲ್ಲಿ ಬಹಳಷ್ಟು ರಿಪೇರಿ ಕೆಲಸವನ್ನು ಮಾಡಬಲ್ಲದು.

 ಮಾನಸಿಕ ಒತ್ತಡವು ದೇಹದ ಮೇಲೆ ವಿಪರೀತ ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಒತ್ತಡ ನಿರ್ವಹಣೆ ಅತ್ಯಗತ್ಯ.